ಯೋಹಾನನಿಗೆ ಕೊಟ್ಟ ಪ್ರಕಟನೆ 8:1-13
8 ಕುರಿಮರಿ+ ಏಳನೇ ಮುದ್ರೆ ತೆಗೆದಾಗ+ ಸ್ವರ್ಗದಲ್ಲಿ ಸುಮಾರು ಅರ್ಧ ಗಂಟೆ ಏನೂ ಶಬ್ದ ಇರಲಿಲ್ಲ.
2 ಆಗ ದೇವರ ಮುಂದೆ ನಿಂತಿರೋ ಏಳು ದೇವದೂತರನ್ನ+ ನೋಡ್ದೆ. ದೇವರು ಅವ್ರಿಗೆ ಏಳು ತುತ್ತೂರಿಗಳನ್ನ ಕೊಟ್ಟನು.
3 ಆಮೇಲೆ ಧೂಪ ಇದ್ದ ಚಿನ್ನದ ಪಾತ್ರೆಗಳನ್ನ ಹಿಡ್ಕೊಂಡಿದ್ದ ಇನ್ನೊಬ್ಬ ದೇವದೂತ ಬಂದು ಯಜ್ಞವೇದಿ+ ಹತ್ರ ನಿಂತ್ಕೊಂಡ. ಪವಿತ್ರ ಜನ್ರೆಲ್ಲ ಪ್ರಾರ್ಥನೆ ಮಾಡ್ತಿದ್ದಾಗ ಸಿಂಹಾಸನದ ಮುಂದೆ ಇರೋ ಚಿನ್ನದ ಯಜ್ಞವೇದಿಯ+ ಮೇಲೆ ಅರ್ಪಿಸೋಕೆ ಆ ದೇವದೂತನಿಗೆ ತುಂಬ ಧೂಪವನ್ನ+ ಕೊಟ್ರು.
4 ಪವಿತ್ರ ಜನ್ರ ಪ್ರಾರ್ಥನೆಯ ಜೊತೆ ದೇವದೂತನ ಕೈಯಲ್ಲಿದ್ದ ಧೂಪದ ಹೊಗೆ ದೇವರ ಹತ್ರ ಹೋಯ್ತು.+
5 ಆದ್ರೆ ಆ ದೇವದೂತ ತಕ್ಷಣ ಧೂಪದ ಪಾತ್ರೆಯನ್ನ ತಗೊಂಡು ಯಜ್ಞವೇದಿಯಲ್ಲಿ ಇದ್ದ ಸ್ವಲ್ಪ ಕೆಂಡವನ್ನ ತುಂಬಿಸಿ ಭೂಮಿಗೆ ಬಿಸಾಕಿದ. ಅದ್ರಿಂದಾಗಿ ಗುಡುಗು, ಮಿಂಚು,+ ಭೂಕಂಪ ಆಯ್ತು. ಸ್ವರಗಳು ಕೇಳಿಸಿದ್ವು.
6 ಏಳು ತುತ್ತೂರಿಗಳನ್ನ ಹಿಡ್ಕೊಂಡಿದ್ದ ಏಳು ದೇವದೂತರು+ ಅವನ್ನ ಊದೋಕೆ ತಯಾರಾದ್ರು.
