ಯೆಹೆಜ್ಕೇಲ 42:1-20

  • ಊಟದ ಕೋಣೆಗಳ ಕಟ್ಟಡಗಳು (1-14)

  • ದೇವಾಲಯದ ನಾಲ್ಕು ಬದಿಯ ಅಳತೆ (15-20)

42  ಆಮೇಲೆ ಅವನು ನನ್ನನ್ನ ಉತ್ತರದ ಕಡೆಯಿಂದ ಹೊರಗಿನ ಅಂಗಳಕ್ಕೆ ಕರ್ಕೊಂಡು ಬಂದ.+ ಅವನು ನನ್ನನ್ನ ಖಾಲಿ ಜಾಗದ ಪಕ್ಕದಲ್ಲಿದ್ದ ಊಟದ ಕೋಣೆಗಳ ಕಟ್ಟಡಕ್ಕೆ ಕರ್ಕೊಂಡು ಬಂದ.+ ಈ ಕಟ್ಟಡ ದೇವಾಲಯದ ಪಕ್ಕದಲ್ಲಿದ್ದ ಕಟ್ಟಡದ ಉತ್ತರಕ್ಕೆ ಅಂಟ್ಕೊಂಡಿತ್ತು.+  ಉತ್ತರದ ಬಾಗಿಲ ಕಡೆಯಿಂದ ಊಟದ ಕೋಣೆಗಳ ಕಟ್ಟಡವನ್ನ ಅಳತೆ ಮಾಡಿದಾಗ ಅದ್ರ ಉದ್ದ 100 ಮೊಳ,* ಅಗಲ 50 ಮೊಳ ಇತ್ತು.  ಇದು 20 ಮೊಳ ಅಗಲ ಇದ್ದ+ ಒಳಗಿನ ಅಂಗಳಕ್ಕೂ ಹೊರಗಿನ ಅಂಗಳದ ಕಲ್ಲಿನ ನೆಲಕ್ಕೂ ಮಧ್ಯ ಇತ್ತು. ಇದ್ರಲ್ಲಿ ಮೂರು ಅಂತಸ್ತಿನ ಎರಡು ಭಾಗಗಳಿದ್ವು. ಅವುಗಳ ವರಾಂಡಗಳು ಎದುರುಬದುರಾಗಿ ಇದ್ವು.  ಕಟ್ಟಡದ ಒಳಗೆ, ಊಟದ ಕೋಣೆಗಳ ಮುಂದೆ ನಡೆದಾಡೋಕೆ ಜಾಗ ಇತ್ತು.+ ಅದು 10 ಮೊಳ ಅಗಲ ಮತ್ತು 100 ಮೊಳ ಉದ್ದ ಇತ್ತು.* ಊಟದ ಕೋಣೆಗಳ ಬಾಗಿಲುಗಳು ಉತ್ತರದ ಕಡೆಗಿದ್ವು.  ಕೆಳಗಿನ ಮತ್ತು ಮಧ್ಯದ ಅಂತಸ್ತಿನ ಕೋಣೆಗಳಿಗಿಂತ ಮೇಲಿನ ಅಂತಸ್ತಿನ ಕೋಣೆಗಳು ಚಿಕ್ಕದಾಗಿದ್ವು. ಯಾಕಂದ್ರೆ ಆ ಅಂತಸ್ತಲ್ಲಿ ವರಾಂಡಗಳಿಗೇ ಜಾಸ್ತಿ ಜಾಗ ಹಿಡಿದಿತ್ತು.  ಅವು ಮೂರು ಅಂತಸ್ತಲ್ಲಿ ಇದ್ವು, ಆದ್ರೆ ಅಂಗಳಗಳಿಗೆ ಇದ್ದ ಹಾಗೆ ಅವಕ್ಕೆ ಕಂಬಗಳು ಇರಲಿಲ್ಲ. ಹಾಗಾಗಿ ಕೆಳಗಿನ ಮತ್ತು ಮಧ್ಯದ ಅಂತಸ್ತಿಗಿಂತ ಮೇಲಿನ ಅಂತಸ್ತು ಚಿಕ್ಕದಾಗಿತ್ತು.  