ಯೆಹೆಜ್ಕೇಲ 24:1-27
24 ಒಂಬತ್ತನೇ ವರ್ಷದ* ಹತ್ತನೇ ತಿಂಗಳ ಹತ್ತನೇ ದಿನ ಯೆಹೋವ ನನಗೆ ಹೀಗಂದನು:
2 “ಮನುಷ್ಯಕುಮಾರನೇ, ಇವತ್ತಿನ ತಾರೀಕನ್ನ, ಈ ದಿನವನ್ನ ಬರೆದಿಡು. ಯಾಕಂದ್ರೆ ಇವತ್ತೇ ಬಾಬೆಲಿನ ರಾಜ ಯೆರೂಸಲೇಮ್ ವಿರುದ್ಧ ದಾಳಿ ಮಾಡೋಕೆ ಶುರುಮಾಡಿದ್ದಾನೆ.+
3 ದಂಗೆಕೋರ ಜನ್ರ ಬಗ್ಗೆ ನೀನು ಒಂದು ಗಾದೆ* ಹೇಳು. ನೀನು ಅವ್ರ ಬಗ್ಗೆ ಹೀಗೆ ಹೇಳು:
‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ“ಅಡುಗೆ ಪಾತ್ರೆಯನ್ನ* ಉರಿಯೋ ಒಲೆ ಮೇಲೆ ಇಡು, ಅದಕ್ಕೆ ನೀರು ಹಾಕು.+
4 ಅದ್ರಲ್ಲಿ ಒಳ್ಳೊಳ್ಳೆ ಮಾಂಸದ ತುಂಡುಗಳನ್ನ ಹಾಕು,+ತೊಡೆಗಳನ್ನ, ಒಳ್ಳೊಳ್ಳೆ ಮೂಳೆಗಳನ್ನ ಅದ್ರಲ್ಲಿ ತುಂಬಿಸು.
5 ಇರೋ ಕುರಿಗಳಲ್ಲೇ ಒಳ್ಳೇ ಕುರಿಯನ್ನ ತಗೊ,+ಆ ಪಾತ್ರೆ ಕೆಳಗೆ ಸುತ್ತ ಸೌದೆ ಜೋಡಿಸು.
ಅದ್ರಲ್ಲಿರೋ ತುಂಡುಗಳನ್ನ, ಮೂಳೆಗಳನ್ನ ಬೇಯಿಸು.”’
6 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ‘ರಕ್ತವನ್ನ ಸುರಿಸಿದ ಪಟ್ಟಣಕ್ಕೆ ಬರೋ ಗತಿಯನ್ನ ಏನಂತ ಹೇಳಲಿ.+
ಅದು ತುಕ್ಕು ಹಿಡಿದಿರೋ ಪಾತ್ರೆ ತರ ಇದೆ, ಅದ್ರ ತುಕ್ಕು ಹಾಗೇ ಇದೆ.
ಒಂದೊಂದೇ ತುಂಡನ್ನ ಹೊರಗೆ ತೆಗಿತಾ ಖಾಲಿ ಮಾಡು,+ ಆ ತುಂಡುಗಳಿಗಾಗಿ ಚೀಟಿ ಹಾಕಬೇಡ.
7 ಯಾಕಂದ್ರೆ ಆ ಪಟ್ಟಣ ಸುರಿಸಿದ ರಕ್ತ ಇನ್ನೂ ಆ ಪಟ್ಟಣದಲ್ಲೇ ಇದೆ.+
ಅವಳು ರಕ್ತವನ್ನ ನೆಲದ ಮೇಲೆ ಚೆಲ್ಲಿ ಮಣ್ಣು ಹಾಕಿ ಮುಚ್ಚದೆ,ಆ ರಕ್ತವನ್ನ ಬಂಡೆ ಮೇಲೆ ಸುರಿದಳು.+
8 ನಾನು ಕೋಪದಿಂದ ಬಂದು ಆ ಪಟ್ಟಣಕ್ಕೆ ಸೇಡು ತೀರಿಸ್ತೀನಿ.
