ಯೆರೆಮೀಯ 10:1-25

  • ಜನಾಂಗಗಳ ದೇವರುಗಳು ಮತ್ತು ಜೀವಂತ ದೇವರ ಮಧ್ಯ ವ್ಯತ್ಯಾಸ (1-16)

  • ಮುಂದೆ ಬರೋ ನಾಶ ಮತ್ತು ಸೆರೆ (17, 18)

  • ಯೆರೆಮೀಯನ ಅಳಲು (19-22)

  • ಪ್ರವಾದಿಯ ಪ್ರಾರ್ಥನೆ (23-25)

    • ತನ್ನನ್ನೇ ಮಾರ್ಗದರ್ಶಿಸೋ ಅಧಿಕಾರ ಮನುಷ್ಯನಿಗಿಲ್ಲ (23)

10  ಇಸ್ರಾಯೇಲ್‌ ಜನ್ರೇ, ನಿಮ್ಮ ವಿರುದ್ಧವಾಗಿ ಯೆಹೋವ ಹೇಳೋ ಮಾತುಗಳನ್ನ ಕೇಳಿಸ್ಕೊಳ್ಳಿ.  ಯೆಹೋವ ಹೀಗೆ ಹೇಳ್ತಾನೆ“ನೀವು ಬೇರೆ ದೇಶದ ಪದ್ಧತಿಗಳನ್ನ ಕಲಿಬೇಡಿ,+ಅವರು ಆಕಾಶದ ಅದ್ಭುತಗಳನ್ನ ನೋಡಿ ಭಯಪಡ್ತಾರೆ,ಆದ್ರೆ ನೀವು ಅವುಗಳನ್ನ ನೋಡಿ ಭಯಪಡಬೇಡಿ.+   ಯಾಕಂದ್ರೆ ಬೇರೆ ದೇಶದ ಪದ್ಧತಿಗಳು ಮೋಸಕರ,ನಿಪುಣ ಕೆಲಸಗಾರ ಕಾಡಲ್ಲಿರೋ ಒಂದು ಮರ ಕಡಿದುಅದನ್ನ ಕೆತ್ತಿ ಒಂದು ಮೂರ್ತಿ ಮಾಡ್ತಾನೆ.+   ಅದನ್ನ ಅವರು ಚಿನ್ನಬೆಳ್ಳಿಯಿಂದ ಅಲಂಕರಿಸ್ತಾರೆ,+ಅದು ಬಿದ್ದುಹೋಗದ ಹಾಗೆ ಸುತ್ತಿಗೆಯಿಂದ ಮೊಳೆಗಳನ್ನ ಹೊಡೆದು ನಿಲ್ಲಿಸ್ತಾರೆ.+   ಸೌತೆ ಗದ್ದೆಯಲ್ಲಿರೋ ಬೆದರುಬೊಂಬೆ ಹೇಗೆ ಮಾತಾಡಲ್ವೋ ಹಾಗೆ ಮೂರ್ತಿಗಳು ಮಾತಾಡಲ್ಲ,+ಅವುಗಳನ್ನ ಎತ್ಕೊಂಡು ಹೋಗಬೇಕು, ಯಾಕಂದ್ರೆ ಅವುಗಳಿಗೆ ನಡಿಯೋಕೆ ಆಗಲ್ಲ.+ ಅವುಗಳಿಗೆ ಹೆದರಬೇಡಿ, ಯಾಕಂದ್ರೆ ಹಾನಿಮಾಡೋಕೆ ಅವುಗಳಿಗೆ ಆಗಲ್ಲ,ಒಳ್ಳೇದನ್ನ ಮಾಡೋಕೂ ಆಗಲ್ಲ.”+   ಯೆಹೋವನೇ, ನಿನ್ನ ಹಾಗೆ ಬೇರೆ ಯಾರೂ ಇಲ್ಲ,+ನೀನು ತುಂಬ ದೊಡ್ಡವನು, ನಿನ್ನ ಹೆಸ್ರಿಗೆ ತುಂಬ ಶಕ್ತಿ ಇದೆ.   