ನೆಹೆಮೀಯ 1:1-11

  • ಯೆರೂಸಲೇಮಿಂದ ಸಂದೇಶ (1-3)

  • ನೆಹೆಮೀಯನ ಪ್ರಾರ್ಥನೆ (4-11)

1  ಹಕಲ್ಯನ ಮಗ ನೆಹೆಮೀಯನ*+ ಮಾತುಗಳು: ನಾನು 20ನೇ ವರ್ಷದ ಕಿಸ್ಲೇವ್‌* ತಿಂಗಳಲ್ಲಿ ಶೂಷನಿನ*+ ಅರಮನೆಯಲ್ಲಿ ಇದ್ದೆ.*  ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನಿ+ ಮತ್ತೆ ಯೆಹೂದದ ಕೆಲವು ಗಂಡಸ್ರು ನನ್ನ ಹತ್ರ ಬಂದ್ರು. ಕೈದಿಯಾಗಿದ್ದು ವಾಪಸ್‌ ಹೋಗಿದ್ದ ಯೆಹೂದ್ಯರ ಬಗ್ಗೆ,+ ಯೆರೂಸಲೇಮಿನ ಬಗ್ಗೆ ಅವ್ರ ಹತ್ರ ವಿಚಾರಿಸ್ದೆ.  ಅದಕ್ಕೆ “ಯೆಹೂದ ಪ್ರದೇಶಕ್ಕೆ* ವಾಪಸ್‌ ಹೋಗಿ ಜೀವನ ಮಾಡ್ತಾ ಇರೋ ಜನ್ರು ತುಂಬ ಕಷ್ಟದಲ್ಲಿದ್ದಾರೆ, ಬೇರೆಯವರು ಅವ್ರನ್ನ ನೋಡಿ ಅವಮಾನ ಮಾಡ್ತಾ ಇದ್ದಾರೆ.+ ಯೆರೂಸಲೇಮಿನ ಗೋಡೆಗಳು ಬಿದ್ದುಹೋಗಿವೆ,+ ಅದ್ರ ಬಾಗಿಲುಗಳು ಸುಟ್ಟು ಹೋಗಿವೆ”+ ಅಂದ್ರು.  ಇದನ್ನ ಕೇಳಿಸ್ಕೊಂಡ ತಕ್ಷಣ ನಾನು ಅಳೋಕೆ ಶುರು ಮಾಡ್ದೆ. ಸ್ವಲ್ಪ ದಿನ ಗೋಳಾಡ್ದೆ. ಉಪವಾಸ ಮಾಡ್ತಾ+ ಸ್ವರ್ಗದ ದೇವ್ರ ಮುಂದೆ ಪ್ರಾರ್ಥನೆ ಮಾಡ್ತಾ  ಹೀಗಂದೆ: “ಯೆಹೋವನೇ, ಸ್ವರ್ಗದ ದೇವರೇ, ನೀನು ಮಹಾನ್‌ ದೇವರು. ಭಯವಿಸ್ಮಯ ಹುಟ್ಟಿಸೋನು. ನಿನ್ನನ್ನ ಪ್ರೀತಿಸಿ ನಿನ್ನ ಆಜ್ಞೆಗಳನ್ನ ಪಾಲಿಸೋರ ಜೊತೆ ಮಾಡ್ಕೊಂಡಿರೋ ಒಪ್ಪಂದವನ್ನ* ನೀನು ಮುರಿಯಲ್ಲ. ಅವ್ರ ಕಡೆ ಶಾಶ್ವತ ಪ್ರೀತಿ ತೋರಿಸ್ತೀಯ.+  ಹಾಗಾಗಿ ನನ್ನ ಮಾತನ್ನ ಕೇಳು. ನನ್ನ ಕಡೆ ಗಮನಕೊಡು, ಇವತ್ತು ನಾನು ಮಾಡ್ತಿರೋ ಈ ಪ್ರಾರ್ಥನೆ ಕೇಳು. ದಾಸನಾದ ನಾನು ನಿನ್ನ ಸೇವಕರಾಗಿರೋ ಇಸ್ರಾಯೇಲ್ಯರಿಗಾಗಿ ಹಗಲೂರಾತ್ರಿ ನಿನ್ನ ಹತ್ರ ಪ್ರಾರ್ಥನೆ ಮಾಡ್ತಾ ಇದ್ದೀನಿ.