ಯೆರೆಮೀಯ 49:1-39

  • ಅಮ್ಮೋನಿಯರ ವಿರುದ್ಧ ಭವಿಷ್ಯವಾಣಿ (1-6)

  • ಎದೋಮಿನ ವಿರುದ್ಧ ಭವಿಷ್ಯವಾಣಿ (7-22)

    • ಎದೋಮ್‌ ಸರ್ವನಾಶ (17, 18)

  • ದಮಸ್ಕದ ವಿರುದ್ಧ ಭವಿಷ್ಯವಾಣಿ (23-27)

  • ಕೇದಾರ್‌ ಮತ್ತು ಹಾಚೋರಿನ ವಿರುದ್ಧ ಭವಿಷ್ಯವಾಣಿ (28-33)

  • ಏಲಾಮಿನ ವಿರುದ್ಧ ಭವಿಷ್ಯವಾಣಿ (34-39)

49  ಅಮ್ಮೋನಿಯರ+ ಬಗ್ಗೆ ಯೆಹೋವ ಹೀಗೆ ಹೇಳ್ತಾನೆ“ಇಸ್ರಾಯೇಲನಿಗೆ ಗಂಡುಮಕ್ಕಳು ಇಲ್ವಾ? ಅವನಿಗೆ ವಾರಸುದಾರ ಇಲ್ವಾ? ಹೀಗಿರುವಾಗ ಮಲ್ಕಾಮ*+ ಯಾಕೆ ಗಾದ್‌ ಪ್ರದೇಶವನ್ನ ವಶ ಮಾಡ್ಕೊಂಡಿದ್ದಾನೆ?+ ಅವನ ಜನ್ರು ಯಾಕೆ ಇಸ್ರಾಯೇಲನ ಪಟ್ಟಣಗಳಲ್ಲಿ ವಾಸ ಮಾಡ್ತಿದ್ದಾರೆ?”   “ಯೆಹೋವ ಹೇಳೋದು ಏನಂದ್ರೆ ‘ಹಾಗಾಗಿ ನೋಡಿ,ನಾನು ಅಮ್ಮೋನಿಯರ+ ರಬ್ಬಾ+ ಪಟ್ಟಣದ ವಿರುದ್ಧ ಯುದ್ಧದ ಕರೆ* ಕೇಳೋ ತರ ಮಾಡೋ ದಿನ ಬರುತ್ತೆ. ಆ ಪಟ್ಟಣ ಹಾಳುದಿಬ್ಬ ಆಗುತ್ತೆ,ಅದಕ್ಕೆ ಸೇರಿದ* ಊರುಗಳಿಗೆ ಬೆಂಕಿ ಹತ್ಕೊಳ್ಳುತ್ತೆ.’ ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲನ ದೇಶವನ್ನ ಯಾರು ಕಿತ್ಕೊಂಡಿದ್ದಾರೋ ಅವ್ರಿಂದ ಇಸ್ರಾಯೇಲ ಅವ್ರ ದೇಶವನ್ನ ಕಿತ್ಕೊಳ್ತಾನೆ.’+   ‘ಹೆಷ್ಬೋನೇ ಗೋಳಾಡು, ಯಾಕಂದ್ರೆ ಆಯಿ ಪಟ್ಟಣ ನಾಶ ಆಗಿದೆ! ರಬ್ಬಾಗೆ ಸೇರಿದ ಊರುಗಳೇ, ಕಿರಿಚಾಡಿ. ಗೋಣಿ ಸುತ್ಕೊಳ್ಳಿ,ಕಲ್ಲಿನ ಕೊಟ್ಟಿಗೆಗಳ* ಮಧ್ಯ ಅಲೆದಾಡ್ತಾ ಗೋಳಾಡಿ,ಯಾಕಂದ್ರೆ ಮಲ್ಕಾಮ ಕೈದಿಯಾಗಿ ಹೋಗ್ತಾನೆ,ಅವನ ಜೊತೆ ಅವನ ಪುರೋಹಿತ ಅವನ ಅಧಿಕಾರಿಗಳು ಕೈದಿಗಳಾಗಿ ಹೋಗ್ತಾರೆ.