ಯೆರೆಮೀಯ 6:1-30

  • ಬೇಗ ಯೆರೂಸಲೇಮಿನ ಮೇಲೆ ದಾಳಿ (1-9)

  • ಯೆರೂಸಲೇಮಿನ ಮೇಲೆ ಯೆಹೋವನ ಕೋಪ (10-21)

    • ಶಾಂತಿ ಇಲ್ಲದಿದ್ರೂ “ಶಾಂತಿ ಇದೆ” ಅಂತಾರೆ (14)

  • ಉತ್ತರದಿಂದ ಕ್ರೂರ ದಾಳಿ (22-26)

  • ಯೆರೆಮೀಯ ಅದಿರು ಶುದ್ಧೀಕರಿಸುವವನ ತರ (27-30)

6  ಬೆನ್ಯಾಮೀನನ ವಂಶದವರೇ, ಯೆರೂಸಲೇಮನ್ನ ಬಿಟ್ಟು ಸುರಕ್ಷಿತವಾದ ಜಾಗಕ್ಕೆ ಓಡಿಹೋಗಿ. ತೆಕೋವದಲ್ಲಿ+ ಕೊಂಬೂದಿ,+ಬೇತ್‌-ಹಕ್ಕೆರೆಮಲ್ಲಿ ಬೆಂಕಿ ಉರಿಸಿ ಸೂಚನೆ ಕೊಡಿ,ಯಾಕಂದ್ರೆ ಉತ್ತರದ ಕಡೆಯಿಂದ ಒಂದು ಕಷ್ಟ ಬರ್ತಿದೆ,ಒಂದು ದೊಡ್ಡ ಕಷ್ಟ ವೇಗವಾಗಿ ಬರ್ತಿದೆ.+   ಚೀಯೋನ್‌ ಅನ್ನೋ ಹೆಂಗಸು ಸುಂದರ, ಸುಕೋಮಲ ಸ್ತ್ರೀ ತರ ಇದ್ದಾಳೆ.+   ಕುರುಬರು ತಮ್ಮ ದೊಡ್ಡ ದೊಡ್ಡ ಕುರಿ ಹಿಂಡುಗಳ ಜೊತೆ ಬರ್ತಾರೆ. ಅವರು ಅವಳ ಸುತ್ತ ಡೇರೆ ಹಾಕೊಳ್ತಾರೆ,+ಪ್ರತಿಯೊಬ್ಬ ತನ್ನ ತನ್ನ ಕುರಿಗಳನ್ನ ಮೇಯಿಸ್ತಾನೆ.+   “ಅವಳ ವಿರುದ್ಧ ಯುದ್ಧ ಮಾಡೋಕೆ ತಯಾರಾಗಿ,ಎದ್ದೇಳಿ, ಮಧ್ಯಾಹ್ನ ಅವಳ ಮೇಲೆ ದಾಳಿ ಮಾಡೋಣ!” “ಅಯ್ಯೋ, ಕತ್ತಲಾಗ್ತಿದೆ,ಸಂಜೆಯ ನೆರಳುಗಳು ಉದ್ದ ಆಗ್ತಿವೆ!”   “ಎದ್ದೇಳಿ, ರಾತ್ರಿ ಅವಳ ಮೇಲೆ ದಾಳಿ ಮಾಡೋಣ,ಅವಳ ಭದ್ರ ಕೋಟೆಗಳನ್ನ ನಾಶಮಾಡೋಣ.”+   ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ“ಮರಗಳನ್ನ ಕಡಿರಿ, ಯೆರೂಸಲೇಮ್‌ ಮೇಲೆ ದಾಳಿ ಮಾಡೋಕೆ ಇಳಿಜಾರು ದಿಬ್ಬ ಕಟ್ಟಿ.+ ದಂಡಿಸಲೇಬೇಕಾದ ಪಟ್ಟಣ ಅದು. ಅದ್ರಲ್ಲಿ ಬರೀ ದಬ್ಬಾಳಿಕೆ ನಡಿತಿದೆ.