ಹೊರಗಿನ ಅಂಗಳದ ಕಡೆಗಿದ್ದ ಊಟದ ಕೋಣೆಗಳ ಹತ್ರ ಕಲ್ಲಿನ ಗೋಡೆ ಇತ್ತು. ಈ ಗೋಡೆ ಊಟದ ಕೋಣೆಗಳ ಕಟ್ಟಡದ ಇನ್ನೊಂದು ಭಾಗದ ಎದುರಿಗಿತ್ತು. ಅದ್ರ ಉದ್ದ 50 ಮೊಳ.  ಹೊರಗಿನ ಅಂಗಳದ ಕಡೆಗಿದ್ದ ಊಟದ ಕೋಣೆಗಳ ಉದ್ದ 50 ಮೊಳ ಇತ್ತು. ಆದ್ರೆ ದೇವಾಲಯದ ಕಡೆಗಿದ್ದ ಊಟದ ಕೋಣೆಗಳ ಉದ್ದ 100 ಮೊಳ ಇತ್ತು.  ಊಟದ ಕೋಣೆಗಳ ಪೂರ್ವಕ್ಕೆ ಒಂದು ಬಾಗಿಲಿತ್ತು. ಇದ್ರ ಮೂಲಕ ಹೊರಗಿನ ಅಂಗಳದಿಂದ ಊಟದ ಕೋಣೆಗಳಿಗೆ ಬರೋಕೆ ಆಗುತ್ತಿತ್ತು. 10  ದಕ್ಷಿಣ ಭಾಗದಲ್ಲೂ ಊಟದ ಕೋಣೆಗಳಿದ್ವು. ಅವುಗಳ ಪೂರ್ವಕ್ಕೆ ಅಂಗಳದ ಕಲ್ಲಿನ ಗೋಡೆ ಇತ್ತು. ಆ ಊಟದ ಕೋಣೆಗಳು ಖಾಲಿ ಜಾಗದ ಮತ್ತು ದೇವಾಲಯದ ಪಕ್ಕದಲ್ಲಿದ್ದ ಕಟ್ಟಡದ ಹತ್ರ ಇದ್ವು.+ 11  ಈ ಕೋಣೆಗಳ ಮುಂದೆನೂ ಉತ್ತರದ ಊಟದ ಕೋಣೆಗಳ ಮುಂದೆ ಇದ್ದ ಹಾಗೆ ನಡಿಯೋಕೆ ದಾರಿ ಇತ್ತು.+ ಕೋಣೆಗಳ ಉದ್ದ, ಅಗಲ, ಬಾಗಿಲುಗಳು, ವಿನ್ಯಾಸ ಎಲ್ಲ ಉತ್ತರದ ಕೋಣೆಗಳ ತರಾನೇ ಇತ್ತು. ಉತ್ತರದ ಬಾಗಿಲುಗಳು 12  ದಕ್ಷಿಣ ಕಡೆಯಲ್ಲಿದ್ದ ಊಟದ ಕೋಣೆಗಳ ಬಾಗಿಲುಗಳ ಹಾಗೇ ಇದ್ವು. ನಡೆದಾಡೋ ಜಾಗದಲ್ಲಿ ಒಂದು ಬಾಗಿಲಿತ್ತು. ಇಲ್ಲಿಂದ ಊಟದ ಕೋಣೆಗಳಿಗೆ ಹೋಗೋಕೆ ಆಗ್ತಿತ್ತು.+ ಈ ಬಾಗಿಲು ಪೂರ್ವದಲ್ಲಿದ್ದ ಕಲ್ಲಿನ ಗೋಡೆ ಮುಂದೆ ಇತ್ತು. ಆ ಗೋಡೆ ಬಾಗಿಲ ಹತ್ರ ಇತ್ತು. 13  ಆಮೇಲೆ ಅವನು ನನಗೆ “ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಖಾಲಿ ಜಾಗದ ಪಕ್ಕದಲ್ಲಿರೋ ಊಟದ ಕೋಣೆಗಳು+ ಪವಿತ್ರ ಕೋಣೆಗಳಾಗಿವೆ. ಯೆಹೋವನ ಮುಂದೆ ಹೋಗೋ ಪುರೋಹಿತರು ಅತಿ ಪವಿತ್ರವಾದ ಅರ್ಪಣೆಗಳನ್ನ ತಿನ್ನೋದು ