ಪರಮಗೀತ 1:1-17

  • ಗೀತೆಗಳಲ್ಲೇ ಸುಂದರ ಗೀತೆ (1)

  • ಯುವತಿ (2-7)

  • ಯೆರೂಸಲೇಮಿನ ಹೆಣ್ಣುಮಕ್ಕಳು (8)

  • ರಾಜ (9-11)

    • ನಿನಗಾಗಿ ಚಿನ್ನದ ಒಡವೆಗಳನ್ನ ಮಾಡಿಸ್ತೀವಿ (11)

  • ಯುವತಿ (12-14)

    • “ಸುವಾಸನೆಭರಿತ ಗಂಧರಸದ ಚೀಲದ ತರ ಇದ್ದಾನೆ ನನ್ನ ಇನಿಯ” (13)

  • ಕುರುಬ (15)

    • “ನನ್ನ ನಲ್ಲೆ, ನೀ ರೂಪವತಿ”

  • ಯುವತಿ (16, 17)

    • “ನನ್ನ ನಲ್ಲ, ನೀನೇ ಸುಂದರ” (16)

1  ಗೀತೆಗಳಲ್ಲೇ ಸುಂದರ ಗೀತೆ,* ಸೊಲೊಮೋನನ ಗೀತೆ:+   “ನಿನ್ನ ತುಟಿಗಳಿಂದ ನನಗೆ ಮುತ್ತು ಕೊಡು,ನೀ ತೋರಿಸೋ ಒಲುಮೆ ದ್ರಾಕ್ಷಾಮದ್ಯಕ್ಕಿಂತ ಸುಮಧುರ.+   ಆಹಾ! ನಿನ್ನ ತೈಲಗಳ ಸುವಾಸನೆ ಆಹ್ಲಾದಕರ.+ ನಿನ್ನ ಹೆಸರು ತಲೆ ಮೇಲೆ ಸುರಿದಿರೋ ಸುಗಂಧಭರಿತ ಎಣ್ಣೆ ತರ.+ ಅದಕ್ಕೇ ಯುವತಿಯರು ನಿನಗೆ ಮನಸೋತಿದ್ದಾರೆ.   ರಾಜ ನನ್ನನ್ನ ಒಳಕೋಣೆಗೆ ಕರ್ಕೊಂಡು ಬಂದಿದ್ದಾನೆ,ನನ್ನನ್ನ ನಿನ್ನ ಜೊತೆ ಕರ್ಕೊಂಡು ಹೋಗು, ಬಾ ಇಲ್ಲಿಂದ ಓಡಿಹೋಗೋಣ. ಜೊತೆಯಾಗಿ ಸೇರಿ ನಕ್ಕು ನಲಿಯೋಣ,ನಿನಗೆ ನನ್ನ ಮೇಲಿರೋ ಪ್ರೀತಿ ಬಗ್ಗೆ ಸವಿ ಮಾತನ್ನ ಆಡೋಣ,ಆಹಾ! ನಿನ್ನ ಪ್ರೀತಿ ದ್ರಾಕ್ಷಾಮದ್ಯಕ್ಕಿಂತ ಮಧುರ. ಅದಕ್ಕೇ ಯುವತಿಯರು ನಿನ್ನನ್ನ ಪ್ರೇಮಿಸ್ತಾರೆ.   ಯೆರೂಸಲೇಮಿನ ಹೆಣ್ಣುಮಕ್ಕಳೇ, ನಾನು ಕಪ್ಪಗಿದ್ರೂ ಚೆಲುವೆ. ನಾನು ಕೇದಾರಿನ+ ಡೇರೆಗಳ ತರ, ಸೊಲೊಮೋನನ ಡೇರೆ ಬಟ್ಟೆಗಳ+ ತರ ಇದ್ದೀನಿ.   ನಾನು ಕಪ್ಪಗಿದ್ದೀನಂತ ಗುರಾಯಿಸಬೇಡಿ,ಸೂರ್ಯನ ತಾಪ ನನ್ನ ತ್ವಚೆಗೆ ತಾಗಿ ಕಪ್ಪಾಗಿದ್ದೀನಿ,ನನ್ನ ಸಹೋದರರು ನನ್ನ ಮೇಲೆ ಕೋಪ ಮಾಡ್ಕೊಂಡ್ರು,ಅವರು ನನ್ನನ್ನ ದ್ರಾಕ್ಷಿತೋಟಗಳನ್ನ ಕಾಯೋಕೆ ನೇಮಿಸಿದ್ರು,ಹಾಗಾಗಿ ನನಗೆ ನನ್ನ ಸ್ವಂತ ದ್ರಾಕ್ಷಿತೋಟ ಕಾಯೋಕ್ಕಾಗಲಿಲ್ಲ.   