ಯೆಶಾಯ 60:1-22

  • ಯೆಹೋವನ ಮಹಿಮೆ ಚೀಯೋನಿನ ಮೇಲೆ ಪ್ರಕಾಶಿಸ್ತಿದೆ (1-22)

    • ಗೂಡಿಗೆ ಸೇರ್ಕೊಳ್ಳೋ ಪಾರಿವಾಳಗಳ ತರ (8)

    • ತಾಮ್ರಕ್ಕೆ ಬದಲಾಗಿ ಚಿನ್ನ (17)

    • ಅಲ್ಪನು ಸಾವಿರವಾಗ್ತಾನೆ (22)

60  “ಸ್ತ್ರೀಯೇ* ಎದ್ದೇಳು,+ ಎದ್ದು ನಿನ್ನ ಬೆಳಕನ್ನ ಬೀರು. ಯಾಕಂದ್ರೆ ನಿನ್ನ ಬೆಳಕು ಬಂದಿದೆ. ಯೆಹೋವನ ಮಹಿಮೆ ನಿನ್ನ ಮೇಲೆ ಪ್ರಕಾಶಿಸ್ತಿದೆ.+   ಇಗೋ! ಕತ್ತಲು ಭೂಮಿಯನ್ನ ಮುಚ್ಚಿಬಿಡಲಿದೆ,ಗಾಢ ಅಂಧಕಾರ ಜನಾಂಗಗಳನ್ನ ಆವರಿಸಲಿದೆ,ಆದ್ರೆ ಯೆಹೋವ ನಿನ್ನ ಮೇಲೆ ಪ್ರಕಾಶಿಸ್ತಾನೆ,ಆತನ ಮಹಿಮೆ ನಿನ್ನ ಮೇಲೆ ಕಾಣಿಸುತ್ತೆ.   ಜನಾಂಗಗಳು ನಿನ್ನ ಬೆಳಕಿನ ಕಡೆ ಬರ್ತವೆ,+ರಾಜರು+ ಪ್ರಕಾಶ ಮಾನವಾದ ನಿನ್ನ ಕಾಂತಿಯ* ಕಡೆ ಬರ್ತಾರೆ.+   ಕಣ್ಣೆತ್ತಿ ಸುತ್ತಲೂ ನೋಡು! ಅವ್ರೆಲ್ಲ ಒಟ್ಟುಸೇರಿದ್ದಾರೆ, ನಿನ್ನ ಹತ್ರ ಬರ್ತಿದ್ದಾರೆ. ನಿನ್ನ ಗಂಡು ಮಕ್ಕಳು ದೂರದಿಂದ ಬರ್ತಿದ್ದಾರೆ,+ನಿನ್ನ ಹೆಣ್ಣು ಮಕ್ಕಳನ್ನ ಕಂಕುಳಲ್ಲಿ ಎತ್ಕೊಂಡು ತರಲಾಗ್ತಿದೆ.+   ಆ ಸಮ್ಯದಲ್ಲಿ ನೀನು ಏನು ನೋಡ್ತೀಯೋ ಅದ್ರಿಂದ ನಿನ್ನ ಮುಖ ಕಾಂತಿ ಬೀರುತ್ತೆ,+ನಿನ್ನ ಹೃದಯ ಸಂಭ್ರಮಿಸುತ್ತೆ ಮತ್ತು ಸಂತೋಷದಿಂದ ತುಂಬಿಹೋಗುತ್ತೆ. ಯಾಕಂದ್ರೆ ಸಮುದ್ರದ ಸಮೃದ್ಧಿ ನಿನ್ನ ಕಡೆ ತಿರುಗುತ್ತೆ,ಜನಾಂಗಗಳ ಸಂಪತ್ತು ನಿನ್ನ ಹತ್ರ ಬರುತ್ತೆ.+   ನಿನ್ನ ದೇಶವನ್ನ* ಒಂಟೆಗಳ ಗುಂಪು ತುಂಬ್ಕೊಳ್ಳುತ್ತೆ,ಹೌದು, ಮಿದ್ಯಾನ್‌ ಮತ್ತು ಏಫ+ ದೇಶದ ಎಳೇ ಒಂಟೆಗಳು ಮುಚ್ಚಿಬಿಡ್ತವೆ. ಶೆಬ ದೇಶದ ಜನ್ರೆಲ್ಲ ಬರ್ತಾರೆ,ಅವರು ತಮ್ಮ ಜೊತೆ ಚಿನ್ನವನ್ನೂ ಸಾಂಬ್ರಾಣಿಯನ್ನೂ ತರ್ತಾರೆ. ಅವರು ಬಂದು ಯೆಹೋವನ ಗುಣಗಾನ ಮಾಡ್ತಾರೆ.