ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೆಜ್ಕೇಲ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಯೆಹೆಜ್ಕೇಲನಿಗೆ ದೇವರು ಬಾಬೆಲಿನಲ್ಲಿ ದರ್ಶನಗಳನ್ನ ತೋರಿಸಿದನು (1-3)

    • ಯೆಹೋವನ ಸ್ವರ್ಗೀಯ ರಥದ ದರ್ಶನ (4-28)

      • ಬಿರುಗಾಳಿ, ಮೋಡ, ಬೆಂಕಿ (4)

      • ನಾಲ್ಕು ಜೀವಿಗಳು (5-14)

      • ನಾಲ್ಕು ಚಕ್ರಗಳು (15-21)

      • ಮಂಜುಗಡ್ಡೆಯ ಹಾಗೆ ಪಳಪಳಿಸ್ತಿದ್ದ ಕಲ್ಲಿನ ನೆಲ (22-24)

      • ಯೆಹೋವನ ಸಿಂಹಾಸನ (25-28)

  • 2

    • ಯೆಹೆಜ್ಕೇಲ ಪ್ರವಾದಿಯಾಗಿ ನೇಮಕ (1-10)

      • ‘ಅವರು ಮಾತು ಕೇಳಲಿ ಬಿಡಲಿ’ (5)

      • ಶೋಕಗೀತೆಗಳ ಸುರುಳಿ ಕಾಣಿಸ್ತು (9, 10)

  • 3

    • ದೇವರು ಕೊಟ್ಟ ಸುರುಳಿಯನ್ನ ಯೆಹೆಜ್ಕೇಲ ತಿನ್ನಬೇಕು (1-15)

    • ಯೆಹೆಜ್ಕೇಲನಿಗೆ ಕಾವಲುಗಾರನ ನೇಮಕ (16-27)

      • ಎಚ್ಚರಿಸದಿದ್ರೆ ಬೇರೆಯವರ ಸಾವಿಗೆ ಹೊಣೆಗಾರ (18-21)

  • 4

    • ಯೆರೂಸಲೇಮಿನ ಮುತ್ತಿಗೆಯನ್ನ ಚಿತ್ರಿಸಿದ್ದು (1-17)

      • 390 ದಿನ ಮತ್ತು 40 ದಿನ ಅಪರಾಧ ಹೊತ್ಕೊಬೇಕು (4-7)

  • 5

    • ಯೆರೂಸಲೇಮಿನ ನಾಶದ ಚಿತ್ರಣ (1-17)

      • ಪ್ರವಾದಿಯ ತಲೆ ಗಡ್ಡ ಬೋಳಿಸಿ ಕೂದಲನ್ನ ಮೂರು ಭಾಗ ಮಾಡಿದ್ದು (1-4)

      • ಬೇರೆ ಜನಾಂಗಗಳಿಗಿಂತ ಯೆರೂಸಲೇಮ್‌ ಹೆಚ್ಚು ಕೆಟ್ಟದು (7-9)

      • ದಂಗೆಕೋರರಿಗೆ ಮೂರು ತರದ ಶಿಕ್ಷೆ (12)

  • 6

    • ಇಸ್ರಾಯೇಲಿನ ಬೆಟ್ಟಗಳ ವಿರುದ್ಧ ಭವಿಷ್ಯವಾಣಿ (1-14)

      • ಅಸಹ್ಯ ಮೂರ್ತಿಗಳಿಗೆ ಅವಮಾನ ಆಗುತ್ತೆ (4-6)

      • “ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ” (7)

  • 7

    • ಅಂತ್ಯ ಬಂದಿದೆ (1-27)

      • ಇಲ್ಲಿ ತನಕ ಬಂದಿರದ ಕಷ್ಟ (5)

      • ಹಣವನ್ನ ಬೀದಿಗಳಲ್ಲಿ ಬಿಸಾಡ್ತಾರೆ (19)

      • ಆಲಯವನ್ನ ಅಪವಿತ್ರ ಮಾಡ್ತಾರೆ (22)

