ಯೆಶಾಯ 54:1-17

  • ಬಂಜೆಯಾಗಿರೋ ಚೀಯೋನ್‌ಗೆ ತುಂಬ ಮಕ್ಕಳು ಹುಟ್ತಾರೆ (1-17)

    • ಯೆಹೋವ ಚೀಯೋನಿಗೆ ಗಂಡ (5)

    • ಚೀಯೋನಿನ ಮಕ್ಕಳಿಗೆಲ್ಲ ಯೆಹೋವ ಕಲಿಸ್ತಾನೆ (13)

    • ಚೀಯೋನಿನ ವಿರುದ್ಧ ಯಾವುದೇ ಆಯುಧ ಜಯ ಸಾಧಿಸಲ್ಲ (17)

54  ಯೆಹೋವ ಹೀಗೆ ಹೇಳ್ತಿದ್ದಾನೆ “ಬಂಜೆಯೇ, ಮಕ್ಕಳನ್ನ ಹೆರದವಳೇ, ಸಂತೋಷದಿಂದ ಹರ್ಷಧ್ವನಿಗೈ!+ ಹೆರಿಗೆ ನೋವು ಅಂದ್ರೆ ಏನಂತ ಗೊತ್ತಿಲ್ಲದವಳೇ,+ ಉಲ್ಲಾಸಿಸು, ಆನಂದದಿಂದ ಕೂಗು,+ಯಾಕಂದ್ರೆ ಗಂಡ* ಇರುವವಳಿಗಿಂತ ಗಂಡ ಬಿಟ್ಟಿರುವವಳಿಗೆ ಮಕ್ಕಳು* ಹೆಚ್ಚು.+   ನಿನ್ನ ಡೇರೆಯನ್ನ ಇನ್ನು ಸ್ವಲ್ಪ ವಿಶಾಲಗೊಳಿಸು.+ ಭವ್ಯವಾದ ನಿನ್ನ ಡೇರೆಯ ಬಟ್ಟೆಗಳನ್ನ ಹರಡು. ಹಿಂಜರಿಬೇಡ, ನಿನ್ನ ಡೇರೆಯ ಹಗ್ಗಗಳನ್ನ ಉದ್ದಮಾಡು,ನಿನ್ನ ಡೇರೆಯ ಗೂಟವನ್ನ ಬಲಪಡಿಸು.+   ಯಾಕಂದ್ರೆ ನೀನು ನಿನ್ನ ಗಡಿಯನ್ನ ಬಲಕ್ಕೂ ಎಡಕ್ಕೂ ಹಬ್ಬಿಸ್ತೀಯ. ನಿನ್ನ ಸಂತತಿಯವರು ಜನಾಂಗಗಳ ಮೇಲೆ ಅಧಿಕಾರ ನಡಿಸ್ತಾರೆ,ಹಾಳುಬಿದ್ದಿರೋ ಪಟ್ಟಣಗಳಲ್ಲಿ ಅವರು ಮತ್ತೆ ವಾಸಿಸ್ತಾರೆ.+   ಹೆದರಬೇಡ,+ ಯಾಕಂದ್ರೆ ನಿನ್ನನ್ನ ಅಪಮಾನಕ್ಕೆ ಗುರಿಮಾಡಲಾಗಲ್ಲ,+ನಿನಗೆ ಅವಮಾನ ಆಯ್ತಂತ ಅಂದ್ಕೊಳ್ಳಬೇಡ. ಯಾಕಂದ್ರೆ ನಿನಗೆ ನಿರಾಶೆಯಾಗಲ್ಲ. ಯೌವನದಲ್ಲಿ ನಿನಗಾದ ಅಪಮಾನವನ್ನ ನೀನು ಮರೆತು ಬಿಡ್ತೀಯ,ನೀನು ವಿಧವೆ ಆಗಿರೋ ಅವಮಾನವನ್ನ ಮುಂದೆ ಯಾವತ್ತೂ ನೆನಪಿಸ್ಕೊಳ್ಳಲ್ಲ.”   “ನಿನ್ನ ಮಹಾ ಸೃಷ್ಟಿಕರ್ತನೇ*+ ನಿನಗೆ ಗಂಡನಂತಿದ್ದಾನೆ,*+ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು,ಇಸ್ರಾಯೇಲ್ಯರ ಪವಿತ್ರ ದೇವರೇ ನಿನ್ನನ್ನ ಬಿಡಿಸ್ಕೊಂಡು ಬಂದವನು.