ಯಾಜಕಕಾಂಡ 9:1-24

  • ಆರೋನ ಕೊಟ್ಟ ಅರ್ಪಣೆಗಳು (1-24)

9  ಮೋಶೆ ಎಂಟನೇ ದಿನ+ ಆರೋನನನ್ನ, ಅವನ ಮಕ್ಕಳನ್ನ, ಇಸ್ರಾಯೇಲ್ಯರ ಹಿರಿಯರನ್ನ ಕರೆದ.  ಅವನು ಆರೋನನಿಗೆ “ನೀನು ನಿನಗೋಸ್ಕರ ಪಾಪಪರಿಹಾರಕ ಬಲಿ+ ಅರ್ಪಿಸೋಕೆ ಯಾವುದೇ ದೋಷ ಇಲ್ಲದ ಒಂದು ಕರುವನ್ನ, ಸರ್ವಾಂಗಹೋಮ ಬಲಿಗಾಗಿ ಯಾವುದೇ ದೋಷ ಇಲ್ಲದ ಒಂದು ಟಗರನ್ನ ತಗೊಂಡು ಯೆಹೋವನ ಮುಂದೆ ಅರ್ಪಿಸು.  ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ನೀವು ಪಾಪಪರಿಹಾರಕ ಬಲಿಗಾಗಿ ಒಂದು ಗಂಡು ಆಡನ್ನ, ಸರ್ವಾಂಗಹೋಮ ಬಲಿಗಾಗಿ ಒಂದು ವರ್ಷದ ಯಾವುದೇ ದೋಷ ಇಲ್ಲದ ಒಂದು ಕರುವನ್ನ, ಒಂದು ಟಗರನ್ನ,  ಸಮಾಧಾನ ಬಲಿಗಾಗಿ ಒಂದು ಹೋರಿಯನ್ನ, ಒಂದು ಟಗರನ್ನ+ ಯೆಹೋವನ ಮುಂದೆ ಅರ್ಪಿಸೋಕೆ ತರಬೇಕು. ಅಷ್ಟೇ ಅಲ್ಲ ಎಣ್ಣೆ ಬೆರೆಸಿದ ಧಾನ್ಯ ಅರ್ಪಣೆ ಸಹ ತರಬೇಕು.+ ಯಾಕಂದ್ರೆ ಇವತ್ತು ಯೆಹೋವ ನಿಮಗೆ ಕಾಣಿಸ್ಕೊಳ್ತಾನೆ”+ ಅಂದ.  ಮೋಶೆ ಅವರಿಗೆ ಏನೆಲ್ಲ ತರಬೇಕು ಅಂತ ಆಜ್ಞೆ ಕೊಟ್ನೋ ಅದನ್ನೆಲ್ಲ ತಗೊಂಡು ದೇವದರ್ಶನ ಡೇರೆ ಮುಂದೆ ಅಂದ್ರೆ ಯೆಹೋವನ ಮುಂದೆ ಬಂದು ನಿಂತ್ರು.  ಮೋಶೆ ಅವರಿಗೆ “ಯೆಹೋವ ಆಜ್ಞೆ ಕೊಟ್ಟ ಈ ಎಲ್ಲ ವಿಷ್ಯಗಳನ್ನ ಮಾಡಿದ್ರೆ ಯೆಹೋವನ ಮಹಿಮೆ ನಿಮಗೆ ಕಾಣಿಸುತ್ತೆ”+ ಅಂದ.  ಮೋಶೆ ಆರೋನನಿಗೆ “ನೀನು ಯಜ್ಞವೇದಿ ಹತ್ರ ಹೋಗಿ ಯೆಹೋವ ಆಜ್ಞೆ ಕೊಟ್ಟ ಹಾಗೇ ನಿನಗೋಸ್ಕರ ಪಾಪಪರಿಹಾರಕ ಬಲಿಯನ್ನ+ ಮತ್ತು ಸರ್ವಾಂಗಹೋಮ ಬಲಿಯನ್ನ ಅರ್ಪಿಸು, ನಿನಗೋಸ್ಕರ,+ ನಿನ್ನ ಕುಟುಂಬಕ್ಕೋಸ್ಕರ ಪ್ರಾಯಶ್ಚಿತ್ತ ಮಾಡು. ಜನ್ರು ತಂದಿರೋದನ್ನ ಅರ್ಪಿಸಿ+ ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡು”+ ಅಂದ.  ಆರೋನ ಕೂಡಲೇ ಯಜ್ಞವೇದಿ ಹತ್ರ ಹೋಗಿ ತನಗೋಸ್ಕರ ಪಾಪಪರಿಹಾರಕ ಬಲಿ ಅರ್ಪಿಸೋಕೆ ತಂದಿದ್ದ ಕರುವನ್ನ ಕಡಿದ.