  • 8

    • ದರ್ಶನದಲ್ಲಿ ಯೆಹೆಜ್ಕೇಲ ಯೆರೂಸಲೇಮಿಗೆ (1-4)

    • ದೇವಾಲಯದಲ್ಲಿ ಅಸಹ್ಯ ಕೆಲಸಗಳನ್ನ ನೋಡಿದ (5-18)

      • ತಮ್ಮೂಜ್‌ ದೇವನಿಗಾಗಿ ಸ್ತ್ರೀಯರು ಅಳ್ತಿದ್ದಾರೆ (14)

      • ಗಂಡಸರು ಸೂರ್ಯನಿಗೆ ಅಡ್ಡಬೀಳ್ತಿದ್ದಾರೆ (16)

  • 9

    • ಆರು ವಿನಾಶಕರು, ಶಾಯಿಕೊಂಬು ಇಟ್ಕೊಂಡಿದ್ದ ಪುರುಷ (1-11)

      • ಆರಾಧನಾ ಸ್ಥಳದಿಂದನೇ ಶಿಕ್ಷೆ ಶುರು (6)

  • 10

    • ಚಕ್ರಗಳ ಮಧ್ಯದಿಂದ ಕೆಂಡಗಳನ್ನ ತಗೊಂಡ (1-8)

    • ಕೆರೂಬಿಯರ ಮತ್ತು ಚಕ್ರಗಳ ವರ್ಣನೆ (9-17)

    • ದೇವರ ಮಹಿಮೆ ಆಲಯವನ್ನ ಬಿಟ್ಟು ಹೋಯ್ತು (18-22)

  • 11

    • ಕೆಟ್ಟ ಅಧಿಕಾರಿಗಳಿಗೆ ಖಂಡನೆ (1-13)

      • ಪಟ್ಟಣ ಅಡುಗೆ ಪಾತ್ರೆ ತರ ಇದೆ (3-12)

    • ತಮ್ಮ ದೇಶಕ್ಕೆ ವಾಪಸ್‌ ಹೋಗ್ತಾರೆ ಅಂತ ಮಾತುಕೊಟ್ಟಿದ್ದು (14-21)

      • “ಹೊಸ ಸ್ವಭಾವ” ಕೊಡಲಾಯ್ತು (19)

    • ದೇವರ ಮಹಿಮೆ ಯೆರೂಸಲೇಮನ್ನ ಬಿಟ್ಟು ಹೋಯ್ತು (22, 23)

    • ಯೆಹೆಜ್ಕೇಲ ದರ್ಶನದಲ್ಲಿ ಮತ್ತೆ ಕಸ್ದೀಯ ದೇಶಕ್ಕೆ ಬಂದ (24, 25)

  • 12

    • ಜನ ಕೈದಿಗಳಾಗಿ ಹೋಗೋದನ್ನ ಮಾಡಿ ತೋರಿಸಿದ್ದು (1-20)

      • ಕೈದಿಯಾಗಿ ಹೋಗೋಕೆ ಗಂಟುಮೂಟೆ (1-7)

      • ಪ್ರಧಾನನು ಕತ್ತಲೆಯಲ್ಲಿ ಹೋಗ್ತಾನೆ (8-16)

      • ಭಯದಿಂದ ಊಟ ಮಾಡಿ ಗಾಬರಿಯಿಂದ ನೀರು ಕುಡಿಯೋದು (17-20)

    • ಮೋಸದ ಮಾತು ಸುಳ್ಳಾಯ್ತು (21-28)

      • “ನಾನು ಹೇಳೋ ಒಂದೊಂದು ಮಾತೂ ಬೇಗ ನಿಜ ಆಗುತ್ತೆ” (28)

  • 13

    • ಸುಳ್ಳು ಪ್ರವಾದಿಗಳ ವಿರುದ್ಧ ಹೇಳ್ತಿರೋ ಭವಿಷ್ಯ (1-16)