+ ಆತನನ್ನ ಇಡೀ ಭೂಮಿಗೆ ದೇವರು ಅಂತ ಕರೆಯಲಾಗುತ್ತೆ.+   ಯಾಕಂದ್ರೆ ತೊರೆದುಬಿಟ್ಟಿರೋ ಮತ್ತು ಮನನೊಂದಿರೋ ಹೆಂಡತಿಯನ್ನ ಕರಿಯೋ ತರ,+ಯೌವನದಲ್ಲಿ ಮದುವೆಯಾಗಿ ಆಮೇಲೆ ನಿರಾಕರಿಸಿರೋ ಹೆಂಡತಿಯನ್ನ ಕರಿಯೋ ತರ ಯೆಹೋವ ನಿನ್ನನ್ನ ಕರೆದಿದ್ದಾನೆ” ಅಂತ ನಿನ್ನ ದೇವರು ಹೇಳ್ತಿದ್ದಾನೆ.   “ಕ್ಷಣ ಮಾತ್ರಕ್ಕೆ ನಾನು ನಿನ್ನನ್ನ ತೊರೆದುಬಿಟ್ಟಿದ್ದೆ,ಆದ್ರೆ ಮಹಾ ಕರುಣೆಯಿಂದ ಮತ್ತೆ ನಾನು ನಿನ್ನನ್ನ ಸೇರಿಸ್ಕೊಳ್ತೀನಿ.+   ವಿಪರೀತವಾದ ಕ್ರೋಧದಿಂದ* ನಾನು ನನ್ನ ಮುಖವನ್ನ ಒಂದು ಕ್ಷಣಕ್ಕೆ ನಿನ್ನಿಂದ ಮರೆಮಾಡ್ಕೊಂಡಿದ್ದೆ,+ಆದ್ರೆ ಅಂತ್ಯವಿಲ್ಲದ ಶಾಶ್ವತ ಪ್ರೀತಿಯಿಂದ ನಾನು ನಿನಗೆ ಕರುಣೆ ತೋರಿಸ್ತೀನಿ”+ ಅಂತ ನಿನ್ನನ್ನ ಬಿಡಿಸ್ಕೊಂಡು ಬರೋ+ ಯೆಹೋವ ಹೇಳ್ತಿದ್ದಾನೆ.   “ಇದು ನನಗೆ ನೋಹನ ದಿನಗಳ ತರ ಇದೆ.+ ಇನ್ನು ಮುಂದೆ ಜಲಪ್ರಳಯದಿಂದ ಭೂಮಿಯನ್ನ ಮುಳುಗಿಸಲ್ಲ ಅಂತ ನಾನು ನೋಹನ ಕಾಲದಲ್ಲಿ ಆಣೆ ಮಾಡಿದ್ದೆ.+ ಅದೇ ರೀತಿ ಇನ್ನು ಯಾವತ್ತೂ ನಾನು ನಿನ್ನ ಮೇಲೆ ಕೋಪ ಮಾಡ್ಕೊಳ್ಳಲ್ಲ ಅಂತ, ನಿನ್ನನ್ನ ಗದರಿಸಲ್ಲ ಅಂತ ಆಣೆ ಮಾಡ್ತೀನಿ.+ 10  ಪರ್ವತಗಳು ಅಳಿದು ಹೋದ್ರೂಬೆಟ್ಟಗಳು ಕದಲಿ ಹೋದ್ರೂನಿನ್ನ ಮೇಲೆ ನನಗಿರೋ ಶಾಶ್ವತ ಪ್ರೀತಿ ಅಳಿದುಹೋಗಲ್ಲ,+ನಾನು ಮಾಡ್ಕೊಂಡಿರೋ ಶಾಂತಿಯ ಒಪ್ಪಂದ ಕದಲಿಹೋಗಲ್ಲ,”+ ಅಂತ ನಿನ್ನ ಮೇಲೆ ಕರುಣೆಯಿರೋ ಯೆಹೋವ ಹೇಳ್ತಿದ್ದಾನೆ.+ 11  “ಕಷ್ಟದಲ್ಲಿರೋ ಸ್ತ್ರೀಯೇ,+ ಬಿರುಗಾಳಿಯ ಬಡಿತಕ್ಕೆ ಗುರಿ ಆಗಿರುವವಳೇ, ಸಾಂತ್ವನ ಸಿಗದಿರುವವಳೇ,+ಗಟ್ಟಿಯಾದ ಗಾರೆ ಹಾಕಿ ನಾನು ನಿನ್ನ ಕಲ್ಲುಗಳನ್ನ ಕೂರಿಸ್ತೀನಿನೀಲಮಣಿಗಳಿಂದ ನಿನ್ನ ಅಡಿಪಾಯವನ್ನ ಹಾಕ್ತೀನಿ.