ಯೆಶಾಯ 16:1-14

  • ಮೋವಾಬಿನ ವಿರುದ್ಧ ಸಂದೇಶ ಮುಂದುವರಿತು (1-14)

16  ದೇಶ ಆಳುವವನಿಗೆ ಒಂದು ಟಗರನ್ನ ಕಳಿಸು,ಅದನ್ನ ಸೆಲದಿಂದ ಕಾಡಿನ ಮೂಲಕಚೀಯೋನ್‌ ಪಟ್ಟಣದ ಬೆಟ್ಟಕ್ಕೆ ತಲುಪಿಸು.   ಅರ್ನೋನಿನ ನದಿ ದಾಟೋ ಸ್ಥಳದಲ್ಲಿ ಮೋವಾಬಿನ ಜನ+ಗೂಡಿಂದ ಓಡಿಸಿಬಿಟ್ಟಿರೋ ಹಕ್ಕಿ ತರ ಇರ್ತಾರೆ.+   “ಸಲಹೆ ಕೊಡು, ಮಾಡಿರೋ ನಿರ್ಣಯನ ಜಾರಿಗೆ ತಗೊಂಡು ಬಾ. ಮಟಮಟ ಮಧ್ಯಾಹ್ನದಲ್ಲಿ ನೆರಳು ಕೊಟ್ಟು ಸಂರಕ್ಷಿಸು. ಆ ನೆರಳು ರಾತ್ರಿಯ ಕತ್ತಲಷ್ಟು ಗಾಢವಾಗಿರಲಿ. ಚೆದರಿ ಹೋಗಿರೋ ಜನ್ರನ್ನ ಬಚ್ಚಿಡು, ಓಡಿ ಹೋಗ್ತಿರೋರನ್ನ ಶತ್ರುಗಳ ಕೈಗೆ ಒಪ್ಪಿಸಬೇಡ.   ಮೋವಾಬೇ, ಚೆದರಿಹೋಗಿರೋ ನನ್ನ ಜನ್ರಿಗೆ ನಿನ್ನಲ್ಲಿ ಆಶ್ರಯ ಕೊಡು. ನಾಶ ಮಾಡುವವನಿಂದ ತಪ್ಪಿಸ್ಕೊಳ್ಳೋಕೆ ಅವ್ರಿಗೆ ಬಚ್ಚಿಟ್ಕೊಳ್ಳೋ ಒಂದು ಸ್ಥಳವಾಗು.+ ದಬ್ಬಾಳಿಕೆ ಮಾಡುವವನು ಅಂತ್ಯ ಕಾಣ್ತಾನೆ,ನಾಶನಕ್ಕೆ ಒಂದು ಕೊನೆ ಬರುತ್ತೆ,ಬೇರೆಯವ್ರನ್ನ ಕೆಳಗೆ ಹಾಕಿ ತುಳಿದು ಹಾಕುವವರು ಭೂಮಿಯಿಂದ ಅಳಿದು ಹೋಗ್ತಾರೆ.   ಆಗ ಒಂದು ಸಿಂಹಾಸನವನ್ನ ದೃಢವಾಗಿ ಸ್ಥಾಪಿಸಲಾಗುತ್ತೆ. ಅದ್ರ ಆಧಾರ ಶಾಶ್ವತ ಪ್ರೀತಿಯಾಗಿರುತ್ತೆ. ದಾವೀದನ ಡೇರೆಯಲ್ಲಿ ಆ ಸಿಂಹಾಸನದ ಮೇಲೆ ಕೂತ್ಕೊಳ್ಳುವವನು ನಂಬಿಗಸ್ತನಾಗಿ ಇರ್ತಾನೆ,+ಅವನು ನಿಷ್ಪಕ್ಷಪಾತದಿಂದ ನ್ಯಾಯ ತೀರಿಸ್ತಾನೆ, ನೀತಿಯನ್ನ ಜಾರಿಗೊಳಿಸೋಕೆ ತಡಮಾಡಲ್ಲ.”