+   ನಂಬಿಕೆ ದ್ರೋಹ ಮಾಡಿದ ಮಗಳೇ, ನಿನ್ನ ಕಣಿವೆಗಳ ಬಗ್ಗೆ,ನೀರು ಹರಿಯೋ ನಿನ್ನ ಬಯಲಿನ ಬಗ್ಗೆ ಯಾಕೆ ಕೊಚ್ಕೊಳ್ತೀಯ? ನೀನು ನಿನ್ನ ಸಿರಿಸಂಪತ್ತನ್ನೇ ನಂಬಿದ್ದೀಯ,“ನನ್ನ ಮೇಲೆ ದಾಳಿ ಮಾಡೋಷ್ಟು ಗುಂಡಿಗೆ ಯಾರಿಗಿದೆ?” ಅಂತ ಹೇಳ್ತಾ ಇದ್ದೀಯ.’”   “ವಿಶ್ವದ ರಾಜನು ಸೈನ್ಯಗಳ ದೇವರು ಆದ ಯೆಹೋವ ಹೇಳೋದು ಏನಂದ್ರೆ‘ನಿನ್ನ ಸುತ್ತಮುತ್ತ ಇರೋ ಎಲ್ರಿಂದ ನಾನು ನಿನ್ನ ಮೇಲೆ ದೊಡ್ಡ ನಾಶ ತರ್ತಿನಿ. ಆಗ ನೀನು ಎಲ್ಲ ದಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಓಡ್ತೀಯ. ಓಡಿಹೋದವ್ರನ್ನ ಯಾರೂ ಒಟ್ಟುಗೂಡಿಸಲ್ಲ.’”   “‘ಆದ್ರೆ ಕೈದಿಗಳಾಗಿ ಹೋದ ಅಮ್ಮೋನಿಯರನ್ನ ನಾನು ಆಮೇಲೆ ಒಟ್ಟುಗೂಡಿಸ್ತೀನಿ’ ಅಂತ ಯೆಹೋವ ಹೇಳ್ತಾನೆ.”  ಎದೋಮಿನ ಬಗ್ಗೆ ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ“ತೇಮಾನಲ್ಲಿ+ ಈಗ ಸ್ವಲ್ಪನೂ ವಿವೇಕ ಇಲ್ವಾ? ತಿಳುವಳಿಕೆ ಇರೋರಿಗೆ ಒಳ್ಳೇ ಸಲಹೆ ಕೊಡೋಕೆ ಸಾಧ್ಯ ಇಲ್ವಾ? ಅವ್ರಲ್ಲಿದ್ದ ವಿವೇಕ ಎಲ್ಲಾ ಹಾಳಾಗಿ ಹೋಯ್ತಾ?   ದೆದಾನಿನ+ ಜನ್ರೇ, ಬೆನ್ನು ಹಾಕಿ ಓಡಿಹೋಗಿ! ತಗ್ಗಾದ ಜಾಗಗಳಿಗೆ ಹೋಗಿ ವಾಸ ಮಾಡಿ! ಯಾಕಂದ್ರೆ ನಾನು ಏಸಾವನಿಗೆ ಶಿಕ್ಷೆ ಕೊಡೋ ಸಮಯ ಬಂದಾಗಅವನನ್ನ ನಾಶ ಮಾಡ್ತೀನಿ.   ದ್ರಾಕ್ಷಿ ಹಣ್ಣುಗಳನ್ನ ಕೀಳೋರು ತೋಟದ ಒಳಗೆ ಬಂದ್ರೆ ಬೇರೆಯವರಿಗಾಗಿ ಸ್ವಲ್ಪವನ್ನಾದ್ರೂ ಬಿಟ್ಟುಹೋಗ್ತಾರೆ ಅಲ್ವಾ? ರಾತ್ರಿಯಲ್ಲಿ ಕಳ್ಳರು ಬಂದ್ರೆ ಬೇಕಾದದ್ದನ್ನ ಮಾತ್ರ ದೋಚ್ಕೊಂಡು ಹೋಗ್ತಾರಲ್ವಾ?