ಯೋಹಾನನಿಗೆ ಕೊಟ್ಟ ಪ್ರಕಟನೆ 15:1-8
15 ಆಮೇಲೆ ನಾನು ಸ್ವರ್ಗದಲ್ಲಿ ಇನ್ನೊಂದು ದೊಡ್ಡ ಅದ್ಭುತ ನೋಡಿದೆ. ಏಳು ದೇವದೂತರು+ ಏಳು ಕಷ್ಟಗಳನ್ನ ತರ್ತಾ ಇದ್ರು. ಇವು ಕೊನೆ ಕಷ್ಟಗಳಾಗಿದ್ವು. ಯಾಕಂದ್ರೆ ಇದ್ರಿಂದ ದೇವರ ಕೋಪ ಮುಗಿಯುತ್ತೆ.+
2 ಆಮೇಲೆ ನಾನು ಬೆಂಕಿ ಕಲಸಿದ್ದ ಗಾಜಿನ ಸಮುದ್ರದ+ ತರ ಏನೋ ಒಂದು ನೋಡಿದೆ. ಕಾಡುಪ್ರಾಣಿಯನ್ನ, ಅದ್ರ ಮೂರ್ತಿಯನ್ನ ಆರಾಧಿಸದೆ,+ ಅದ್ರ ಹೆಸ್ರಿನ ಸಂಖ್ಯೆಯನ್ನ+ ಮುದ್ರೆ ಹಾಕಿಸ್ಕೊಳ್ಳದೆ ಗೆದ್ದವರು+ ಈ ಗಾಜಿನ ಸಮುದ್ರದ ತೀರದಲ್ಲಿ ನಿಂತಿದ್ರು. ಅವ್ರ ಕೈಯಲ್ಲಿ ದೇವರ ತಂತಿವಾದ್ಯ ಇತ್ತು.
3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು:
“ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+
4 ಯೆಹೋವನೇ,* ನಿನಗೆ ಭಯಪಡದವರು ಯಾರು? ನಿನ್ನ ಹೆಸ್ರಿಗೆ ಗೌರವ ಕೊಡದವರು ಯಾರು? ನೀನೊಬ್ಬನೇ ನಿಷ್ಠಾವಂತ.+ ನೀನು ಯಾವಾಗ್ಲೂ ಸರಿಯಾಗಿ ತೀರ್ಪು ಕೊಡ್ತೀಯ ಅಂತ ಗೊತ್ತಿರೋದ್ರಿಂದ ಎಲ್ಲ ದೇಶದ ಜನ್ರು ನಿನ್ನ ಮುಂದೆ ಬಂದು ನಿನ್ನನ್ನ ಆರಾಧಿಸ್ತಾರೆ.”+
5 ಆಮೇಲೆ ನಾನು ಸ್ವರ್ಗದಲ್ಲಿ ಸಾಕ್ಷಿಗುಡಾರದ ಪವಿತ್ರಸ್ಥಳ+ ತೆರಿಯೋದನ್ನ ನೋಡಿದೆ.+
6 ಆ ಪವಿತ್ರಸ್ಥಳದಿಂದ ಏಳು ದೇವದೂತರು ಏಳು ಕಷ್ಟಗಳನ್ನ+ ತಗೊಂಡು ಬಂದ್ರು. ಅವರು ಶುದ್ಧವಾಗಿದ್ದ, ಹೊಳೀತಾ ಇದ್ದ ಬಟ್ಟೆಯನ್ನ ಹಾಕೊಂಡಿದ್ರು. ಅವ್ರ ಎದೆ ಸುತ್ತ ಚಿನ್ನದ ಪಟ್ಟಿ ಇತ್ತು.
7 ಆಗ ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಆ ಏಳು ದೇವದೂತರಿಗೆ ಏಳು ಚಿನ್ನದ ಬಟ್ಟಲನ್ನ ಕೊಡ್ತು. ಆ ಬಟ್ಟಲಲ್ಲಿ ಶಾಶ್ವತವಾಗಿ ಜೀವಿಸೋ ದೇವರ ಕೋಪ ತುಂಬಿತ್ತು.+
8 ದೇವರ ಮಹಿಮೆ, ಶಕ್ತಿಯಿಂದ ಆ ಪವಿತ್ರಸ್ಥಳ ಹೊಗೆಯಿಂದ ತುಂಬ್ಕೊಳ್ತು.+ ಏಳು ದೇವದೂತರು ತಂದ ಏಳು ಕಷ್ಟಗಳು ಮುಗಿಯೋ ತನಕ+ ಯಾರೂ ಪವಿತ್ರಸ್ಥಳಕ್ಕೆ ಹೋಗೋಕೆ ಆಗಲಿಲ್ಲ.