+   ಮೋವಾಬಿನ ಅಹಂಕಾರದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ. ಅದಕ್ಕೆ ತುಂಬ ಸೊಕ್ಕು.+ ಅದ್ರ ಗರ್ವ, ಪೊಗರು ಮತ್ತು ಕೋಪದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ.+ ಆದ್ರೆ ಅದ್ರ ದೊಡ್ಡದೊಡ್ಡ ಮಾತುಗಳು ಯಾವತ್ತಿಗೂ ನಿಜವಾಗಲ್ಲ.   ಹಾಗಾಗಿ ಮೋವಾಬ್‌ ತನ್ನ ದುರ್ಗತಿ ನೋಡಿ ಗೋಳಾಡುತ್ತೆ,ಅಲ್ಲಿರೋ ಎಲ್ಲ ನಿವಾಸಿಗಳು ಗೊಳೋ ಅಂತ ಅಳ್ತಾರೆ.+ ಏಟು ತಿಂದಿರೋ ಜನ ಕೀರ್‌-ಹರೆಷೆತಿನ ಒಣದ್ರಾಕ್ಷಿ ಬಿಲ್ಲೆಗಳನ್ನ ನೆನಪಿಸ್ಕೊಂಡು ಗೋಳಾಡ್ತಾರೆ.+   ಹೆಷ್ಬೋನಿನ+ ಮೆಟ್ಟಿಲುಪಾತಿಗಳು* ಒಣಗಿಹೋಗಿವೆ,ಸಿಬ್ಮದ+ ದ್ರಾಕ್ಷಿಬಳ್ಳಿಗಳು ಬಾಡಿಹೋಗಿವೆ,ದೇಶವನ್ನ ಆಳುವವರು ಅದ್ರ ಕೆಂಪುಕೆಂಪಾದ ರೆಂಬೆಗಳನ್ನ ತುಳಿದಿದ್ದಾರೆ,ಅವು ಯಜ್ಜೇರ್‌+ ತನಕ ತಲುಪಿವೆ,ಕಾಡಿನ ತನಕ ಚಾಚಿವೆ. ಅದ್ರ ಚಿಗುರುಗಳು ಸಮುದ್ರದ ತನಕ ಹರಡಿವೆ.   ಹಾಗಾಗಿ ನಾನು ಯಜ್ಜೇರಿನ ಬಗ್ಗೆ ಗೋಳಾಡಿದ ಹಾಗೆ ಸಿಬ್ಮದ ದ್ರಾಕ್ಷಿಬಳ್ಳಿ ಬಗ್ಗೆನೂ ಗೋಳಾಡ್ತೀನಿ. ಹೆಷ್ಬೋನೇ, ಎಲೆಯಾಲೇ,+ ನನ್ನ ಕಣ್ಣೀರಿಂದ ನಾನು ನಿಮ್ಮನ್ನ ತೋಯಿಸ್ತೀನಿ,ಯಾಕಂದ್ರೆ ನಿನ್ನ ಬೇಸಿಗೆಯ ಫಲದ ಸದ್ದು, ನಿನ್ನ ಬೆಳೆಯ ಕೊಯ್ಲಿನ ಸದ್ದು ನಿಂತುಹೋಗಿದೆ.* 10  ಹಣ್ಣುಗಳ ತೋಟದಿಂದ ಸಂತೋಷವನ್ನ, ಆನಂದವನ್ನ ಕಿತ್ತುಕೊಳ್ಳಲಾಗಿದೆ,ದ್ರಾಕ್ಷಿತೋಟದಲ್ಲಿ ಯಾರೂ ಹಾಡು ಹಾಡ್ತಿಲ್ಲ, ಸಂತೋಷದ ಧ್ವನಿ ಕೇಳಿಸ್ತಿಲ್ಲ.