+ 10  ಆದ್ರೆ ಏಸಾವನ ಹತ್ರ ಇರೋದನ್ನೆಲ್ಲ ಕಿತ್ಕೊಳ್ತೀನಿ. ಅವನು ಅಡಗಿಕೊಳ್ಳೋ ಜಾಗಗಳನ್ನೆಲ್ಲ ಬಟ್ಟಬಯಲು ಮಾಡ್ತೀನಿ,ಆಗ ಅವನಿಗೆ ಬಚ್ಚಿಟ್ಕೊಳ್ಳೋಕೆ ಆಗೋದೇ ಇಲ್ಲ. ಅವನ ಮಕ್ಕಳು, ಅಣ್ಣತಮ್ಮಂದಿರು, ಅಕ್ಕಪಕ್ಕದ ಮನೆಯವರು ಎಲ್ರೂ ನಾಶ ಆಗ್ತಾರೆ.+ ಅವನು ಕೂಡ ಸರ್ವನಾಶ ಆಗಿಹೋಗ್ತಾನೆ.+ 11  ನಿನ್ನ ಹತ್ರ ಇರೋ ಅನಾಥರನ್ನ* ಬಿಟ್ಟುಬಿಡು,ನಾನು ಅವ್ರನ್ನ ಉಳಿಸ್ತೀನಿ,ನಿನ್ನ ವಿಧವೆಯರು ನನ್ನ ಮೇಲೆ ನಂಬಿಕೆ ಇಡ್ತಾರೆ.” 12  ಯೆಹೋವ ಹೀಗೆ ಹೇಳ್ತಾನೆ “ನೋಡು, ಯಾರಿಗೆ ಶಿಕ್ಷೆ ವಿಧಿಸಲಿಲ್ವೋ ಅವ್ರೇ ಪಾತ್ರೆಯಲ್ಲಿ ಇರೋದನ್ನ ಕುಡಿಬೇಕಾಗಿರುವಾಗ ನಿನಗೆ ಶಿಕ್ಷೆನೇ ಸಿಗದಿರೋಕೆ ಹೇಗೆ ಸಾಧ್ಯ? ನೀನು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ, ಪಾತ್ರೆಯಲ್ಲಿ ಇರೋದನ್ನ ನೀನು ಪೂರ್ತಿ ಕುಡಿಲೇಬೇಕಾಗುತ್ತೆ.”+ 13  ಯೆಹೋವ ಹೇಳೋದು ಏನಂದ್ರೆ “ಬೊಚ್ರಕ್ಕೆ ಎಂಥ ಗತಿ ಬರುತ್ತೆ ಅಂದ್ರೆ ಅದನ್ನ ನೋಡೋರಿಗೆ ಭಯ ಆಗುತ್ತೆ.+ ಅದು ಅವಮಾನಕ್ಕೆ, ಶಾಪಕ್ಕೆ, ನಾಶಕ್ಕೆ ತುತ್ತಾಗುತ್ತೆ. ಅದ್ರ ಎಲ್ಲ ಪಟ್ಟಣಗಳು ಯಾವಾಗ್ಲೂ ಹಾಳು ಬಿದ್ದಿರುತ್ತೆ ಅಂತ ನಾನು ನನ್ನ ಮೇಲೆ ಆಣೆಯಿಟ್ಟು ಹೇಳಿದ್ದೀನಿ.”+ 14  ಯೆಹೋವ ಹೇಳಿದ ಸುದ್ದಿಯನ್ನ ಕೇಳಿಸ್ಕೊಂಡಿದ್ದೀನಿ,ಆತನು ದೇಶಗಳ ಮಧ್ಯ ಒಬ್ಬ ಪ್ರತಿನಿಧಿಯನ್ನ ಕಳಿಸಿದ್ದಾನೆ. “ನೀವೆಲ್ರೂ ಒಟ್ಟಾಗಿ ಎದೋಮ್‌ ಮೇಲೆ ದಾಳಿ ಮಾಡಿ ಬನ್ನಿ,ಯುದ್ಧ ಮಾಡೋಕೆ ತಯಾರಾಗಿ” ಅಂತ ಅವನು ಹೇಳ್ತಿದ್ದಾನೆ.+ 15  “ಯಾಕಂದ್ರೆ ನೋಡು, ನಾನು ನಿನ್ನನ್ನ ಬೇರೆಲ್ಲ ದೇಶಗಳಿಗಿಂತ ಕೀಳಾಗಿ ಮಾಡಿದ್ದೀನಿ,ಎಲ್ರೂ ನಿನ್ನನ್ನ ಕೀಳಾಗಿ ನೋಡೋ ತರ ಮಾಡ್ತೀನಿ.