      • ಸುಣ್ಣ ಬಳಿದಿರೋ ಗೋಡೆಗಳು ಬಿದ್ದು ಹೋಗುತ್ತೆ (10-12)

    • ಸುಳ್ಳು ಭವಿಷ್ಯ ಹೇಳೋ ಹೆಂಗಸರ ಭವಿಷ್ಯ (17-23)

  • 14

    • ಮೂರ್ತಿಪೂಜೆ ಮಾಡುವವರಿಗೆ ಶಿಕ್ಷೆ ಕೊಡ್ತೀನಿ ಅಂತ ಹೇಳಿದ್ದು (1-11)

    • ಯೆರೂಸಲೇಮಿಗೆ ಶಿಕ್ಷೆ ತಪ್ಪಲ್ಲ (12-23)

      • ನೀತಿವಂತರಾದ ನೋಹ, ದಾನಿಯೇಲ ಮತ್ತು ಯೋಬ (14, 20)

  • 15

    • ಯೆರೂಸಲೇಮ್‌ ಕೆಲಸಕ್ಕೆ ಬಾರದ ದ್ರಾಕ್ಷಿಬಳ್ಳಿ (1-8)

  • 16

    • ಯೆರೂಸಲೇಮಿನ ಮೇಲೆ ದೇವರಿಗಿರುವ ಪ್ರೀತಿ (1-63)

      • ಬಿಸಾಡಿದ್ದ ಮಗುವಿನಂತೆ ಅವಳಿದ್ದಳು (1-7)

      • ದೇವರು ಅವಳನ್ನ ಅಲಂಕರಿಸಿ ಮದುವೆ ಒಪ್ಪಂದ ಮಾಡಿದನು (8-14)

      • ಅವಳು ದ್ರೋಹ ಬಗೆದಳು (15-34)

      • ವ್ಯಭಿಚಾರಿಣಿಯಾದ ಕಾರಣ ಅವಳಿಗೆ ಶಿಕ್ಷೆ (35-43)

      • ಸಮಾರ್ಯ ಮತ್ತು ಸೊದೋಮಿಗೆ ಹೋಲಿಸಿದ್ದು (44-58)

      • ದೇವರು ತನ್ನ ಒಪ್ಪಂದ ನೆನಪಿಸ್ಕೊಂಡನು (59-63)

  • 17

    • ಎರಡು ಹದ್ದು ಮತ್ತು ದ್ರಾಕ್ಷಿಬಳ್ಳಿಯ ಒಗಟು (1-21)

    • ಎಳೇ ಚಿಗುರಿಂದ ದೊಡ್ಡ ದೇವದಾರು ಮರ (22-24)

  • 18

    • ಪ್ರತಿಯೊಬ್ಬ ತನ್ನ ಪಾಪಕ್ಕೆ ತಾನೇ ಹೊಣೆ (1-32)

      • ಪಾಪ ಮಾಡೋ ವ್ಯಕ್ತಿನೇ ಸಾಯ್ತಾನೆ (4)

      • ತಂದೆ ಮಾಡಿದ ಪಾಪಕ್ಕೆ ಮಗನಿಗೆ ಶಿಕ್ಷೆ ಸಿಗಲ್ಲ (19, 20)

      • ಕೆಟ್ಟವ ಸತ್ತರೆ ಸ್ವಲ್ಪನೂ ಸಂತೋಷ ಆಗಲ್ಲ (23)

      • ಪಶ್ಚಾತ್ತಾಪಪಟ್ರೆ ಜೀವ ಉಳಿಯುತ್ತೆ (27, 28)

  • 19

    • ಇಸ್ರಾಯೇಲ್ಯರ ಪ್ರಧಾನರಿಗಾಗಿ ಶೋಕಗೀತೆ (1-14)

  • 20

    • ಇಸ್ರಾಯೇಲ್ಯರ ದಂಗೆಯ ಇತಿಹಾಸ (1-32)

