ನ್ಯಾಯಸ್ಥಾಪಕರು 13:1-25

  • ಮಾನೋಹ ದಂಪತಿಗೆ ದೇವದೂತನ ಭೇಟಿ (1-23)

  • ಸಂಸೋನನ ಜನನ (24, 25)

13  ಇಸ್ರಾಯೇಲ್ಯರು ಮತ್ತೆ ಯೆಹೋವನಿಗೆ ಇಷ್ಟ ಆಗದ ವಿಷ್ಯಗಳನ್ನೇ ಮಾಡಿದ್ರು.+ ಹಾಗಾಗಿ ಯೆಹೋವ ಅವ್ರನ್ನ 40 ವರ್ಷ ಫಿಲಿಷ್ಟಿಯರ ಕೈಗೆ ಒಪ್ಪಿಸಿದನು.+  ಆ ಕಾಲದಲ್ಲಿ ಚೊರ್ಗ+ ಅನ್ನೋ ಊರಲ್ಲಿ ದಾನ್‌+ ಮನೆತನಕ್ಕೆ ಸೇರಿದ ಒಬ್ಬ ಮನುಷ್ಯನಿದ್ದ. ಅವನ ಹೆಸ್ರು ಮಾನೋಹ.+ ಅವನ ಹೆಂಡತಿ ಬಂಜೆ ಆಗಿದ್ದಳು, ಮಕ್ಕಳಿರಲಿಲ್ಲ.+  ಸ್ವಲ್ಪ ಸಮಯ ಆದ್ಮೇಲೆ ಯೆಹೋವನ ಒಬ್ಬ ದೂತ ಅವಳಿಗೆ ಕಾಣಿಸ್ಕೊಂಡು ಹೀಗೆ ಹೇಳಿದ: “ಇಷ್ಟು ದಿನ ನೀನು ಬಂಜೆ ಆಗಿದ್ರಿಂದ ಮಕ್ಕಳು ಇರಲಿಲ್ಲ. ಆದ್ರೆ ನೀನು ಗರ್ಭಿಣಿ ಆಗ್ತೀಯ, ಒಬ್ಬ ಮಗ ಹುಟ್ತಾನೆ.+  ಹಾಗಾಗಿ ಈಗ ನೀನು ಹುಷಾರಾಗಿ ಇರಬೇಕು. ದ್ರಾಕ್ಷಾಮದ್ಯ ಆಗ್ಲಿ ಬೇರೆ ಮದ್ಯ ಆಗ್ಲಿ ಕುಡಿಬಾರದು.+ ಅಶುದ್ಧವಾದ ಯಾವುದನ್ನೂ ತಿನ್ನಬಾರದು.+  ನೀನು ಗರ್ಭಿಣಿ ಆಗ್ತೀಯ, ನಿನಗೆ ಗಂಡು ಮಗು ಹುಟ್ಟುತ್ತೆ. ಅವನ ತಲೆ ಮೇಲೆ ಕ್ಷೌರದ ಕತ್ತಿ ತಾಗಿಸ್ಲೇಬಾರದು.+ ಯಾಕಂದ್ರೆ ಹುಟ್ಟಿಂದ* ಅವನು ದೇವರ ನಾಜೀರ* ಆಗಿರ್ತಾನೆ. ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನ ರಕ್ಷಿಸೋಕೆ ಅವನು ಮುಂದಾಳತ್ವ ವಹಿಸ್ತಾನೆ.”+  ಇದನ್ನ ಅವಳು ತನ್ನ ಗಂಡನಿಗೆ ಹೇಳಿದಳು. “ಸತ್ಯ ದೇವರ ಮನುಷ್ಯ ನನ್ನ ಹತ್ರ ಬಂದಿದ್ದ. ಅವನು ನೋಡೋಕೆ ಸತ್ಯ ದೇವರ ದೂತನ ತರ ಇದ್ದ. ಅವನನ್ನ ನೋಡಿ ಆಶ್ಚರ್ಯದಿಂದ ಹಾಗೇ ನಿಂತುಬಿಟ್ಟೆ. ಅವನು ಎಲ್ಲಿಂದ ಬಂದ ಅಂತ ನಾನು ಕೇಳಲಿಲ್ಲ. ಅವನೂ ತನ್ನ ಹೆಸ್ರು ಹೇಳಲಿಲ್ಲ.+  ಅವನು ನನಗೆ ‘ನೀನು ಗರ್ಭಿಣಿ ಆಗ್ತೀಯ, ಒಂದು ಗಂಡು ಮಗು ಹುಟ್ಟುತ್ತೆ. ನೀನು ದ್ರಾಕ್ಷಾಮದ್ಯ ಆಗ್ಲಿ ಬೇರೆ ಮದ್ಯ ಆಗ್ಲಿ ಕುಡಿಬಾರದು. ಅಶುದ್ಧವಾದ ಯಾವುದನ್ನೂ ತಿನ್ನಬಾರದು. ಯಾಕಂದ್ರೆ ನಿನಗೆ ಹುಟ್ಟೋ ಮಗ ಹುಟ್ಟಿಂದ* ಸಾಯೋ ತನಕ ದೇವರ ನಾಜೀರ ಆಗಿರ್ತಾನೆ’ ಅಂದ.”  ಆಗ ಮಾನೋಹ ಯೆಹೋವನ ಹತ್ರ ಅಂಗಲಾಚ್ತಾ “ನನ್ನನ್ನ ಕ್ಷಮಿಸು ಯೆಹೋವ. ಹುಟ್ಟೋ ಮಗನನ್ನ ನಾವು ಹೇಗೆ ಬೆಳೆಸಬೇಕಂತ ನಮಗೆ ಹೇಳ್ಕೊಡೋಕೆ ನೀನು ಈಗಷ್ಟೇ ಕಳಿಸಿದ ಸತ್ಯ ದೇವರ ಮನುಷ್ಯನನ್ನ ದಯವಿಟ್ಟು ಮತ್ತೊಮ್ಮೆ ಕಳ್ಸು” ಅಂತ ಬೇಡ್ಕೊಂಡ.  ಆಗ ಸತ್ಯ ದೇವರು ಮಾನೋಹನ ಪ್ರಾರ್ಥನೆ ಕೇಳಿದನು. ಆ ಸ್ತ್ರೀ ಹೊಲದಲ್ಲಿ ಕೂತಿದ್ದಾಗ ಸತ್ಯ ದೇವರ ದೂತ ಮತ್ತೆ ಬಂದ. ಆಗ ಅವಳ ಗಂಡ ಮಾನೋಹ ಅಲ್ಲಿರಲಿಲ್ಲ. 10  ಅವಳು ಬೇಗ ಗಂಡನ ಹತ್ರ ಓಡಿಹೋಗಿ “ನೋಡು! ಆ ದಿನ ನನಗೆ ಕಾಣಿಸ್ಕೊಂಡ ಮನುಷ್ಯ ಮತ್ತೆ ಬಂದಿದ್ದಾನೆ”+ ಅಂದಳು. 11  ಆಗ ಮಾನೋಹ ಹೆಂಡತಿ ಜೊತೆ ಆ ಮನುಷ್ಯನ ಹತ್ರ ಬಂದು “ನನ್ನ ಹೆಂಡತಿ ಹತ್ರ ಮಾತಾಡಿದ್ದು ನೀನಾ?” ಅಂತ ಕೇಳಿದಾಗ “ಹೌದು ನಾನೇ” ಅಂದ. 12  ಆಗ ಮಾನೋಹ “ನೀನು ನಮ್ಮ ಬಗ್ಗೆ ಹೇಳಿದ ಮಾತು ನಿಜ ಆಗ್ಲಿ! ಆ ಮಗುವಿನ ಜೀವನ ಹೇಗಿರುತ್ತೆ, ದೊಡ್ಡವನಾದ ಮೇಲೆ ಏನು ಮಾಡ್ತಾನೆ ಅಂತ ನಮಗೆ ಹೇಳು”+ ಅಂತ ಕೇಳಿದ. 13  ಆಗ ಯೆಹೋವನ ದೂತ ಮಾನೋಹನಿಗೆ “ನಿನ್ನ ಹೆಂಡತಿ ನಾನು ಹೇಳಿದ ಎಲ್ಲ ವಿಷ್ಯಗಳಿಂದ ದೂರ ಇರಬೇಕು.+ 14  ದ್ರಾಕ್ಷಿ ಬಳ್ಳಿಯಿಂದ ಬರೋ ಯಾವುದನ್ನೂ ತಿನ್ನಬಾರದು. ದ್ರಾಕ್ಷಾಮದ್ಯ ಆಗ್ಲಿ ಬೇರೆ ಮದ್ಯ ಆಗ್ಲಿ ಕುಡಿಬಾರದು.+ ಅಶುದ್ಧವಾದ ಯಾವುದನ್ನೂ ತಿನ್ನಬಾರದು.+ ನಾನು ಹೇಳಿದ್ದನ್ನೆಲ್ಲ ಅವಳು ಪಾಲಿಸಬೇಕು” ಅಂದ. 15  ಆಗ ಮಾನೋಹ ಯೆಹೋವನ ದೂತನಿಗೆ “ದಯವಿಟ್ಟು ಇಲ್ಲೇ ಇರು. ನಾವು ನಿನಗೋಸ್ಕರ ಒಂದು ಎಳೇ ಆಡಿನ ಮಾಂಸನ ಅಡುಗೆ ಮಾಡ್ತೀವಿ”+ ಅಂದ. 16  ಆದ್ರೆ ಯೆಹೋವನ ದೂತ ಮಾನೋಹನಿಗೆ “ನಾನು ಇಲ್ಲೇ ಇದ್ರೂ ನಿಮ್ಮ ಆಹಾರ ತಿನ್ನಲ್ಲ. ಆದ್ರೆ ನೀವು ಯೆಹೋವನಿಗಾಗಿ ಸರ್ವಾಂಗಹೋಮ ಬಲಿ ಅರ್ಪಿಸೋಕೆ ಇಷ್ಟಪಡೋದಾದ್ರೆ ಅರ್ಪಿಸಬಹುದು” ಅಂದ. ಅವನು ಯೆಹೋವನ ದೂತ ಅಂತ ಮಾನೋಹನಿಗೆ ಗೊತ್ತಿರಲಿಲ್ಲ. 17  ಆಗ ಮಾನೋಹ ಯೆಹೋವನ ದೂತನಿಗೆ “ನಿನ್ನ ಮಾತು ನಿಜ ಆದಾಗ ನಿನ್ನನ್ನ ಗೌರವಿಸೋಕೆ ನಿನ್ನ ಹೆಸ್ರು ಹೇಳು”+ ಅಂದ. 18  ಆದ್ರೆ ಯೆಹೋವನ ದೂತ ಅವನಿಗೆ “ನನ್ನ ಹೆಸ್ರನ್ನ ಯಾಕೆ ಕೇಳ್ತೀಯ? ಅದು ತುಂಬ ಅದ್ಭುತ ಹೆಸ್ರು” ಅಂದ. 19  ಆಮೇಲೆ ಮಾನೋಹ ಎಳೇ ಆಡನ್ನ ಧಾನ್ಯವನ್ನ ಒಂದು ಬಂಡೆ ಮೇಲೆ ಯೆಹೋವನಿಗೆ ಅರ್ಪಿಸಿದ. ಮಾನೋಹ ಮತ್ತು ಅವನ ಹೆಂಡತಿ ನೋಡ್ತಾ ಇರುವಾಗ್ಲೇ ದೇವರು ಒಂದು ಅದ್ಭುತ ಮಾಡಿದನು. 20  ಯಜ್ಞವೇದಿಯಿಂದ ಹೊಗೆ ಆಕಾಶದ ಕಡೆ ಹೋಗುವಾಗ ಮಾನೋಹ ಮತ್ತು ಅವನ ಹೆಂಡತಿ ನೋಡ್ತಾ ಇದ್ದಾಗ್ಲೇ ಯೆಹೋವನ ದೂತ ಹೊಗೆಯಲ್ಲಿ ಸೇರ್ಕೊಂಡು ಆಕಾಶಕ್ಕೆ ಏರಿಹೋದ. ತಕ್ಷಣ ಅವರಿಬ್ರು ನೆಲಕ್ಕೆ ಮುಖಮಾಡಿ ಅಡ್ಡಬಿದ್ರು. 21  ಯೆಹೋವನ ದೂತ ಮಾನೋಹನಿಗೆ, ಅವನ ಹೆಂಡತಿಗೆ ಮತ್ತೆ ಕಾಣಿಸ್ಕೊಳ್ಳಲಿಲ್ಲ. ಬಂದಿದ್ದವನು ಯೆಹೋವನ ದೂತ ಅಂತ ಆಗ ಮಾನೋಹನಿಗೆ ಗೊತ್ತಾಯ್ತು.+ 22  ಮಾನೋಹ ತನ್ನ ಹೆಂಡತಿಗೆ “ನಾವು ದೇವ್ರನ್ನ ನೋಡಿದ್ವಿ, ಖಂಡಿತ ಸತ್ತುಹೋಗ್ತೀವಿ”+ ಅಂದ. 23  ಆದ್ರೆ ಅವನ ಹೆಂಡತಿ “ಯೆಹೋವ ನಮ್ಮನ್ನ ಕೊಲ್ಲಬೇಕಂತಿದ್ರೆ ನಾವು ಕೊಟ್ಟ ಸರ್ವಾಂಗಹೋಮ ಬಲಿ,+ ಧಾನ್ಯದ ಅರ್ಪಣೆ ಸ್ವೀಕರಿಸ್ತಾ ಇರ್ಲಿಲ್ಲ. ಈ ವಿಷ್ಯಗಳನ್ನೆಲ್ಲ ಆತನು ನಮಗೆ ತೋರಿಸ್ತಾ ಇರ್ಲಿಲ್ಲ. ಈ ವಿಷ್ಯಗಳಲ್ಲಿ ಯಾವುದನ್ನೂ ನಮಗೆ ಹೇಳ್ತಾ ಇರ್ಲಿಲ್ಲ” ಅಂದಳು. 24  ಆಮೇಲೆ ಅವಳಿಗೆ ಒಂದು ಗಂಡು ಮಗು ಆಯ್ತು. ಆ ಮಗುಗೆ ಸಂಸೋನ+ ಅಂತ ಹೆಸ್ರಿಟ್ಟಳು. ಆ ಹುಡುಗ ಬೆಳಿತಾ ಹೋದ ಹಾಗೆ ಯೆಹೋವ ಅವನನ್ನ ಆಶೀರ್ವದಿಸ್ತಾ ಬಂದನು. 25  ಸ್ವಲ್ಪ ಸಮಯ ಆದ್ಮೇಲೆ ಯೆಹೋವನ ಪವಿತ್ರಶಕ್ತಿ ಚೊರ್ಗ, ಎಷ್ಟಾವೋಲ್‌+ ಮಧ್ಯ ಇರೋ ಮಾಹಾನೆಹದಾನಿನಲ್ಲಿ+ ಅವನನ್ನ ಪ್ರೇರಿಸೋಕೆ ಶುರು ಮಾಡ್ತು.+

ಪಾದಟಿಪ್ಪಣಿ

ಅಕ್ಷ. “ಗರ್ಭದಿಂದ.”
ನಾಜೀರ್‌ ಹೀಬ್ರು ಪದ. ಪದವಿವರಣೆ ನೋಡಿ.
ಅಕ್ಷ. “ಗರ್ಭದಿಂದ.”