ಅಲ್ಲಿ ತನಕ ಆ ಪಟ್ಟಣ ಸುರಿಸಿದ ರಕ್ತ ಮುಚ್ಚಿಹೋಗದ ಹಾಗೆಹೊಳೆಯೋ ಬಂಡೆ ಮೇಲೆನೇ ಇರೋಕೆ ನಾನು ಬಿಟ್ಟಿದ್ದೀನಿ.’+
9 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ‘ರಕ್ತವನ್ನ ಸುರಿಸಿದ ಪಟ್ಟಣಕ್ಕೆ ಬರೋ ಗತಿಯನ್ನ ಏನಂತ ಹೇಳಲಿ!+
ನಾನು ಅದ್ರ ಸುತ್ತ ರಾಶಿರಾಶಿ ಸೌದೆ ಜೋಡಿಸ್ತೀನಿ.
10 ನೀನು ಸೌದೆಗಳನ್ನ ರಾಶಿ ಹಾಕು, ಬೆಂಕಿ ಹಚ್ಚು,ಮಾಂಸವನ್ನ ಚೆನ್ನಾಗಿ ಬೇಯಿಸು, ಅದ್ರಲ್ಲಿರೋ ಸಾರನ್ನ ಹೊರಗೆ ಸುರಿ, ಮೂಳೆಗಳೆಲ್ಲ ಸೀದುಹೋಗಲಿ.
11 ತಾಮ್ರದ ಖಾಲಿ ಪಾತ್ರೆಯನ್ನ ಕೆಂಡದ ಮೇಲಿಡು, ಅದು ಬಿಸಿ ಆಗಲಿ,ಬಿಸಿ ಆಗಿ ಆಗಿ ಪಾತ್ರೆ ಪೂರ್ತಿ ಕೆಂಪಗಾಗಲಿ.
ಆಗ ಅದ್ರಲ್ಲಿರೋ ಕಸ ಕರಗಿ ಹೋಗುತ್ತೆ,+ ತುಕ್ಕು ಸುಟ್ಟುಹೋಗುತ್ತೆ.
12 ಆ ಪಾತ್ರೆಗೆ ಎಷ್ಟೊಂದು ತುಕ್ಕು ಹಿಡಿದಿದೆ ಅಂದ್ರೆ ಅದು ಹೋಗೋದೇ ಇಲ್ಲ,ಅದನ್ನ ತೆಗಿಯೋಕೆ ಎಷ್ಟೇ ಕಷ್ಟಪಟ್ರೂ ವ್ಯರ್ಥ, ಆಯಾಸ ಆಗುತ್ತಷ್ಟೇ.+
ಹಾಗಾಗಿ ತುಕ್ಕುಹಿಡಿದಿರೋ ಆ ಪಾತ್ರೆನ ಬೆಂಕಿಗೆ ಹಾಕು!’
