ಯೆಶಾಯ 35:1-10

  • ಮತ್ತೆ ಪರದೈಸ್‌ ಆಗುತ್ತೆ (1-7)

    • ಕುರುಡನಿಗೆ ಕಣ್ಣು ಕಾಣಿಸುತ್ತೆ, ಕಿವುಡನಿಗೆ ಕಿವಿ ಕೇಳಿಸುತ್ತೆ (5)

  • ಬಿಡುಗಡೆ ಆಗಿರುವವರಿಗಾಗಿ ಪವಿತ್ರತೆಯ ಮಾರ್ಗ (8-10)

35  ಕಾಡು ಮತ್ತು ಬರಡು ಭೂಮಿ ಸಂಭ್ರಮಪಡುತ್ತೆ,+ಬಯಲು ಪ್ರದೇಶ ಉಲ್ಲಾಸಿಸ್ತಾ ಹೂಗಳಿಂದ ಕಂಗೊಳಿಸುತ್ತೆ.+   ಅದು ತಪ್ಪದೇ ಅರಳುತ್ತೆ,+ಸಂತೋಷದಿಂದ ಹರ್ಷಧ್ವನಿಗೈಯುತ್ತೆ. ಲೆಬನೋನಿನ ಘನತೆಯನ್ನ,+ಕರ್ಮೆಲಿನ+ ಮತ್ತು ಶಾರೋನಿನ ವೈಭವವನ್ನ+ ಅದಕ್ಕೆ ಕೊಡಲಾಗುತ್ತೆ. ಯೆಹೋವನ ಮಹಿಮೆಯನ್ನ, ನಮ್ಮ ದೇವರ ಭವ್ಯತೆಯನ್ನ ಅವರು ನೋಡ್ತಾರೆ.   ಬಲಹೀನವಾಗಿರೋ ಕೈಗಳನ್ನ ಬಲಪಡಿಸಿ,ನಡುಗ್ತಿರೋ ಮೊಣಕಾಲುಗಳನ್ನ ದೃಢಪಡಿಸಿ.+   ಚಿಂತೆಯಲ್ಲಿ ಇರುವವರಿಗೆ* ಹೀಗೆ ಹೇಳಿ“ಧೈರ್ಯವಾಗಿರಿ, ಹೆದರಬೇಡಿ. ನೋಡಿ! ನಿಮ್ಮ ಶತ್ರುಗಳಿಗೆ ಸೇಡು ತೀರಿಸೋಕೆ,ಪ್ರತೀಕಾರ ತಗೊಳ್ಳೋಕೆ ಸ್ವತಃ ನಿಮ್ಮ ದೇವರೇ ಬರ್ತಾನೆ.+ ಆತನು ಬಂದು ನಿಮ್ಮನ್ನ ರಕ್ಷಿಸ್ತಾನೆ.”+   ಆ ಸಮಯದಲ್ಲಿ ಕುರುಡನಿಗೆ ಕಣ್ಣು ಕಾಣಿಸುತ್ತೆ,+ಕಿವುಡನಿಗೆ ಕಿವಿ ಕೇಳಿಸುತ್ತೆ.+   ಆ ಸಮಯದಲ್ಲಿ ಕುಂಟ ಜಿಂಕೆ ತರ ಜಿಗಿತಾನೆ,+ಮೂಕ* ಖುಷಿಯಿಂದ ಕೂಗ್ತಾನೆ.+ ಮರುಭೂಮಿಯಲ್ಲಿ ನೀರು ಉಕ್ಕಿ ಬರುತ್ತೆ,ಬಯಲು ಪ್ರದೇಶದಲ್ಲಿ ತೊರೆಗಳು ಹರಿಯುತ್ತೆ.   ಬೆಂಗಾಡು ಗಿಡಗಳಿರೋ ಕೆರೆ ತರ ಆಗುತ್ತೆ,ಬತ್ತಿದ ನೆಲದಲ್ಲಿ ನೀರಿನ ಬುಗ್ಗೆಗಳು ಹುಟ್ಟಿಕೊಳ್ತವೆ,+ಗುಳ್ಳೆನರಿಗಳು ವಿಶ್ರಾಂತಿ ತಗೊಳ್ತಿದ್ದ ಸ್ಥಳದಲ್ಲಿ+ಹಸಿರುಹುಲ್ಲು, ಆಪುಹುಲ್ಲು ಮತ್ತು ಪಪೈರಸ್‌ ಮೊಳಕೆ ಒಡೆಯುತ್ತೆ.   ಒಂದು ಹೆದ್ದಾರಿ ಇರುತ್ತೆ,+ಹೌದು, ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ. ಯಾವ ಅಶುದ್ಧನೂ ಅದ್ರಲ್ಲಿ ಪ್ರಯಾಣ ಮಾಡಲ್ಲ.+ ಯೋಗ್ಯರು ಮಾತ್ರ ಅದ್ರಲ್ಲಿ ನಡಿತಾರೆ,ಯಾವ ಮೂರ್ಖನೂ ದಾರಿತಪ್ಪಿ ಅದ್ರಲ್ಲಿ ಬರಲ್ಲ.   ಸಿಂಹ ಅಲ್ಲಿರಲ್ಲ,ಕ್ರೂರವಾಗಿರೋ ಕಾಡುಮೃಗಗಳು ಅಲ್ಲಿಗೆ ಬರಲ್ಲ. ಅವು ಅಲ್ಲೆಲ್ಲೂ ಕಾಣಲ್ಲ.+ ಬಂದಿವಾಸದಿಂದ ಬಿಡುಗಡೆಯಾಗಿ ಬಂದವರು ಮಾತ್ರ ಅಲ್ಲಿ ನಡಿತಾರೆ.+ 10  ಯೆಹೋವ ಯಾರನ್ನ ಬಿಡಿಸ್ತಾನೋ ಅವರು ಸಂತೋಷದಿಂದ ಜೈಕಾರ ಹಾಕ್ತಾ ಚೀಯೋನಿಗೆ ವಾಪಸ್‌ ಬರ್ತಾರೆ.+ ಯಾವತ್ತೂ ಅಳಿದುಹೋಗದ ಸಂತೋಷ ಅನ್ನೋ ಕಿರೀಟ ಅವ್ರ ತಲೆಗಳ ಮೇಲೆ ಇರುತ್ತೆ.+ ಸಂಭ್ರಮ, ಸಂತಸ ಅವರದ್ದಾಗುತ್ತೆ,ಗೋಳಾಟ, ನರಳಾಟ ಅವ್ರನ್ನ ಬಿಟ್ಟು ಓಡಿಹೋಗುತ್ತೆ.+

ಪಾದಟಿಪ್ಪಣಿ

ಅಥವಾ “ಹೃದಯದಲ್ಲಿ ಕಳವಳಪಡುವವರಿಗೆ.”
ಅಕ್ಷ. “ಮೂಕನ ನಾಲಿಗೆ.”