ಪ್ರಲಾಪ 5:1-22

  • ಒಳ್ಳೇ ದಿನಕ್ಕಾಗಿ ಜನ್ರ ಪ್ರಾರ್ಥನೆ

    • “ನಮಗೆ ಬಂದಿರೋ ಕಷ್ಟ ನೆನಪಿಸ್ಕೊ” (1)

    • “ನಮ್ಮ ಗತಿ ಏನಂತ ಹೇಳೋಣ, ನಾವು ಪಾಪ ಮಾಡಿದ್ದೀವಲ್ಲಾ” (16)

    • “ಯೆಹೋವನೇ, ನಮ್ಮನ್ನ ನಿನ್ನ ಹತ್ರ ವಾಪಸ್‌ ಕರ್ಕೊಂಡು ಹೋಗು” (21)

    • “ಮತ್ತೆ ಒಳ್ಳೇ ದಿನಗಳು ಬರೋ ಹಾಗೆ ಮಾಡು” (21)

5  ಯೆಹೋವನೇ, ನಮಗೆ ಬಂದಿರೋ ಕಷ್ಟ ನೆನಪಿಸ್ಕೊ. ನೋಡು, ನಮಗಾದ ಅಪಮಾನಕ್ಕೆ ಗಮನಕೊಡು.+   ನಮ್ಮ ಆಸ್ತಿಪಾಸ್ತಿಯೆಲ್ಲ ಅಪರಿಚಿತರ ಪಾಲಾಯ್ತು, ನಮ್ಮ ಮನೆಗಳು ವಿದೇಶಿಯರ ವಶವಾಯ್ತು.+   ನಾವು ತಂದೆಯಿಲ್ಲದ ತಬ್ಬಲಿಗಳಾಗಿದ್ದೀವಿ, ನಮ್ಮ ತಾಯಂದಿರು ವಿಧವೆಯರ ತರ ಆಗಿದ್ದಾರೆ.+   ನೀರು ನಮ್ಮದಾಗಿದ್ರೂ ಹಣ ಕೊಟ್ಟು ಕೊಂಡ್ಕೊಳ್ಳಬೇಕಾಗಿದೆ,+ ಸೌದೆ ನಮ್ಮದೇ ಆಗಿದ್ರೂ ಅದನ್ನ ಖರೀದಿಸಬೇಕಾಗಿದೆ.   ಬೆನ್ನಟ್ಟುವವರು ಇನ್ನೇನು ನಮ್ಮನ್ನ ಹಿಡಿತಾರೆ,ನಾವು ಬಳಲಿ ಬೆಂಡಾಗಿದ್ದೀವಿ, ವಿಶ್ರಾಂತಿ ಪಡಿಯೋಕೆ ಅವರು ಬಿಡ್ತಿಲ್ಲ.+   ನಮ್ಮ ಹೊಟ್ಟೆ ತುಂಬಿಸ್ಕೊಳ್ಳೋಕೆ ನಾವು ಈಜಿಪ್ಟ್‌*+ ಮತ್ತು ಅಶ್ಶೂರದ+ ಮುಂದೆ ಕೈಚಾಚ್ತಾ ಆಹಾರಕ್ಕಾಗಿ ಬೇಡ್ತಿದ್ದೀವಿ.   ಪಾಪ ಮಾಡಿದ ನಮ್ಮ ಪೂರ್ವಜರು ಈಗ ಇಲ್ಲ, ಆದ್ರೆ ಅವ್ರ ಪಾಪಗಳ ಪರಿಣಾಮವನ್ನ ನಾವೀಗ ಅನುಭವಿಸಬೇಕಾಗಿದೆ.   ಸೇವಕರು ನಮ್ಮನ್ನ ಈಗ ಆಳ್ತಿದ್ದಾರೆ, ಅವ್ರ ಕೈಯಿಂದ ನಮ್ಮನ್ನ ಬಿಡಿಸುವವರು ಯಾರೂ ಇಲ್ಲ.   ಕಾಡಲ್ಲಿ ಸೈನಿಕರು ಕತ್ತಿ ಹಿಡಿದು ನಿಂತಿದ್ದಾರೆ. ಹಾಗಾಗಿ ನಮ್ಮ ಜೀವವನ್ನ ಅಪಾಯಕೊಡ್ಡಿ ನಾವು ಆಹಾರ ತಗೊಂಡು ಬರ್ತಿವಿ.+ 10  ಹಸಿವೆಯ ಸಂಕಟದಿಂದಾಗಿ ನಮ್ಮ ಚರ್ಮ ಕುಲುಮೆ ತರ ಸುಡ್ತಿದೆ.