+ 16  ನೀನು ಜನ್ರಲ್ಲಿ ಹುಟ್ಟಿಸಿದ ನಡುಕ,ನಿನ್ನ ಹೃದಯದ ಸೊಕ್ಕು ನಿನಗೆ ಮೋಸ ಮಾಡಿದೆ. ಅತಿ ಎತ್ರವಾದ ಬೆಟ್ಟದಲ್ಲಿ,ಬಂಡೆಯ ಸಂದುಗಳಲ್ಲಿ ನೀನು ವಾಸ ಮಾಡ್ತಾ ಇದ್ದೀಯ,ಹದ್ದಿನ ತರ ಎತ್ರದಲ್ಲಿ ಗೂಡು ಕಟ್ಕೊಂಡಿದ್ರೂ ನಿನ್ನನ್ನ ಅಲ್ಲಿಂದ ತಳ್ಳಿಬಿಡ್ತೀನಿ” ಅಂತ ಯೆಹೋವ ಹೇಳ್ತಾನೆ. 17  “ಎದೋಮಿಗೆ ಎಂಥಾ ಗತಿ ಬರುತ್ತೆ ಅಂದ್ರೆ ಅದನ್ನ ನೋಡಿದವ್ರಿಗೆ ತುಂಬ ಭಯ ಆಗುತ್ತೆ.+ ಅಲ್ಲಿಂದ ದಾಟಿ ಹೋಗೋ ಜನ್ರೆಲ್ಲ ಅದನ್ನ ನೋಡಿ ಬೆಚ್ಚಿ ಬೀಳ್ತಾರೆ. ಅದಕ್ಕೆ ಬಂದಿರೋ ಕಾಯಿಲೆಗಳನ್ನ ನೋಡಿ ಸೀಟಿ ಹೊಡೆದು ಅವಮಾನ ಮಾಡ್ತಾರೆ. 18  ಸೊದೋಮ್‌, ಗೊಮೋರ, ಅದ್ರ ಸುತ್ತಮುತ್ತ ಇರೋ ಊರುಗಳು ನಾಶ ಆದ ಹಾಗೇ ಎದೋಮ್‌ ನಾಶ ಆಗುತ್ತೆ”+ ಅಂತ ಯೆಹೋವ ಹೇಳ್ತಾನೆ. ಆತನು ಹೇಳೋದು ಏನಂದ್ರೆ “ಅಲ್ಲಿ ಯಾರೂ ವಾಸ ಮಾಡಲ್ಲ, ಯಾವ ಮನುಷ್ಯನೂ ಇರಲ್ಲ.+ 19  ನೋಡು, ಯೋರ್ದನಿನ ಸುತ್ತಮುತ್ತ ಇರೋ ದಟ್ಟ ಪೊದೆಗಳಿಂದ ಸಿಂಹ ಬರೋ ತರ+ ಒಬ್ಬ ವ್ಯಕ್ತಿ ಬಂದು ಎದೋಮಿನ ಸುರಕ್ಷಿತ ಹುಲ್ಲುಗಾವಲುಗಳ ಮೇಲೆ ದಾಳಿ ಮಾಡ್ತಾನೆ. ಅವರು* ಒಂದೇ ಕ್ಷಣದಲ್ಲಿ ತಮ್ಮ ದೇಶ ಬಿಟ್ಟು ಓಡಿಹೋಗೋ ತರ ಮಾಡ್ತೀನಿ. ನಾನು ಆರಿಸ್ಕೊಂಡಿರೋ ಒಬ್ಬ ನಾಯಕನನ್ನ ಅದ್ರ ಮೇಲೆ ಇಡ್ತೀನಿ. ನನಗೆ ಸರಿಸಾಟಿ ಯಾರಿದ್ದಾರೆ? ನನಗೆ ಸವಾಲು ಹಾಕೋಷ್ಟು ಧೈರ್ಯ ಯಾರಿಗಿದೆ? ನನ್ನ ಮುಂದೆ ನಿಲ್ಲೋಕೆ ಯಾವ ಕುರುಬನಿಗೆ ಆಗುತ್ತೆ?+ 20  ಹಾಗಾಗಿ ಜನ್ರೇ, ಎದೋಮ್‌ ಬಗ್ಗೆ ಯೆಹೋವ ಯಾವ ತೀರ್ಮಾನ ತಗೊಂಡಿದ್ದಾನೆ, ತೇಮಾನಿನ+ ಜನ್ರ ಬಗ್ಗೆ ಏನು ಯೋಚ್ನೆ ಮಾಡಿದ್ದಾನೆ ಅಂತ ಕೇಳಿಸ್ಕೊಳ್ಳಿ: ಹಿಂಡಲ್ಲಿರೋ ಕುರಿಮರಿಗಳನ್ನ ಖಂಡಿತ ಎಳ್ಕೊಂಡು ಹೋಗ್ತಾರೆ. ಅಲ್ಲಿನ ಜನ್ರಿಂದಾಗಿ ಅವರು ವಾಸ ಮಾಡೋ ಜಾಗ ಹಾಳುಬೀಳುತ್ತೆ.