+  ಅವನ ಮಕ್ಕಳು ಅದ್ರ ರಕ್ತನ ಅವನಿಗೆ ತಂದ್ಕೊಟ್ರು.+ ಆಗ ಅವನು ತನ್ನ ಬೆರಳನ್ನ ಆ ರಕ್ತದಲ್ಲಿ ಅದ್ದಿ ಅದನ್ನ ಯಜ್ಞವೇದಿ ಕೊಂಬುಗಳಿಗೆ ಹಚ್ಚಿದ. ಉಳಿದ ರಕ್ತನ ಯಜ್ಞವೇದಿ ಬುಡದಲ್ಲಿ ಸುರಿದ.+ 10  ಕರುವಿನ ಕೊಬ್ಬನ್ನ, ಮೂತ್ರಪಿಂಡಗಳನ್ನ, ಪಿತ್ತಜನಕಾಂಗದ ಮೇಲಿರೋ ಕೊಬ್ಬನ್ನ ಯಜ್ಞವೇದಿ ಮೇಲಿಟ್ಟು ಸುಟ್ಟ. ಅದ್ರ ಹೊಗೆ ಮೇಲೇರಿತು. ಯೆಹೋವ ಮೋಶೆಗೆ ಆಜ್ಞಾಪಿಸಿದ ಹಾಗೇ ಆರೋನ ಮಾಡಿದ.+ 11  ಕರುವಿನ ಮಾಂಸ ಮತ್ತು ಚರ್ಮವನ್ನ ಅವನು ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಟ್ಟ.+ 12  ಆರೋನ ಸರ್ವಾಂಗಹೋಮ ಬಲಿಗಾಗಿ ತಂದಿದ್ದ ಟಗರನ್ನ ಕಡಿದ. ಅವನ ಮಕ್ಕಳು ಅದ್ರ ರಕ್ತನ ಅವನಿಗೆ ತಂದ್ಕೊಟ್ರು. ಅದನ್ನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ.+ 13  ಅವರು ಟಗರಿನ ತಲೆಯನ್ನ, ತುಂಡುಗಳನ್ನ ಆರೋನನಿಗೆ ಕೊಟ್ಟಾಗ ಅವುಗಳನ್ನ ಯಜ್ಞವೇದಿ ಮೇಲಿಟ್ಟು ಸುಟ್ಟ. 14  ಅವನು ಕರುಳುಗಳನ್ನ, ಕಾಲುಗಳನ್ನ ತೊಳೆದು ಯಜ್ಞವೇದಿಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಸುಟ್ಟ. ಅದ್ರ ಹೊಗೆ ಮೇಲೇರಿತು. 15  ಜನ ತಂದಿದ್ದ ಅರ್ಪಣೆಗಳನ್ನ ಆರೋನ ಅರ್ಪಿಸಿದ. ಜನ ತಮ್ಮ ಪಾಪಪರಿಹಾರಕ ಬಲಿಗಾಗಿ ತಂದಿದ್ದ ಆಡನ್ನ ಅವನು ಕಡಿದ. ತನ್ನ ಪಾಪಪರಿಹಾರಕ್ಕಾಗಿ ಅವನು ಕರುವನ್ನ ಅರ್ಪಿಸಿದ ಹಾಗೇ ಇದನ್ನೂ ಪಾಪಪರಿಹಾರಕ ಬಲಿಯಾಗಿ ಅರ್ಪಿಸಿದ. 16  ಅವನು ಸರ್ವಾಂಗಹೋಮ ಬಲಿಯನ್ನ ಅರ್ಪಿಸಿದ. ಸರ್ವಾಂಗಹೋಮ ಬಲಿಗಳನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ ಇದನ್ನೂ ಅರ್ಪಿಸಿದ.+ 17  ಆಮೇಲೆ ಆರೋನ ಧಾನ್ಯ ಅರ್ಪಣೆಯನ್ನ ಕೊಟ್ಟ.