ಪರಮಗೀತ 5:1-16

  • ಕುರುಬ (1ಎ)

  • ಯೆರೂಸಲೇಮಿನ ಹೆಣ್ಣುಮಕ್ಕಳು (1ಬಿ)

    • “ಪ್ರೇಮಧಾರೆಯ ಕುಡಿದು ಮತ್ತರಾಗಿ!”

  • ಯುವತಿ (2-8)

    • ಕನಸು ಹೇಳ್ತಿದ್ದಾಳೆ

  • ಯೆರೂಸಲೇಮಿನ ಹೆಣ್ಣುಮಕ್ಕಳು (9)

    • “ನಿನ್ನ ಪ್ರಿಯತಮ ಬೇರೆಲ್ಲ ಪ್ರಿಯತಮರಿಗಿಂತ ಹೇಗೆ ಶ್ರೇಷ್ಠ?”

  • ಯುವತಿ (10-16)

    • “ಹತ್ತು ಸಾವಿರ ಜನರಲ್ಲೂ ಅವನೇ ಆಕರ್ಷಕ” (10)

5  “ನನ್ನ ನಲ್ಮೆಯ ವಧುವೇ,ನಾ ನನ್ನ ತೋಟದೊಳಗೆ ಬಂದಿದ್ದೀನಿ.+ ನನ್ನ ಗಂಧರಸವನ್ನೂ ಸುಗಂಧ ತೈಲವನ್ನೂ ತಗೊಂಡಿದ್ದೀನಿ.+ ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿದ್ದೀನಿ,ನನ್ನ ದ್ರಾಕ್ಷಾಮದ್ಯವನ್ನೂ ಹಾಲನ್ನೂ ಕುಡಿದಿದ್ದೀನಿ.”+ “ಪ್ರಿಯ ಸ್ನೇಹಿತರೇ, ತಿನ್ನಿ, ಕುಡಿರಿ,ಪ್ರೇಮಧಾರೆ ಕುಡಿದು ಮತ್ತರಾಗಿ!”+   “ನಾನು ಮಲಗಿದ್ರೂ ನನ್ನ ಹೃದಯ ಎಚ್ಚರವಾಗಿದೆ.+ ಹಾಂ... ನನ್ನ ಪ್ರಿಯತಮ ಬಾಗಿಲು ತಟ್ತಿದ್ದಾನೆ. ‘ನನ್ನ ಪ್ರೀತಿಯೇ, ನನ್ನ ಪ್ರಾಣಸಖಿಯೇ, ಬಾಗಿಲು ತೆರಿ,ಲೋಪದೋಷ ಇಲ್ಲದ ನನ್ನ ಸಖಿಯೇ, ನನ್ನ ಪಾರಿವಾಳವೇ, ಬಾಗಿಲು ತೆರಿ! ಇಬ್ಬನಿಯಿಂದ ನನ್ನ ತಲೆ ನೆನೆದಿದೆ,ರಾತ್ರಿ ಮಂಜಿನಿಂದ ನನ್ನ ತಲೆಗೂದಲು ತೇವವಾಗಿದೆ.’+   ನಾನು ಮೇಲಂಗಿ ತೆಗೆದಾಗಿದೆ,ಮತ್ತೆ ಹಾಕಬೇಕಾ? ನನ್ನ ಕಾಲುಗಳನ್ನ ತೊಳೆದಾಗಿದೆ,ಮತ್ತೆ ಕೊಳೆ ಮಾಡ್ಕೋಬೇಕಾ?   ನನ್ನ ನಲ್ಲ ಬಾಗಿಲ ರಂಧ್ರದಿಂದ ಕೈ ಹಿಂತೆಗೆದ,ಆಗ ನನ್ನ ಹೃದಯ ಅವನನ್ನ ನೋಡೋಕೆ ಚಡಪಡಿಸಿತು.   ನಾನೆದ್ದು ನನ್ನವನಿಗಾಗಿ ಬಾಗಿಲು ತೆರೆಯೋಕೆ ಹೋದೆ. ಆಗ ನನ್ನ ಕೈಗಳಿಂದ ಇಳಿತಿದ್ದ ಗಂಧರಸ,ನನ್ನ ಬೆರಳುಗಳಿಂದ ತೊಟ್ಟಿಕ್ತಿದ್ದ ಗಂಧರಸದ ತೈಲಚಿಲಕದ ಮೇಲೆ ಬಿತ್ತು.   ನಾನು ನನ್ನ ಹುಡುಗನಿಗಾಗಿ ಬಾಗಿಲು ತೆರೆದೆ,ಆದರೆ ಅವನು ಅಲ್ಲಿರಲಿಲ್ಲ, ಹೊರಟು ಹೋಗಿದ್ದ. ಅವನಿಲ್ಲದ್ದನ್ನ ಕಂಡು ನನ್ನ ಮನ ಒದ್ದಾಡ್ತು,*ಅವನನ್ನ ಎಷ್ಟೋ ಹುಡುಕಿದೆ, ಆದ್ರೆ ಸಿಗಲಿಲ್ಲ,+ಕೂಗಿ ಕರೆದೆ, ಓಗೊಡಲಿಲ್ಲ.   