ಯೋಹಾನನಿಗೆ ಕೊಟ್ಟ ಪ್ರಕಟನೆ 10:1-11
10 ಆಮೇಲೆ ಇನ್ನೊಬ್ಬ ಬಲಿಷ್ಠ ದೇವದೂತ ಸ್ವರ್ಗದಿಂದ ಇಳಿದು ಬರೋದನ್ನ ನಾನು ನೋಡಿದೆ. ಅವನು ಮೋಡನ ಬಟ್ಟೆ ತರ ಹಾಕೊಂಡಿದ್ದ. ಅವನ ತಲೆ ಮೇಲೆ ಒಂದು ಮುಗಿಲುಬಿಲ್ಲಿತ್ತು. ಅವನ ಮುಖ ಸೂರ್ಯನ ತರ ಇತ್ತು.+ ಅವನ ಕಾಲು* ಬೆಂಕಿ ಕಂಬದ ತರ ಇತ್ತು.
2 ಅವನ ಕೈಯಲ್ಲಿ ಬಿಚ್ಚಿದ ಒಂದು ಚಿಕ್ಕ ಸುರುಳಿ ಇತ್ತು. ಅವನು ತನ್ನ ಬಲಗಾಲನ್ನ ಸಮುದ್ರದ ಮೇಲೆ ಎಡಗಾಲನ್ನ ಭೂಮಿ ಮೇಲೆ ಇಟ್ಟ.
3 ಗರ್ಜಿಸೋ ಸಿಂಹದ ತರ ಅವನು ಜೋರಾಗಿ ಕೂಗಿದ.+ ಆಗ ಏಳು ಗುಡುಗುಗಳು+ ಮಾತಾಡಿದ್ವು.
4 ಆ ಮಾತುಗಳನ್ನ ನಾನು ಇನ್ನೇನು ಬರೀಬೇಕು ಅಂತಿದ್ದೆ. ಅಷ್ಟರಲ್ಲಿ ಸ್ವರ್ಗದಿಂದ ಒಂದು ಧ್ವನಿ+ “ಆ ಏಳು ಗುಡುಗುಗಳ ಮಾತುಗಳನ್ನ ಬರೀಬೇಡ. ಅದನ್ನ ಗುಟ್ಟಾಗಿ ಇಟ್ಕೋ” ಅಂತ ಹೇಳೋದನ್ನ ಕೇಳಿಸ್ಕೊಂಡೆ.
5 ಸಮುದ್ರದ ಮೇಲೆ ಭೂಮಿ ಮೇಲೆ ನಿಂತಿರೋ ಆ ದೇವದೂತ ತನ್ನ ಬಲಗೈಯನ್ನ ಸ್ವರ್ಗದ ಕಡೆ ಎತ್ತಿದ.
6 ಸ್ವರ್ಗ, ಭೂಮಿ, ಸಮುದ್ರ, ಅದ್ರಲ್ಲಿರೋ ಎಲ್ಲವನ್ನ ಸೃಷ್ಟಿ ಮಾಡಿದವನ+ ಮೇಲೆ ಮತ್ತು ಯಾವಾಗ್ಲೂ ಜೀವಿಸೋ ದೇವರ+ ಮೇಲೆ ಆಣೆ ಇಟ್ಟು ಹೀಗೆ ಹೇಳಿದ: “ದೇವರು ಇನ್ನು ತಡಮಾಡಲ್ಲ.
7 ಪ್ರವಾದಿಗಳಾದ ತನ್ನ ದಾಸರಿಗೆ ದೇವರು ಸಿಹಿಸುದ್ದಿ ರೂಪದಲ್ಲಿ ಹೇಳಿರೋ+ ಪವಿತ್ರ ರಹಸ್ಯ,+ ಏಳನೇ ದೇವದೂತ+ ತುತ್ತೂರಿ ಊದಿದಾಗ+ ನಿಜ ಆಗುತ್ತೆ.”
8 ಸ್ವರ್ಗದಿಂದ ನಾನು ಕೇಳಿಸ್ಕೊಂಡಿದ್ದ ಆ ಧ್ವನಿ+ ಮತ್ತೆ ನನ್ನ ಹತ್ರ ಮಾತಾಡ್ತಾ “ಹೋಗು, ಸಮುದ್ರದ ಮೇಲೆ ಭೂಮಿ ಮೇಲೆ ನಿಂತಿರೋ ಆ ದೇವದೂತನ ಕೈಯಿಂದ ಬಿಚ್ಚಿದ ಸುರುಳಿ ತಗೊ”+ ಅಂತ ಹೇಳ್ತು.
9 ನಾನು ಆ ದೇವದೂತನ ಹತ್ರ ಹೋಗಿ ಆ ಚಿಕ್ಕ ಸುರುಳಿ ಕೊಡು ಅಂತ ಕೇಳ್ದೆ. ಅದಕ್ಕೆ ಅವನು “ತಗೋ, ಇದನ್ನ ತಿನ್ನು.+ ಇದು ನಿನ್ನ ಹೊಟ್ಟೆನ ಕಹಿಮಾಡುತ್ತೆ. ಆದ್ರೆ ನೀನು ತಿನ್ನುವಾಗ ಜೇನಿನ ತರ ಸಿಹಿ ಆಗಿರುತ್ತೆ” ಅಂದ.
10 ಆಗ ನಾನು ಆ ದೇವದೂತನ ಕೈಯಿಂದ ಆ ಸುರುಳಿ ತಗೊಂಡು ತಿಂದೆ.+ ತಿನ್ನುವಾಗ ಅದು ಜೇನಿನ ತರ ಸಿಹಿಯಾಗಿತ್ತು.+ ಆದ್ರೆ ತಿಂದ ಮೇಲೆ ಹೊಟ್ಟೆ ಕಹಿ ಆಯ್ತು.
11 ಆಮೇಲೆ ನನಗೆ ಈ ಧ್ವನಿ ಕೇಳಿಸ್ತು. ಅದೇನಂದ್ರೆ “ನೀನು ಬೇರೆಬೇರೆ ಕುಲ, ಜನ, ದೇಶ, ಭಾಷೆ ಮತ್ತು ರಾಜರ ಬಗ್ಗೆ ಮತ್ತೆ ಭವಿಷ್ಯ ಹೇಳಬೇಕು.”
ಪಾದಟಿಪ್ಪಣಿ
^ ಅಕ್ಷ. “ಪಾದ.”