ಯೆಹೆಜ್ಕೇಲ 4:1-17

  • ಯೆರೂಸಲೇಮಿನ ಮುತ್ತಿಗೆಯನ್ನ ಚಿತ್ರಿಸಿದ್ದು (1-17)

    • 390 ದಿನ ಮತ್ತು 40 ದಿನ ಅಪರಾಧ ಹೊತ್ಕೊಬೇಕು (4-7)

4  ಮನುಷ್ಯಕುಮಾರನೇ, ನೀನು ಒಂದು ಇಟ್ಟಿಗೆ ತಗೊಂಡು ನಿನ್ನ ಮುಂದೆ ಇಡು. ಅದ್ರ ಮೇಲೆ ಯೆರೂಸಲೇಮ್‌ ಪಟ್ಟಣದ ನಕ್ಷೆ ಕೆತ್ತು.  ಅದಕ್ಕೆ ಮುತ್ತಿಗೆ+ ಹಾಕ್ತಿರೋ ಹಾಗೆ ಅದ್ರ ಸುತ್ತ ಗೋಡೆ ಕಟ್ಟಿ+ ಇಳಿಜಾರು ದಿಬ್ಬ ಮಾಡು,+ ಅದ್ರ ಮುಂದೆ ಪಾಳೆಯಗಳನ್ನ ಮಾಡು, ಗೋಡೆ ಬೀಳಿಸೋ ಯಂತ್ರಗಳನ್ನ ಸುತ್ತ ಇಡು.+  ನೀನು ಕಬ್ಬಿಣದ ಒಂದು ಹೆಂಚನ್ನ ತಗೊಂಡು ಅದನ್ನ ಕಬ್ಬಿಣದ ಗೋಡೆ ಹಾಗೆ ನಿನ್ನ ಮತ್ತು ಆ ಪಟ್ಟಣದ ಮಧ್ಯ ನಿಲ್ಸು. ಆಮೇಲೆ ಆ ಪಟ್ಟಣವನ್ನ ಗುರಾಯಿಸಿ ನೋಡು. ಈ ರೀತಿ ಮುಂದೆ ಪಟ್ಟಣಕ್ಕೆ ಮುತ್ತಿಗೆ ಹಾಕೋದನ್ನ ನೀನು ತೋರಿಸಬೇಕು. ಇದು ಇಸ್ರಾಯೇಲ್ಯರಿಗೆ ಒಂದು ಗುರುತು.+  ಆಮೇಲೆ ನೀನು ಎಡಕ್ಕೆ ತಿರುಗಿ ಮಲಗಬೇಕು ಮತ್ತು ಇಸ್ರಾಯೇಲ್‌ ಜನ್ರ ಅಪರಾಧವನ್ನ ಹೊತ್ಕೊಬೇಕು.+ ನೀನು ಎಷ್ಟು ದಿನ ಹಾಗೆ ಮಲಗ್ತೀಯೋ ಅಷ್ಟು ದಿನ ಅವ್ರ ಅಪರಾಧವನ್ನ ಹೊತ್ಕೊಂಡು ಇರ್ತಿಯ.  ಇಸ್ರಾಯೇಲ್ಯರು ನನ್ನ ವಿರುದ್ಧ ಪಾಪ ಮಾಡ್ತಿರೋ ವರ್ಷಗಳಿಗೆ ತಕ್ಕ ಹಾಗೆ ಒಂದು ವರ್ಷಕ್ಕೆ ಒಂದು ದಿನದ ತರ+ ನೀನು 390 ದಿನ ಈ ತರ ಮಲಗಿರಬೇಕು. ಹೀಗೆ ನೀನು ಅವ್ರ ಅಪರಾಧವನ್ನ ಹೊತ್ಕೊಬೇಕು.  ಅಷ್ಟೂ ದಿನ ನೀನು ಹಾಗೇ ಮಾಡಬೇಕು. ಆಮೇಲೆ ನೀನು ಬಲಕ್ಕೆ ತಿರುಗಿ ಮಲ್ಕೊಬೇಕು. 40 ದಿನ ನೀನು ಯೆಹೂದದ ಜನ್ರ ಅಪರಾಧವನ್ನ ಹೊತ್ಕೊಬೇಕು.+ ಒಂದು ವರ್ಷಕ್ಕೆ ಒಂದು ದಿನದ ತರ ನಾನು ಇದನ್ನ ನಿನಗೆ ನೇಮಿಸಿದ್ದೀನಿ.  ನಿನ್ನ ಅಂಗಿಯ ತೋಳನ್ನ ಮಡಚಿ ಯೆರೂಸಲೇಮಿನ ಮುತ್ತಿಗೆಯನ್ನ ಗುರಾಯಿಸಿ ನೋಡ್ಬೇಕು+ ಮತ್ತು ಅದ್ರ ವಿರುದ್ಧ ಭವಿಷ್ಯ ಹೇಳ್ಬೇಕು.  ನೋಡು, ಆ ಪಟ್ಟಣಕ್ಕೆ ನೀನು ಮುತ್ತಿಗೆ ಹಾಕೋ ದಿನಗಳು ಮುಗಿಯೋ ತನಕ ನಿನಗೆ ಒಂದು ಕಡೆಯಿಂದ ಇನ್ನೊಂದು ಕಡೆ ತಿರುಗೋಕೆ ಆಗದೆ ಇರೋ ಹಾಗೆ ನಾನು ನಿನ್ನನ್ನ ಹಗ್ಗಗಳಿಂದ ಕಟ್ತೀನಿ.  ನೀನು ಗೋದಿ, ಬಾರ್ಲಿ,* ಅವರೆಕಾಳು, ಬೇಳೆಕಾಳು, ಸಿರಿಧಾನ್ಯ ಮತ್ತು ಇನ್ನೊಂದು ತರದ ಗೋದಿಯನ್ನ* ಒಂದು ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿ ಮಾಡ್ಕೊಬೇಕು. ನೀನು ಎಡಗಡೆಗೆ 390 ದಿನ ಮಲಗಿರುವಾಗ ಆ ರೊಟ್ಟಿ ತಿನ್ನಬೇಕು.