ಯೆಶಾಯ 21:1-17
21 ಸಮುದ್ರದ ಕಾಡಿನ* ವಿರುದ್ಧ ಬಂದ ಸಂದೇಶ+ದಕ್ಷಿಣದಿಂದ ಬೀಸೋ ಬಿರುಗಾಳಿ ತರ,ವಿನಾಶ ಕಾಡಿನ ಕಡೆಯಿಂದ, ಭಯಪಡಿಸೋ ದೇಶದ ಕಡೆಯಿಂದ ಬರ್ತಿದೆ.+
2 ಒಂದು ಕ್ರೂರ ದರ್ಶನವನ್ನ ನನಗೆ ತೋರಿಸಲಾಯ್ತು:
ನಂಬಿಕೆದ್ರೋಹಿ ಜನಾಂಗ ಮೋಸದಿಂದ ವ್ಯವಹರಿಸ್ತಿದೆ,ವಿನಾಶಕಾರಿ ಜನಾಂಗ ನಾಶ ಮಾಡ್ತಿದೆ.
ಏಲಾಮೇ, ದಾಳಿ ಮಾಡು! ಮೇದ್ಯವೇ, ವಶಮಾಡ್ಕೊ!+
ಆ ಜನಾಂಗ ತಂದ ವೇದನೆಗೆ ನಾನು ಅಂತ್ಯ ಹಾಡ್ತೀನಿ.+
3 ಅದಕ್ಕೇ ನಾನು ಕಡುಸಂಕಟದಲ್ಲಿದ್ದೀನಿ.*+
ಮಗು ಹೆರಲಿರೋ ಸ್ತ್ರೀ ತರಸ್ನಾಯುಸೆಳೆತದಿಂದ ನಾನು ನೋವು ಅನುಭವಿಸ್ತಿದ್ದೀನಿ.
ಯಾತನೆಯಿಂದ ನನಗೆ ಏನೂ ಕೇಳಿಸ್ತಿಲ್ಲ,ವ್ಯಾಕುಲದಿಂದ ನನಗೆ ಏನೂ ಕಾಣಿಸ್ತಿಲ್ಲ.
4 ನನ್ನ ಹೃದಯ ಜೋರಾಗಿ ಬಡ್ಕೊಳ್ತಿದೆ, ಭಯದಿಂದ ನಾನು ಗಡಗಡ ನಡುಗ್ತಿದ್ದೀನಿ.
ಯಾವ ಸಂಧ್ಯಾಕಾಲಕ್ಕಾಗಿ ನಾನು ಹಾತೊರಿತಿದ್ದೀನೋ, ಈಗ ಅದಕ್ಕೇ ಹೆದರಿಕೊಳ್ಳೋ ತರ ಆಗಿದೆ.
5 ಮೇಜು ಹಾಕಿ, ಕುರ್ಚಿಗಳನ್ನ ಇಡಿ!
ತಿಂದು ಕುಡಿರಿ!+
ಅಧಿಕಾರಿಗಳೇ ಎದ್ದೇಳಿ, ಗುರಾಣಿಯನ್ನ ಅಭಿಷೇಕಿಸಿ!*
6 ಯಾಕಂದ್ರೆ ಯೆಹೋವ ನನಗೆ“ಹೋಗು, ಕಾವಲು ಕಾಯೋಕೆ ಒಬ್ಬ ವ್ಯಕ್ತಿಯನ್ನ ನೇಮಿಸು. ಅವನಿಗೆ ಏನು ಕಾಣಿಸ್ತಿದ್ಯೋ ಅದನ್ನ ಅವನು ನಿನಗೆ ವರದಿ ಮಾಡಲಿ” ಅಂದಿದ್ದಾನೆ.
