ಪ್ರಲಾಪ 1:1-22

  • ವಿಧವೆ ತರ ಇರೋ ಯೆರೂಸಲೇಮ್‌

    • ಅವಳು ಒಬ್ಬಳೇ ಕೂತಿದ್ದಾಳೆ, ಅವಳನ್ನ ಕೈಬಿಡಲಾಗಿದೆ (1)

    • ಚೀಯೋನಿನ ಘೋರ ಪಾಪಗಳು (8, 9)

    • ಚೀಯೋನನ್ನ ದೇವರು ತಿರಸ್ಕರಿಸಿದ್ದಾನೆ (12-15)

    • ಚೀಯೋನನ್ನ ಸಮಾಧಾನ ಮಾಡೋಕೆ ಯಾರೂ ಇಲ್ಲ (17)

א [ಆಲೆಫ್‌]* 1  ಅಯ್ಯೋ! ಜನ್ರಿಂದ ತುಂಬಿತುಳುಕ್ತಿದ್ದ ಯೆರೂಸಲೇಮ್‌ ಈಗ ಒಬ್ಬಳೇ ಕೂತಿದ್ದಾಳಲ್ಲಾ!+ ಬೇರೆ ಜನಾಂಗಗಳಿಗಿಂತ ಜನಸಂಖ್ಯೆ ಹೆಚ್ಚಾಗಿದ್ದ ಅವಳು ಈಗ ವಿಧವೆ ತರ ಆಗಿದ್ದಾಳಲ್ಲಾ!+ ಪ್ರಾಂತ್ಯಗಳಿಗೆ* ರಾಣಿಯಾಗಿದ್ದವಳು ಈಗ ದಾಸಿ ಆಗಿದ್ದಾಳಲ್ಲಾ!+ ב [ಬೆತ್‌]   ಅವಳು ರಾತ್ರಿಯೆಲ್ಲ ಬಿಕ್ಕಿಬಿಕ್ಕಿ ಅಳ್ತಾಳೆ,+ ಕಣ್ಣೀರಿಂದ ಅವಳ ಕೆನ್ನೆಗಳು ಒದ್ದೆ ಆಗಿವೆ. ಅವಳ ಪ್ರಿಯತಮರಲ್ಲಿ ಒಬ್ಬನೂ ಅವಳನ್ನ ಸಮಾಧಾನ ಮಾಡೋಕೆ ಬಂದಿಲ್ಲ.+ ಅವಳ ಮಿತ್ರರೆಲ್ಲ ಶತ್ರುಗಳಾಗಿದ್ದಾರೆ, ಅವಳಿಗೆ ದ್ರೋಹ ಮಾಡಿದ್ದಾರೆ.+ ג [ಗಿಮೆಲ್‌]   ಯೆಹೂದ ಸೆರೆಯಾಗಿ ಹೋಗಿದ್ದಾಳೆ,+ ಅಲ್ಲಿ ದಾಸಿಯಾಗಿ ಕಡುಕಷ್ಟ, ವೇದನೆ ಅನುಭವಿಸ್ತಿದ್ದಾಳೆ.+ ಅವಳು ಬೇರೆ ಜನಾಂಗಗಳ ಮಧ್ಯ ವಾಸಿಸಬೇಕಾಗಿದೆ,+ ಅವಳಿಗೆ ಶಾಂತಿ ನೆಮ್ಮದಿನೇ ಇಲ್ಲ. ಸಂಕಷ್ಟದಲ್ಲಿ ಇದ್ದಾಗ್ಲೇ ಅವಳ ಹಿಂಸಕರೆಲ್ಲ ಅವಳನ್ನ ಹಿಡಿದಿದ್ದಾರೆ. ד [ಡಾಲತ್‌]   ಚೀಯೋನಿಗೆ ಹೋಗೋ ರಸ್ತೆಗಳು ಗೋಳಾಡ್ತಿವೆ. ಯಾಕಂದ್ರೆ ಹಬ್ಬಕ್ಕೆ ಯಾರೂ ಬರ್ತಿಲ್ಲ.+ ಅವಳ ಎಲ್ಲ ಬಾಗಿಲುಗಳು ಹಾಳುಬಿದ್ದಿವೆ,+ ಅವಳ ಪುರೋಹಿತರು ದುಃಖದ ನಿಟ್ಟುಸಿರು ಬಿಡ್ತಿದ್ದಾರೆ. ಅವಳ ಕನ್ಯೆಯರು* ದುಃಖಪಡ್ತಿದ್ದಾರೆ, ಅವಳು ಕಡುಸಂಕಟದಿಂದ ಒದ್ದಾಡ್ತಿದ್ದಾಳೆ. ה [ಹೆ]   ಅವಳ ವಿರೋಧಿಗಳೇ ಅವಳ ಯಜಮಾನರಾಗಿದ್ದಾರೆ.