+ 11  ಚೀಯೋನಲ್ಲಿರೋ ಹೆಂಡತಿಯರನ್ನ, ಯೆಹೂದದ ಪಟ್ಟಣಗಳಲ್ಲಿರೋ ಕನ್ಯೆಯರನ್ನ ಅವಮಾನ ಮಾಡಲಾಗಿದೆ.*+ 12  ಅಧಿಕಾರಿಗಳನ್ನ ಅವ್ರ ಒಂದೊಂದು ಕೈಗಳಿಂದ ನೇತು ಹಾಕಲಾಯ್ತು,+ ಹಿರಿಯರಿಗೆ ಯಾರೂ ಗೌರವ ಕೊಡ್ತಿರ್ಲಿಲ್ಲ.+ 13  ಯುವಕರು ಬೀಸೋ ಕಲ್ಲನ್ನ ಹೊರುತ್ತಿದ್ದಾರೆ, ಹುಡುಗರು ಭಾರವಾದ ಸೌದೆ ಹೊರೆಯನ್ನ ಹೊತ್ಕೊಂಡು ಹೋಗುವಾಗ ಮುಗ್ಗರಿಸಿ ಬೀಳ್ತಿದ್ದಾರೆ. 14  ಪಟ್ಟಣದ ಬಾಗಿಲ ಹತ್ರ ಹಿರಿಯರು ಇಲ್ವೇ ಇಲ್ಲ,+ ಯುವಕರು ಸಂಗೀತ ನುಡಿಸ್ತಿಲ್ಲ.+ 15  ನಮ್ಮ ಹೃದಯದಲ್ಲಿ ಸಂತೋಷ ಅನ್ನೋದೇ ಇಲ್ಲ, ನಮ್ಮ ನೃತ್ಯ ನಿಂತುಹೋಗಿ ಶೋಕನೇ ನಮ್ಮ ಸಂಗಾತಿ ಆಗಿದೆ.+ 16  ನಮ್ಮ ತಲೆ ಮೇಲಿದ್ದ ಕಿರೀಟ ಬಿದ್ದುಹೋಗಿದೆ. ನಮ್ಮ ಗತಿ ಏನಂತ ಹೇಳೋಣ, ನಾವು ಪಾಪ ಮಾಡಿದ್ದೀವಲ್ಲಾ! 17  ಅದಕ್ಕೇ ನಮ್ಮ ಹೃದಯ ಕಾಯಿಲೆ ಬಿದ್ದಿದೆ,+ನಮ್ಮ ಕಣ್ಣುಗಳು ಮಬ್ಬಾಗಿ ಹೋಗಿವೆ,+ 18  ಚೀಯೋನ್‌ ಬೆಟ್ಟ ನಿರ್ಜನವಾಗಿದೆ,+ ನರಿಗಳು ಅದ್ರ ಮೇಲೆ ಓಡಾಡ್ತಿವೆ. 19  ಯೆಹೋವನೇ, ನೀನಾದ್ರೋ ಸದಾಕಾಲಕ್ಕೂ ಸಿಂಹಾಸನದ ಮೇಲೆ ಕೂತ್ಕೊಂಡಿರ್ತೀಯ. ನಿನ್ನ ಸಿಂಹಾಸನ ಎಲ್ಲ ತಲೆಮಾರು ತನಕ ಸ್ಥಿರವಾಗಿರುತ್ತೆ.+ 20  ನೀನು ಯಾಕೆ ನಮ್ಮನ್ನ ಸದಾಕಾಲಕ್ಕೂ ಮರೆತು ಬಿಟ್ಟಿದ್ದೀಯ? ಇಷ್ಟೊಂದು ಸಮಯದ ತನಕ ಯಾಕೆ ನಮ್ಮ ಕೈಬಿಟ್ಟಿದ್ದೀಯ?+ 21  ಯೆಹೋವನೇ, ನಮ್ಮನ್ನ ನಿನ್ನ ಹತ್ರ ವಾಪಸ್‌ ಕರ್ಕೊಂಡು ಹೋಗು, ನಾವು ಮನಸಾರೆ ನಿನ್ನ ಹತ್ರ ವಾಪಸ್‌ ಬರ್ತಿವಿ.+ ಮೊದಲಿದ್ದ ಹಾಗೇ ನಮ್ಮ ಬಾಳಲ್ಲಿ ಮತ್ತೆ ಒಳ್ಳೇ ದಿನಗಳು ಬರೋ ಹಾಗೆ ಮಾಡು.+ 22  ಆದ್ರೆ ನೀನು ನಮ್ಮನ್ನ ಸಂಪೂರ್ಣವಾಗಿ ತಿರಸ್ಕರಿಸಿದ್ದೀಯ. ನಿನಗೆ ಈಗ್ಲೂ ನಮ್ಮ ಮೇಲೆ ತುಂಬ ಕೋಪ ಇದೆ.+

ಪಾದಟಿಪ್ಪಣಿ

ಅಥವಾ “ಐಗುಪ್ತ.”
ಅಥವಾ “ಅತ್ಯಾಚಾರ ಮಾಡಲಾಗಿದೆ.”