+ ಇಸ್ರಾಯೇಲ್ಯರು ನಿನ್ನ ವಿರುದ್ಧ ಮಾಡಿರೋ ಪಾಪಗಳನ್ನ ಒಪ್ಕೊಳ್ತೀನಿ. ನಾನು, ನನ್ನ ತಂದೆ ಮನೆತನದವರು ಕೂಡ ಪಾಪ ಮಾಡಿದ್ದೀವಿ.+  ನಿನ್ನ ಸೇವಕ ಮೋಶೆಗೆ ಕೊಟ್ಟ ಆಜ್ಞೆಗಳನ್ನ ನಿಯಮಗಳನ್ನ ತೀರ್ಪುಗಳನ್ನ+ ನಾವು ಪಾಲಿಸ್ದೆ ನಿನ್ನ ವಿರುದ್ಧ ಕೆಟ್ಟ ಕೆಲಸಗಳನ್ನೇ ಮಾಡಿದ್ದೀವಿ.+  ನಿನ್ನ ಸೇವಕ ಮೋಶೆಗೆ ನೀನು ಹೇಳಿದ ಈ ಮಾತನ್ನ* ದಯವಿಟ್ಟು ನೆನಪು ಮಾಡ್ಕೊ: ‘ನೀವು ನನಗೆ ನಂಬಿಕೆ ದ್ರೋಹ ಮಾಡಿದ್ರೆ ನಿಮ್ಮನ್ನ ಬೇರೆ ಜನಾಂಗಗಳ ಮಧ್ಯ ಚದರಿಸಿಬಿಡ್ತೀನಿ.+  ಆದ್ರೆ ನನ್ನ ಹತ್ರ ವಾಪಸ್‌ ಬಂದ್ರೆ, ನನ್ನ ಆಜ್ಞೆಗಳ ಪ್ರಕಾರ ನಡ್ಕೊಂಡ್ರೆ ನಿಮ್ಮ ಜನ ಭೂಮಿಯ ಮೂಲೆಮೂಲೆಗೆ ಚದರಿಹೋಗಿದ್ರೂ ಅವ್ರನ್ನ ಒಟ್ಟುಸೇರಿಸ್ತೀನಿ.+ ನನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಂಡಿರೋ ಈ ಜಾಗಕ್ಕೆ+ ಅವ್ರನ್ನ ಕರ್ಕೊಂಡು ಬರ್ತೀನಿ’ ಅಂತ ನೀನು ಹೇಳಿದ್ದೆ. 10  ಅವ್ರು ನಿನ್ನ ಸೇವಕರು, ನಿನ್ನ ಮಹಾನ್‌ ಶಕ್ತಿಯಿಂದ, ನಿನ್ನ ಬಲಿಷ್ಠ ಕೈಗಳಿಂದ ಬಿಡಿಸ್ಕೊಂಡು ಬಂದಿರೋ ನಿನ್ನ ಜನ.+ 11  ಹಾಗಾಗಿ ಯೆಹೋವನೇ, ದಯವಿಟ್ಟು ನಿನ್ನ ಸೇವಕನ ಈ ಪ್ರಾರ್ಥನೆಯನ್ನ, ನಿನ್ನ ಹೆಸ್ರಿಗೆ ಮನಸಾರೆ ಗೌರವ* ಕೊಡೋ ಸೇವಕರ ಪ್ರಾರ್ಥನೆಯನ್ನ ಕೇಳು. ಇವತ್ತು ಈ ನಿನ್ನ ಸೇವಕನಿಗೆ ಯಶಸ್ಸು ಸಿಗೋ ಹಾಗೆ ಮಾಡು. ಈ ರಾಜ ನನಗೆ ಕರುಣೆ ತೋರಿಸೋ ತರ ಮಾಡು.”+ ನಾನು ಆ ದಿನಗಳಲ್ಲಿ ರಾಜನ ಪಾನದಾಯಕ ಆಗಿದ್ದೆ.+

ಪಾದಟಿಪ್ಪಣಿ

ಅರ್ಥ “ಯೆಹೋವ ಸಮಾಧಾನ ಮಾಡ್ತಾನೆ.”
ಅಥವಾ “ಸೂಸನಿನ.”
ಅಕ್ಷ. “ಕೋಟೆ.”
ಅಥವಾ “ಮೇದ್ಯ-ಪರ್ಶಿಯರ ಕೈಕೆಳಗಿರೋ ಜಿಲ್ಲೆಗೆ.”
ಅಥವಾ “ಕೊಟ್ಟ ಈ ಎಚ್ಚರಿಕೆಯನ್ನ.”
ಅಕ್ಷ. “ಭಯ.”