ನಹೂಮ 3:1-19
3 ರಕ್ತದೋಕುಳಿ ಹರಿಸೋ ಪಟ್ಟಣದ ಗತಿಯನ್ನ ಏನು ಹೇಳೋದು!
ಅದು ಬರೀ ಮೋಸ, ಸುಲಿಗೆಯಿಂದ ತುಂಬ್ಕೊಂಡಿದೆ.
ಅದು ಬೇಟೆ ಆಡದ ದಿನ ಇಲ್ಲ!
2 ಚಾಟಿಯಿಂದ ಹೊಡಿಯೋ ಶಬ್ದ, ಉರುಳೋ ಚಕ್ರಗಳ ಶಬ್ದ,ದೌಡಾಯಿಸೋ ಕುದುರೆ ಶಬ್ದ, ನೆಗಿಯುತ್ತಿರೋ ರಥದ ಶಬ್ದ ಕೇಳಿಸ್ತಿದೆ.
3 ಕುದುರೆ ಸವಾರರು ವೇಗವಾಗಿ ಬರ್ತಿದ್ದಾರೆ, ಕತ್ತಿಗಳು ಮಿಂಚುತ್ತಿವೆ, ಈಟಿಗಳು ಪಳಪಳ ಹೊಳಿತಿವೆ,ಎಷ್ಟೋ ಜನ ಸತ್ತು ಬಿದ್ದಿದ್ದಾರೆ, ಶವಗಳು ರಾಶಿರಾಶಿ ಬಿದ್ದಿವೆ.
ಎಲ್ಲಿ ನೋಡಿದ್ರೂ ಶವಗಳೇ, ಲೆಕ್ಕಾನೇ ಇಲ್ಲ.
ಶವಗಳ ಮಧ್ಯ ನಡಿತಿರೋ ಜನ ಎಡವಿ ಬೀಳ್ತಿದ್ದಾರೆ.
4 ಆ ವೇಶ್ಯೆ ಮಾಡಿದ ವ್ಯಭಿಚಾರದಿಂದ ಇದೆಲ್ಲ ನಡೀತು.
ಅವಳು ತುಂಬ ಸುಂದರಿ, ಮೋಡಿ ಮಾಡ್ತಾಳೆ. ಮಾಟಮಂತ್ರ ಮಾಡೋದ್ರಲ್ಲಿ ಚಾಣಾಕ್ಷೆ.
ಅವಳು ತನ್ನ ವ್ಯಭಿಚಾರದಿಂದ ರಾಷ್ಟ್ರಗಳನ್ನ, ತನ್ನ ಮಾಟಮಂತ್ರದಿಂದ ಕುಲಗಳನ್ನ ಬಲೆಗೆ ಹಾಕೊಂಡಿದ್ದಾಳೆ.
5 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳಿದ್ದಾನೆ: “ನೋಡು! ನಾನು ನಿನಗೆ* ವಿರುದ್ಧವಾಗಿದ್ದೀನಿ.+
ನಾನು ನಿನ್ನ ಲಂಗವನ್ನ ಮುಖದ ತನಕ ಎತ್ತುತ್ತೀನಿ,ನಿನ್ನ ಬೆತ್ತಲೆತನವನ್ನ ರಾಷ್ಟ್ರಗಳು ನೋಡೋ ಹಾಗೆ ಮಾಡ್ತೀನಿ,ನಿನಗಾಗೋ ಅವಮಾನವನ್ನ ರಾಜ್ಯಗಳಿಗೆ ತೋರಿಸ್ತೀನಿ.
6 ನಿನ್ನ ಮೇಲೆ ಹೊಲಸನ್ನ ಚೆಲ್ಲಿಎಲ್ರೂ ನಿನ್ನನ್ನ ನೋಡಿ ಛೀ! ಥೂ! ಅನ್ನೋ ತರ ಮಾಡ್ತೀನಿ,ನಿನ್ನನ್ನ ನೋಡಿ ಎಲ್ರೂ ನಗೋ ತರ ಮಾಡ್ತೀನಿ.+
7 ನಿನ್ನನ್ನ ನೋಡುವವ್ರೆಲ್ಲ ನಿನ್ನಿಂದ ಓಡಿಹೋಗ್ತಾ,+‘ನಿನೆವೆ ಹಾಳಾಗಿ ಹೋಗಿದೆ!