+   ನೀರುಗುಂಡೀಲಿ ತಂಪಾದ* ನೀರು ಇರೋ ತರಆ ಪಟ್ಟಣದಲ್ಲಿ ಕೆಟ್ಟತನ ಇದ್ದೇ ಇದೆ. ಹಿಂಸೆ, ಕೊಲೆಯಿಂದಾಗಿ ಜನ ಅರಚ್ಕೊಳ್ಳೋದು ಕೇಳ್ತಿದೆ,+ಜನ ಕಾಯಿಲೆ-ಕಸಾಲೆಯಿಂದ ನರಳೋದು ಯಾವಾಗ್ಲೂ ಕಣ್ಣಿಗೆ ಬೀಳ್ತಿದೆ.   ಯೆರೂಸಲೇಮೇ, ಈ ಎಚ್ಚರಿಕೆ ಕೇಳು,ಇಲ್ಲದಿದ್ರೆ ನಿನ್ನನ್ನ ನೋಡಿ ಅಸಹ್ಯಪಟ್ಟು ದೂರ ಹೋಗ್ತೀನಿ,+ನೀನು ಹಾಳುಬೀಳ್ತೀಯ, ಯಾರು ವಾಸಮಾಡದ ಹಾಗೆ ಮಾಡ್ತೀನಿ.”+   ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ“ದ್ರಾಕ್ಷಿಬಳ್ಳಿಯಲ್ಲಿ ಕೊನೆಗೆ ಉಳಿದ ದ್ರಾಕ್ಷಿಗಳನ್ನ ಕೂಡಿಸ್ಕೊಂಡು ಹೋಗೋ ತರ ಶತ್ರುಗಳು ಇಸ್ರಾಯೇಲ್ಯರಲ್ಲಿ ಉಳಿದವ್ರನ್ನ ಕರ್ಕೊಂಡು ಹೋಗ್ತಾರೆ. ದ್ರಾಕ್ಷಿಬಳ್ಳಿಗಳಿಂದ ದ್ರಾಕ್ಷಿಗಳನ್ನ ಕೂಡಿಸ್ಕೊಳ್ಳೋ ತರ ನೀನು ಮತ್ತೆ ಅವ್ರನ್ನ ಕೂಡಿಸ್ಕೊ.” 10  “ನಾನು ಯಾರ ಜೊತೆ ಮಾತಾಡಬೇಕು? ಯಾರಿಗೆ ಎಚ್ಚರಿಕೆ ಕೊಡಬೇಕು? ಯಾರು ತಾನೇ ಕೇಳ್ತಾರೆ? ನೋಡು! ಅವ್ರ ಕಿವಿಗಳು ಮುಚ್ಚಿಹೋಗಿವೆ, ಹಾಗಾಗಿ ಗಮನಕೊಡೋಕೆ ಅವ್ರಿಗೆ ಆಗ್ತಿಲ್ಲ.+ ನೋಡು! ಯೆಹೋವನ ಮಾತುಗಳನ್ನ ಅವರು ಕೀಳಾಗಿ ನೋಡ್ತಾರೆ,+ಅವುಗಳಂದ್ರೆ ಅವ್ರಿಗೆ ಇಷ್ಟಾನೇ ಇಲ್ಲ. 11  ಹಾಗಾಗಿ ಯೆಹೋವನ ಕೋಪ ನನ್ನೊಳಗೆ ಧಗಧಗನೆ ಉರಿತಿದೆ,ಅದನ್ನ ಅದುಮಿಟ್ಟೂ ಇಟ್ಟೂ ನನಗೆ ಸಾಕಾಯ್ತು.”+ “ಅದನ್ನ ಬೀದಿಯಲ್ಲಿರೋ ಮಕ್ಕಳ ಮೇಲೆ,ಗುಂಪು ಕಟ್ಕೊಂಡಿರೋ ಯುವಕರ ಮೇಲೆ ಸುರಿದುಬಿಡು.+ ಗಂಡನ ಜೊತೆ ಹೆಂಡತಿಯನ್ನ, ವಯಸ್ಸಾದವರ ಜೊತೆ ಇನ್ನೂ ಜಾಸ್ತಿ ವಯಸ್ಸಾದವರನ್ನಹೀಗೆ ಎಲ್ರನ್ನ ಹಿಡ್ಕೊಂಡು ಹೋಗ್ತಾರೆ.