13 ‘ನಿನ್ನ ಅಶ್ಲೀಲ ನಡತೆಯಿಂದಾಗಿ ನೀನು ಅಶುದ್ಧ ಆಗಿದ್ದೀಯ.+ ನಾನು ನಿನ್ನನ್ನ ಶುದ್ಧ ಮಾಡೋಕೆ ತುಂಬ ಪ್ರಯತ್ನಪಟ್ಟೆ, ಆದ್ರೆ ನೀನು ಶುದ್ಧ ಆಗಲಿಲ್ಲ. ನನಗೆ ನಿನ್ನ ಮೇಲಿರೋ ಕೋಪ ಇಳಿಯೋ ತನಕ ನೀನು ಶುದ್ಧ ಆಗಲ್ಲ.+
14 ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ. ಇದು ನಡೆದೇ ನಡೆಯುತ್ತೆ. ನಿನಗೆ ಶಿಕ್ಷೆ ಸಿಗುವಾಗ ನಾನು ಮಧ್ಯ ಬಂದು ತಡಿಯಲ್ಲ. ಅದಕ್ಕಾಗಿ ನಾನು ಬೇಜಾರು ಮಾಡ್ಕೊಳಲ್ಲ, ನನ್ನ ಮನಸ್ಸನ್ನ ಬದಲಾಯಿಸೋದೂ ಇಲ್ಲ.+ ನಿನ್ನ ನಡತೆ, ವರ್ತನೆಗೆ ತಕ್ಕ ಹಾಗೆ ನಿನಗೆ ತೀರ್ಪು ಆಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
15 ಯೆಹೋವ ಮತ್ತೆ ನನಗೆ
16 “ಮನುಷ್ಯಕುಮಾರನೇ, ನೀನು ತುಂಬ ಪ್ರೀತಿಸೋ ವ್ಯಕ್ತಿಯನ್ನ ನಾನು ಇದ್ದಕ್ಕಿದ್ದ ಹಾಗೆ ಸಾಯಿಸಿಬಿಡ್ತೀನಿ.+ ಆಗ ನೀನು ಎದೆ ಬಡ್ಕೊಬಾರದು. ಅಳಬಾರದು, ಕಣ್ಣೀರು ಸುರಿಸಬಾರದು.
17 ನೀನು ಮನಸ್ಸಲ್ಲೇ ದುಃಖಪಡಬೇಕು, ಸತ್ತ ವ್ಯಕ್ತಿಗಾಗಿ ಶೋಕಾಚರಣೆ ಮಾಡಬೇಡ.+ ಪೇಟ ಸುತ್ಕೊ.+ ಚಪ್ಪಲಿ ಹಾಕೊ.+ ನಿನ್ನ ಮೀಸೆ ಮುಚ್ಕೊಬೇಡ.+ ಬೇರೆಯವರು ತಂದ್ಕೊಡೋ ಊಟ ತಿನ್ನಬೇಡ”+ ಅಂದನು.
18 ದೇವರು ಹೇಳಿದ ವಿಷ್ಯಗಳನ್ನ ನಾನು ಬೆಳಿಗ್ಗೆ ಜನ್ರಿಗೆ ಹೇಳಿದೆ. ಸಂಜೆ ನನ್ನ ಹೆಂಡತಿ ತೀರಿಕೊಂಡಳು. ದೇವರು ನನಗೆ ಆಜ್ಞೆ ಕೊಟ್ಟ ಹಾಗೇ ಬೆಳಿಗ್ಗೆ ನಾನು ಮಾಡಿದೆ.
19 ಆಗ ಜನ್ರು ನನಗೆ “ಯಾಕೆ ಹೀಗೆಲ್ಲ ಮಾಡ್ತಿದ್ದೀಯಾ? ಇದ್ರಿಂದ ನಮಗೆ ಏನು ಹೇಳಬೇಕು ಅಂತಿದ್ದೀಯಾ?” ಅಂದ್ರು.