    • ಇಸ್ರಾಯೇಲ್ಯರು ತಮ್ಮ ದೇಶಕ್ಕೆ ಮತ್ತೆ ಬರ್ತಾರೆ ಅಂತ ಮಾತುಕೊಟ್ಟಿದ್ದು (33-44)

    • ದಕ್ಷಿಣಕ್ಕೆ ವಿರುದ್ಧ ಭವಿಷ್ಯವಾಣಿ (45-49)

  • 21

    • ದೇವರ ತೀರ್ಪು ಅನ್ನೋ ಕತ್ತಿ ಒರೆಯಿಂದ ತೆಗೆಯಲಾಗಿದೆ (1-17)

    • ಯೆರೂಸಲೇಮಿನ ಮೇಲೆ ಬಾಬೆಲಿನ ರಾಜನ ದಾಳಿ (18-24)

    • ಇಸ್ರಾಯೇಲಿನ ಕೆಟ್ಟ ಪ್ರಧಾನನನ್ನ ತೆಗೆಯಲಾಗುತ್ತೆ (25-27)

      • “ಕಿರೀಟ ತೆಗೆದುಬಿಡು” (26)

      • “ಆಳೋ ಹಕ್ಕಿರೋನು ಬರೋ ತನಕ” (27)

    • ಅಮ್ಮೋನ್ಯರ ವಿರುದ್ಧ ಕತ್ತಿ (28-32)

  • 22

    • ರಕ್ತ ಸುರಿಸಿ ಅಪರಾಧಿಯಾದ ಯೆರೂಸಲೇಮ್‌ (1-16)

    • ಇಸ್ರಾಯೇಲ್ಯರು ಪ್ರಯೋಜನಕ್ಕೆ ಬಾರದ ಕಿಟ್ಟ (17-22)

    • ಇಸ್ರಾಯೇಲಿನ ಪ್ರಧಾನರನ್ನ, ಜನ್ರನ್ನ ಖಂಡಿಸಿದ್ದು (23-31)

  • 23

    • ದ್ರೋಹ ಮಾಡಿದ ಅಕ್ಕತಂಗಿ (1-49)

      • ಒಹೊಲ ಅಶ್ಶೂರ್ಯದ ಜೊತೆ (5-10)

      • ಒಹೊಲೀಬ ಬಾಬೆಲ್‌ ಮತ್ತು ಈಜಿಪ್ಟಿನ ಜೊತೆ (11-35)

      • ಅಕ್ಕತಂಗಿಯರಿಗೆ ಶಿಕ್ಷೆ (36-49)

  • 24

    • ತುಕ್ಕು ಹಿಡಿದ ಪಾತ್ರೆಯಂತಿದೆ ಯೆರೂಸಲೇಮ್‌ (1-14)

    • ಯೆಹೆಜ್ಕೇಲನ ಹೆಂಡತಿಯ ಸಾವಿನ ಅರ್ಥ (15-27)

  • 25

    • ಅಮ್ಮೋನಿಯರ ವಿರುದ್ಧ ಭವಿಷ್ಯವಾಣಿ (1-7)

    • ಮೋವಾಬಿನ ವಿರುದ್ಧ ಭವಿಷ್ಯವಾಣಿ (8-11)

    • ಎದೋಮಿನ ವಿರುದ್ಧ ಭವಿಷ್ಯವಾಣಿ (12-14)

    • ಫಿಲಿಷ್ಟಿಯರ ವಿರುದ್ಧ ಭವಿಷ್ಯವಾಣಿ (15-17)

  • 26

    • ತೂರಿನ ವಿರುದ್ಧ ಭವಿಷ್ಯವಾಣಿ (1-21)

      • “ಮೀನು ಬಲೆಗಳನ್ನ ಒಣಗಿಸೋ ಜಾಗ” (5, 14)

      • ಕಲ್ಲು ಮಣ್ಣನ್ನ ಸಮುದ್ರಕ್ಕೆ ಬಿಸಾಡಲಾಗುತ್ತೆ (12)

  • 27

    • ತೂರಿನ ಮುಳುಗೋ ಹಡಗಿನ ಬಗ್ಗೆ ಶೋಕಗೀತೆ (1-36)