+ 12  ಅವ್ರ ಮನೆಗಳನ್ನ ಅಷ್ಟೇ ಅಲ್ಲಅವ್ರ ಹೊಲಗಳನ್ನ, ಹೆಂಡತಿಯರನ್ನ ಬೇರೆಯವ್ರಿಗೆ ಕೊಟ್ಟುಬಿಡ್ತಾರೆ.+ ನಾನು ಈ ದೇಶದ ಜನ್ರಿಗೆ ಶಿಕ್ಷೆ ಕೊಡ್ತೀನಿ” ಅಂತ ಯೆಹೋವ ಹೇಳ್ತಾನೆ. 13  “ಯಾಕಂದ್ರೆ ಚಿಕ್ಕವರಿಂದ ದೊಡ್ಡವರ ತನಕ ಎಲ್ರೂ ಮೋಸ ಮಾಡಿ ಲಾಭ ಗಳಿಸ್ತಾರೆ,+ಪ್ರವಾದಿಯಿಂದ ಪುರೋಹಿತನ ತನಕ ಎಲ್ರೂ ಮೋಸ ಮಾಡ್ತಾರೆ.+ 14  ಶಾಂತಿ ಇಲ್ಲದಿದ್ರೂ ಅವರು,‘ಶಾಂತಿ ಇದೆ! ಶಾಂತಿ ಇದೆ!’ ಅಂತ ಹೇಳ್ತಾ+ನನ್ನ ಜನ್ರ ಗಾಯವನ್ನ* ಮೇಲೆ ಮೇಲೆ ವಾಸಿಮಾಡೋಕೆ ಪ್ರಯತ್ನ ಮಾಡ್ತಾರೆ. 15  ಕೆಟ್ಟ ಕೆಲಸಗಳನ್ನ ಮಾಡಿದ್ದಕ್ಕೆ ಅವ್ರಿಗೆ ಸ್ವಲ್ಪ ಆದ್ರೂ ನಾಚಿಕೆ ಇದ್ಯಾ? ಅವ್ರಿಗೆ ಸ್ವಲ್ಪನೂ ನಾಚಿಕೆ ಇಲ್ಲ! ನಾಚಿಕೆ ಅಂದ್ರೆ ಏನಂತ ಅವ್ರಿಗೆ ಗೊತ್ತೇ ಇಲ್ಲ!+ ಹಾಗಾಗಿ ಈಗಾಗಲೇ ಬಿದ್ದುಹೋದವರ ಹಾಗೆ ಅವರೂ ಬಿದ್ದುಹೋಗ್ತಾರೆ,ನಾನು ಅವ್ರಿಗೆ ಶಿಕ್ಷೆ ಕೊಡುವಾಗ ಅವರು ಎಡವಿಬಿಳ್ತಾರೆ” ಅಂತ ಯೆಹೋವ ಹೇಳ್ತಾನೆ. 16  “ದಾರಿಗಳು ಕೂಡೋ ಜಾಗದಲ್ಲಿ ನಿಂತು ನೋಡಿ,ಹಳೇ ದಾರಿಗಳು ಯಾವುದಂತ ವಿಚಾರಿಸಿ,ಒಳ್ಳೇ ದಾರಿ ಎಲ್ಲಿದೆ ಅಂತ ಕೇಳಿ ತಿಳ್ಕೊಂಡು ಅದ್ರಲ್ಲಿ ನಡಿರಿ,+ಆಗ ನಿಮಗೆ ನೆಮ್ಮದಿ ಸಿಗುತ್ತೆ” ಅಂತ ಯೆಹೋವ ಹೇಳ್ತಾನೆ. ಆದ್ರೆ ಅವರು “ನಾವಂತೂ ಆ ದಾರಿಯಲ್ಲಿ ನಡಿಯಲ್ಲ” ಅಂತ ಹೇಳ್ತಾರೆ.+ 17  “ನಾನು ಕಾವಲುಗಾರನನ್ನ ಇಟ್ಟೆ.+ ಅವನು ‘ಕೊಂಬಿನ ಶಬ್ದ ಕೇಳಿಸ್ಕೊಳ್ಳಿ’+ ಅಂದ.” ಆದ್ರೆ ಅವರು “ನಾವು ಕೇಳಿಸ್ಕೊಳ್ಳಲ್ಲ” ಅಂದ್ರು.+ 18  “ಅದಕ್ಕೆ ಜನ್ರೇ ಕೇಳಿ,ಸೇರಿಬಂದಿರೋ ಜನ್ರೇ,ಯೆರೂಸಲೇಮಿನ ಜನ್ರಿಗೆ ಏನಾಗುತ್ತೆ ಅಂತ ತಿಳ್ಕೊಳ್ಳಿ. 