ಯೋಹಾನನಿಗೆ ಕೊಟ್ಟ ಪ್ರಕಟನೆ 20:1-15

  • ಸೈತಾನ 1,000 ವರ್ಷ ಬಂಧನದಲ್ಲಿ ಇರ್ತಾನೆ (1-3)

  • ಕ್ರಿಸ್ತನ ಜೊತೆ ಅವರು 1,000 ವರ್ಷ ಆಳ್ತಾರೆ (4-6)

  • ಸೈತಾನನ ಬಿಡುಗಡೆ, ಆಮೇಲೆ ಅವನ ನಾಶನ (7-10)

  • ಬಿಳಿ ಸಿಂಹಾಸನದಿಂದ ಸತ್ತವ್ರಿಗೆ ತೀರ್ಪಾಗುತ್ತೆ (11-15)

20  ಆಮೇಲೆ ಒಬ್ಬ ದೇವದೂತ ಸ್ವರ್ಗದಿಂದ ಇಳಿದು ಬರೋದನ್ನ ನೋಡ್ದೆ. ಅವನ ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈ+ ಮತ್ತು ಒಂದು ದೊಡ್ಡ ಸರಪಳಿ ಇತ್ತು.  ಅವನು ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದ್ದ ಘಟಸರ್ಪವನ್ನ+ ಹಿಡಿದು 1,000 ವರ್ಷ ಬಂಧನದಲ್ಲಿಟ್ಟ.  ದೇಶಗಳ ಜನ್ರನ್ನ ಮೋಸಮಾಡದ ಹಾಗೆ ಅವನನ್ನ ಅಗಾಧ ಸ್ಥಳಕ್ಕೆ+ ತಳ್ಳಿ ಅದನ್ನ ಮುಚ್ಚಿ ಅದಕ್ಕೆ ಮುದ್ರೆ ಹಾಕಿದ. 1,000 ವರ್ಷ ಆದ್ಮೇಲೆ ಅವನಿಗೆ ಸ್ವಲ್ಪ ಸಮಯಕ್ಕೆ ಬಿಡುಗಡೆ ಆಗುತ್ತೆ.+  ಆಮೇಲೆ ನಾನು ಸಿಂಹಾಸನಗಳನ್ನ ನೋಡ್ದೆ. ಅದ್ರ ಮೇಲೆ ಕೂತಿದ್ದವ್ರಿಗೆ ದೇವರು ನ್ಯಾಯತೀರ್ಪು ಮಾಡೋ ಅಧಿಕಾರ ಕೊಟ್ಟಿದ್ದ. ಅಷ್ಟೇ ಅಲ್ಲ ಯೇಸು ಬಗ್ಗೆ ಮಾತಾಡಿದ್ದಕ್ಕೆ, ದೇವರ ಬಗ್ಗೆ ಮಾತಾಡಿದ್ದಕ್ಕೆ ಕೊಲೆ* ಆದವ್ರನ್ನ ನೋಡ್ದೆ. ಕಾಡುಪ್ರಾಣಿಯನ್ನ ಅದ್ರ ಮೂರ್ತಿಯನ್ನ ಆರಾಧಿಸದೇ ಇದ್ದವ್ರನ್ನ ಮತ್ತು ತಮ್ಮ ಹಣೆ ಮೇಲೆ, ಕೈ ಮೇಲೆ ಅದ್ರ ಗುರುತು ಹಾಕಿಸ್ಕೊಳ್ಳದೇ ಇದ್ದವ್ರನ್ನೂ ನಾನು ನೋಡ್ದೆ.+ ಅವ್ರಿಗೆ ಮತ್ತೆ ಜೀವ ಸಿಕ್ತು. ಅವರು ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳಿದ್ರು.+  (ಸತ್ತವ್ರಲ್ಲಿ ಉಳಿದವ್ರಿಗೆ+ ಆ 1,000 ವರ್ಷ ಮುಗಿಯೋ ತನಕ ಮತ್ತೆ ಜೀವ ಸಿಗಲಿಲ್ಲ.) ಇವ್ರೇ ಮೊದಲ್ನೇ ಸಲ ಮತ್ತೆ ಜೀವ ಪಡ್ಕೊಂಡವರು.+  ಅವರು ಖುಷಿಯಾಗಿ+ ಪವಿತ್ರರಾಗಿ ಇರ್ತಾರೆ. ಎರಡ್ನೇ ಮರಣಕ್ಕೆ+ ಇವ್ರ ಮೇಲೆ ಅಧಿಕಾರ ಇಲ್ಲ.+ ಆದ್ರೆ ಅವರು ದೇವರ ಮತ್ತು ಕ್ರಿಸ್ತನ ಪುರೋಹಿತರಾಗಿ ಇರ್ತಾರೆ.+ ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳ್ತಾರೆ.+  1,000 ವರ್ಷ ಆದ ತಕ್ಷಣ ಸೈತಾನನಿಗೆ ಬಿಡುಗಡೆ ಆಗುತ್ತೆ.  