ಯೆರೆಮೀಯ 9:1-26

  • ಯೆರೆಮೀಯನಿಗೆ ತುಂಬ ದುಃಖ (1-3ಎ)

  • ಯೆಹೋವ ಯೆಹೂದದಿಂದ ಲೆಕ್ಕ ಕೇಳ್ತಾನೆ (3ಬಿ-16)

  • ಯೆಹೂದಕ್ಕಾಗಿ ರೋದನೆ (17-22)

  • ಯೆಹೋವನನ್ನ ತಿಳಿದಿರೋದಕ್ಕೆ ಹೆಮ್ಮೆಪಡು (23-26)

9  ನನ್ನ ತಲೆ ನೀರಿನ ಬಾವಿ ಆಗಬಾರದಿತ್ತಾ? ನನ್ನ ಕಣ್ಣುಗಳು ಕಣ್ಣೀರಿನ ಕಾರಂಜಿ ಆಗಬಾರದಿತ್ತಾ?+ ಸತ್ತು ಹೋದ ನನ್ನ ಜನ್ರಿಗೋಸ್ಕರನಾನು ಹಗಲೂ ರಾತ್ರಿ ಕಣ್ಣೀರು ಹಾಕ್ತಿದ್ದೆ.   ಕಾಡಲ್ಲಿ ಪ್ರಯಾಣಿಕರ ತಂಗುದಾಣ ಎಲ್ಲಿದೆ ಅಂತ ನನಗೆ ಗೊತ್ತಿದ್ರೆ ಚೆನ್ನಾಗಿತ್ತು,ಆಗ ನನ್ನ ಜನ್ರನ್ನ ಬಿಟ್ಟು ದೂರ ಹೋಗ್ತಿದ್ದೆ,ಯಾಕಂದ್ರೆ ಅವ್ರೆಲ್ಲ ವ್ಯಭಿಚಾರಿಗಳು,+ಆ ಗುಂಪಲ್ಲಿ ಇರೋರೆಲ್ಲ ನಂಬಿಕೆದ್ರೋಹಿಗಳು.   ಬಾಣ ಬಿಡೋಕೆ ಬಿಲ್ಲು ಬಾಗಿಸೋ ತರ ಅವರು ಸುಳ್ಳು ಹೇಳೋಕೆ ತುದಿಗಾಲಲ್ಲಿ ನಿಂತಿರ್ತಾರೆ. ದೇಶದಲ್ಲೆಲ್ಲ ನಂಬಿಗಸ್ತರು ಯಾರೂ ಇಲ್ಲ, ಎಲ್ರೂ ಸುಳ್ಳುಗಾರರೇ.+ “ಅವರು ಒಂದಾದ್ಮೇಲೆ ಒಂದು ಕೆಟ್ಟ ಕೆಲಸ ಮಾಡ್ತಾ ಹೋಗ್ತಿದ್ದಾರೆ,ಅವರು ನನಗೆ ಸ್ವಲ್ಪನೂ ಗಮನ ಕೊಡ್ತಿಲ್ಲ”+ ಅಂತ ಯೆಹೋವ ಹೇಳ್ತಾನೆ.   “ನೀವೆಲ್ರೂ ನಿಮ್ಮ ನಿಮ್ಮ ಪಕ್ಕದ ಮನೆಯವರ ವಿಷ್ಯದಲ್ಲಿ ಎಚ್ಚರವಾಗಿ ಇರಿ,ನಿಮ್ಮ ಅಣ್ಣತಮ್ಮನನ್ನ ನಂಬಬೇಡಿ,ಯಾಕಂದ್ರೆ ಪ್ರತಿಯೊಬ್ಬ ಸಹೋದರ ನಂಬಿಕೆದ್ರೋಹಿ,+ಪಕ್ಕದ ಮನೆಯಲ್ಲಿರೋ ಪ್ರತಿಯೊಬ್ರು ಬೇರೆಯವರ ಹೆಸ್ರು ಹಾಳುಮಾಡೋಕೆ ಅವ್ರ ಬಗ್ಗೆ ಸುಳ್ಳುಗಳನ್ನ ಹಬ್ಬಿಸ್ತಿದ್ದಾರೆ.+   ಅಕ್ಕಪಕ್ಕದ ಮನೆಯವ್ರೆಲ್ಲ ಮೋಸ ಮಾಡ್ತಿದ್ದಾರೆ,ಸತ್ಯ ಹೇಳೋರು ಯಾರೂ ಇಲ್ಲ,ಸುಳ್ಳು ಹೇಳೋದು ಅವ್ರ ನಾಲಿಗೆಗೆ ರೂಢಿಯಾಗಿದೆ.+ ತಮಗೆ ಆಯಾಸ ಆಗೋ ತನಕ ಕೆಟ್ಟದ್ದನ್ನ ಮಾಡ್ತಿದ್ದಾರೆ.   