+ 12  ನಾನು ನಿನ್ನ ಕೈಪಿಡಿಗೋಡೆಗಳಿಗೆ ಮಾಣಿಕ್ಯಗಳನ್ನ,ನಿನ್ನ ಬಾಗಿಲುಗಳಿಗೆ ಹೊಳೆಯೋ ಕಲ್ಲುಗಳನ್ನ,*ನಿನ್ನ ಎಲ್ಲ ಗಡಿಗಳಿಗೆ ಅಮೂಲ್ಯವಾದ ಕಲ್ಲುಗಳನ್ನ ಹಾಕ್ತೀನಿ. 13  ನಿನ್ನ ಮಕ್ಕಳೆಲ್ಲ* ಯೆಹೋವನಿಂದ ಕಲಿತಾರೆ,+ನಿನ್ನ ಮಕ್ಕಳಿಗೆ* ಅಪಾರವಾದ ಶಾಂತಿ ಇರುತ್ತೆ.+ 14  ನಿನ್ನನ್ನ ನೀತಿಯಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ.+ ದಬ್ಬಾಳಿಕೆಯನ್ನ ನಿನ್ನಿಂದ ತುಂಬ ದೂರದಲ್ಲಿ ಇರಿಸಲಾಗುತ್ತೆ,+ನಿನಗೆ ಯಾವ ಭಯನೂ ಇರಲ್ಲ, ಯಾವುದೂ ನಿನ್ನನ್ನ ಹೆದರಿಸಲ್ಲ,ಅದು ನಿನ್ನ ಹತ್ರಕ್ಕೂ ಬರಲ್ಲ.+ 15  ಯಾರಾದ್ರೂ ನಿನ್ನ ಮೇಲೆ ದಾಳಿ ಮಾಡಿದ್ರೆ,ಅದು ನನ್ನ ಆದೇಶದಿಂದಲ್ಲ. ನಿನ್ನ ಮೇಲೆ ದಾಳಿ ಮಾಡುವವರು ಯಾರೇ ಆಗಿರಲಿ ಅವರು ಸೋಲುಣ್ಣುತ್ತಾರೆ.”+ 16  “ಇಗೋ! ಕೆಂಡವನ್ನ ಊದುತ್ತಾ,ಆಯುಧಗಳನ್ನ ತಯಾರಿಸೋಕರಕುಶಲಗಾರನನ್ನ ಸೃಷ್ಟಿಸಿದವನು ನಾನೇ,ನಾಶಮಾಡೋ ನಾಶಕನನ್ನ ಸೃಷ್ಟಿಸಿದವನೂ ನಾನೇ.+ 17  ನಿನಗೆ ಹಾನಿಮಾಡೋಕೆ ತಯಾರಿಸೋ ಯಾವುದೇ ಆಯುಧ ಜಯವನ್ನ ಸಾಧಿಸಲ್ಲ,+ನ್ಯಾಯವಿಚಾರಣೆಯ ಸಮ್ಯದಲ್ಲಿ ನಿನ್ನ ವಿರುದ್ಧ ಮಾತಾಡೋ ಪ್ರತಿಯೊಂದು ನಾಲಿಗೆಯನ್ನ ನೀನು ಖಂಡಿಸ್ತೀಯ. ಯೆಹೋವನ ಸೇವಕರಿಗೆ ಸಿಗೋ ಆಸ್ತಿ* ಇದೇ,ನಾನು ಅವ್ರನ್ನ ನೀತಿವಂತರು ಅಂತ ಕಾಣ್ತೀನಿ” ಅಂತ ಯೆಹೋವ ಹೇಳ್ತಿದ್ದಾನೆ.+

ಪಾದಟಿಪ್ಪಣಿ

ಅಥವಾ “ಯಜಮಾನ.”
ಅಕ್ಷ. “ಗಂಡು ಮಕ್ಕಳು.”
ಅಥವಾ “ರಚಕನೇ.”
ಅಥವಾ “ಯಜಮಾನನ ತರ ಇದ್ದಾನೆ.”
ಅಕ್ಷ. “ಕ್ರೋಧದ ಪ್ರವಾಹದಲ್ಲಿ.”
ಅಥವಾ “ಬೆಂಕಿಯ ಕಲ್ಲುಗಳನ್ನ.”
ಅಕ್ಷ. “ಗಂಡು ಮಕ್ಕಳು.”
ಅಕ್ಷ. “ಗಂಡು ಮಕ್ಕಳು.”
ಅಕ್ಷ. “ಪಿತ್ರಾರ್ಜಿತವಾಗಿ ಬಂದ ಸ್ವತ್ತು.”