ಯೆಶಾಯ 4:1-6
4 ಆ ದಿನದಲ್ಲಿ ಏಳು ಸ್ತ್ರೀಯರು ಒಬ್ಬ ಪುರುಷನನ್ನ ಹಿಡಿದು+ ಹೀಗಂತಾರೆ“ನಮ್ಮ ಊಟದ ಏರ್ಪಾಡು ನಾವೇ ಮಾಡ್ಕೊಳ್ತೀವಿ,ನಮಗಾಗಿ ಬಟ್ಟೆಗಳನ್ನ ನಾವೇ ಹೊಂದಿಸ್ಕೊಳ್ತೀವಿ,ನಮ್ಮನ್ನ ನಿನ್ನವರನ್ನಾಗಿ ಮಾಡ್ಕೊಂಡು ನಿನ್ನ ಹೆಸ್ರಿಂದ ನಮ್ಮನ್ನ ಕರೆಯೋ ಹಾಗೆ ಮಾಡಿದ್ರೆ ಸಾಕು.
ಆಗ ನಮಗೆ ಅವಮಾನ* ಆಗಲ್ಲ.”+
2 ಆ ಸಮಯದಲ್ಲಿ ಯೆಹೋವ ಚಿಗುರಿಸೋ ಸಸ್ಯವರ್ಗ ಸೊಗಸಾಗಿ ಅದ್ಭುತವಾಗಿ ಇರುತ್ತೆ. ಭೂಮಿಯ ಫಲದಿಂದ ಇಸ್ರಾಯೇಲಲ್ಲಿ ಬದುಕುಳಿದ ಜನ ಹೆಮ್ಮೆಪಡ್ತಾರೆ, ಆನಂದಿಸ್ತಾರೆ.+
3 ಚೀಯೋನಲ್ಲಿ, ಯೆರೂಸಲೇಮಲ್ಲಿ ಬದುಕುಳಿದಿರೋ ಜನ ಅಂದ್ರೆ ಯೆರೂಸಲೇಮಲ್ಲಿ ಜೀವಿಸೋಕೆ ಯಾರ ಹೆಸ್ರುಗಳನ್ನ ಬರೆದಿದ್ರೋ ಅವ್ರನ್ನ ಪವಿತ್ರರು ಅಂತ ಕರೀತಾರೆ.+
4 ಯೆಹೋವ ಯೆರೂಸಲೇಮಿನ ಮೇಲೆ ತನ್ನ ಕೋಪ ತೋರಿಸ್ತಾನೆ ಮತ್ತು ಆ ಪಟ್ಟಣಕ್ಕೆ ನ್ಯಾಯತೀರಿಸ್ತಾನೆ.+ ಹೀಗೆ ಆತನು ಚೀಯೋನಿನ ಹೆಣ್ಣುಮಕ್ಕಳ ಕೊಳಕನ್ನ* ತೊಳಿತಾನೆ+ ಮತ್ತು ಯೆರೂಸಲೇಮಿನ ರಕ್ತಾಪರಾಧವನ್ನ ಅಳಿಸಿಹಾಕ್ತಾನೆ.
5 ಇಡೀ ಚೀಯೋನ್ ಬೆಟ್ಟದ ಮೇಲೆ, ಸಮ್ಮೇಳನಕ್ಕಾಗಿ ಸೇರಿಬರೋ ಆ ಪಟ್ಟಣದ ಪ್ರದೇಶಗಳ ಮೇಲೆ ಯೆಹೋವ ಹಗಲಲ್ಲಿ ಮೋಡವನ್ನ, ಹೊಗೆಯನ್ನ ಮತ್ತು ರಾತ್ರಿ ಬೆಳಕು ಕೊಡೋ ಬೆಂಕಿಯನ್ನ ಕೊಡ್ತಾನೆ.+ ಈ ಮಹಿಮಾಭರಿತ ದೇಶದ ಮೇಲೆಲ್ಲ ಸಂರಕ್ಷಣೆಯ ಕವಚ ಇರುತ್ತೆ.
6 ಅಲ್ಲಿ ಒಂದು ಚಪ್ಪರ ಸಹ ಇರುತ್ತೆ. ಅದು ಹಗಲಲ್ಲಿ ಬಿಸಿಲಿನ ತಾಪದಿಂದ ರಕ್ಷಿಸೋಕೆ ನೆರಳನ್ನ ಕೊಡುತ್ತೆ.+ ಬಿರುಗಾಳಿಯಿಂದ ಮತ್ತು ಮಳೆಯಿಂದ ಸಂರಕ್ಷಿಸೋಕೆ ಆಶ್ರಯ ನೀಡುತ್ತೆ.+