ಮೀಕ 2:1-13

  • ದಬ್ಬಾಳಿಕೆ ಮಾಡುವವರ ಗತಿ ಏನಂತ ಹೇಳಲಿ! (1-11)

  • ಇಸ್ರಾಯೇಲ್ಯರನ್ನ ಒಟ್ಟುಗೂಡಿಸ್ತೀನಿ (12, 13)

    • ದೇಶ ಜನ್ರಿಂದ ಗಿಜಿಗುಟ್ಟುತ್ತೆ (12)

2  “ಅಯ್ಯೋ, ಕೇಡು ಮಾಡೋಕೆ ಸಂಚು ಹೂಡುವವ್ರ,ಹಾಸಿಗೆಗಳಲ್ಲಿ ಇರುವಾಗ್ಲೇ ಕೆಟ್ಟದ್ದನ್ನ ಮಾಡೋಕೆ ಯೋಜಿಸುವವ್ರಗತಿ ಏನು ಹೇಳಲಿ! ಅವರು ಅಂದ್ಕೊಂಡಿದ್ದನ್ನ ಬೆಳಿಗ್ಗೆನೇ ನಡೆಸ್ತಾರೆ,ಯಾಕಂದ್ರೆ ಅದನ್ನ ಮಾಡೋ ಅಧಿಕಾರ, ಸಾಮರ್ಥ್ಯ ಅವ್ರಿಗಿದೆ.+   ಅವರು ಅತಿಯಾಸೆಯಿಂದ ಜನ್ರ ಹೊಲಗದ್ದೆಗಳನ್ನ ವಶ ಮಾಡ್ಕೊಳ್ತಾರೆ,+ಮನೆಗಳನ್ನೂ ಕಿತ್ಕೊಳ್ತಾರೆ,ಮೋಸ ಮಾಡಿ ಬೇರೆಯವ್ರ ಮನೆಯನ್ನ ಕಸಿದ್ಕೊಳ್ತಾರೆ,+ಅವ್ರ ಆಸ್ತಿನೂ ನುಂಗ್ತಾರೆ.   ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ: ‘ನಿಮ್ಮ ಮೇಲೆ ನಾಶ ತರಬೇಕಂತ ಯೋಚ್ನೆ ಮಾಡಿದ್ದೀನಿ,+ಆ ನಾಶದಿಂದ ನೀವು ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ.+ ಅದು ನಾಶದ ಸಮಯ ಆಗಿರೋದ್ರಿಂದ+ ಮುಂದೆ ಯಾವತ್ತೂ ನೀವು ಅಹಂಕಾರದಿಂದ ನಡಿಯಲ್ಲ.+   ಆ ದಿನದಲ್ಲಿ ಜನ ನಿಮ್ಮ ವಿಷ್ಯವನ್ನ ಪದ್ಯ ಕಟ್ಟಿ ಹಾಡ್ತಾರೆ,ಅಷ್ಟೇ ಅಲ್ಲ ನಿಮ್ಮ ಬಗ್ಗೆ ಶೋಕಗೀತೆ ಹಾಡ್ತಾ ಗೋಳಾಡ್ತಾರೆ.+ “ನಾವು ಸರ್ವನಾಶ ಆದ್ವಿ!+ ಆತನು ನಮ್ಮ ಜನ್ರ ಜಮೀನನ್ನ ಕಿತ್ಕೊಂಡು ಬೇರೆಯವ್ರಿಗೆ ಕೊಟ್ಟ!+ ಆತನನ್ನ ಆರಾಧಿಸದ ಜನ್ರಿಗೆ ನಮ್ಮ ಹೊಲಗದ್ದೆಗಳನ್ನ ಕೊಟ್ಟ” ಅಂತ ಅವರು ಹೇಳ್ತಾರೆ.   ಆಗ ಅಳತೆ ಹಗ್ಗ ಹಿಡಿದು ನಿಮ್ಮ ಜಮೀನನ್ನ ಅಳೆದು ಕೊಡೋಕೆಯೆಹೋವನ ಸಭೆಯಲ್ಲಿ ಯಾರೂ ಇರಲ್ಲ.   “ಸಾರೋದನ್ನ ನಿಲ್ಲಿಸಿ,ಈ ವಿಷ್ಯಗಳನ್ನ ಸಾರಬಾರದು,ನಾವು ಅವಮಾನಕ್ಕೆ ಗುರಿ ಆಗಲ್ಲ” ಅಂತ ಅವರು ಸಾರ್ತಾರೆ.   