ನೀನು ಮೋಸಗಾರರ ಮಧ್ಯ ವಾಸಿಸ್ತಾ ಇದ್ದೀಯ,ಅವರು ಸುಳ್ಳು ಹೇಳ್ತಾರೆ, ನನ್ನನ್ನ ತಿಳ್ಕೊಳ್ಳೋಕೆ ಇಷ್ಟ ಇಲ್ಲ” ಅಂತ ಯೆಹೋವ ಹೇಳ್ತಾನೆ.   ಹಾಗಾಗಿ ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ“ನಾನು ಅವ್ರನ್ನ ಶುದ್ಧೀಕರಿಸ್ತೀನಿ, ಪರೀಕ್ಷಿಸ್ತೀನಿ,+ನನ್ನ ಮಗಳನ್ನ ಅಂದ್ರೆ ನನ್ನ ಜನ್ರನ್ನ ನಾನು ಇನ್ನೇನು ಮಾಡಕ್ಕಾಗುತ್ತೆ?   ಅವರ ನಾಲಿಗೆ ಜೀವ ತೆಗಿಯೋ ಬಾಣ, ಅದು ಬರೀ ಮೋಸದ ಮಾತುಗಳನ್ನೇ ಹೇಳುತ್ತೆ. ಒಬ್ಬ ತನ್ನ ಪಕ್ಕದ ಮನೆಯವನ ಜೊತೆ ಸಮಾಧಾನವಾಗಿ ಮಾತಾಡ್ತಾನೆ,ಆದ್ರೆ ಒಳಗೊಳಗೆ ಸಂಚು ಹಾಕ್ತಾ ಇರ್ತಾನೆ.”   ಯೆಹೋವ ಹೇಳೋದು ಏನಂದ್ರೆ“ಇದಕ್ಕೆಲ್ಲ ನಾನು ಅವ್ರಿಂದ ಲೆಕ್ಕ ಕೇಳಬಾರ್ದಾ? ಇಂಥ ಜನ್ರಿಗೆ ನಾನು ಸೇಡು ತೀರಿಸಬಾರ್ದಾ?+ 10  ನಾನು ಬೆಟ್ಟಗಳಿಗಾಗಿ ಅತ್ತು ಗೋಳಾಡ್ತೀನಿ,ಕಾಡಲ್ಲಿರೋ ಹುಲ್ಲುಗಾವಲುಗಳಿಗಾಗಿ ಶೋಕಗೀತೆ ಹಾಡ್ತೀನಿ,ಯಾಕಂದ್ರೆ ಅವು ಸುಟ್ಟುಹೋಗಿವೆ, ಆ ಕಡೆ ಒಬ್ಬನೂ ಹೋಗೋಕೆ ಆಗ್ತಿಲ್ಲ,ಅಲ್ಲಿ ಪ್ರಾಣಿಗಳ ಶಬ್ದ ಕೇಳ್ತಿಲ್ಲ,ಅಲ್ಲಿಂದ ಪಕ್ಷಿಗಳು ಹಾರಿಹೋಗಿವೆ, ಪ್ರಾಣಿಗಳು ಓಡಿಹೋಗಿವೆ, ಯಾವುದೂ ಅಲ್ಲಿಲ್ಲ.+ 11  ನಾನು ಯೆರೂಸಲೇಮನ್ನ ಕಲ್ಲಿನ ಗುಡ್ಡೆಯಾಗಿ,+ ಗುಳ್ಳೆನರಿಗಳು ವಾಸಿಸೋ ಸ್ಥಳವಾಗಿ ಮಾಡ್ತೀನಿ,+ಯೆಹೂದದ ಪಟ್ಟಣಗಳು ಹಾಳುಬೀಳೋ ತರ ಮಾಡ್ತೀನಿ, ಅಲ್ಲಿ ಯಾರೂ ವಾಸಮಾಡಲ್ಲ.+ 12  ಇದನ್ನ ಅರ್ಥಮಾಡ್ಕೊಳ್ಳೋಷ್ಟು ವಿವೇಕ ಯಾರಿಗಿದೆ? ಜನ್ರಿಗೆ ಹೇಳು ಅಂತ ಯೆಹೋವ ಅದನ್ನ ಯಾರಿಗೆ ಹೇಳಿದ್ದಾನೆ? ದೇಶ ಯಾಕೆ ನಾಶವಾಗಿ ಹೋಗಿದೆ? ಅದು ಕಾಡಿನ ಹಾಗೆ ಹೇಗೆ ಸುಟ್ಟುಹೋಗಿದೆ ಅಂದ್ರೆಅಲ್ಲಿಗೆ ಯಾರೂ ಹೋಗ್ತಿಲ್ಲ ಯಾಕೆ?” 