* ಅವಳ ಶತ್ರುಗಳು ನೆಮ್ಮದಿಯಿಂದ ಇದ್ದಾರೆ.+ ಅವಳು ಮಾಡಿದ ತುಂಬ ಅಪರಾಧಗಳಿಗಾಗಿ ಯೆಹೋವ ಅವಳನ್ನ ಈ ರೀತಿ ದುಃಖಪಡೋ ತರ ಮಾಡಿದ್ದಾನೆ.+ ಅವಳ ವಿರೋಧಿಗಳು ಅವಳ ಮಕ್ಕಳನ್ನ ಸೆರೆಹಿಡ್ಕೊಂಡು ಹೋಗಿದ್ದಾರೆ.+ ו [ವಾವ್‌]   ಚೀಯೋನ್‌ ಅನ್ನೋಳು ತನ್ನೆಲ್ಲ ವೈಭವ ಕಳ್ಕೊಂಡಿದ್ದಾಳೆ.+ ಅವಳ ಅಧಿಕಾರಿಗಳು ಹುಲ್ಲು ಸಿಗದೆ ಅಲೆದಾಡ್ತಿರೋ ಸಾರಂಗಗಳ ತರ ಇದ್ದಾರೆ,ಅವರು ಬಲಗುಂದಿ ಹೋಗಿರೋದ್ರಿಂದ ಅವ್ರನ್ನ ಅಟ್ಟಿಸ್ಕೊಂಡು ಬರುವವ್ರ ಎದುರಲ್ಲಿ ನಡ್ಕೊಂಡು ಹೋಗ್ತಿದ್ದಾರೆ. ז [ಜಯಿನ್‌]   ಸಂಕಷ್ಟದಲ್ಲಿರೋ, ಮನೆಯಿಲ್ಲದಿರೋ ಯೆರೂಸಲೇಮ್‌ತುಂಬಕಾಲದ ಹಿಂದೆ ತನ್ನ ಹತ್ರ ಇದ್ದ ಬೆಲೆಬಾಳೋ ವಸ್ತುಗಳನ್ನೆಲ್ಲ ನೆನಪಿಸ್ಕೊಳ್ತಿದ್ದಾಳೆ.+ ಅವಳ ಜನ ವಿರೋಧಿಯ ಕೈವಶವಾದಾಗ ಮತ್ತು ಅವಳ ಸಹಾಯಕ್ಕೆ ಯಾರೂ ಬರದಿದ್ದಾಗ+ಅವಳ ಪತನ ನೋಡಿ ವಿರೋಧಿಗಳು ಕೇಕೆ ಹಾಕಿ ನಗಾಡಿದ್ರು.*+ ח [ಹೆತ್‌]   ಯೆರೂಸಲೇಮ್‌ ಘೋರ ಪಾಪ ಮಾಡಿದ್ದಾಳೆ,+ಹಾಗಾಗಿ ಅವಳು ಅಸಹ್ಯ ವಸ್ತು ಆಗಿದ್ದಾಳೆ. ಅವಳನ್ನ ಸನ್ಮಾನಿಸ್ತಾ ಇದ್ದವ್ರೆಲ್ಲ ಈಗ ಅವಳನ್ನ ಕಾಲ ಕಸದ ಹಾಗೆ ಕಾಣ್ತಿದ್ದಾರೆ. ಯಾಕಂದ್ರೆ ಅವಳು ಬೆತ್ತಲೆ ಆಗಿರೋದನ್ನ ಅವರು ನೋಡಿದ್ದಾರೆ.+ ಅವಳು ನರಳ್ತಿದ್ದಾಳೆ+ ಮತ್ತು ಅವಮಾನದಿಂದ ಬೇರೆ ಕಡೆ ತಿರುಗ್ತಾಳೆ. ט [ಟೆತ್‌]   ಅವಳ ಲಂಗಗಳು ಅಶುದ್ಧವಾಗಿವೆ. ಮುಂದೆ ತನಗೆ ಏನಾಗಬಹುದು ಅಂತ ಅವಳು ಸ್ವಲ್ಪನೂ ಯೋಚಿಸಲಿಲ್ಲ.