+   ಕೇದಾರಿನ+ ಮಂದೆಗಳೆಲ್ಲ ನಿನ್ನ ಹತ್ರ ಒಟ್ಟು ಸೇರ್ತವೆ. ನೆಬಾಯೋತಿನ+ ಟಗರುಗಳು ನಿನ್ನ ಸೇವೆ ಮಾಡ್ತವೆ. ಅವು ನನ್ನ ಯಜ್ಞವೇದಿ ಮೇಲೆ ಬರ್ತವೆ, ಅವುಗಳನ್ನ ನಾನು ಮೆಚ್ಚಿ ಸ್ವೀಕರಿಸ್ತೀನಿ.+ ನಾನು ನನ್ನ ಮಹಿಮಾನ್ವಿತ ಆಲಯದ* ಅಂದವನ್ನ ಹೆಚ್ಚಿಸ್ತೀನಿ.+   ಮೋಡಗಳ ತರ ಹಾರಿಬರ್ತಿರೋ,ಗೂಡಿಗೆ* ಸೇರಿಕೊಳ್ಳೋ ಪಾರಿವಾಳಗಳ ತರ ಹಾರಿಬರ್ತಿರೋ ಇವರು ಯಾರು?   ದ್ವೀಪಗಳು ನನ್ನ ಮೇಲೆ ನಿರೀಕ್ಷೆ ಇಟ್ಕೊಂಡಿವೆ.+ ತಾರ್ಷೀಷಿನ ಹಡಗುಗಳು ಎಲ್ಲವುಗಳಿಗಿಂತ ಮುಂದಿವೆ,ಅವು ನಿನ್ನ ಗಂಡು ಮಕ್ಕಳನ್ನ ತುಂಬ ದೂರದಿಂದ ಕರ್ಕೊಂಡು ಬರ್ತಿವೆ,+ಅವರು ನಿನ್ನ ದೇವರಾದ ಯೆಹೋವನ ಹೆಸ್ರನ್ನ ಹೊಗಳೋಕೆ, ಇಸ್ರಾಯೇಲ್ಯರ ಪವಿತ್ರ ದೇವರನ್ನ ಘನಪಡಿಸೋಕೆ,ತಮ್ಮ ಜೊತೆ ಬೆಳ್ಳಿಬಂಗಾರ ತರ್ತಿದ್ದಾರೆ. ಯಾಕಂದ್ರೆ ನಾನು ನಿನ್ನನ್ನ ಮಹಿಮೆಪಡಿಸ್ತೀನಿ.+ 10  ವಿದೇಶಿಯರು ನಿನ್ನ ಗೋಡೆ ಕಟ್ತಾರೆ,ಅವ್ರ ಅರಸರು ನಿನಗೆ ಸೇವೆಮಾಡ್ತಾರೆ,+ನಾನು ಕೋಪದಲ್ಲಿ ನಿನಗೆ ಹೊಡೆದಿದ್ದೆ,ಆದ್ರೆ ಈಗ ನಿನ್ನನ್ನ ಮೆಚ್ಚಿ* ಕರುಣೆ ತೋರಿಸ್ತೀನಿ.+ 11  ನಿನ್ನ ಬಾಗಿಲುಗಳನ್ನ ಯಾವತ್ತೂ ಮುಚ್ಚಲಾಗಲ್ಲ,+ಜನಾಂಗಗಳ ಸಿರಿಸಂಪತ್ತನ್ನ ನಿನ್ನ ಹತ್ರ ತಗೊಂಡು ಬರೋಕೆ ಆಗೋ ತರ,ಹಗಲೂರಾತ್ರಿ ಅವುಗಳನ್ನ ತೆರೆದೇ ಇಡಲಾಗುತ್ತೆ,ಸಿರಿಸಂಪತ್ತನ್ನ ತಗೊಂಡು ಬರೋ ಉಸ್ತುವಾರಿಯನ್ನ ಆ ಜನಾಂಗಗಳ ರಾಜರೇ ವಹಿಸ್ಕೊಳ್ತಾರೆ.