  • 28

    • ತೂರಿನ ರಾಜನ ವಿರುದ್ಧ ಭವಿಷ್ಯವಾಣಿ (1-10)

      • “ನಾನೇ ದೇವರು” (2, 9)

    • ತೂರಿನ ರಾಜನ ಬಗ್ಗೆ ಶೋಕಗೀತೆ (11-19)

      • ‘ನೀನು ಏದೆನಲ್ಲಿ ಇದ್ದೆ’ (13)

      • “ಅಭಿಷೇಕಿಸಿ ಸಂರಕ್ಷಣೆ ಕೊಡೋ ಕೆರೂಬಿಯ ಸ್ಥಾನದಲ್ಲಿಟ್ಟೆ”(14)

      • ನಿನ್ನಲ್ಲಿ ಅನೀತಿ ಇದೆ ಅಂತ ಗೊತ್ತಾಯ್ತು (15)

    • ಸೀದೋನಿನ ವಿರುದ್ಧ ಭವಿಷ್ಯವಾಣಿ (20-24)

    • ಇಸ್ರಾಯೇಲ್ಯರು ಸ್ವದೇಶಕ್ಕೆ ಮತ್ತೆ ಬರ್ತಾರೆ (25, 26)

  • 29

    • ಫರೋಹನ ವಿರುದ್ಧ ಭವಿಷ್ಯವಾಣಿ (1-16)

    • ಬಾಬೆಲಿಗೆ ಈಜಿಪ್ಟನ್ನ ಸಂಬಳವಾಗಿ ಕೊಟ್ಟಿದ್ದು (17-21)

  • 30

    • ಈಜಿಪ್ಟ್‌ ವಿರುದ್ಧ ಭವಿಷ್ಯವಾಣಿ (1-19)

      • ನೆಬೂಕದ್ನೆಚ್ಚರನ ದಾಳಿ ಬಗ್ಗೆ ಮುಂಚೆನೇ ಹೇಳಿದ್ದು (10)

    • ಫರೋಹನ ಅಧಿಕಾರ ಹೋಯ್ತು (20-26)

  • 31

    • ಅತಿ ಎತ್ತರದ ದೇವದಾರು ಮರದ ತರ ಇದ್ದ ಈಜಿಪ್ಟಿನ ನಾಶ (1-18)

  • 32

    • ಫರೋಹ ಮತ್ತು ಈಜಿಪ್ಟಿನ ಬಗ್ಗೆ ಶೋಕಗೀತೆ (1-16)

    • ಸುನ್ನತಿಯಿಲ್ಲದೆ ಸತ್ತವರ ಜೊತೆ ಈಜಿಪ್ಟಿನ ಸಮಾಧಿ (17-32)

  • 33

    • ಕಾವಲುಗಾರನ ಜವಾಬ್ದಾರಿಗಳು (1-20)

    • ಯೆರೂಸಲೇಮ್‌ ನಾಶದ ಬಗ್ಗೆ ಸುದ್ದಿ (21, 22)

    • ನಾಶವಾದ ಜನ್ರಿಗೆ ಸುದ್ದಿ (23-29)

    • ಜನ ಸುದ್ದಿ ಕೇಳಿ ಅದ್ರ ತರ ನಡಿಲಿಲ್ಲ (30-33)

      • ಯೆಹೆಜ್ಕೇಲ ಜನ್ರಿಗೆ ”ಪ್ರೇಮಗೀತೆ ಹಾಡೋನ ತರ” ಇದ್ದ (32)

      • “ಅವ್ರ ಮಧ್ಯ ಒಬ್ಬ ಪ್ರವಾದಿ ಇದ್ದಾನೆ” (33)

  • 34

    • ಇಸ್ರಾಯೇಲ್ಯರ ಕುರುಬರ ವಿರುದ್ಧ ಭವಿಷ್ಯವಾಣಿ (1-10)