+ ಅವಳು ಹೇಗೆ ಬಿದ್ದಳಂದ್ರೆ ಅದನ್ನ ನೋಡಿದವರು ದಿಗಿಲುಗೊಂಡ್ರು, ಅವಳನ್ನ ಸಮಾಧಾನ ಮಾಡುವವರು ಒಬ್ರೂ ಇಲ್ಲ. ಓ ಯೆಹೋವನೇ, ನನ್ನ ಕಷ್ಟವೇದನೆ ನೋಡು. ಯಾಕಂದ್ರೆ ಶತ್ರು ಕೊಚ್ಚಿಕೊಂಡಿದ್ದಾನೆ.+ י [ಯೋದ್‌] 10  ವಿರೋಧಿ ಕೈಚಾಚಿ ಅವಳ ಸಿರಿಸಂಪತ್ತನ್ನೆಲ್ಲ ಬಾಚ್ಕೊಂಡಿದ್ದಾನೆ.+ ಯಾವ ಜನಾಂಗಗಳು ನಿನ್ನ ಸಭೆಯೊಳಗೆ ಬರಬಾರದು ಅಂತ ನೀನು ಆಜ್ಞೆ ಕೊಟ್ಯೋಅವ್ರೇ ಆರಾಧನಾ ಸ್ಥಳದೊಳಗೆ ಬರೋದನ್ನ ಅವಳು ನೋಡಿದ್ದಾಳೆ.+ כ [ಕಾಫ್‌] 11  ಅವಳ ಜನ್ರೆಲ್ಲ ದುಃಖದ ನಿಟ್ಟುಸಿರು ಬಿಡ್ತಿದ್ದಾರೆ, ಆಹಾರಕ್ಕಾಗಿ ಅಲೆದಾಡ್ತಿದ್ದಾರೆ.+ ಜೀವ ಉಳಿದ್ರೆ ಸಾಕಂತ ನೆನಸಿ ತಿನ್ನೋಕೆ ಏನಾದ್ರೂ ಪಡಿಯೋಕೆ ತಮ್ಮ ಅಮೂಲ್ಯ ವಸ್ತುಗಳನ್ನ ಕೊಟ್ಟಿದ್ದಾರೆ. ನೋಡು, ಯೆಹೋವ ನೋಡು, ನಾನು ಕೆಲಸಕ್ಕೆ ಬಾರದ ಸ್ತ್ರೀ ತರ* ಆಗಿದ್ದೀನಿ. ל [ಲಾಮೆದ್‌] 12  ರಸ್ತೆಯಲ್ಲಿ ದಾಟಿ ಹೋಗ್ತಿರೋರೇ, ನಿಮಗೇನೂ ಅನಿಸ್ತಿಲ್ವಾ? ನನ್ನನ್ನ ನೋಡಿ! ನನ್ನ ಕಡೆ ಗಮನಕೊಡಿ! ಯೆಹೋವ ತನ್ನ ಕೋಪದ ದಿನದಲ್ಲಿ ನಾನು ನೋವಿಂದ ನರಳೋ ತರ ಮಾಡಿದ್ದಾನೆ,+ನನಗೆ ಬಂದಿರೋ ಈ ನೋವಿನ ತರ ಬೇರೆ ಯಾವ ನೋವಾದ್ರೂ ಇದ್ಯಾ? מ [ಮೆಮ್‌] 13  ಆತನು ಸ್ವರ್ಗದಿಂದ ಬೆಂಕಿ ಕಳಿಸಿದ್ದಾನೆ,+ ಅದು ನನ್ನ ಪ್ರತಿಯೊಂದು ಎಲುಬನ್ನ ಸುಟ್ಟುಹಾಕಿದೆ. ನನ್ನ ಕಾಲುಗಳನ್ನ ಸಿಕ್ಕಿಸೋಕೆ ಆತನು ಬಲೆ ಹರಡಿದ್ದಾನೆ, ನಾನು ತಿರುಗಿ ನೋಡ್ಲೇಬೇಕಾದ ಪರಿಸ್ಥಿತಿಗೆ ನನ್ನನ್ನ ತಂದಿದ್ದಾನೆ. ಆತನು ನನ್ನನ್ನ ಒಂಟಿಯಾಗಿ ಮಾಡಿದ್ದಾನೆ. ದಿನವೆಲ್ಲ ನಾನು ಹುಷಾರಿಲ್ಲದೆ ಒದ್ದಾಡ್ತಾ ಇದ್ದೀನಿ. נ [ನೂನ್‌] 14  ಆತನು ತನ್ನ ಕೈಯಾರೆ ನನ್ನ ಅಪರಾಧಗಳನ್ನ ಒಂದು ನೊಗದ ತರ ಕಟ್ಟಿದ್ದಾನೆ. ಅವುಗಳನ್ನ ನನ್ನ ಕುತ್ತಿಗೆ ಮೇಲೆ ಇಟ್ಟಿದ್ದಾನೆ, ನನ್ನ ಬಲ ಕುಂದಿಹೋಗಿದೆ. ನನ್ನಿಂದ ಎದುರಿಸೋಕೆ ಆಗದವ್ರ ಕೈಗೆ ಯೆಹೋವ ನನ್ನನ್ನ ಕೊಟ್ಟಿದ್ದಾನೆ.