+ 12  ನಿನ್ನ ಸೇವೆಮಾಡದ ಯಾವುದೇ ಜನಾಂಗವಾಗಲಿ, ಯಾವುದೇ ಸಾಮ್ರಾಜ್ಯವಾಗಲಿ ನಾಶವಾಗದೆ ಹೋಗಲ್ಲ,ಆ ಜನಾಂಗಗಳು ಸರ್ವನಾಶವಾಗ್ತವೆ.+ 13  ನನ್ನ ಪವಿತ್ರ ಸ್ಥಳವನ್ನ ಅಂದಗೊಳಿಸೋಕೆಜುನಿಪರ್‌ ಮರ, ಬೂದಿಮರ ಮತ್ತು ಶಂಕುಮರ,+ಹೌದು, ಲೆಬನೋನಿನ ಮಹಿಮೆನೇ ನಡ್ಕೊಂಡು ನಿನ್ನ ಹತ್ರ ಬರುತ್ತೆ.+ ನಾನು ನನ್ನ ಪಾದಸನ್ನಿಧಿಯನ್ನ ಮಹಿಮೆಯಿಂದ ತುಂಬಿಸ್ತೀನಿ.+ 14  ನಿನ್ನ ಮೇಲೆ ದಬ್ಬಾಳಿಕೆ ಮಾಡಿದವರ ಗಂಡುಮಕ್ಕಳು ನಿನ್ನ ಹತ್ರ ಬಂದು, ಬಗ್ಗಿ ನಿನಗೆ ನಮಸ್ಕರಿಸ್ತಾರೆ,ನಿನ್ನನ್ನ ಅಗೌರವದಿಂದ ನೋಡ್ತಿದ್ದವರೆಲ್ಲ ನಿನ್ನ ಪಾದಗಳಿಗೆ ಬೀಳಲೇ ಬೇಕು,ಅವರು ನಿನ್ನನ್ನ ಯೆಹೋವನ ಪಟ್ಟಣ ಅಂತ,ಇಸ್ರಾಯೇಲ್ಯರ ಪವಿತ್ರ ದೇವರ ಚೀಯೋನ್‌ ಅಂತ ಕರಿಬೇಕಾಗುತ್ತೆ.+ 15  ನಿನ್ನನ್ನ ತೊರೆಯಲಾಗಿದೆ, ದ್ವೇಷಿಸಲಾಗಿದೆ, ನಿನ್ನ ಮೂಲಕ ಯಾರೂ ಹಾದುಹೋಗ್ತಿಲ್ಲ,+ಆದ್ರೆ ನಾನು ನಿನ್ನನ್ನ ಶಾಶ್ವತವಾದ ಹೆಮ್ಮೆಯ ಮೂಲವನ್ನಾಗಿಯೂತಲತಲಾಂತರಗಳ ತನಕ ಸಂತೋಷಕ್ಕೆ ಕಾರಣವನ್ನಾಗಿಯೂ ಮಾಡ್ತಿನಿ.+ 16  ತಾಯಿ ತನ್ನ ಮಗುವಿಗೆ ಎದೆಹಾಲನ್ನ ಉಣಿಸೋ ತರ,ಜನಾಂಗಗಳು ಮತ್ತು ರಾಜರು ನಿನ್ನ ಎಲ್ಲ ಅಗತ್ಯಗಳನ್ನ ಪೂರೈಸ್ತಾರೆ.+ ಯೆಹೋವನಾದ ನಾನೇ ನಿನ್ನ ರಕ್ಷಕ,ಯಾಕೋಬನ ಶಕ್ತಿವಂತನೇ ನಿನ್ನನ್ನ ಬಿಡುಗಡೆ ಮಾಡುವವನು ಅಂತ ನೀನು ಖಂಡಿತ ತಿಳ್ಕೊಳ್ತೀಯ.+ 17  ನಾನು ತಾಮ್ರಕ್ಕೆ ಬದಲಾಗಿ ಚಿನ್ನ,ಕಬ್ಬಿಣಕ್ಕೆ ಬದಲಾಗಿ ಬೆಳ್ಳಿ,ಮರಕ್ಕೆ ಬದಲಾಗಿ ತಾಮ್ರ,ಕಲ್ಲುಗಳಿಗೆ ಬದಲಾಗಿ ಕಬ್ಬಿಣ ತರ್ತಿನಿ. ಶಾಂತಿಯನ್ನ ನಿನ್ನ ಮೇಲ್ವಿಚಾರಕನನ್ನಾಗಿನೀತಿಯನ್ನ ನಿನ್ನ ಅಧಿಕಾರಿಯನ್ನಾಗಿ ನೇಮಿಸ್ತೀನಿ.