19  ಭೂಮಿಯೇ ಕೇಳಿಸ್ಕೊ,ನಾನು ಈ ಜನ್ರ ಮೇಲೆ ಕಷ್ಟ ತರ್ತಿನಿ,+ಅದು ಅವ್ರ ಕೆಟ್ಟ ಯೋಚನೆಗಳ ಫಲ,ಯಾಕಂದ್ರೆ ಅವರು ನನ್ನ ಮಾತುಗಳಿಗೆ ಸ್ವಲ್ಪನೂ ಗಮನಕೊಡಲಿಲ್ಲ,ನನ್ನ ನಿಯಮ ಪುಸ್ತಕವನ್ನ* ಅವರು ಅಸಡ್ಡೆ ಮಾಡಿದ್ರು.” 20  “ನೀವು ಶೆಬದಿಂದ ಸಾಂಬ್ರಾಣಿ ತಂದ್ರೆ,ದೂರ ದೇಶದಿಂದ ಪರಿಮಳಭರಿತ ಹುಲ್ಲು ತಂದ್ರೆ ನನಗೇನಂತೆ? ನೀವು ಅರ್ಪಿಸೋ ಸರ್ವಾಂಗಹೋಮ ಬಲಿಗಳನ್ನ ನಾನು ಸ್ವೀಕರಿಸಲ್ಲ,ನಿಮ್ಮ ಬಲಿಗಳನ್ನ ನಾನು ಮೆಚ್ಚಲ್ಲ.”+ 21  ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ“ನಾನು ಈ ಜನ್ರಿಗೆ ಎಡವುಗಲ್ಲುಗಳನ್ನ ಇಡ್ತಾ ಇದ್ದೀನಿ,ಅವರು ಎಡವಿ ಬೀಳ್ತಾರೆ,ಅಪ್ಪ ಮಕ್ಕಳುಪಕ್ಕದ ಮನೆಯವರು ಅವರ ಸ್ನೇಹಿತರುಎಲ್ರೂ ಎಡವಿ ಬಿದ್ದು ನಾಶ ಆಗ್ತಾರೆ.”+ 22  ಯೆಹೋವ ಹೇಳೋದು ಏನಂದ್ರೆ,“ಉತ್ತರ ದಿಕ್ಕಲ್ಲಿರೋ ದೇಶದಿಂದ ಜನ್ರು ಬರ್ತಾ ಇದ್ದಾರೆ,ಭೂಮಿಯ ತುಂಬ ದೂರದ ಜಾಗಗಳಿಂದ ಒಂದು ದೊಡ್ಡ ದೇಶ ಎದ್ದು ಬರುತ್ತೆ.+ 23  ಅವ್ರ ಕೈಯಲ್ಲಿ ಬಿಲ್ಲು ಭರ್ಜಿ ಇರುತ್ತೆ. ಅವರು ಕ್ರೂರಿಗಳು, ಸ್ವಲ್ಪನೂ ದಯೆ ತೋರಿಸಲ್ಲ. ಅವ್ರ ಸ್ವರ ಸಮುದ್ರದ ಆರ್ಭಟ ತರ ಇರುತ್ತೆ,ಅವರು ಕುದುರೆಗಳನ್ನ ಹತ್ತಿ ಬರ್ತಾರೆ.+ ಚೀಯೋನ್‌ ಪಟ್ಟಣವೇ, ಅವರು ವೀರ ಸೈನಿಕರ ತರ ಸೈನ್ಯ ಕಟ್ಕೊಂಡು ಬಂದು ನಿನ್ನ ಮೇಲೆ ದಾಳಿ ಮಾಡ್ತಾರೆ.” 24  ನಾವು ಅದ್ರ ಬಗ್ಗೆ ಸುದ್ದಿ ಕೇಳಿದ್ವಿ. ಭಯದಿಂದ ನಡುಗ್ತಾ ಇದ್ವಿ,+ನೋವಲ್ಲಿ ಮುಳುಗಿ ಹೋಗಿದ್ವಿ,ಒಬ್ಬ ಸ್ತ್ರೀ ಮಗು ಹೆರೋ ತರ ಕಷ್ಟ ಅನುಭವಿಸಿದ್ವಿ.