+ 21  ಅವ್ರು ಬೀಳೋ ಶಬ್ದಕ್ಕೆ ಭೂಮಿ ನಡುಗುತ್ತೆ. ಕೂಗಾಟ ಕೇಳಿಸುತ್ತೆ! ಕೆಂಪು ಸಮುದ್ರದ ತನಕ ಆ ಸದ್ದು ಕೇಳಿಸಿದೆ.+ 22  ಹದ್ದು ಮೇಲಕ್ಕೆ ಹಾರ್ತಾ ಹಠಾತ್ತನೆ ತನ್ನ ಬೇಟೆ ಮೇಲೆ ಬೀಳೋ ತರ+ಶತ್ರು ರೆಕ್ಕೆ ಚಾಚಿ ಬೊಚ್ರದ ಮೇಲೆ ದಾಳಿ ಮಾಡ್ತಾನೆ.+ ಹೆರಿಗೆ ಸಮಯದಲ್ಲಿ ತಾಯಿ ಅನುಭವಿಸೋ ನೋವಿನ ತರಎದೋಮಿನ ವೀರ ಸೈನಿಕರು ಆ ದಿನದಲ್ಲಿ ನೋವು ಅನುಭವಿಸ್ತಾರೆ.” 23  ದಮಸ್ಕದ+ ಬಗ್ಗೆ ಹೇಳಿರೋ ಸಂದೇಶ ಏನಂದ್ರೆ,“ಹಾಮಾತಿಗೆ,+ ಅರ್ಪಾದಿಗೆ ನಾಚಿಕೆ ಅವಮಾನ ಆಗುತ್ತೆ,ಯಾಕಂದ್ರೆ ಅವುಗಳಿಗೆ ಒಂದು ಕೆಟ್ಟ ಸುದ್ದಿ ಸಿಕ್ಕಿದೆ. ಅವು ಹೆದ್ರಿ ಕರಗಿ ಹೋಗಿವೆ. ಸಮುದ್ರ ಅಲ್ಲೋಲ ಕಲ್ಲೋಲ ಆಗಿದೆ, ಅದನ್ನ ಶಾಂತ ಮಾಡೋಕೆ ಆಗೋದೇ ಇಲ್ಲ. 24  ದಮಸ್ಕ ಧೈರ್ಯ ಕಳ್ಕೊಂಡಿದೆ. ಅದಕ್ಕೆ ಓಡಿ ಹೋಗೋ ಆಸೆ ಇದೆ, ಆದ್ರೆ ಭಯದಲ್ಲಿ ಕೈಕಾಲು ಓಡ್ತಿಲ್ಲ. ಹೆರಿಗೆ ಆಗ್ತಿರೋ ಹೆಂಗಸಿನ ತರಅದು ಕಷ್ಟದಲ್ಲಿ ನರಳ್ತಿದೆ. 25  ಯಾವಾಗ್ಲೂ ಹೊಗಳ್ತಾ ಇದ್ದ ಸಂತೋಷದ ಪಟ್ಟಣವನ್ನಜನ್ರು ಯಾಕೆ ಇನ್ನೂ ಬಿಟ್ಟುಹೋಗಿಲ್ಲ? 26  ಆ ದಿನ ಅವಳ ಯುವಕರು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಸತ್ತು ಬೀಳ್ತಾರೆ,ಸೈನಿಕರೆಲ್ಲ ನಾಶ ಆಗ್ತಾರೆ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಾನೆ. 27  “ನಾನು ದಮಸ್ಕದ ಗೋಡೆಗೆ ಬೆಂಕಿ ಹಚ್ತೀನಿ,ಬೆನ್ಹದದನ ಭದ್ರ ಕೋಟೆಗಳನ್ನ ಸುಟ್ಟುಬಿಡ್ತೀನಿ.”