ನನ್ನ ಪ್ರಿಯತಮನೇ,ನಿನ್ನ ಹಿಂಡನ್ನ ಎಲ್ಲಿ ಮೇಯಿಸ್ತೀಯ ಹೇಳು,+ಹಿಂಡನ್ನ ಮಧ್ಯಾಹ್ನ ಎಲ್ಲಿ ತಂಗಿಸ್ತೀಯ ಹೇಳು. ಮುಸುಕು* ಹಾಕಿರೋ ಸ್ತ್ರೀ ತರನಾನ್ಯಾಕೆ ನಿನ್ನ ಜೊತೆ ಇರುವವರ ಹಿಂಡುಗಳ ಮಧ್ಯೆ ಅಲೆದಾಡಲಿ?”   “ಸ್ತ್ರೀಯರಲ್ಲಿ ಅತೀ ಸೌಂದರ್ಯವತಿಯೇ, ನಿನಗೆ ಗೊತ್ತಿಲ್ಲಾಂದ್ರೆಹಿಂಡುಗಳ ಹೆಜ್ಜೆ ಗುರುತುಗಳನ್ನ ಹಿಂಬಾಲಿಸಿ ಹೋಗು. ನಿನ್ನ ಆಡುಮರಿಗಳನ್ನ ಕುರುಬರ ಡೇರೆಗಳ ಪಕ್ಕದಲ್ಲಿ ಮೇಯಿಸು.”   “ನನ್ನ ಪ್ರಿಯಳೇ, ನೀನು ಫರೋಹನ ರಥಗಳ ಮಧ್ಯೆ ಇರೋ ಹೆಣ್ಣು ಕುದುರೆ+ ತರ ಬಲು ಸುಂದರಿ. 10  ಆಭರಣಗಳಿಂದ* ಸಿಂಗರಿಸಿರೋ ನಿನ್ನ ಕೆನ್ನೆಗಳು ಬಲು ಚೆಂದ,ಮುತ್ತಿನ ಹಾರಗಳಿಂದ ಅಲಂಕೃತ​ವಾದ ನಿನ್ನ ಕೊರಳೆಷ್ಟೋ ಅಂದ. 11  ಬೆಳ್ಳಿಯ ಮಣಿಗಳನ್ನ ಕೂರಿಸಿರೋಚಿನ್ನದ ಒಡವೆಗಳನ್ನ* ನಾವು ನಿನಗಾಗಿ ಮಾಡಿಸ್ತೀವಿ.” 12  “ರಾಜ ತನ್ನ ಮೇಜಿನ ಹತ್ರ ಕೂತಿರುವಾಗ್ಲೂನನ್ನ ಸುಗಂಧ ತೈಲ*+ ನನ್ನ ನಲ್ಲನಿ​ಗಾಗಿ ಪರಿಮಳ ಹೊರಸೂಸುತ್ತೆ. 13  ರಾತ್ರಿಯೆಲ್ಲ ನನ್ನೆದೆ ಮೇಲಿರೋ*ಸುವಾಸನೆಭರಿತ ಗಂಧರಸದ+ ಚೀಲದ ತರ ಇದ್ದಾನೆ ನನ್ನ ಇನಿಯ. 14  ಏಂಗೆದಿಯ+ ದ್ರಾಕ್ಷಿತೋಟಗಳ ಮಧ್ಯೆ ಇರೋಗೋರಂಟಿಯ*+ ಹೂಗೊಂಚಲಿನ ತರ ಇದ್ದಾನೆ ನನ್ನ ಪ್ರಿಯಕರ.” 15  “ಓ ನನ್ನ ನಲ್ಲೆ, ನೀ ರೂಪವತಿ,ಚೆಂದುಳ್ಳಿ ಚೆಲುವೆ! ನಿನ್ನ ಕಣ್ಣುಗಳೋ ಪಾರಿವಾಳದ ಕಣ್ಣುಗಳ ತರ ಇವೆ.”+ 16  “ಓ ನನ್ನ ನಲ್ಲ, ನೀನೇ ಸುಂದರ, ಅತಿ ಮನೋಹರ!+ ಹಸಿರೆಲೆಗಳೇ ನಮ್ಮ ಹಾಸಿಗೆ. 17  ದೇವದಾರು ಮರಗಳೇ ನಮ್ಮ ಮನೆಯ ತೊಲೆಗಳುಜುನಿಪರ್‌ ಮರಗಳೇ ನಮ್ಮ ಮನೆಯ ಚಾವಣಿ.

ಪಾದಟಿಪ್ಪಣಿ

ಅಥವಾ “ಶ್ರೇಷ್ಠ ಗೀತೆ.”
ಅಥವಾ “ಶೋಕದಿಂದ ಮುಸುಕು.”
ಬಹುಶಃ, “ಜಡೆಗಳಿಂದ.”
ಅಥವಾ “ತಲೆಪಟ್ಟಿಗಳನ್ನ.”
ಅಕ್ಷ. “ಜಟಮಾಂಸಿ ತೈಲದ.”
ಅಕ್ಷ. “ನನ್ನ ಸ್ತನಗಳ ಮಧ್ಯೆ ಇರೋ.”
ಅಥವಾ “ಮದರಂಗಿಯ.”