+ 25  ಹೊಲಗಳಿಗೆ ಹೋಗಬೇಡ,ರಸ್ತೆಯಲ್ಲಿ ನಡಿಬೇಡ,ಯಾಕಂದ್ರೆ ಶತ್ರು ಕೈಯಲ್ಲಿ ಕತ್ತಿ ಇದೆ,ದೇಶದಲ್ಲೆಲ್ಲಾ ಭಯಭೀತಿ ಆವರಿಸಿದೆ. 26  ನನ್ನ ಮಗಳೇ ನನ್ನ ಜನ್ರೇ,ಗೋಣಿ ಸುತ್ಕೊಂಡು+ ಬೂದಿಯಲ್ಲಿ ಹೊರಳಾಡಿ. ಇದ್ದ ಒಬ್ಬನೇ ಒಬ್ಬ ಮಗನನ್ನ ಕಳ್ಕೊಂಡ ಹಾಗೆ ತುಂಬ ಗೋಳಾಡ್ತಾ ಎದೆ ಬಡ್ಕೊಳ್ಳಿ,+ಯಾಕಂದ್ರೆ ದಿಢೀರಂತ ಶತ್ರು ನಮ್ಮ ಮೇಲೆ ದಾಳಿ ಮಾಡ್ತಾನೆ.+ 27  “ನಾನು ನಿನ್ನನ್ನ* ಅದಿರನ್ನ ಶುದ್ಧೀಕರಿಸೋ ವ್ಯಕ್ತಿಯಾಗಿ ಮಾಡಿದ್ದೀನಿ,ನೀನು ನನ್ನ ಜನ್ರನ್ನ ಶುದ್ಧೀಕರಿಸಬೇಕು,ನೀನು ಅವ್ರನ್ನ ಪೂರ್ತಿ ಪರಿಶೋಧಿಸಬೇಕು,ಅವ್ರನ್ನ ಚೆನ್ನಾಗಿ ಗಮನಿಸಿ, ಅವ್ರ ನಡತೆ ಪರೀಕ್ಷಿಸಬೇಕು. 28  ಅವ್ರಷ್ಟು ಹಠಮಾರಿಗಳು ಬೇರೆ ಯಾರೂ ಇಲ್ಲ,+ಬೇರೆಯವರ ಹೆಸ್ರನ್ನ ಹಾಳು ಮಾಡೋಕೆ ಸುಳ್ಳು ಹಬ್ಬಿಸ್ತಾ ಸುತ್ತಾಡ್ತಾರೆ.+ ಅವರು ತಾಮ್ರ, ಕಬ್ಬಿಣ ತರ ಇದ್ದಾರೆ,ಎಲ್ರೂ ಭ್ರಷ್ಟರಾಗಿದ್ದಾರೆ. 29  ಒಬ್ಬ ವ್ಯಕ್ತಿ ಲೋಹವನ್ನ ಶುದ್ಧೀಕರಿಸೋಕೆ ಬೆಂಕಿ ಉರಿಸ್ತಾನೆ. ಆದ್ರೆ ಬೆಂಕಿ ಉರಿಸೋಕೆ ಬಳಸಿದ ಗಾಳಿಹಾಕೋ ಸಾಧನನೇ ಸುಟ್ಟು ಹೋಗುತ್ತೆ,ಅವನು ಬೆಂಕಿಯನ್ನ ಧಗಧಗನೆ ಉರಿಸಿದ್ರೂ ಅವನ ಶ್ರಮವೆಲ್ಲ ವ್ಯರ್ಥ,+ಯಾಕಂದ್ರೆ ಅವನಿಗೆ ಸಿಕ್ಕಿದ್ದು ಬರೀ ಸೀಸ ಅಷ್ಟೇ,ಕೆಟ್ಟವ್ರನ್ನ ಜನ್ರಿಂದ ಬೇರೆ ಮಾಡೋಕೆ ಆಗಲಿಲ್ಲ.+ 30  ಜನ್ರು ಖಂಡಿತ ಅವ್ರನ್ನ ‘ಬೇಡವಾದ ಬೆಳ್ಳಿ’ ಅಂತ ಕರಿತಾರೆ. ಯಾಕಂದ್ರೆ ಯೆಹೋವ ಅವ್ರನ್ನ ಬೇಡ ಅಂತ ತಿರಸ್ಕರಿಸಿದ್ದಾನೆ.”+

ಪಾದಟಿಪ್ಪಣಿ

ಅಥವಾ “ತಾಜಾ.”
ಅಥವಾ “ಮೂಳೆ ಮುರಿತವನ್ನ.”
ಅಥವಾ “ನಾನು ಕಲಿಸೋದನ್ನ.”
ಅಂದ್ರೆ, ಯೆರೆಮೀಯನನ್ನ.