+ 28  ಬಾಬೆಲಿನ ರಾಜ ನೆಬೂಕದ್ನೆಚ್ಚರ* ಸೋಲಿಸಿದ ಕೇದಾರ್‌,+ ಹಾಚೋರಿನ ರಾಜ್ಯಗಳ ಬಗ್ಗೆ ಯೆಹೋವ ಹೇಳೋದು ಏನಂದ್ರೆ “ಕೇದಾರಿಗೆ ಹೋಗು,ಪೂರ್ವದಲ್ಲಿ ವಾಸ ಮಾಡೋರನ್ನ ನಾಶಮಾಡು. 29  ಅವ್ರ ಡೇರೆಗಳನ್ನ ಕುರಿಗಳನ್ನ ಅಪಹರಿಸ್ತಾರೆ,ಅವ್ರ ಡೇರೆ ಬಟ್ಟೆಗಳನ್ನ ಎಲ್ಲ ವಸ್ತುಗಳನ್ನ ಎತ್ಕೊಂಡು ಹೋಗ್ತಾರೆ. ಅವ್ರ ಒಂಟೆಗಳನ್ನ ಹಿಡ್ಕೊಂಡು ಹೋಗ್ತಾರೆ,‘ಎಲ್ಲಿ ನೋಡಿದ್ರೂ ಪರಿಸ್ಥಿತಿ ಭಯಾನಕ!’ ಅಂತ ಅವರು ಕೇದಾರಿನ ಜನ್ರಿಗೆ ಕೂಗಿ ಹೇಳ್ತಾರೆ.” 30  “ಹಾಚೋರಿನ ಜನ್ರೇ, ದೂರ ಓಡಿಹೋಗಿ,ತಗ್ಗು ಪ್ರದೇಶಗಳಿಗೆ ಹೋಗಿ ವಾಸ ಮಾಡಿ. ಯಾಕಂದ್ರೆ ಬಾಬೆಲಿನ ರಾಜ ನೆಬೂಕದ್ನೆಚ್ಚರ* ನಿಮ್ಮ ಮೇಲೆ ಯುದ್ಧ ಮಾಡೋಕೆ ಉಪಾಯ ಮಾಡಿದ್ದಾನೆ,ನಿಮ್ಮ ವಿರುದ್ಧ ಸಂಚು ಮಾಡಿದ್ದಾನೆ” ಅಂತ ಯೆಹೋವ ಹೇಳ್ತಾನೆ. 31  “ಏಳಿ, ನೆಮ್ಮದಿಯಿಂದ ಸುರಕ್ಷಿತವಾಗಿ ವಾಸ ಮಾಡ್ತಿರೋಆ ದೇಶದ ಮೇಲೆ ದಾಳಿ ಮಾಡಿ!” ಅಂತ ಯೆಹೋವ ಹೇಳ್ತಾನೆ. “ಅದಕ್ಕೆ ಬಾಗಿಲು ಕಂಬಿ ಏನೂ ಇಲ್ಲ, ಅವರು ಒಂಟಿಯಾಗಿ ವಾಸ ಮಾಡ್ತಿದ್ದಾರೆ. 32  ಅವ್ರ ಒಂಟೆಗಳನ್ನ ಲೂಟಿ ಮಾಡ್ತಾರೆ,ಅವ್ರ ಹತ್ರ ಇರೋ ಸಾಕುಪ್ರಾಣಿಗಳ ದೊಡ್ಡ ದೊಡ್ಡ ಹಿಂಡನ್ನೇ ಲೂಟಿ ಮಾಡ್ಕೊಂಡು ಹೋಗ್ತಾರೆ. ಹಣೆಯ ಬದಿಗಳನ್ನ ಬೋಳಿಸ್ಕೊಂಡವರನ್ನ+ನಾನು ಗಾಳಿಗೆ ತೂರಿ ಎಲ್ಲ ಕಡೆ ಚದರಿಸಿಬಿಡ್ತೀನಿ,ಎಲ್ಲ ದಿಕ್ಕುಗಳಿಂದ ಅವ್ರ ಮೇಲೆ ಕಷ್ಟ ತರ್ತಿನಿ” ಅಂತ ಯೆಹೋವ ಹೇಳ್ತಾನೆ. 