20 ಅದಕ್ಕೆ ಹೀಗೆ ಹೇಳಿದೆ: “ಯೆಹೋವ ನನಗೆ ಹೇಳಿದ್ದು ಏನಂದ್ರೆ
21 ‘ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀವು ತುಂಬ ಹೆಮ್ಮೆಪಡೋ, ಪ್ರೀತಿಸೋ, ನಿಮ್ಮ ಹೃದಯಕ್ಕೆ ಹತ್ರ ಇರೋ ನನ್ನ ಆರಾಧನಾ ಸ್ಥಳವನ್ನ ನಾನು ಅಪವಿತ್ರ ಮಾಡ್ತೀನಿ.+ ನೀವು ಬಿಟ್ಟುಬಂದಿರೋ ನಿಮ್ಮ ಮಕ್ಕಳು ಕತ್ತಿಗೆ ತುತ್ತಾಗಿ ಸಾಯ್ತಾರೆ.+
22 ಆಗ ನೀವು ಈಗ ಯೆಹೆಜ್ಕೇಲ ಮಾಡ್ತಿರೋ ಹಾಗೇ ಮಾಡಬೇಕಾಗುತ್ತೆ. ನೀವು ನಿಮ್ಮ ಮೀಸೆಯನ್ನ ಮುಚ್ಕೊಳಲ್ಲ, ಬೇರೆಯವರು ತಂದ್ಕೊಟ್ಟ ಊಟ ತಿನ್ನಲ್ಲ.+
23 ಪೇಟ ಸುತ್ಕೊತೀರ, ಚಪ್ಪಲಿ ಹಾಕೊತೀರ. ನೀವು ಎದೆ ಬಡ್ಕೊಳಲ್ಲ, ಅಳೋದೂ ಇಲ್ಲ. ನೀವು ಪಾಪಗಳನ್ನ ಮಾಡಿರೋದ್ರಿಂದ ನಿಮ್ಮ ಜೀವನ ಹಾಳಾಗಿ ಹೋಗುತ್ತೆ, ನೀವು ಬಳಲಿ ಬೆಂಡಾಗಿ ಹೋಗ್ತಿರ.+ ಒಬ್ಬರನ್ನೊಬ್ಬರು ನೋಡ್ತಾ ದುಃಖಪಡ್ತೀರ.
24 ಯೆಹೆಜ್ಕೇಲ ನಿಮಗೆ ಒಂದು ಗುರುತಾಗಿ ಇದ್ದಾನೆ.+ ಅವನು ಮಾಡಿದ ಹಾಗೇ ನೀವೂ ಮಾಡ್ತೀರ. ಇದೆಲ್ಲ ನಡೆದಾಗ ನಾನೇ ವಿಶ್ವದ ರಾಜ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”’”
25 “ಮನುಷ್ಯಕುಮಾರನೇ, ಈ ಜನ ತಮ್ಮ ಈ ಸುಂದರ ಕೋಟೆಯನ್ನ ನೋಡಿ ತುಂಬ ಖುಷಿಪಡ್ತಾರೆ, ಅದು ಅಂದ್ರೆ ಅವ್ರಿಗೆ ಪ್ರಾಣ, ಅದು ಅವ್ರ ಹೃದಯಕ್ಕೆ ಹತ್ರ ಇದೆ. ಆದ್ರೆ ನಾನು ಆ ಕೋಟೆಯನ್ನ ನಾಶಮಾಡ್ತೀನಿ. ಅವ್ರ ಮಕ್ಕಳನ್ನೂ ಸಾಯಿಸ್ತೀನಿ.+
26 ಅದ್ರಿಂದ ತಪ್ಪಿಸ್ಕೊಂಡು ಬಂದವನು ನಿನಗೆ ಈ ಸುದ್ದಿ ಹೇಳ್ತಾನೆ.+
27 ಆ ದಿನ ತಪ್ಪಿಸ್ಕೊಂಡು ಬಂದವನ ಜೊತೆ ಬಾಯಿ ತೆಗೆದು ಮಾತಾಡ್ತೀಯ. ಇನ್ಮೇಲೆ ನೀನು ಮೂಕನ ತರ ಇರಲ್ಲ.+ ನೀನು ಅವ್ರಿಗೆ ಒಂದು ಗುರುತಾಗ್ತೀಯ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”
ಪಾದಟಿಪ್ಪಣಿ
^ ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ ಒಂಬತ್ತನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
^ ಅಥವಾ “ಸಾಂಕೇತಿಕ ಕಥೆ.”
^ ಅಥವಾ “ಅಗಲವಾದ ಬಾಯಿ ಇರೋ ಪಾತ್ರೆಯನ್ನ.”