ಪರಮಗೀತ 8:1-14
-
ಯುವತಿ (1-4)
-
‘ನೀನು ನನ್ನ ಸಹೋದರನ ತರ ಇರಬಾರದಿತ್ತಾ’ (1)
-
-
ಯುವತಿಯ ಸಹೋದರರು (5ಎ)
-
‘ನಲ್ಲನ ತೋಳಿನ ಮೇಲೆ ಒರಗಿ ಬರ್ತಿರೋ ಅವಳ್ಯಾರು?’
-
-
ಯುವತಿ (5ಬಿ-7)
-
“ಪ್ರೀತಿ ಮರಣದಷ್ಟು ಬಲವಾಗಿದೆ” (6)
-
-
ಯುವತಿಯ ಸಹೋದರರು (8, 9)
-
“ಅವಳು ಗೋಡೆಯಾಗಿದ್ರೆ ... ಬಾಗಿಲಾಗಿದ್ರೆ ...” (9)
-
-
ಯುವತಿ (10-12)
-
“ನಾನು ಗೋಡೆ” (10)
-
-
ಕುರುಬ (13)
-
“ನಿನ್ನ ಸ್ವರ ಕೇಳೋಕೆ ಹಂಬಲಿಸ್ತಿದ್ದೀನಿ”
-
-
ಯುವತಿ (14)
-
‘ಜಿಂಕೆ ತರ ನೀ ಓಡೋಡಿ ಬಾ’
-
8 “ನೀನು ನನ್ನ ತಾಯಿ ಹಾಲು ಕುಡಿದು ಬೆಳೆದನನ್ನ ಸಹೋದರನ ತರ ಇರಬಾರದಿತ್ತಾ?
ಆಗ ನಾನು ನಿನ್ನನ್ನ ಮನೆ ಹೊರಗೆ ನೋಡಿದಾಗ್ಲೂ ಮುತ್ತು ಕೊಡ್ತಿದ್ದೆ,+ಯಾರೂ ನನ್ನನ್ನ ಅವಮಾನಿಸ್ತಾ ಇರಲಿಲ್ಲ.
2 ನಿನ್ನನ್ನ ನನ್ನ ತಾಯಿ ಮನೆಗೆ,ನನಗೆ ಬುದ್ಧಿ ಹೇಳಿಕೊಟ್ಟ ಅಮ್ಮನ ಮನೆಗೆ ಕರ್ಕೊಂಡು ಹೋಗ್ತಿದ್ದೆ.+
ನಿನಗೆ ಮಧುರ ದ್ರಾಕ್ಷಾಮದ್ಯ ಸವಿಯೋಕೆ ಕೊಡ್ತಿದ್ದೆ,ತಾಜಾ ದಾಳಿಂಬೆರಸ ಕುಡಿಯೋಕೆ ಕೊಡ್ತಿದ್ದೆ.
3 ಅವನ ಎಡಗೈ ನನಗೆ ತಲೆದಿಂಬು ಆಗಿರ್ತಿತ್ತು,ಅವನ ಬಲಗೈ ನನ್ನನ್ನ ತಬ್ಬಿಹಿಡಿತಿತ್ತು.+
4 ಯೆರೂಸಲೇಮಿನ ಹೆಣ್ಣುಮಕ್ಕಳೇ,ನನ್ನಲ್ಲಿ ಪ್ರೀತಿ ತಾನಾಗಿ ಹುಟ್ಟೋ ತನಕ
ನನ್ನೊಳಗೆ ಅದನ್ನ ಬಡಿದೆಬ್ಬಿಸೋಕೆ ಪ್ರಯತ್ನಿಸಬೇಡಿ,ಹಾಗೆ ಪ್ರಯತ್ನಿಸಲ್ಲ ಅಂತ ಆಣೆ ಮಾಡಿ.”+
5 “ನಲ್ಲನ ತೋಳಿನ ಮೇಲೆ ಒರಗಿಕಾಡಿಂದ ಬರ್ತಿರೋ ಅವಳ್ಯಾರು?”
“ನಿನ್ನ ತಾಯಿಗೆ ಪ್ರಸವವೇದನೆ ಬಂದ ಆ ಸೇಬು ಮರದ ಕೆಳಗೆ,ಅವಳು ನಿನ್ನನ್ನ ಹೆತ್ತ ಆ ಮರದ ಕೆಳಗೆ ನಾನು ನಿನ್ನನ್ನ ಎಬ್ಬಿಸಿದೆ.
6 ನಿನ್ನ ಹೃದಯದ ಮೇಲೆ, ನಿನ್ನ ಕೈ ಮೇಲೆನನ್ನನ್ನ ಮುದ್ರೆ ತರ ಅಚ್ಚೊತ್ತು.
ಯಾಕಂದ್ರೆ ಪ್ರೀತಿ ಮರಣದಷ್ಟು ಬಲವಾಗಿದೆ,+ಪರಸ್ಪರ ಪ್ರೇಮನಿಷ್ಠೆ* ಎಂದೆಂದಿಗೂ ಸ್ಥಿರ, ಅದು ಸಮಾಧಿ* ತರ ಯಾವುದಕ್ಕೂ ಬಗ್ಗದು.