ದೇಶಗಳ ಅರಸನೇ,+ ನಿನಗೆ ಭಯಪಡದವರು ಯಾರಾದ್ರೂ ಇದ್ದಾರಾ? ನಿನಗೆ ಭಯಪಟ್ರೆ ಒಳ್ಳೇದು. ಯಾಕಂದ್ರೆ ಬೇರೆ ದೇಶಗಳಲ್ಲಿರೋ ಎಲ್ಲ ವಿವೇಕಿಗಳಲ್ಲಿ, ಅವ್ರ ಎಲ್ಲ ಸಾಮ್ರಾಜ್ಯಗಳಲ್ಲಿನಿನ್ನ ಹಾಗೆ ಒಬ್ರೂ ಇಲ್ಲ.+   ಅವ್ರೆಲ್ರೂ ವಿವೇಚನೆ ಇಲ್ಲದವರು, ಮೂರ್ಖರು.+ ಮರದ ಮೂರ್ತಿಯಿಂದ ಸಿಗೋ ನಿರ್ದೇಶನದಿಂದ ಏನೂ ಪ್ರಯೋಜನ ಇಲ್ಲ.+   ತಾರ್ಷೀಷಿಂದ+ ಬೆಳ್ಳಿ ತಗಡುಗಳನ್ನ,ಊಫಜ್‌ನಿಂದ ಚಿನ್ನವನ್ನ ತರಿಸ್ಕೊಳ್ತಾರೆ. ಅದನ್ನೆಲ್ಲ ಕರಕುಶಲ ಕೆಲಸಗಾರರು, ಲೋಹದ ಕೆಲಸಗಾರರು ಮರದ ತುಂಡಿಗೆ ಹೊದಿಸ್ತಾರೆ,ಅದಕ್ಕೆ ನೀಲಿ ದಾರದ, ನೇರಳೆ ಬಣ್ಣದ ಬಟ್ಟೆ ತೊಡಿಸ್ತಾರೆ,ಆ ಮೂರ್ತಿಗಳೆಲ್ಲ ನಿಪುಣ ಕೆಲಸಗಾರರ ಕೈಕೆಲಸ. 10  ಆದ್ರೆ ಯೆಹೋವನೇ ನಿಜವಾದ ದೇವರು,ಆತನು ಜೀವ ಇರೋ ದೇವರು,+ ಸದಾಕಾಲಕ್ಕೂ ರಾಜ,+ಆತನ ಕೋಪಕ್ಕೆ ಭೂಮಿ ನಡುಗುತ್ತೆ,+ಆತನ ಖಂಡನೆಯನ್ನ ತಾಳ್ಕೊಳ್ಳೋಕೆ ಯಾವ ದೇಶದ ಜನ್ರಿಗೂ ಆಗಲ್ಲ. 11  * ನೀವು ಅವ್ರಿಗೆ “ಭೂಮಿ, ಆಕಾಶವನ್ನ ಸೃಷ್ಟಿ ಮಾಡದ ದೇವರುಗಳುಭೂಮಿ ಮೇಲಿಂದ ಆಕಾಶದ ಕೆಳಗಿಂದ ನಾಶ ಆಗಿ ಹೋಗುತ್ತೆ”+ ಅಂತ ಹೇಳಬೇಕು. 12  ನಿಜವಾದ ದೇವರು ಭೂಮಿಯನ್ನ ತನ್ನ ಶಕ್ತಿಯಿಂದ ಸೃಷ್ಟಿ ಮಾಡಿದನು,ತನ್ನ ವಿವೇಕದಿಂದ ಭೂಗೋಳಕ್ಕೆ* ಗಟ್ಟಿಯಾದ ಅಡಿಪಾಯ ಹಾಕಿದನು,+ತಿಳುವಳಿಕೆಯಿಂದ ಆಕಾಶವನ್ನ ಹರಡಿದನು.+ 13  ಆತನ ಧ್ವನಿಗೆ ಆಕಾಶದಲ್ಲಿರೋ ನೀರು ಅಲ್ಲೋಲ ಕಲ್ಲೋಲ ಆಗುತ್ತೆ,+ಆತನು ಭೂಮಿಯ ಮೂಲೆಮೂಲೆಯಿಂದ ಮೋಡಗಳು* ಮೇಲೆ ಹೋಗೋ ತರ ಮಾಡ್ತಾನೆ.+ ಮಳೆಗಾಗಿ ಮಿಂಚನ್ನ* ಮಾಡ್ತಾನೆ. ತನ್ನ ಭಂಡಾರಗಳಿಂದ ಗಾಳಿಯನ್ನ ತರ್ತಾನೆ.+ 14  ಎಲ್ಲ ಮನುಷ್ಯರೂ ವಿವೇಚನೆ ಇಲ್ಲದೆ, ಬುದ್ಧಿ ಇಲ್ಲದೆ ನಡ್ಕೊಳ್ತಿದ್ದಾರೆ. ಕೆತ್ತಿದ ಮೂರ್ತಿಗಳನ್ನ ಮಾಡಿದ್ದಕ್ಕೆ ಲೋಹದ ಕೆಲಸಗಾರರಲ್ಲಿ ಪ್ರತಿಯೊಬ್ಬ ಅವಮಾನ ಅನುಭವಿಸಬೇಕಾಗುತ್ತೆ,+ಯಾಕಂದ್ರೆ ಅವರು ಅಚ್ಚಲ್ಲಿ ಮಾಡಿದ ಲೋಹದ ಮೂರ್ತಿಗಳೆಲ್ಲ ಬರೀ ಮೋಸ,ಅವುಗಳಿಗೆ ಜೀವನೇ* ಇಲ್ಲ.+ 15  ಆ ಮೂರ್ತಿಗಳಿಂದ ಯಾವ ಪ್ರಯೋಜನನೂ ಇಲ್ಲ, ಅವುಗಳನ್ನ ಮಾಡೋದು ಹಾಸ್ಯಾಸ್ಪದ.+ ಅವುಗಳಿಗೆ ಶಿಕ್ಷೆ ವಿಧಿಸೋ ದಿನ ಬಂದಾಗ ಅವು ನಾಶವಾಗಿ ಹೋಗುತ್ತೆ. 16  ಆದ್ರೆ ಯಾಕೋಬನ ಪಾಲು ಆಗಿರುವಾತನು ಆ ಮೂರ್ತಿಗಳ ತರ ಅಲ್ಲ,ಯಾಕಂದ್ರೆ ಪ್ರತಿಯೊಂದನ್ನ ಸೃಷ್ಟಿ ಮಾಡಿದವನು ಆತನೇ,ಇಸ್ರಾಯೇಲ್‌ ಆತನ ಕೋಲು, ಆ ಕೋಲು ಆತನ ಆಸ್ತಿ.+ ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು.+ 17  ಮುತ್ತಿಗೆಯಿಂದಾಗಿ ಕಷ್ಟಕ್ಕೆ ಒಳಗಾಗಿರೋ ಸ್ತ್ರೀಯೇ,ನೆಲದ ಮೇಲೆ ಬಿದ್ದಿರೋ ನಿನ್ನ ವಸ್ತುಗಳನ್ನ ಮೂಟೆ ಕಟ್ಕೊ. 18  ಯಾಕಂದ್ರೆ ಯೆಹೋವ ಹೀಗೆ ಹೇಳ್ತಾನೆ“ಈ ಸಾರಿ ನಾನು ಈ ದೇಶದ ಜನ್ರನ್ನ ಹೊರಗೆ ಎಸೆದುಬಿಡ್ತೀನಿ,+ಅವರು ಕಷ್ಟ ಪಡೋ ತರ ಮಾಡ್ತೀನಿ.” 19  ಅಯ್ಯೋ, ನನಗೆ ಗಾಯ ಆಗಿದೆ,*+ನನ್ನ ಗಾಯ ವಾಸಿಯಾಗಲ್ಲ. “ಇದು ನನಗೆ ಬಂದಿರೋ ಕಾಯಿಲೆ, ಇದನ್ನ ನಾನು ಸಹಿಸ್ಕೊಳ್ಳಲೇ ಬೇಕು. 20  ನನ್ನ ಡೇರೆ ನಾಶ ಆಗಿದೆ, ನನ್ನ ಡೇರೆಯ ಹಗ್ಗಗಳು ಕಿತ್ತುಹೋಗಿವೆ.+ ನನ್ನ ಮಕ್ಕಳು ನನ್ನನ್ನ ಬಿಟ್ಟುಹೋಗಿದ್ದಾರೆ, ಯಾರೂ ನನ್ನ ಜೊತೆ ಇಲ್ಲ.+ ನನ್ನ ಡೇರೆಯನ್ನ ಹರಡಿ ಎತ್ತಿನಿಲ್ಲಿಸೋಕೆ ಇಲ್ಲಿ ಯಾರೂ ಇಲ್ಲ. 21  ಕುರುಬರು ಮೂರ್ಖರ ತರ ನಡ್ಕೊಂಡಿದ್ದಾರೆ,+ಅವರು ಯೆಹೋವನ ಹತ್ರ ಸಲಹೆ ಕೇಳ್ತಿಲ್ಲ.