    • ಯೆಹೋವನಿಗೆ ತನ್ನ ಕುರಿಗಳ ಬಗ್ಗೆ ಇರೋ ಕಾಳಜಿ (11-31)

      • “ನನ್ನ ಸೇವಕ ದಾವೀದ” ಅವುಗಳನ್ನ ಮೇಯಿಸ್ತಾನೆ (23)

      • “ಶಾಂತಿಯ ಒಪ್ಪಂದ” (25)

  • 35

    • ಸೇಯೀರ್‌ ಬೆಟ್ಟದ ವಿರುದ್ಧ ಭವಿಷ್ಯವಾಣಿ (1-15)

  • 36

    • ಇಸ್ರಾಯೇಲಿನ ಬೆಟ್ಟಗಳ ಬಗ್ಗೆ ಭವಿಷ್ಯವಾಣಿ (1-15)

    • ಇಸ್ರಾಯೇಲ್ಯರು ಸ್ವದೇಶಕ್ಕೆ ವಾಪಸ್‌ (16-38)

      • ‘ನನ್ನ ಹೆಸ್ರನ್ನ ಪವಿತ್ರ ಮಾಡ್ತೀನಿ’ (23)

      • “ಏದೆನ್‌ ತೋಟದ ತರ” (35)

  • 37

    • ಒಣ ಮೂಳೆಗಳ ಕಣಿವೆಯ ದರ್ಶನ (1-14)

    • ಎರಡೂ ಕೋಲುಗಳು ಒಂದಾದದ್ದು (15-28)

      • ಒಬ್ಬ ರಾಜನ ಆಳ್ವಿಕೆ ಕೆಳಗೆ ಒಂದೇ ಜನಾಂಗ (22)

      • ಶಾಶ್ವತಕ್ಕೂ ಇರೋ ಶಾಂತಿ ಒಪ್ಪಂದ (26)

  • 38

    • ಇಸ್ರಾಯೇಲ್ಯರ ಮೇಲೆ ಗೋಗನ ದಾಳಿ (1-16)

    • ಗೋಗನ ಮೇಲೆ ಯೆಹೋವನ ಕೋಪ (17-23)

      • ‘ನಾನೇ ಯೆಹೋವ ಅಂತ ಜನಾಂಗಗಳಿಗೆ ಗೊತ್ತಾಗುತ್ತೆ’ (23)

  • 39

    • ಗೋಗ ಮತ್ತು ಅವನ ಸೈನ್ಯಗಳ ನಾಶ (1-10)

    • ಹಾಮೋನ್‌-ಗೋಗನ ಕಣಿವೆಯಲ್ಲಿ ಸಮಾಧಿ (11-20)

    • ಇಸ್ರಾಯೇಲ್ಯರು ಮತ್ತೆ ಸ್ವದೇಶಕ್ಕೆ ಹೋಗ್ತಾರೆ (21-29)

      • ಇಸ್ರಾಯೇಲ್ಯರ ಮೇಲೆ ಪವಿತ್ರಶಕ್ತಿ ಸುರಿಸ್ತೀನಿ (29)

  • 40

    • ದರ್ಶನದಲ್ಲಿ ಯೆಹೆಜ್ಕೇಲನನ್ನ ಇಸ್ರಾಯೇಲಿಗೆ ಕರ್ಕೊಂಡು ಹೋಗಿದ್ದು (1, 2)

    • ದರ್ಶನದಲ್ಲಿ ಯೆಹೆಜ್ಕೇಲ ಆಲಯ ನೋಡಿದ (3, 4)

    • ಅಂಗಳಗಳು, ಬಾಗಿಲುಗಳು (5-47)

      • ಹೊರಗಿನ ಪೂರ್ವ ಬಾಗಿಲು (6-16)

      • ಹೊರಗಿನ ಅಂಗಳ, ಬೇರೆ ಬಾಗಿಲುಗಳು (17-26)

      • ಒಳಗಿನ ಅಂಗಳ ಮತ್ತು ಬಾಗಿಲುಗಳು (27-37)