7 ಅವನು ನೋಡಿದ್ದೇನಂದ್ರೆಒಂದು ಯುದ್ಧರಥನ ಎರಡು ಕುದುರೆಗಳು ಎಳ್ಕೊಂಡು ಹೋಗ್ತಿದ್ವು,ಇನ್ನೊಂದು ಯುದ್ಧರಥವನ್ನ ಕತ್ತೆಗಳು ಎಳ್ಕೊಂಡು ಹೋಗ್ತಿದ್ವು,ಮತ್ತೊಂದು ಯುದ್ಧರಥನ ಒಂಟೆಗಳು ಎಳ್ಕೊಂಡು ಹೋಗ್ತಿದ್ವು.
ಅವನು ತುಂಬ ಜಾಗರೂಕತೆಯಿಂದ ಅವುಗಳನ್ನ ಗಮನಕೊಟ್ಟು ನೋಡ್ತಿದ್ದ.
8 ಆಮೇಲೆ ಅವನು ಸಿಂಹದ ತರ ಗಟ್ಟಿಯಾಗಿ ಕೂಗಿ, ಹೀಗಂದ“ಯೆಹೋವನೇ, ನಾನು ದಿನವಿಡೀ ಕಾವಲು ಗೋಪುರದ ಮೇಲೆ ನಿಂತುಕೊಂಡಿರ್ತಿನಿ,ಪ್ರತಿರಾತ್ರಿ ನನ್ನ ಕಾವಲು ಸ್ಥಾನದಲ್ಲಿ ಕಾವಲು ಕಾಯ್ತಿರ್ತಿನಿ.+
9 ಏನು ಬರ್ತಿದೆ ನೋಡು:
ಎರಡು ಕುದುರೆಗಳಿರೋ ಯುದ್ಧರಥದ ಜೊತೆ ಸೈನಿಕರು ಬರ್ತಿದ್ದಾರೆ!”+
ಆಮೇಲೆ ಅವನು ಹೀಗೆ ಹೇಳಿದ“ಬಿದ್ದಳು, ಬಾಬೆಲ್ ನಗರಿ ಬಿದ್ದಳು!+
ಅವಳ ದೇವರುಗಳ ಕೆತ್ತಿದ ಮೂರ್ತಿಗಳೆಲ್ಲ ನುಚ್ಚುನೂರಾಗಿ ನೆಲದ ಮೇಲೆ ಬಿದ್ದಿವೆ!”+
10 ತುಳಿತಕ್ಕೆ* ಒಳಗಾಗಿರೋ ನನ್ನ ಜನ್ರೇ,ನನ್ನ ಕಣದಲ್ಲಿ ಹೊಸಕಿ ಹಾಕಿರೋ ಧಾನ್ಯಗಳೇ,*+ಸೈನ್ಯಗಳ ದೇವರೂ ಇಸ್ರಾಯೇಲ್ಯರ ದೇವರೂ ಆದ ಯೆಹೋವನಿಂದ ನಾನು ಕೇಳಿಸ್ಕೊಂಡಿದ್ದನ್ನ ನಿಮಗೆ ತಿಳಿಸಿದೆ.
11 ದೂಮದ* ವಿರುದ್ಧ ಬಂದ ಸಂದೇಶಸೇಯೀರಿಂದ+ ಯಾರೋ ನನ್ನನ್ನ,“ಕಾವಲುಗಾರನೇ, ರಾತ್ರಿ ಯಾವಾಗ ಮುಗಿಯುತ್ತೆ?
ಕಾವಲುಗಾರನೇ, ರಾತ್ರಿ ಯಾವಾಗ ಮುಗಿಯುತ್ತೆ?” ಅಂತ ಕೂಗಿ ಕೇಳ್ತಿದ್ದಾರೆ.
12 ಅದಕ್ಕೆ ಕಾವಲುಗಾರ“ಇನ್ನೇನು ಬೆಳಗಾಗಲಿದೆ, ರಾತ್ರಿನೂ ಆಗಲಿದೆ.
ವಿಚಾರಿಸಬೇಕಂತಿದ್ರೆ ನೀವು ವಿಚಾರಿಸಿ.