+ ס [ಸಾಮೆಕ್‌] 15  ಯೆಹೋವ ನನ್ನ ಮಧ್ಯದಿಂದ ಎಲ್ಲ ಬಲಿಷ್ಠ ಗಂಡಸ್ರನ್ನ ತೆಗೆದು ಎಸೆದುಬಿಟ್ಟಿದ್ದಾನೆ.+ ನನ್ನ ಯುವಕರನ್ನ ಜಜ್ಜಿಹಾಕೋಕೆ ನನ್ನ ವಿರುದ್ಧ ಸಭೆ ಕರೆದಿದ್ದಾನೆ.+ ಯೆಹೂದ ಅನ್ನೋ ಕನ್ಯೆಯನ್ನ ದ್ರಾಕ್ಷಿತೊಟ್ಟಿಯಲ್ಲಿ ಹಾಕಿ ಯೆಹೋವ ತುಳಿದಿದ್ದಾನೆ.+ ע [ಅಯಿನ್‌] 16  ಹಾಗಾಗಿ ನಾನು ಅಳ್ತಿದ್ದೀನಿ,+ ಕಣ್ಣೀರಧಾರೆ ಹರಿದು ಬರ್ತಿದೆ. ನನ್ನನ್ನ ಸಂತೈಸೋಕೆ, ನನ್ನಲ್ಲಿ ಚೈತನ್ಯ ತುಂಬೋಕೆ ಯಾರೂ ಇಲ್ಲ, ಎಲ್ರೂ ನನ್ನಿಂದ ದೂರ ಆಗಿದ್ದಾರೆ. ಶತ್ರುಗಳು ಜಯಿಸಿದ್ರಿಂದ ನನ್ನ ಗಂಡು ಮಕ್ಕಳ ಬಾಳು ಹಾಳಾಗಿದೆ. פ [ಪೇ] 17  ಚೀಯೋನ್‌ ತನ್ನ ಕೈಗಳನ್ನ ಚಾಚ್ಕೊಂಡಿದ್ದಾಳೆ,+ ಅವಳನ್ನ ಸಮಾಧಾನ ಮಾಡುವವರು ಯಾರೂ ಇಲ್ಲ. ಯಾಕೋಬನ ಮೇಲೆ ದಾಳಿ ಮಾಡೋಕೆ ಅವನ ಸುತ್ತ ಇದ್ದ ವಿರೋಧಿಗಳಿಗೆ ಯೆಹೋವ ಅಪ್ಪಣೆ ಕೊಟ್ಟಿದ್ದಾನೆ.+ ಅವ್ರಿಗೆ ಯೆರೂಸಲೇಮ್‌ ಒಂದು ಅಸಹ್ಯ ವಸ್ತುವಾಗಿದೆ.+ צ [ಸಾದೆ] 18  ಯೆಹೋವ ನೀತಿವಂತನು,+ ಆತನ ಆಜ್ಞೆಗಳನ್ನ ಮೀರಿ ನಡೆದು ದಂಗೆಯೆದ್ದಿದ್ದು ನಾನೇ.+ ಜನಾಂಗಗಳೇ, ನೀವೆಲ್ರೂ ಕಿವಿಗೊಡಿ, ನನ್ನ ವ್ಯಥೆ ನೋಡಿ. ನನ್ನ ಕನ್ಯೆಯರು* ಮತ್ತು ನನ್ನ ಯುವಕರು ಬಂದಿಗಳಾಗಿ ಹೋಗಿದ್ದಾರೆ.+ ק [ಕೊಫ್‌] 19  ನಾನು ನನ್ನ ಪ್ರಿಯತಮರನ್ನ ಕರೆದೆ, ಆದ್ರೆ ಅವರು ನನಗೆ ದ್ರೋಹ ಮಾಡಿದ್ರು.+ ಪಟ್ಟಣದಲ್ಲಿದ್ದ ನನ್ನ ಪುರೋಹಿತರು ಮತ್ತು ನನ್ನ ಹಿರಿಯರು ಪ್ರಾಣ ಉಳಿಸ್ಕೊಳ್ಳೋಕೆ ಆಹಾರ ಹುಡುಕ್ತಾ ಅಲೆದಾಡಿದ್ರು,ಆದ್ರೆ ಆಹಾರ ಸಿಗದೆ ಸತ್ತುಹೋದ್ರು.