33  “ಹಾಚೋರ್‌ ಪಟ್ಟಣ ಗುಳ್ಳೆನರಿಗಳು ವಾಸ ಮಾಡೋ ಜಾಗ ಆಗುತ್ತೆ,ಅದು ಸದಾಕಾಲ ಹಾಳುಬೀಳುತ್ತೆ. ಅಲ್ಲಿ ಯಾರೂ ವಾಸ ಮಾಡಲ್ಲ,ಯಾವ ಮನುಷ್ಯನೂ ಇರಲ್ಲ.” 34  ಯೆಹೂದದ ರಾಜನಾದ ಚಿದ್ಕೀಯನ+ ಆಳ್ವಿಕೆ ಶುರು ಆದಾಗ ಯೆಹೋವ ಪ್ರವಾದಿ ಯೆರೆಮೀಯನಿಗೆ ಏಲಾಮಿನ+ ಬಗ್ಗೆ ಹೀಗೆ ಹೇಳಿದನು 35  “ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ ‘ಏಲಾಮಿನ+ ಬಲ ತುಂಬಿರೋ ಬಿಲ್ಲನ್ನ ಮುರಿತೀನಿ. 36  ನಾನು ಏಲಾಮಿನ ಮೇಲೆ ಆಕಾಶದ ನಾಲ್ಕು ಮೂಲೆಯಿಂದ ನಾಲ್ಕು ಗಾಳಿ ಬೀಸೋ ತರ ಮಾಡ್ತೀನಿ. ನಾನು ಅವ್ರನ್ನ ಆ ಗಾಳಿಗೆ ತೂರಿ ಬಿಡ್ತೀನಿ. ಅವರು ಎಲ್ಲ ದೇಶಗಳಲ್ಲಿ ಚದರಿ ಹೋಗ್ತಾರೆ. ಎಷ್ಟರ ಮಟ್ಟಿಗಂದ್ರೆ ಅವರು ಚದರಿ ಹೋಗಿರದ ದೇಶ ಒಂದು ಕೂಡ ಇರಲ್ಲ.’” 37  ಯೆಹೋವ ಹೇಳೋದು ಏನಂದ್ರೆ “ಏಲಾಮ್ಯರು ಅವ್ರ ಶತ್ರುಗಳ ಮುಂದೆ, ಅವ್ರ ಪ್ರಾಣ ತೆಗಿಯೋಕೆ ಕಾಯ್ತಾ ಇರೋರ ಮುಂದೆ ಹೆದ್ರಿ ನಿನಗೆ ದಿಕ್ಕೇ ಕಾಣದ ಹಾಗೆ ಮಾಡ್ತೀನಿ. ನಾನು ಅವ್ರ ಮೇಲೆ ಕಷ್ಟ ತರ್ತಿನಿ, ನನ್ನ ಕೋಪಾಗ್ನಿ ಸುರಿತೀನಿ. ಅವ್ರನ್ನ ಅಟ್ಟಿಸ್ಕೊಂಡು ಹೋಗಿ ಪೂರ್ತಿ ನಾಶಮಾಡೋಕೆ ಶತ್ರುಗಳನ್ನ ಕಳಿಸ್ತೀನಿ.” 38  ಯೆಹೋವ ಹೇಳೋದು ಏನಂದ್ರೆ “ನಾನು ಏಲಾಮಲ್ಲಿ+ ನನ್ನ ಸಿಂಹಾಸನ ಇಡ್ತೀನಿ, ಏಲಾಮಿನ ರಾಜನನ್ನ ಅಧಿಕಾರಿಗಳನ್ನ ನಾಶಮಾಡ್ತೀನಿ.” 39  ಯೆಹೋವ ಹೇಳೋದು ಏನಂದ್ರೆ “ಆದ್ರೆ ಕೈದಿಯಾಗಿ ಹೋಗಿರೋ ಏಲಾಮಿನ ಜನ್ರನ್ನ ಕೊನೆ ದಿನಗಳಲ್ಲಿ ಒಟ್ಟುಗೂಡಿಸ್ತೀನಿ.”

ಪಾದಟಿಪ್ಪಣಿ

ಬಹುಶಃ “ಯುದ್ಧ ನಡಿವಾಗ ಕೇಳೋ ಸದ್ದು.”
ಅಥವಾ “ಸುತ್ತಮುತ್ತ ಇರೋ.”
ಅಥವಾ “ಕುರಿಗಳ ಕೊಟ್ಟಿಗೆಗಳ.”
ಅಥವಾ “ತಂದೆ ಇಲ್ಲದ ಮಕ್ಕಳನ್ನ.”
ಎದೋಮಿನ ಜನ್ರಿಗೆ ಸೂಚಿಸ್ತಾ ಇರಬಹುದು.
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.