+ ಅದಕ್ಕೆ ಅವರು ತಿಳುವಳಿಕೆಯಿಂದ* ನಡಿಲಿಲ್ಲ,ಅವರ ಎಲ್ಲ ಕುರಿಗಳು ಚದರಿಹೋಗಿವೆ” ಅಂದೆ.+ 22  ಕೇಳಿಸ್ಕೊಳ್ಳಿ! ಒಂದು ಸುದ್ದಿ ಬಂದಿದೆ! ಒಂದು ಸೈನ್ಯ ಬರ್ತಿದೆ, ಉತ್ತರದೇಶದಿಂದ ಒಂದು ದೊಡ್ಡ ಕಂಪನ ಕೇಳ್ತಿದೆ,+ಅದು ಯೆಹೂದದ ಪಟ್ಟಣಗಳನ್ನ ನಾಶ ಮಾಡಿ ಗುಳ್ಳೆನರಿಗಳು ವಾಸಿಸೋ ಸ್ಥಳವಾಗಿ ಮಾಡಿಬಿಡುತ್ತೆ.+ 23  ಯೆಹೋವನೇ, ನನಗೆ ಒಂದು ವಿಷ್ಯ ಚೆನ್ನಾಗಿ ಗೊತ್ತು, ಏನಂದ್ರೆ ಮನುಷ್ಯನಿಗೆ ಯಾವ ದಾರಿಯಲ್ಲಿ ಹೋಗಬೇಕು ಅಂತ ತಿಳ್ಕೊಳ್ಳೋ ಸಾಮರ್ಥ್ಯ ಇಲ್ಲ. ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.+ 24  ಯೆಹೋವನೇ, ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನನ್ನ ತಿದ್ದು,ಆದ್ರೆ ಕೋಪದಿಂದಲ್ಲ,+ ಯಾಕಂದ್ರೆ ಕೋಪದಿಂದ ತಿದ್ದಿದ್ರೆ ನಾನು ನಾಶ ಆಗಿಬಿಡ್ತೀನಿ.+ 25  ನಿನ್ನನ್ನ ಅಸಡ್ಡೆ ಮಾಡಿದ ಜನ್ರ ಮೇಲೆ,ನಿನ್ನ ಹೆಸ್ರಲ್ಲಿ ಬೇಡ್ಕೊಳ್ಳೋ ಕುಲಗಳ ಮೇಲೆ ನಿನ್ನ ಕೋಪ ಸುರಿ.+ ಯಾಕಂದ್ರೆ ಅವರು ಯಾಕೋಬನನ್ನ ನಾಶ ಮಾಡಿದ್ದಾರೆ,+ಹೌದು, ಅವರು ಅವನನ್ನ ಸರ್ವನಾಶ ಮಾಡೋ ಹಂತಕ್ಕೆ ಹೋಗಿದ್ದಾರೆ,+ಅವನ ದೇಶವನ್ನ ಖಾಲಿ ಮಾಡಿದ್ದಾರೆ.+

ಪಾದಟಿಪ್ಪಣಿ

ವ. 11ನ್ನ ಮೂಲತಃ ಅರಾಮಿಕ್‌ ಭಾಷೆಯಲ್ಲಿ ಬರೆಯಲಾಗಿತ್ತು.
ಅಥವಾ “ಫಲವತ್ತಾದ ಪ್ರದೇಶಕ್ಕೆ.”
ಬಹುಶಃ, “ಪ್ರವಾಹ ಬಾಗಿಲುಗಳನ್ನ.”
ಅಥವಾ “ಆವಿ.”
ಅಥವಾ “ಉಸಿರೇ.”
ಅಥವಾ “ಮೂಳೆ ಮುರಿದಿದೆ.”
ಅಕ್ಷ. “ಒಳನೋಟ.”