ಯೆಹೆಜ್ಕೇಲ 15:1-8

  • ಯೆರೂಸಲೇಮ್‌ ಕೆಲಸಕ್ಕೆ ಬಾರದ ದ್ರಾಕ್ಷಿಬಳ್ಳಿ (1-8)

15  ಯೆಹೋವ ನನಗೆ ಮತ್ತೆ ಹೀಗಂದನು:  “ಮನುಷ್ಯಕುಮಾರನೇ, ಕಾಡು ದ್ರಾಕ್ಷಿಬಳ್ಳಿಯ ಕಟ್ಟಿಗೆ ಕಾಡಲ್ಲಿರೋ ಬೇರೆ ಮರಗಳಿಗಿಂತ ಅಥವಾ ಮರಗಳ ಕೊಂಬೆಗಿಂತ ಶ್ರೇಷ್ಠವಾಗಿರುತ್ತಾ?  ಅದ್ರಿಂದ ಮಾಡಿದ ಕೋಲು ಯಾವುದಕ್ಕಾದ್ರೂ ಉಪಯೋಗಕ್ಕೆ ಬರುತ್ತಾ? ಪಾತ್ರೆಗಳನ್ನ ನೇತುಹಾಕೋಕೆ ಜನ್ರು ಅದ್ರಿಂದ ಗೂಟ ಮಾಡ್ತಾರಾ?  ಅದನ್ನ ಸೌದೆಯಾಗಿ ಉರಿಸ್ತಾರೆ ಅಷ್ಟೇ. ಅದನ್ನ ಬೆಂಕಿಗೆ ಹಾಕಿದಾಗ ಅದ್ರ ಎರಡೂ ಕೊನೆ ಸುಟ್ಟುಹೋಗುತ್ತೆ, ಮಧ್ಯಭಾಗ ಇದ್ದಿಲಾಗುತ್ತೆ. ಆಗ ಅದು ಯಾವುದಕ್ಕಾದ್ರೂ ಉಪಯೋಗಕ್ಕೆ ಬರುತ್ತಾ?  ಬೆಂಕಿಗೆ ಹಾಕೋದಕ್ಕೆ ಮುಂಚೆನೇ ಅದ್ರಿಂದ ಏನೂ ಪ್ರಯೋಜನ ಇರಲಿಲ್ಲ ಅಂದ್ಮೇಲೆ ಬೆಂಕಿಯಲ್ಲಿ ಸುಟ್ಟ ಮೇಲೆ ಅದ್ರಿಂದ ಏನಾದ್ರೂ ಪ್ರಯೋಜನ ಇದ್ಯಾ?”  “ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಕಾಡಿನ ಮರಗಳಲ್ಲಿ ಸೌದೆಯಾಗಿ ಉರಿಸೋಕೆ ಕೊಟ್ಟಿರೋ ದ್ರಾಕ್ಷಿಬಳ್ಳಿಯ ಕಟ್ಟಿಗೆ ತರ ಯೆರೂಸಲೇಮಿನ ಜನ್ರನ್ನ ನಾಶಮಾಡ್ತೀನಿ.+  ನಾನು ಅವ್ರಿಗೆ ವಿರುದ್ಧವಾಗಿ ಇದ್ದೀನಿ. ಅವರು ಬೆಂಕಿಯಿಂದ ತಪ್ಪಿಸ್ಕೊಂಡಿದ್ದಾರೆ, ಆದ್ರೂ ಬೆಂಕಿ ಅವ್ರನ್ನ ಸುಡುತ್ತೆ. ನಾನು ಅವ್ರಿಗೆ ವಿರುದ್ಧವಾಗಿ ಇರೋವಾಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”+  “‘ಅವರು ನನಗೆ ನಂಬಿಕೆ ದ್ರೋಹ ಮಾಡಿದ್ರಿಂದ+ ನಾನು ಅವ್ರ ದೇಶದಲ್ಲಿ ಜನ್ರೆ ಇಲ್ಲದ ಹಾಗೆ ಮಾಡ್ತೀನಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

ಪಾದಟಿಪ್ಪಣಿ