+ ದ್ರಾಕ್ಷಾಮದ್ಯಕ್ಕಾಗಿ ತೊಟ್ಟಿಯಲ್ಲಿ ದ್ರಾಕ್ಷಿ ತುಳಿತಿಲ್ಲ,ಯಾಕಂದ್ರೆ ನಾನು ಅವ್ರ ಹರ್ಷಧ್ವನಿಯನ್ನ ನಿಲ್ಲಿಸಿಬಿಟ್ಟಿದ್ದೀನಿ.+ 11  ತಂತಿವಾದ್ಯದ ತಂತಿಗಳು ಮಿಡಿಯೋ ತರ,ಮೋವಾಬಿಗಾಗಿ ನನ್ನ ಮನಸ್ಸು ಮರುಗ್ತಿದೆ,+ಕೀರ್‌-ಹರೆಷೆತಿಗಾಗಿ ನಾನು ಒಳಗೊಳಗೇ ಕೊರಗ್ತಿದ್ದೀನಿ.+ 12  ಮೋವಾಬ್‌ ಎತ್ರ ಸ್ಥಳಕ್ಕೆ ಹೋಗಿ ಸುಸ್ತಾದ್ರೂ ಆರಾಧನಾ ಸ್ಥಳಕ್ಕೆ ಪ್ರಾರ್ಥಿಸೋಕೆ ಹೋದ್ರೂ ಅದು ಏನೂ ಸಾಧಿಸಲ್ಲ.+ 13  ಮೋವಾಬಿನ ಬಗ್ಗೆ ಈ ಸಂದೇಶವನ್ನ ಯೆಹೋವ ಈಗಾಗಲೇ ಕೊಟ್ಟಿದ್ದನು. 14  ಈಗ ಯೆಹೋವ ಹೀಗೆ ಹೇಳ್ತಿದ್ದಾನೆ “ಕೂಲಿ ಕೆಲಸಗಾರನ ವರ್ಷಗಳ ಹಾಗೆ* ಸರಿಯಾಗಿ ಮೂರು ವರ್ಷಗಳೊಳಗೆ, ಮೋವಾಬ್‌ ತನ್ನ ಮಹಿಮೆ ಕಳ್ಕೊಂಡು ಅವಮಾನಕ್ಕೆ ಗುರಿಯಾಗುತ್ತೆ. ಅಲ್ಲಿ ಎಲ್ಲ ರೀತಿಯ ಗಲಭೆ ಇರುತ್ತೆ. ತುಂಬ ಕಮ್ಮಿ ಮಂದಿ ಅದ್ರಲ್ಲಿ ಉಳ್ಕೊಳ್ತಾರೆ, ಅವರು ಬಲಹೀನರಾಗಿ ಇರ್ತಾರೆ.”+

ಪಾದಟಿಪ್ಪಣಿ

ಅಂದ್ರೆ, ಇಳಿಜಾರು ನೆಲದ ಮೇಲೆ ಮೆಟ್ಟಿಲು ಮೆಟ್ಟಿಲಾಗಿ ಮಾಡಲಾಗಿರೋ ಕೃಷಿಭೂಮಿ.
ಬಹುಶಃ, “ನಿನ್ನ ಬೇಸಿಗೆ ಫಲದ ಮತ್ತು ಬೆಳೆಯ ಕೊಯ್ಲಿನ ಸಮಯದಲ್ಲಿ ಯುದ್ಧದ ಆರ್ಭಟ ಕೇಳಿಸ್ತಿದೆ.”
ಅಥವಾ “ಕೂಲಿಯವನು ಲೆಕ್ಕಿಸೋ ಹಾಗೆ ಜಾಗ್ರತೆಯಿಂದ ಲೆಕ್ಕಿಸಿದರೆ”; ಅಂದ್ರೆ, ಸರಿಯಾಗಿ ಮೂರು ವರ್ಷಗಳಲ್ಲಿ.