ಅದನ್ನ ನೋಡಿ ಯಾರು ತಾನೇ ಅಯ್ಯೋ ಪಾಪ ಅಂತಾರೆ?’
ಅದಕ್ಕೆ ಸಮಾಧಾನ ಮಾಡುವವ್ರನ್ನ ನಾನು ಎಲ್ಲಿ ಹುಡುಕ್ಲಿ?
8 ನೈಲ್ ಕಾಲುವೆ ಪಕ್ಕದಲ್ಲಿದ್ದ ನೋ-ಆಮೋನ್*+ ಪಟ್ಟಣಕ್ಕಿಂತ ಕೊಚ್ಕೊಳ್ಳೋಕೆ ನಿನ್ನ ಹತ್ರ ಏನಿದೆ?+
ಆ ಪಟ್ಟಣದ ಸುತ್ತ ನೀರಿತ್ತು,ಸಮುದ್ರವೇ ಅದ್ರ ಸೊತ್ತು, ರಕ್ಷಣಾ ಗೋಡೆ ಆಗಿತ್ತು.
9 ಇಥಿಯೋಪ್ಯ ಮತ್ತು ಈಜಿಪ್ಟ್ ಅದ್ರ ಶಕ್ತಿಯಾಗಿತ್ತು.
ಪೂಟ್ಯ+ ಮತ್ತು ಲಿಬ್ಯದ ಜನ್ರು ಆ ಪಟ್ಟಣಕ್ಕೆ ಸಹಾಯ ಮಾಡ್ತಿದ್ರು.+
10 ಹಾಗಿದ್ರೂ ಅದು ಸೆರೆಯಾಗಿ ಹೋಯ್ತು,ಅದನ್ನ ಬೇರೆ ದೇಶಕ್ಕೆ ಎಳ್ಕೊಂಡು ಹೋದ್ರು.+
ಎಲ್ಲ ಬೀದಿಯ ಕೊನೇಲಿ ಅದ್ರ ಮಕ್ಕಳನ್ನ ತುಂಡುತುಂಡಾಗಿ ಕತ್ತರಿಸಿದ್ರು.
ಅದ್ರ ಅಧಿಕಾರಿಗಳ ಮೇಲೆ ಚೀಟಿ ಹಾಕಿದ್ರು,ಆ ಪಟ್ಟಣದ ದೊಡ್ಡವ್ರನ್ನ ಸರಪಳಿ ಕಟ್ಟಿ ಜೈಲಿಗೆ ಹಾಕಿದ್ರು.
11 ಕುಡುಕರ ತರ ನೀನೂ ಓಲಾಡ್ತೀಯ,+ನೀನು ಬಚ್ಚಿಟ್ಕೊಳ್ತೀಯ.
ಶತ್ರುವಿಂದ ತಪ್ಪಿಸ್ಕೊಳ್ಳೋಕೆ ಆಶ್ರಯ ಹುಡುಕ್ತೀಯ.
12 ನಿನ್ನ ಎಲ್ಲ ಭದ್ರ ಕೋಟೆಗಳು ಮೊದಲ ಬೆಳೆ ಬಿಟ್ಟಿರೋ ಅಂಜೂರದ ಮರಗಳ ತರ ಇವೆ.
ಅವನ್ನ ಅಲ್ಲಾಡಿಸಿದ್ರೆ ಅದ್ರ ಹಣ್ಣು ಸೀದಾ ಬಂದು ನುಂಗೋರ ಬಾಯಿಗೇ ಬೀಳುತ್ತೆ.
13 ನೋಡು! ನಿನ್ನ ಸೈನಿಕರು ಸೊರಗಿ ಹೋಗಿರೋ ಹುಡುಗಿಯರ ತರ ಇರ್ತಾರೆ.
ನಿನ್ನ ದೇಶದ ಬಾಗಿಲುಗಳು ಶತ್ರುಗಳಿಗಾಗಿ ಯಾವಾಗ್ಲೂ ತೆರೆದೇ ಇರುತ್ತೆ.
ನಿನ್ನ ಬಾಗಿಲ ಪಟ್ಟಿಗಳನ್ನ ಬೆಂಕಿ ಬೂದಿ ಮಾಡಿಬಿಡುತ್ತೆ.