ಮತ್ತೆ ಬನ್ನಿ!” ಅಂತ ಉತ್ರ ಕೊಟ್ಟ.
13 ಬಯಲು ಪ್ರದೇಶದ ವಿರುದ್ಧ ಬಂದ ಸಂದೇಶದೆದಾನಿನ ಪ್ರವಾಸಿ ತಂಡಗಳೇ,ಬಯಲು ಪ್ರದೇಶದಲ್ಲಿರೋ ಕಾಡಲ್ಲಿ ನೀವು ರಾತ್ರಿ ಕಳಿತೀರ.+
14 ತೇಮಾ+ ದೇಶದ ನಿವಾಸಿಗಳೇ,ಬಾಯಾರಿದವರಿಗಾಗಿ ನೀರನ್ನ ತಗೊಂಡು ಬನ್ನಿ,ಓಡಿಹೋಗ್ತಿರೋ ವ್ಯಕ್ತಿಗಾಗಿ ರೊಟ್ಟಿ ತನ್ನಿ.
15 ಯಾಕಂದ್ರೆ ಅವರು ಕತ್ತಿಗಳಿಂದ, ಎಳೆದು ಹೊರಗೆ ತೆಗೆದಿರೋ ಕತ್ತಿಗಳಿಂದ ತಪ್ಪಿಸ್ಕೊಂಡು ಓಡಿಹೋಗ್ತಿದ್ದಾರೆ,ಬಾಗಿರೋ ಬಿಲ್ಲಿಂದ, ಯುದ್ಧದ ಕ್ರೂರತೆಯಿಂದ ತಪ್ಪಿಸ್ಕೊಂಡು ಓಡಿಹೋಗ್ತಿದ್ದಾರೆ.
16 ಯೆಹೋವ ನನಗೆ ಹೀಗೆ ಹೇಳಿದ್ದಾನೆ “ಕೂಲಿ ಕೆಲಸಗಾರನ ಒಂದು ವರ್ಷದ ತರ* ಒಂದು ವರ್ಷದೊಳಗೆ, ಕೇದಾರಿನ+ ಸಕಲ ವೈಭವ ಮಣ್ಣುಪಾಲಾಗುತ್ತೆ.
17 ಕೇದಾರಿನ ವೀರ ಸೈನಿಕರಲ್ಲಿ ಕೆಲವೇ ಮಂದಿ ಬಿಲ್ಲುಗಾರರು ಉಳಿತಾರೆ. ಯಾಕಂದ್ರೆ ಈ ಮಾತನ್ನ ಹೇಳಿದವನು ಇಸ್ರಾಯೇಲ್ ದೇವರಾದ ಯೆಹೋವ.”
ಪಾದಟಿಪ್ಪಣಿ
^ ಇಲ್ಲಿ ಪುರಾತನ ಬಾಬೆಲಿನ ಪ್ರದೇಶವನ್ನ ಸೂಚಿಸ್ತಿರಬಹುದು.
^ ಅಕ್ಷ. “ನನ್ನ ಸೊಂಟದಲ್ಲಿ ತುಂಬ ನೋವಿದೆ.”
^ ಅಥವಾ “ಗುರಾಣಿಗೆ ಎಣ್ಣೆ ಹಚ್ಚಿ.”
^ ಅಕ್ಷ. “ತೆನೆಬಡಿತಕ್ಕೆ.”
^ ಅಕ್ಷ. “ಮಗ.”
^ ಅರ್ಥ “ನಿಶ್ಶಬ್ದ.”
^ ಅಥವಾ “ಕೂಲಿಯವನು ಲೆಕ್ಕಿಸೋ ತರ ಜಾಗ್ರತೆಯಿಂದ ಲೆಕ್ಕಿಸಿದ್ರೆ”; ಅಂದ್ರೆ, ಸರಿಯಾಗಿ ಒಂದು ವರ್ಷದಲ್ಲಿ.