+ 10  ನೀನು ಪ್ರತಿದಿನ 20 ಶೆಕೆಲ್‌* ರೊಟ್ಟಿಯನ್ನ ತೂಕಮಾಡಿ ತಿನ್ನಬೇಕು. ಹೇಳಿದ ಸಮಯಕ್ಕೇ ಅದನ್ನ ತಿನ್ನಬೇಕು. 11  ನೀರನ್ನೂ ಅಳತೆ ಮಾಡಿ ಕುಡಿಬೇಕು. ದಿನಕ್ಕೆ ಒಂದು ಹಿನ್‌ ಅಳತೆಯ ಆರನೇ ಒಂದು ಭಾಗದಷ್ಟು* ನೀರನ್ನ ನೀನು ಕುಡಿಬೇಕು. ಹೇಳಿದ ಸಮಯಕ್ಕೇ ಅದನ್ನ ಕುಡಿಬೇಕು. 12  ಬಾರ್ಲಿಯ ರೊಟ್ಟಿಯನ್ನ ತಿನ್ನೋ ತರ ನೀನು ಆ ರೊಟ್ಟಿಯನ್ನ ತಿನ್ನಬೇಕು. ನೀನು ಜನ್ರ ಕಣ್ಮುಂದೆ ಮನುಷ್ಯನ ಒಣಗಿದ ಮಲವನ್ನ ಉರಿಸಿ ರೊಟ್ಟಿಯನ್ನ ಸುಡಬೇಕು.” 13  ಮತ್ತೆ ಯೆಹೋವ “ನಾನು ಇಸ್ರಾಯೇಲ್ಯರನ್ನ ಯಾವ ಜನಾಂಗಗಳ ಮಧ್ಯ ಚೆಲ್ಲಾಪಿಲ್ಲಿ ಮಾಡ್ತೀನೋ ಅಲ್ಲಿ ಅವರು ಇದೇ ತರ ಅಶುದ್ಧ ಊಟ ತಿಂತಾರೆ” ಅಂದನು.+ 14  ನಾನಾಗ “ವಿಶ್ವದ ರಾಜ ಯೆಹೋವನೇ, ಅದು ಮಾತ್ರ ನನ್ನಿಂದ ಆಗಲ್ಲ. ಚಿಕ್ಕಂದಿನಿಂದ ನಾನು ಯಾವತ್ತೂ ಸತ್ತ ಪ್ರಾಣಿಯ ಮಾಂಸವನ್ನಾಗಲಿ ಕಾಡುಪ್ರಾಣಿ ಕೊಂದ ಪ್ರಾಣಿಯ ಮಾಂಸವನ್ನಾಗಲಿ ತಿಂದು ಅಶುದ್ಧನಾಗಿಲ್ಲ.+ ಅಶುದ್ಧವಾದ ಯಾವ ಮಾಂಸವನ್ನೂ ತಿಂದಿದ್ದೇ ಇಲ್ಲ”+ ಅಂದೆ. 15  ಅದಕ್ಕೆ ಆತನು “ಸರಿ, ನೀನು ಮನುಷ್ಯನ ಮಲದ ಬದಲಿಗೆ ಸಗಣಿ ಗೊಬ್ಬರವನ್ನ ಉರಿಸಿ ರೊಟ್ಟಿ ಸುಡಬಹುದು” ಅಂದನು. 16  ಆಮೇಲೆ ಆತನು ನನಗೆ ಹೀಗಂದನು: “ಮನುಷ್ಯಕುಮಾರನೇ, ನಾನು ಯೆರೂಸಲೇಮಿಗೆ ಆಹಾರ ಬರೋದನ್ನ ನಿಲ್ಲಿಸಿಬಿಡ್ತೀನಿ.*+ ಊಟ, ನೀರು ಎಲ್ಲಿ ಮುಗಿದುಹೋಗುತ್ತೋ ಅನ್ನೋ ಭಯ, ಚಿಂತೆಯಿಂದ ಅವರು ಊಟ ತೂಕಮಾಡಿ ತಿಂತಾರೆ+ ಮತ್ತು ನೀರನ್ನ ಅಳತೆ ಮಾಡಿ ಕುಡಿತಾರೆ.+ 17  ಊಟ, ನೀರು ಇಲ್ಲದೆ ಅವ್ರಿಗೆ ದಂಗು ಬಡಿದ ಹಾಗೆ ಎಲ್ರೂ ಮುಖಮುಖ ನೋಡ್ಕೊತಾರೆ. ಮಾಡಿದ ತಪ್ಪುಗಳಿಂದಾಗಿ ಅವರು ಹಾಳಾಗಿ ಹೋಗ್ತಾರೆ.

ಪಾದಟಿಪ್ಪಣಿ

ಅಥವಾ “ಜವೆಗೋದಿ.”
ಇದಕ್ಕಿರೋ ಹೀಬ್ರು ಪದ ಮುಂಚೆ ಈಜಿಪ್ಟಲ್ಲಿ ಬೆಳಿಸ್ತಿದ್ದ ಕಮ್ಮಿ ಬೆಲೆಯ ಗೋದಿಯನ್ನ ಸೂಚಿಸುತ್ತೆ.
ಸುಮಾರು 230 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಸುಮಾರು 0.6 ಲೀ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ರೊಟ್ಟಿ ಕೋಲುಗಳನ್ನ ಮುರಿತೀನಿ.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.