ಪ್ರೇಮಾಗ್ನಿಯು ಧಗಧಗಿಸೋ ಜ್ವಾಲೆ, ಅದು ಯಾಹುವಿನ* ಜ್ವಾಲೆ.+
7 ಮುನ್ನುಗ್ಗಿ ಬರೋ ಪ್ರವಾಹ ಕೂಡ ಪ್ರೀತಿಯನ್ನ ನಂದಿಸಲಾರದು,+ಹರಿದು ಬರೋ ನದಿಗಳು ಕೂಡ ಅದನ್ನ ಕೊಚ್ಚಿಕೊಂಡು ಹೋಗಲಾರವು.+
ಒಬ್ಬನು ಪ್ರೀತಿಯನ್ನ ಪಡೆಯೋಕೆ ತನ್ನೆಲ್ಲ ಸಂಪತ್ತನ್ನ ಕೊಟ್ರೂಅದನ್ನೆಲ್ಲ* ತಿರಸ್ಕರಿಸಲಾಗುತ್ತೆ.”
8 “ಇನ್ನೂ ಸ್ತನ ಬೆಳೆದಿರದಪುಟ್ಟ ತಂಗಿಯೊಬ್ಬಳು ನಮಗಿದ್ದಾಳೆ.+
ನಮ್ಮ ತಂಗಿಗೆ ಮದುವೆ ಪ್ರಸ್ತಾಪ ಬಂದಾಗಅವಳಿಗಾಗಿ ಏನು ಮಾಡೋಣ?”
9 “ಅವಳು ಗೋಡೆಯಾಗಿದ್ರೆಅವಳ ಮೇಲೆ ಬೆಳ್ಳಿಯ ಕೈಪಿಡಿಗೋಡೆಯನ್ನ ಕಟ್ಟೋಣ,ಅವಳು ಬಾಗಿಲಾಗಿದ್ರೆದೇವದಾರು ಮರದ ಹಲಗೆಯಿಂದ ಅವಳನ್ನ ಭದ್ರಪಡಿಸೋಣ.”
10 “ನಾನು ಗೋಡೆ,ನನ್ನ ಸ್ತನಗಳು ಬುರುಜುಗಳ ತರ ಇವೆ.
ನನ್ನ ಮನಸ್ಸು ಈಗ ನೆಮ್ಮದಿಯಿಂದ ಇದೆ,ನನ್ನವನಿಗೆ ಅದು ಗೊತ್ತಿದೆ.
11 ಬಾಲ್-ಹಾಮೋನಲ್ಲಿ ಸೊಲೊಮೋನನಿಗೆ ಒಂದು ದ್ರಾಕ್ಷಿತೋಟ ಇತ್ತು.+
ಅದನ್ನ ನೋಡ್ಕೊಳ್ಳೋಕೆ ಅವನು ಕೆಲಸಗಾರರನ್ನ ನೇಮಿಸಿದ.
ಪ್ರತಿಯೊಬ್ಬರು ಸಾವಿರ ಬೆಳ್ಳಿ ಶೆಕೆಲ್‌ಗಳನ್ನ* ಕೊಟ್ಟು ಅದರ ಹಣ್ಣುಗಳನ್ನ ಕೊಂಡುಕೊಳ್ತಿದ್ರು.
12 ನನಗೆ ನನ್ನ ಸ್ವಂತ ದ್ರಾಕ್ಷಿತೋಟ ಇದೆ.
ಸೊಲೊಮೋನನೇ, ಸಾವಿರ ಬೆಳ್ಳಿ ಶೆಕೆಲ್‌ಗಳು* ನಿನ್ನ ಹತ್ರನೇ ಇರಲಿ,ಇನ್ನೂರು ಬೆಳ್ಳಿ ಶೆಕೆಲ್‌ಗಳು ತೋಟ ಕಾಯುವವರ ಹತ್ರನೇ ಇರಲಿ.”
13 “ತೋಟಗಳಲ್ಲಿ ವಾಸಿಸ್ತಿರುವವಳೇ,+ನಿನ್ನ ದನಿ ಕೇಳೋಕೆ ಜೊತೆಗಾರರು ಕಾಯ್ತಿದ್ದಾರೆ.
ನಾನೂ ನಿನ್ನ ಸ್ವರ ಕೇಳೋಕೆ ಹಂಬಲಿಸ್ತಿದ್ದೀನಿ.”+
14 “ನನ್ನ ಪ್ರಿಯತಮನೇ ಬೇಗ ಬಾ,ಸುಗಂಧ ಸಸ್ಯಗಳ ಬೆಟ್ಟಗಳ ಮೇಲೆಜಿಂಕೆ ತರ, ಎಳೇ ಸಾರಂಗದ ತರ ನೀ ಓಡೋಡಿ ಬಾ.”+
ಪಾದಟಿಪ್ಪಣಿ
^ ಅಥವಾ “ಅನನ್ಯ ಬಾಂಧವ್ಯ.”
^ “ಯಾಹು” ಅನ್ನೋದು ಯೆಹೋವ ಅನ್ನೋ ಹೆಸ್ರಿನ ಸಂಕ್ಷಿಪ್ತರೂಪ.
^ ಬಹುಶಃ, “ಅವನನ್ನ.”
^ ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
^ ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.