ಯಾಕೋಬನ ವಂಶದವ್ರೇ,“ಯೆಹೋವ* ತಾಳ್ಮೆ ಕಳ್ಕೊಂಡಿದ್ದಾನಾ? ಆತನು ನಿಜವಾಗ್ಲೂ ಹೀಗೆಲ್ಲ ಮಾಡ್ತಾನಾ?” ಅಂತ ಹೇಳ್ತೀರಲ್ಲ,ನ್ಯಾಯವಾಗಿ ನಡಿಯುವವ್ರಿಗೆ ನನ್ನ ಮಾತುಗಳಿಂದ ಒಳ್ಳೇದೇ ಆಗುತ್ತಲ್ವಾ?   ಆದ್ರೆ ಈಗೀಗ ನನ್ನ ಸ್ವಂತ ಜನ ಶತ್ರುವಿನ ತರ ನನ್ನ ವಿರುದ್ಧ ಎದ್ದಿದ್ದಾರೆ. ಯುದ್ಧ ಮುಗಿಸಿ ವಾಪಸ್‌ ಬರುವವ್ರ ತರ ನಿರ್ಭಯವಾಗಿ ನಡ್ಕೊಂಡು ಬರುವವ್ರ ಬಟ್ಟೆಗಳಿಂದ*ನೀವು ಬೆಲೆಬಾಳೋ ಒಡವೆಗಳನ್ನ ಕಿತ್ಕೊಳ್ತೀರ.   ನೀವು ನನ್ನ ಜನ್ರಲ್ಲಿರೋ ಸ್ತ್ರೀಯರನ್ನ ಅವರು ಸಂತೋಷವಾಗಿ ಜೀವಿಸ್ತಿರೋ ಮನೆಗಳಿಂದ ಅಟ್ಟಿಸಿಬಿಡ್ತೀರ,ನಾನು ಅವ್ರ ಮಕ್ಕಳಿಗೆ ಆಶೀರ್ವಾದವಾಗಿ ಕೊಟ್ಟಿರೋ ಸೊಗಸಾದ ವಸ್ತುಗಳನ್ನ ನೀವು ದೋಚ್ಕೊಳ್ತೀರ,ಅವು ಅವ್ರಿಗೆ ಇನ್ನು ಯಾವತ್ತೂ ಸಿಗದ ಹಾಗೆ ಮಾಡ್ತೀರ. 10  ಎದ್ದು ತೊಲಗಿ! ಇದು ನೀವು ವಿಶ್ರಾಂತಿ ಪಡಿಯೋ ಸ್ಥಳವಲ್ಲ,ಯಾಕಂದ್ರೆ ಈ ಸ್ಥಳ ಅಶುದ್ಧ ಆಗಿರೋದ್ರಿಂದ+ ನಾಶವಾಗುತ್ತೆ,ಆ ನಾಶ ತುಂಬ ಭಯಾನಕವಾಗಿ ಇರುತ್ತೆ.+ 11  ಗಾಳಿಯನ್ನೂ ಮೋಸವನ್ನೂ ಹಿಂಬಾಲಿಸೋ ವ್ಯಕ್ತಿ“ನಾನು ನಿಮಗೆ ದ್ರಾಕ್ಷಾಮದ್ಯ ಮತ್ತು ಮದ್ಯಪಾನೀಯದ ಬಗ್ಗೆ ಸಾರ್ತಿನಿ” ಅಂತ ಸುಳ್ಳು ಹೇಳಿದ್ರೆ,ಆ ರೀತಿ ಸಾರುವವನೇ ಈ ಜನ್ರಿಗೆ ಇಷ್ಟ ಆಗ್ತಾನೆ!+ 12  ಯಾಕೋಬನೇ, ನಾನು ನಿನ್ನವ್ರನ್ನೆಲ್ಲ ಖಂಡಿತ ಕೂಡಿಸ್ತೀನಿ,ಇಸ್ರಾಯೇಲಲ್ಲಿ ಉಳಿದವ್ರನ್ನೆಲ್ಲ ಖಂಡಿತ ಒಟ್ಟುಸೇರಿಸ್ತೀನಿ,+ಕೊಟ್ಟಿಗೆಯಲ್ಲಿರೋ ಕುರಿಗಳ ತರ,ಹುಲ್ಲುಗಾವಲಲ್ಲಿರೋ ಒಂದು ಮಂದೆ ತರ,+ಅವರು ಒಂದಾಗೋ ಹಾಗೆ ಮಾಡ್ತೀನಿ,ಆ ಸ್ಥಳ ಜನ್ರಿಂದ ಗಿಜಿಗುಟ್ಟುತ್ತೆ.’+ 13  ಒಬ್ಬ ಬಿರುಕು ಮಾಡಿ ಅವ್ರ ಮುಂದೆ ಹೋಗ್ತಾನೆ,ಅವರು ಆ ಬಿರುಕನ್ನ ಅಗಲ ಮಾಡ್ತಾರೆ,ಅವರು ನಡ್ಕೊಂಡು ಬಾಗಿಲಿಂದ ಹೊರಗೆ ಹೋಗ್ತಾರೆ,+ಅವ್ರ ರಾಜ ಅವ್ರ ಮುಂದೆ ಹೋಗ್ತಾನೆ,ಯೆಹೋವ ಅವ್ರ ಮುಂದೆ ನಿಂತು ಅವ್ರನ್ನ ನಡಿಸ್ತಾನೆ.”+

ಪಾದಟಿಪ್ಪಣಿ

ಅಥವಾ “ಯೆಹೋವನ ಪವಿತ್ರಶಕ್ತಿ.”
ಅಥವಾ “ಬಟ್ಟೆಗಳ ಜೊತೆ.”