ಪಟ್ಟಣದಲ್ಲಿ ಗಸ್ತು ತಿರುಗ್ತಿದ್ದ ಕಾವಲುಗಾರರ ಕಣ್ಣಿಗೆ ನಾ ಬಿದ್ದೆ. ಅವರು ನನ್ನನ್ನ ಹೊಡೆದು ಗಾಯ ಮಾಡಿದ್ರು. ಗೋಡೆಯ ಕಾವಲುಗಾರರು ನನ್ನ ಶಾಲನ್ನ* ನನ್ನ ಮೇಲಿಂದ ತೆಗೆದುಬಿಟ್ರು.   ಯೆರೂಸಲೇಮಿನ ಹೆಣ್ಣುಮಕ್ಕಳೇ,ನನ್ನ ಇನಿಯನನ್ನ ನೋಡಿದ್ರೆನಾನು ವಿರಹ ವೇದನೆಯಲ್ಲಿದ್ದೀನಿ ಅಂತ ಹೇಳಿ,ಹಾಗೆ ಹೇಳ್ತೀರಂತ ಪ್ರಮಾಣ ಮಾಡಿ.”   “ಸ್ತ್ರೀಯರೆಲ್ಲರಲ್ಲಿ ಸೌಂದರ್ಯವತಿಯೇ, ನಿನ್ನ ಪ್ರಿಯತಮ ಬೇರೆಲ್ಲ ಪ್ರಿಯತಮರಿಗಿಂತ ಹೇಗೆ ಶ್ರೇಷ್ಠ? ನೀನು ನಮ್ಮಿಂದ ಪ್ರಮಾಣ ಮಾಡಿಸ್ತೀಯಲ್ಲಾ,ಬೇರೆಲ್ಲ ಪ್ರಿಯತಮರಿಗಿಂತ ನಿನ್ನ ಪ್ರಿಯತಮನಲ್ಲಿ ಅಂಥದ್ದೇನು ವಿಶೇಷತೆ?” 10  “ನನ್ನ ಪ್ರಿಯತಮ ಕೆಂಬಣ್ಣದವನು, ಅಪ್ರತಿಮ ಸುಂದರಾಂಗ,ಹತ್ತು ಸಾವಿರ ಜನರಲ್ಲೂ ಅವನೇ ಆಕರ್ಷಕ. 11  ಅವನ ತಲೆ ಶುದ್ಧ ಚಿನ್ನದಷ್ಟು ಸುಂದರ. ಅವನ ತಲೆಗೂದಲು ಗಾಳಿಗೆ ತೂರಾಡೋ ಖರ್ಜೂರದ ಗರಿಗಳ ತರ ಇದೆ,* ಕಾಗೆಯಷ್ಟು ಕಪ್ಪಗಿದೆ. 12  ಅವನ ಕಣ್ಗಳು ತೊರೆಗಳ ಹತ್ರ ಇರೋ ಪಾರಿವಾಳಗಳ ತರ,ಹಾಲಲ್ಲಿ ಮೀಯುತ್ತಿರೋ, ತುಂಬಿದ ಕೊಳದ* ಹತ್ರ ಕೂತಿರೋ ಪಾರಿವಾಳಗಳ ತರ ಇವೆ. 13  ಅವನ ಕೆನ್ನೆಗಳು ಸುಗಂಧ ಸಸ್ಯಗಳ ಹಾಸಿಗೆ ತರ ಇವೆ,+ಸುವಾಸಿತ ಗಿಡಮೂಲಿಕೆಗಳ ಗುಡ್ಡಗಳ ತರ ಇವೆ. ಲಿಲಿ ಹೂಗಳ ತರ ಇರೋ ಅವನ ತುಟಿಗಳಿಂದ ಗಂಧರಸ ತೈಲ ಸುರಿಯುತ್ತೆ.+ 14  ದುಂಡಗಿನ ಅವನ ಕೈಗಳು ರತ್ನಖಚಿತ* ಚಿನ್ನದ ತರ ಇವೆ. ಅವನ ಹೊಟ್ಟೆ ನೀಲಮಣಿಯಿಂದ ಸಿಂಗರಿಸಿರೋ ಹೊಳೆಯೋ ದಂತದ ತರ ಇದೆ. 15  ಅವನ ಕಾಲುಗಳು ಅಪ್ಪಟ ಚಿನ್ನದ ಅಡಿಗಲ್ಲುಗಳ ಮೇಲೆ ನಿಲ್ಲಿಸಿರೋ ಅಮೃತಶಿಲೆಯ ಕಂಬಗಳ ತರ ಇವೆ. ಅವನ ಚೆಲುವು ಲೆಬನೋನಿನ ತರ ಇದೆ, ದೇವದಾರು ಮರಗಳ ತರ ಅವನಿಗೆ ಸರಿಸಾಟಿ ಯಾರೂ ಇಲ್ಲ.+ 16  ಅವನ ಬಾಯಿ ಜೇನುಕೊಡ,ಎಲ್ಲದ್ರಲ್ಲೂ ಅವನು ಮನಮೋಹಕ.+ ಯೆರೂಸಲೇಮಿನ ಹೆಣ್ಣುಮಕ್ಕಳೇ, ನೋಡಿ ಹೀಗಿದ್ದಾನೆ ನನ್ನ ನಲ್ಲ,ಅವನೇ ನನ್ನ ಇನಿಯ.”

ಪಾದಟಿಪ್ಪಣಿ

ಬಹುಶಃ, “ಅವನು ಮಾತಾಡಿದಾಗ ನಾನು ಮೂರ್ಚೆ ಹೋದೆ.”
ಅಥವಾ “ಮುಸುಕನ್ನ.”
ಬಹುಶಃ, “ಖರ್ಜೂರದ ಗೊಂಚಲುಗಳ ತರ ಇವೆ.”
ಬಹುಶಃ, “ಕಾರಂಜಿಯ ಅಂಚುಗಳ.”
ಅಥವಾ “ಕ್ರಿಸಲೈಟ್‌ ರತ್ನ.”