+ ಹೇಗಂದ್ರೆ ಅದನ್ನ ತನ್ನ ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಸುಟ್ಟ. ಅದ್ರ ಹೊಗೆ ಮೇಲೇರಿತು. ಅವನು ಬೆಳಗ್ಗೆ ಸರ್ವಾಂಗಹೋಮ ಬಲಿಯನ್ನ ಅರ್ಪಿಸಿದ್ರ ಜೊತೆಗೆ ಧಾನ್ಯ ಅರ್ಪಣೆನೂ ಅರ್ಪಿಸಿದ.+ 18  ಸಮಾಧಾನ ಬಲಿಗಾಗಿ ಜನ ತಂದಿದ್ದ ಹೋರಿಯನ್ನ, ಟಗರನ್ನ ಆರೋನ ಕಡಿದ. ಅವನ ಮಕ್ಕಳು ರಕ್ತನ ಅವನಿಗೆ ತಂದ್ಕೊಟ್ರು. ಅವನು ಅದನ್ನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ.+ 19  ಹೋರಿಯ ಕೊಬ್ಬಿನ ತುಂಡುಗಳು,+ ಟಗರಿನ ಕೊಬ್ಬಿದ ಬಾಲ, ಹೋರಿ ಮತ್ತು ಟಗರಿನ ಒಳಾಂಗಗಳ ಮೇಲಿರೋ ಕೊಬ್ಬು, ಮೂತ್ರಪಿಂಡಗಳು, ಪಿತ್ತಜನಕಾಂಗಗಳ ಮೇಲಿರೋ ಕೊಬ್ಬು+ 20  ಇದನ್ನೆಲ್ಲ ಎದೆಭಾಗಗಳ ಮೇಲಿಟ್ಟ. ಕೊಬ್ಬಿನ ಈ ಎಲ್ಲ ತುಂಡುಗಳನ್ನ ಯಜ್ಞವೇದಿ ಮೇಲೆ ಸುಟ್ಟ. ಅದ್ರ ಹೊಗೆ ಮೇಲೇರಿತು.+ 21  ಆದ್ರೆ ಎದೆಭಾಗಗಳನ್ನ, ಬಲಗಾಲನ್ನ ಆರೋನ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಿದ. ಹೀಗೆ ಓಲಾಡಿಸೋ ಅರ್ಪಣೆ ಕೊಟ್ಟ. ಮೋಶೆ ಆಜ್ಞೆ ಕೊಟ್ಟ ಹಾಗೇ ಅವನು ಮಾಡಿದ.+ 22  ಆರೋನ ಪಾಪಪರಿಹಾರಕ ಬಲಿ, ಸರ್ವಾಂಗಹೋಮ ಬಲಿ, ಸಮಾಧಾನ ಬಲಿ ಅರ್ಪಿಸಿದ ಮೇಲೆ ಜನ್ರ ಕಡೆ ತಿರುಗಿ ಕೈಗಳನ್ನ ಮೇಲಕ್ಕೆತ್ತಿ ಅವರನ್ನ ಆಶೀರ್ವದಿಸಿದ.+ ಆಮೇಲೆ ಕೆಳಗಿಳಿದು ಬಂದ. 23  ಕೊನೆಗೆ ಮೋಶೆ ಆರೋನ ದೇವದರ್ಶನ ಡೇರೆ ಒಳಗೆ ಹೋದ್ರು. ಆಮೇಲೆ ಬಂದು ಜನ್ರನ್ನ ಆಶೀರ್ವದಿಸಿದ್ರು.+ ಆಗ ಯೆಹೋವನ ಮಹಿಮೆ ಎಲ್ಲ ಜನ್ರಿಗೆ ಕಾಣಿಸ್ತು.+ 24  ಯೆಹೋವನಿಂದ ಬೆಂಕಿ ಬಂದು+ ಯಜ್ಞವೇದಿ ಮೇಲಿದ್ದ ಸರ್ವಾಂಗಹೋಮವನ್ನ, ಕೊಬ್ಬಿನ ತುಂಡುಗಳನ್ನ ಸುಟ್ಟುಬಿಡ್ತು. ಜನ್ರೆಲ್ಲ ಇದನ್ನ ನೋಡಿ ಸಂತೋಷದಿಂದ ಕೂಗ್ತಾ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ್ರು.+

ಪಾದಟಿಪ್ಪಣಿ