7 ಮೊದಲ್ನೇ ದೇವದೂತ ತುತ್ತೂರಿ ಊದಿದ. ಆಗ ರಕ್ತದಿಂದ ಕಲಿಸಿದ್ದ ಆಲಿಕಲ್ಲಿನ ಮತ್ತು ಬೆಂಕಿಯ ಮಳೆ ಭೂಮಿ ಮೇಲೆ ಸುರಿತು.+ ಅದ್ರಿಂದಾಗಿ ಭೂಮಿಯ ಮೂರನೇ ಒಂದು ಭಾಗ, ಮರಗಳ ಮೂರನೇ ಒಂದು ಭಾಗ ಮತ್ತು ಎಲ್ಲ ಗಿಡಗಳು ಸುಟ್ಟುಹೋದ್ವು.+
8 ಎರಡನೇ ದೇವದೂತ ತುತ್ತೂರಿ ಊದಿದ. ಆಗ ಬೆಂಕಿಯಿಂದ ಉರಿತಿದ್ದ ದೊಡ್ಡ ಬೆಟ್ಟದ ತರ ಏನೋ ಒಂದು ಸಮುದ್ರಕ್ಕೆ ಬಂದು ಬಿತ್ತು.+ ಅದ್ರಿಂದ ಸಮುದ್ರದ ಮೂರನೇ ಒಂದು ಭಾಗ ರಕ್ತ ಆಯ್ತು.+
9 ಆಗ ಮೂರನೇ ಒಂದು ಭಾಗದಷ್ಟು ಸಮುದ್ರದ ಜೀವಿಗಳು ಸತ್ತುಹೋದ್ವು,+ ಮೂರನೇ ಒಂದು ಭಾಗದಷ್ಟು ಹಡಗುಗಳು ಒಡೆದು ಹೋದ್ವು.
10 ಮೂರನೇ ದೇವದೂತ ತುತ್ತೂರಿ ಊದಿದ. ಆಗ ದೀಪದ ತರ ಉರಿತಿದ್ದ ಒಂದು ದೊಡ್ಡ ನಕ್ಷತ್ರ ಆಕಾಶದಿಂದ ಬಿತ್ತು. ಅದು ಮೂರನೇ ಒಂದು ಭಾಗದ ನದಿಗಳ ಮೇಲೆ, ನೀರಿನ ಬುಗ್ಗೆಗಳ ಮೇಲೆ ಬಿತ್ತು.+
11 ಆ ನಕ್ಷತ್ರದ ಹೆಸ್ರು ಕಹಿ ಸಸ್ಯ.* ಅದ್ರಿಂದ ಮೂರನೇ ಒಂದು ಭಾಗದ ನೀರು ಕಹಿ ಆಯ್ತು. ಹಾಗಾಗಿ ತುಂಬ ಜನ ಸತ್ತು ಹೋದ್ರು.+
12 ನಾಲ್ಕನೇ ದೇವದೂತ ತುತ್ತೂರಿ ಊದಿದ. ಆಗ ಸೂರ್ಯ,+ ಚಂದ್ರ ಮತ್ತು ನಕ್ಷತ್ರಗಳ ಮೂರನೇ ಒಂದು ಭಾಗ ಕತ್ತಲಾಯ್ತು.+ ಅದ್ರಿಂದ ಹಗಲಿನ ಮೂರನೇ ಒಂದು ಭಾಗ, ರಾತ್ರಿಯ ಒಂದು ಭಾಗ ಬೆಳಕಿಲ್ಲದ ಹಾಗಾಯ್ತು.
13 ಆಮೇಲೆ ನಾನು ನೋಡಿದಾಗ ಆಕಾಶದ ಮಧ್ಯ ಒಂದು ಹದ್ದು ಹಾರಾಡ್ತಾ ಇತ್ತು. ಅದು ಜೋರಾಗಿ “ತುತ್ತೂರಿ ಊದೋಕೆ ಉಳಿದ ಇನ್ನೂ ಮೂರು ದೇವದೂತರು ತಯಾರಾಗಿದ್ದಾರೆ.+ ಅವರು ತುತ್ತೂರಿ ಊದಿದಾಗ ಭೂಮಿಯಲ್ಲಿ ಇರುವವ್ರಿಗೆ ತುಂಬ ಕಷ್ಟಗಳು ಬರುತ್ತೆ”+ ಅಂತ ಹೇಳ್ತು.
ಪಾದಟಿಪ್ಪಣಿ
^ ಅಕ್ಷ. “ಮಾಚಿಪತ್ರೆ.”