+ 18  ಮುಂದೆ ಯಾವತ್ತೂ ನಿನ್ನ ದೇಶದಲ್ಲಿ ಹಿಂಸೆಯ ಕುರಿತಾದ ಸುದ್ದಿಯಾಗಲಿ,ನಿನ್ನ ಗಡಿಯೊಳಗೆ ನಾಶ ಮತ್ತು ವಿನಾಶದ ಬಗ್ಗೆ ಮಾತಾಗಲಿ ಕೇಳಿಬರಲ್ಲ.+ ನೀನು ನಿನ್ನ ಗೋಡೆಗಳಿಗೆ ‘ರಕ್ಷಣೆ’+ ಅಂತ, ನಿನ್ನ ಬಾಗಿಲುಗಳಿಗೆ ‘ಸ್ತುತಿ’ ಅಂತ ಹೆಸ್ರಿಡ್ತೀಯ. 19  ಇನ್ನು ಮುಂದಕ್ಕೆ ಹಗಲಲ್ಲಿ ಸೂರ್ಯ ನಿನಗೆ ಬೆಳಕು ಕೊಡಲ್ಲ,ಚಂದ್ರ ತನ್ನ ಬೆಳದಿಂಗಳನ್ನ ಸೂಸಲ್ಲ,ಯಾಕಂದ್ರೆ ಯೆಹೋವನಾದ ನಾನೇ ನಿನಗೆ ಶಾಶ್ವತ ಬೆಳಕಾಗ್ತೀನಿ,+ನಿನ್ನ ದೇವರಾದ ನಾನೇ ನಿನ್ನ ಸೊಬಗಾಗ್ತೀನಿ.+ 20  ಇನ್ನು ಮುಂದಕ್ಕೆ ನಿನ್ನ ಸೂರ್ಯ ಮುಳುಗಲ್ಲ,ನಿನ್ನ ಚಂದ್ರನ ಬೆಳದಿಂಗಳು ಕಡಿಮೆಯಾಗಲ್ಲ. ನಿನ್ನ ಗೋಳಾಟದ ದಿನಗಳು ಕೊನೆ ಆಗಿವೆ,+ಯಾಕಂದ್ರೆ ಯೆಹೋವನಾದ ನಾನೇ ನಿನಗೆ ಶಾಶ್ವತ ಬೆಳಕಾಗ್ತೀನಿ.+ 21  ನಿನ್ನ ಜನ್ರೆಲ್ಲ ನೀತಿವಂತರಾಗಿ ಇರ್ತಾರೆ,ಅವರು ಈ ದೇಶವನ್ನ ಶಾಶ್ವತವಾದ ಆಸ್ತಿಯಾಗಿ ಪಡ್ಕೊಳ್ತಾರೆ. ನನ್ನ ಮಹಿಮೆಯನ್ನ ಹೆಚ್ಚಿಸೋಕೆ+ನಾನು ನೆಟ್ಟ ಗಿಡನೂ ನನ್ನ ಕೈಕೆಲಸನೂ ಅವರಾಗಿದ್ದಾರೆ.+ 22  ನಿಮ್ಮಲ್ಲಿರೋ ಅಲ್ಪನು ಸಾವಿರ ಮಂದಿ ಆಗ್ತಾನೆ,ಕನಿಷ್ಠನು ಒಂದು ದೊಡ್ಡ ಜನಾಂಗ ಆಗ್ತಾನೆ. ಯೆಹೋವನಾದ ನಾನೇ ತಕ್ಕ ಸಮಯಕ್ಕೆ ಅದ್ರ ವೇಗವನ್ನ ಹೆಚ್ಚಿಸ್ತೀನಿ.”

ಪಾದಟಿಪ್ಪಣಿ

ಅದು, ಯೆರೂಸಲೇಮ್‌.
ಅಥವಾ “ಉದಯಪ್ರಕಾಶದ.”
ಅಕ್ಷ. “ನಿನ್ನನ್ನ.”
ಅಥವಾ “ಸುಂದರ ಆಲಯದ.”
ಇದು ಪಕ್ಷಿಗಳಿಗಾಗಿ ಮನುಷ್ಯರು ಮಾಡಿರೋ ಗೂಡು.
ಅಥವಾ “ಪ್ರಸನ್ನತೆಯಿಂದ.”