14 ಮುತ್ತಿಗೆ ಕಾಲ ಹತ್ರ ಆಗಿದೆ. ನೀರು ಸೇದಿಟ್ಕೋ!+
ನಿನ್ನ ಭದ್ರಕೋಟೆಗಳನ್ನ ಬಲಪಡಿಸ್ಕೊ.
ಮಣ್ಣಿಗೆ ಇಳಿದು ಜೇಡಿಮಣ್ಣನ್ನ ತುಳಿ,ಇಟ್ಟಿಗೆಯ ಅಚ್ಚನ್ನ ಗಟ್ಟಿಯಾಗಿ ಹಿಡಿ.
15 ಅಲ್ಲೂ ಬೆಂಕಿ ನಿನ್ನನ್ನ ಸುಡುತ್ತೆ.
ಕತ್ತಿ ನಿನ್ನನ್ನ ಕಡಿದುಹಾಕುತ್ತೆ.+
ಮರಿಮಿಡತೆ ಗಬಗಬ ಅಂತ ನುಂಗೋ ಹಾಗೆ ಅದು ನಿನ್ನನ್ನ ನುಂಗಿಬಿಡುತ್ತೆ.+
ಮರಿಮಿಡತೆಗಳ ಸಂಖ್ಯೆ ತರ ನೀನು ನಿನ್ನ ಸೈನ್ಯ ಹೆಚ್ಚಿಸ್ಕೊ!
ಹೌದು, ನಿನ್ನ ಸೈನ್ಯವನ್ನ ಮಿಡತೆಗಳ ಸಂಖ್ಯೆ ತರ ಜಾಸ್ತಿ ಮಾಡ್ಕೊ!
16 ನಿನ್ನ ವ್ಯಾಪಾರಿಗಳು ಆಕಾಶದ ನಕ್ಷತ್ರಗಳಿಗಿಂತ ಜಾಸ್ತಿ.
ಮರಿಮಿಡತೆ ತನ್ನ ಪೊರೆ ಕಳಚಿ ಹಾರಿಹೋಗುತ್ತೆ.
17 ನಿನ್ನ ಕಾವಲುಗಾರರು ಮಿಡತೆ ತರ ಇದ್ದಾರೆ.
ನಿನ್ನ ಅಧಿಕಾರಿಗಳು ಮಿಡತೆ ಗುಂಪಿನ ತರ ಇದ್ದಾರೆ.
ಚಳಿ ಇರೋ ದಿನ ಅವು ಬಂಡೆ ಸಂದಿಯಲ್ಲಿ ಬಚ್ಚಿಟ್ಕೊಳ್ಳುತ್ತೆ.
ಆದ್ರೆ ಸೂರ್ಯ ಹೊಳೆಯುವಾಗ ಅವು ಹಾರಿಹೋಗುತ್ತೆ.
ಅವು ಎಲ್ಲಿವೆ ಅಂತ ಯಾರಿಗೂ ಗೊತ್ತಾಗಲ್ಲ.
18 ಅಶ್ಶೂರ್ಯರ ರಾಜನೇ, ನಿನ್ನ ಕುರುಬರು ತೂಕಡಿಸ್ತಿದ್ದಾರೆ,ನಿನ್ನ ಅಧಿಕಾರಿಗಳು ಅವ್ರ ಮನೆಯಲ್ಲೇ ಇದ್ದಾರೆ.
ನಿನ್ನ ಜನ್ರು ಬೆಟ್ಟದಲ್ಲಿ ಚದರಿ ಹೋಗಿದ್ದಾರೆ,ಅವ್ರನ್ನ ಒಟ್ಟು ಸೇರಿಸುವವರು ಯಾರೂ ಇಲ್ಲ.+
19 ನಿನಗೆ ಬರೋ ಕಷ್ಟಕ್ಕೆ ಪರಿಹಾರನೇ ಇಲ್ಲ.
ನಿನ್ನ ಗಾಯ ವಾಸಿ ಆಗೋದೇ ಇಲ್ಲ.
ನಿನ್ನ ಸುದ್ದಿ ಕೇಳುವವ್ರೆಲ್ಲ ಚಪ್ಪಾಳೆ ಹೊಡಿತಾರೆ,+ನಿನ್ನ ಕ್ರೂರತನದಿಂದ ಬಾಧೆ ಅನುಭವಿಸದೇ ಇರುವವರು ಯಾರಿದ್ದಾರೆ?”+