13  ಯೆಹೋವ ಉತ್ರ ಕೊಟ್ಟಿದು ಏನಂದ್ರೆ “ಯಾಕಂದ್ರೆ ನಾನು ಅವ್ರಿಗೆ ಕೊಟ್ಟ* ನಿಯಮ ಪುಸ್ತಕವನ್ನ ಅವರು ಪಾಲಿಸದೆ ಅದನ್ನ ತಿರಸ್ಕರಿಸಿದ್ರು. ಅವರು ನನ್ನ ಮಾತು ಕೇಳಿಲ್ಲ. 14  ಅವರು ಹಠಹಿಡಿದು ತಮ್ಮ ಮನಸ್ಸಿಗೆ* ತೋಚಿದ್ದನ್ನ ಮಾಡಿದ್ರು.+ ಪೂರ್ವಜರು ಕಲಿಸ್ಕೊಟ್ಟ ಹಾಗೆ ಬಾಳ್‌ ಮೂರ್ತಿಗಳನ್ನ ಪೂಜೆ ಮಾಡಿದ್ರು.+ 15  ಹಾಗಾಗಿ ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೀಗೆ ಹೇಳ್ತಾನೆ ‘ಈ ಜನ್ರು ಕಹಿ ಗಿಡ* ತಿನ್ನೋ ಹಾಗೆ, ವಿಷ ನೀರು ಕುಡಿಯೋ ಹಾಗೆ ಮಾಡ್ತೀನಿ.+ 16  ಅವ್ರಿಗೆ ಅವ್ರ ಪೂರ್ವಜರಿಗೆ ಗೊತ್ತೇ ಇಲ್ಲದ ಜನ್ರ ಮಧ್ಯ ಅವ್ರನ್ನ ಚದರಿಸಿಬಿಡ್ತೀನಿ.+ ನಾನು ಅವ್ರನ್ನ ಸರ್ವ ನಾಶಮಾಡೋ ತನಕ ಅವ್ರನ್ನ ಬೆನ್ನಟ್ಟೋಕೆ ಶತ್ರುಗಳನ್ನ ಕಳಿಸ್ತೀನಿ.’+ 17  ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ‘ತಿಳುವಳಿಕೆಯಿಂದ ನಡ್ಕೊಳ್ಳಿ. ಶೋಕಗೀತೆಗಳನ್ನ ಹಾಡೋ ಹೆಂಗಸರನ್ನ ಕರಿರಿ,+ಆ ಗೀತೆಗಳನ್ನ ಚೆನ್ನಾಗಿ ಹಾಡೋ ಸ್ತ್ರೀಯರನ್ನ ಕರಿಸಿ. 18  ಅವರು ಬೇಗ ಬಂದು ನಮಗಾಗಿ ಗೋಳಾಡಲಿ,ಆಗ ನಮ್ಮ ಕಣ್ಣುಗಳಿಂದ ಕಣ್ಣೀರ ಧಾರೆ ಹರಿಲಿ,ನಮ್ಮ ಕಣ್ರೆಪ್ಪೆಗಳು ತೇವ ಆಗಲಿ.+ 19  ಚೀಯೋನಿಂದ ಈ ಗೋಳಾಟ ಕೇಳ್ತಿದೆ+“ಅಯ್ಯೋ! ನಮ್ಮ ಬಾಳು ಹಾಳಾಗಿ ಹೋಯ್ತು! ನಮಗೆ ಆಗಿರೋ ಅವಮಾನ ಅಷ್ಟಿಷ್ಟಲ್ಲ,ನಮ್ಮ ದೇಶ ಬಿಟ್ಟು ಬರಬೇಕಾಯ್ತು, ಅವರು ನಮ್ಮ ಮನೆಗಳನ್ನ ನಾಶ ಮಾಡಿದ್ದಾರೆ.”+ 20  ಸ್ತ್ರೀಯರೇ, ಯೆಹೋವನ ಮಾತು ಕೇಳಿ. ಆತನ ಬಾಯಿಂದ ಬರೋ ಮಾತುಗಳಿಗೆ ಕಿವಿಗೊಡಿ. ಈ ಗೋಳಾಟವನ್ನ ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿ,ಈ ಶೋಕಗೀತೆಯನ್ನ ಒಬ್ರು ಇನ್ನೊಬ್ರಿಗೆ ಕಲಿಸಿ.