+ ר [ರೆಶ್‌] 20  ಯೆಹೋವನೇ ನೋಡು, ನಾನು ತುಂಬ ವೇದನೆಯಲ್ಲಿದ್ದೀನಿ. ನನ್ನ ಕರುಳು ಚುರ್‌ ಅಂತಿದೆ. ನನ್ನ ಹೃದಯದ ಬೇಗುದಿ ಹೆಚ್ಚಾಗಿದೆ. ಯಾಕಂದ್ರೆ ನಾನು ಹದ್ದುಮೀರಿ ದಂಗೆ ಎದ್ದಿದ್ದೀನಿ.+ ಹೊರಗೆ ಕತ್ತಿ ನನ್ನ ಮಕ್ಕಳನ್ನ ಕೊಲ್ತಿದೆ,+ ಮನೆಯೊಳಗೂ ಹೆಣ ಬೀಳ್ತಿದೆ. ש [ಶಿನ್‌] 21  ನನ್ನ ದುಃಖದ ನಿಟ್ಟುಸಿರು ಜನ್ರ ಕಿವಿಗೆ ಬಿದ್ದಿದೆ, ಒಬ್ರೂ ನನ್ನನ್ನ ಸಂತೈಸ್ತಾ ಇಲ್ಲ. ನನ್ನ ವಿಪತ್ತಿನ ಬಗ್ಗೆ ನನ್ನೆಲ್ಲ ಶತ್ರುಗಳಿಗೆ ಸುದ್ದಿ ಸಿಕ್ಕಿದೆ. ನೀನು ನನ್ನ ಮೇಲೆ ಈ ಕಷ್ಟ ತಂದಿರೋದ್ರಿಂದ ಅವರು ಉಲ್ಲಾಸಪಡ್ತಿದ್ದಾರೆ.+ ಆದ್ರೆ ನೀನು ಪ್ರಕಟಿಸಿದ ದಿನ ಬರುವಾಗ+ ನನಗೆ ತಂದ ಗತಿಯನ್ನೇ ಅವ್ರಿಗೂ ತರ್ತಿಯ.+ ת [ಟಾವ್‌] 22  ಅವ್ರ ಎಲ್ಲ ಕೆಟ್ಟ ಕೆಲಸಗಳಿಗೆ ಗಮನಕೊಡು,ನನ್ನೆಲ್ಲ ಅಪರಾಧಗಳಿಗೆ ನೀನು ನನ್ನ ಜೊತೆ ಹೇಗೆ ಕಟುವಾಗಿ ನಡ್ಕೊಂಡ್ಯೋಹಾಗೇ ಅವ್ರ ಜೊತೆನೂ ಕಟುವಾಗಿ ನಡ್ಕೊ.+ ನನ್ನ ದುಃಖದ ನಿಟ್ಟುಸಿರಿಗೆ ಲೆಕ್ಕ ಇಲ್ಲ, ನನ್ನ ಹೃದಯ ಕಾಯಿಲೆ ಬಿದ್ದಿದೆ.

ಪಾದಟಿಪ್ಪಣಿ

1 ರಿಂದ 4ನೇ ಅಧ್ಯಾಯಗಳಲ್ಲಿ ಇರೋದು ಶೋಕಗೀತೆಗಳು. ಹೀಬ್ರು ಭಾಷೆಯಲ್ಲಿ ಈ ಗೀತೆಗಳನ್ನ ಅಕ್ಷರಮಾಲೆಯ ಕ್ರಮದಲ್ಲಿ ಅಥವಾ ಪದ್ಯಬಂಧದ ರೂಪದಲ್ಲಿ ರಚಿಸಲಾಗಿದೆ.
ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳಿಗೆ.”
ಅಥವಾ “ಯುವತಿಯರು.”
ಅಕ್ಷ. “ಶಿರಸ್ಸಾಗಿದ್ದಾರೆ.”
ಅಥವಾ “ಹಿಗ್ಗಿದ್ರು.”
ಇಲ್ಲಿ ಯೆರೂಸಲೇಮನ್ನ ಸ್ತ್ರೀಗೆ ಹೋಲಿಸಿ ಹೇಳಲಾಗಿದೆ.
ಅಥವಾ “ಯುವತಿಯರು.”