ಅವನು ಹೊರಗೆ ಬಂದು ಭೂಮಿಯ ನಾಲ್ಕು ಮೂಲೆಗಳಲ್ಲಿರೋ ಗೋಗ್‌ ಮತ್ತು ಮಾಗೋಗ್‌ ಅನ್ನೋ ದೇಶಗಳನ್ನ ದಾರಿತಪ್ಪಿಸೋಕೆ, ಅವ್ರನ್ನ ಯುದ್ಧಕ್ಕಾಗಿ ಒಟ್ಟುಸೇರಿಸೋಕೆ ಹೋಗ್ತಾನೆ. ಅವ್ರ ಸಂಖ್ಯೆ ಸಮುದ್ರದ ಮರಳಿನಷ್ಟು ಇರುತ್ತೆ.  ಅವರು ಇಡೀ ಭೂಮಿಯಲ್ಲಿ ಹರಡ್ಕೊಂಡು ಪವಿತ್ರ ಜನ್ರ ಸೈನ್ಯವನ್ನ, ಪ್ರೀತಿಯ ಪಟ್ಟಣವನ್ನ ಮುತ್ಕೊಂಡ್ರು. ಆದ್ರೆ ಸ್ವರ್ಗದಿಂದ ಬೆಂಕಿ ಬಂದು ಅವ್ರನ್ನ ಸುಟ್ಟುಹಾಕ್ತು.+ 10  ಅವ್ರನ್ನ ದಾರಿತಪ್ಪಿಸ್ತಿದ್ದ ಸೈತಾನನನ್ನ ಬೆಂಕಿ ಮತ್ತು ಗಂಧಕದ ಕೆರೆಗೆ ಆ ದೇವದೂತ ತಳ್ಳಿದ. ಅಲ್ಲಿ ಈಗಾಗ್ಲೇ ಕಾಡುಪ್ರಾಣಿ,+ ಸುಳ್ಳು ಪ್ರವಾದಿ ಇದ್ರು.+ ಅಲ್ಲಿ ಅವರು ಹಗಲೂ ರಾತ್ರಿ ಯಾವಾಗ್ಲೂ ಹಿಂಸೆ ಅನುಭವಿಸ್ತಾರೆ. 11  ಆಮೇಲೆ ನಾನು ಬೆಳ್ಳಗಿರೋ ದೊಡ್ಡ ಸಿಂಹಾಸನವನ್ನ ನೋಡ್ದೆ. ಅದ್ರ ಮೇಲೆ ದೇವರು ಕೂತಿದ್ದನು.+ ಆತನ ಮುಂದಿಂದ ಭೂಮಿ ಮತ್ತು ಆಕಾಶ ಓಡಿಹೋಯ್ತು.+ ಆಮೇಲೆ ಅದು ಕಾಣಿಸ್ಲೇ ಇಲ್ಲ. 12  ಸಿಂಹಾಸನದ ಮುಂದೆ ಸತ್ತವರು ನಿಂತಿರೋದನ್ನ ನೋಡ್ದೆ. ಅವ್ರಲ್ಲಿ ದೊಡ್ಡವರು, ಚಿಕ್ಕವರು ಇದ್ರು. ಆಗ ದೇವರು ಸುರುಳಿಗಳನ್ನ ತೆರೆದನು. ಆಮೇಲೆ ಇನ್ನೊಂದು ಸುರುಳಿಯನ್ನ ದೇವರು ತೆರೆದನು. ಅದು ಜೀವದ ಸುರುಳಿ.+ ಸುರುಳಿಗಳಲ್ಲಿ ಇದ್ದ ವಿಷ್ಯಗಳ ಆಧಾರದ ಮೇಲೆ ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಆತನು ಸತ್ತವ್ರಿಗೆ ನ್ಯಾಯತೀರ್ಪು ಕೊಟ್ಟನು.+ 13  ಸಮುದ್ರ ತನ್ನೊಳಗೆ ಇದ್ದ ಸತ್ತವ್ರನ್ನ ಒಪ್ಪಿಸ್ತು. ಸಾವು ಮತ್ತು ಸಮಾಧಿನೂ* ಸತ್ತವ್ರನ್ನ ಒಪ್ಪಿಸಿದ್ವು. ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಎಲ್ರಿಗೂ ನ್ಯಾಯತೀರ್ಪು ಆಯ್ತು.+ 14  ಆಮೇಲೆ ಸಾವು+ ಮತ್ತು ಸಮಾಧಿಯನ್ನ* ಆ ದೇವದೂತ ಬೆಂಕಿ ಕೆರೆಗೆ ತಳ್ಳಿಬಿಟ್ಟ. ಈ ಬೆಂಕಿ ಕೆರೆ ಎರಡನೇ ಮರಣವನ್ನ ಸೂಚಿಸುತ್ತೆ.+ 15  ಅಷ್ಟೇ ಅಲ್ಲ ಜೀವದ ಪುಸ್ತಕದಲ್ಲಿ ಯಾರ ಹೆಸ್ರು ಇಲ್ವೋ+ ಅವ್ರನ್ನೆಲ್ಲ ಆ ಬೆಂಕಿ ಕೆರೆಗೆ ತಳ್ಳಿಬಿಟ್ಟ.+

ಪಾದಟಿಪ್ಪಣಿ

ಅಕ್ಷ. “ಕೊಡಲಿಯಿಂದ ಕೊಲ್ಲಲಾಗಿತ್ತು.”