+ 21  ಯಾಕಂದ್ರೆ ಬೀದಿಗಳಿಂದ ನಮ್ಮ ಮಕ್ಕಳನ್ನಪಟ್ಟಣದ ಮುಖ್ಯಸ್ಥಳಗಳಿಂದ* ಯುವಕರನ್ನ ಕಿತ್ಕೊಳ್ಳೋಕೆಸಾವು ಕಿಟಕಿಗಳಿಂದ ಒಳಗೆ ಬಂದಿದೆ,ಅದು ನಮ್ಮ ಭದ್ರ ಕೋಟೆ ಒಳಗೆ ನುಗ್ಗಿದೆ.’+ 22  ನೀನು ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ“ಜನ್ರ ಹೆಣಗಳು ಗೊಬ್ಬರದ ಹಾಗೆ ನೆಲದ ಮೇಲೆ ಬಿದ್ದಿರುತ್ತೆ,ಕೊಯ್ಯುವವನು ಕೊಯ್ದು ತನ್ನ ಹಿಂದೆ ಸಾಲಾಗಿ ಇಟ್ಟ ತೆನೆಗಳ ತರ ಅವು ಬಿದ್ದಿರುತ್ತೆ,ಅವುಗಳನ್ನ ಕೂಡಿಸೋಕೆ ಯಾರೂ ಇರಲ್ಲ.”’”+ 23  ಯೆಹೋವ ಹೀಗೆ ಹೇಳ್ತಾನೆ“ವಿವೇಕಿ ತನ್ನಲ್ಲಿರೋ ವಿವೇಕದ ಬಗ್ಗೆ ಕೊಚ್ಕೊಳ್ಳೋದು ಬೇಡ,*+ಬಲಶಾಲಿ ತನ್ನಲ್ಲಿರೋ ಬಲದ ಬಗ್ಗೆ ಕೊಚ್ಕೊಳ್ಳೋದು ಬೇಡ,ಶ್ರೀಮಂತ ತನ್ನ ಆಸ್ತಿಪಾಸ್ತಿ ಬಗ್ಗೆ ಕೊಚ್ಕೊಳ್ಳೋದು ಬೇಡ.”+ 24  “ಆದ್ರೆ ಅವನು ನನ್ನ ಬಗ್ಗೆ ತಿಳುವಳಿಕೆಯನ್ನ* ಜ್ಞಾನವನ್ನ ಪಡ್ಕೊಂಡಿದ್ದಕ್ಕೆ ಹೆಮ್ಮೆಪಡಲಿ+ಯೆಹೋವನಾದ ನಾನು ಶಾಶ್ವತ ಪ್ರೀತಿ ತೋರಿಸ್ತೀನಿ,ಈ ಭೂಮಿಯಲ್ಲಿ ನ್ಯಾಯ ನೀತಿಯಿಂದ ನಡಿತೀನಿ,+ಯಾಕಂದ್ರೆ ಅವುಗಳೇ ನನಗಿಷ್ಟ ಅನ್ನೋದನ್ನ ತಿಳ್ಕೊಂಡೆ ಅಂತ ಹೆಮ್ಮೆಪಡಲಿ”+ ಅಂತಾನೇ ಯೆಹೋವ. 25  ಯೆಹೋವ ಹೇಳೋದು ಏನಂದ್ರೆ “ಸುನ್ನತಿಯಾಗಿದ್ರೂ ಸುನ್ನತಿ ಆಗದ ಜನ್ರ ತರ ಇರೋ ಎಲ್ರಿಗೆ+ 26  ಅಂದ್ರೆ ಈಜಿಪ್ಟ್‌,+ ಯೆಹೂದ,+ ಎದೋಮ್‌,+ ಮೋವಾಬ್‌+ ಜನ್ರಿಗೆ, ಅಲ್ಲದೆ ಅಮ್ಮೋನಿಯರು+ ಮತ್ತು ಹಣೆಯ ಬದಿಗಳನ್ನ ಬೋಳಿಸ್ಕೊಂಡು ಕಾಡಲ್ಲಿರೋ ಎಲ್ಲ ಜನ್ರಿಗೆ ನಾನು ಶಿಕ್ಷೆ ಕೊಡೋ ದಿನ ಬರುತ್ತೆ.+ ಯಾಕಂದ್ರೆ, ಈ ಎಲ್ಲ ಜನ್ರು ಇಸ್ರಾಯೇಲಿನ ಎಲ್ಲ ಜನ್ರು ಹೃದಯದಲ್ಲಿ ಸುನ್ನತಿ ಮಾಡ್ಕೊಂಡಿಲ್ಲ.”+

ಪಾದಟಿಪ್ಪಣಿ

ಅಕ್ಷ. “ಕಣ್ಮುಂದೆ ಇಟ್ಟ.”
ಅಥವಾ “ಹೃದಯಕ್ಕೆ.”
ಅಥವಾ “ಮಾಚಿಪತ್ರೆ.” ಪದವಿವರಣೆ ನೋಡಿ.
ಅಥವಾ “ಹೆಮ್ಮೆ ಪಡಬೇಡ.”
ಅಕ್ಷ. “ಒಳನೋಟ.”