      • ದೇವಾಲಯದ ಸೇವೆಗಾಗಿ ಕೋಣೆಗಳು (38-46)

      • ಯಜ್ಞವೇದಿ (47)

    • ದೇವಾಲಯದ ಮಂಟಪ (48, 49)

  • 41

    • ಆಲಯದ ಪವಿತ್ರ ಸ್ಥಳ (1-4)

    • ಗೋಡೆ ಮತ್ತು ಕೊಠಡಿಗಳು (5-11)

    • ಪಶ್ಚಿಮ ಕಟ್ಟಡ (12)

    • ಕಟ್ಟಡಗಳ ಅಳತೆ ಮಾಡಲಾಯ್ತು (13-15ಎ)

    • ದೇವಾಲಯದ ಒಳಗಿನ ಭಾಗ (15ಬಿ-26)

  • 42

    • ಊಟದ ಕೋಣೆಗಳ ಕಟ್ಟಡಗಳು (1-14)

    • ದೇವಾಲಯದ ನಾಲ್ಕು ಬದಿಯ ಅಳತೆ (15-20)

  • 43

    • ಯೆಹೋವನ ಮಹಿಮೆ ದೇವಾಲಯವನ್ನ ತುಂಬ್ಕೊಳ್ಳುತ್ತೆ (1-12)

    • ಯಜ್ಞವೇದಿ (13-27)

  • 44

    • ಪೂರ್ವ ಬಾಗಿಲು ಯಾವಾಗ್ಲೂ ಮುಚ್ಚಿರಬೇಕು (1-3)

    • ವಿದೇಶಿಯರ ಬಗ್ಗೆ ನಿಯಮಗಳು (4-9)

    • ಲೇವಿಯರಿಗೆ ಮತ್ತು ಯಾಜಕರಿಗೆ ನಿಯಮಗಳು (10-31)

  • 45

    • ಪವಿತ್ರ ಕಾಣಿಕೆ ಮತ್ತು ಪಟ್ಟಣ (1-6)

    • ಪ್ರಧಾನನ ಪ್ರದೇಶ (7, 8)

    • ಪ್ರಧಾನರು ಪ್ರಾಮಾಣಿಕರಾಗಿ ಇರಬೇಕು (9-12)

    • ಜನ್ರ ಕಾಣಿಕೆ ಮತ್ತು ಪ್ರಧಾನ (13-25)

  • 46

    • ಸಂದರ್ಭಕ್ಕೆ ತಕ್ಕ ಅರ್ಪಣೆ (1-15)

    • ಪ್ರಧಾನನು ಆಸ್ತಿಯಿಂದ ಜಮೀನನ್ನ ಕೊಡೋದು (16-18)

    • ಅರ್ಪಣೆಗಳನ್ನ ಬೇಯಿಸೋ ಸ್ಥಳಗಳು (19-24)

  • 47

    • ದೇವಾಲಯದಿಂದ ಹರಿಯೋ ತೊರೆ (1-12)

      • ನೀರಿನ ಆಳ ಹೆಚ್ಚುತ್ತಾ ಹೋಗುತ್ತೆ (2-5)

      • ಮೃತ ಸಮುದ್ರದ ನೀರು ಸಿಹಿ ನೀರಾಯ್ತು (8-10)

      • ಜವುಗು ಸ್ಥಳಗಳು ಇದ್ದ ಹಾಗೇ ಇದ್ವು (11)

      • ಆಹಾರಕ್ಕಾಗಿ, ಔಷಧಿಗಾಗಿ ಮರಗಳು (12)

    • ದೇಶದ ಗಡಿಗಳು (13-23)

  • 48

    • ದೇಶದ ವಿಭಾಗ (1-29)

    • ಪಟ್ಟಣದ 12 ಬಾಗಿಲುಗಳು (30-35)

      • ಪಟ್ಟಣಕ್ಕೆ “ಯೆಹೋವ ಅಲ್ಲಿದ್ದಾನೆ” ಅನ್ನೋ ಹೆಸ್ರು (35)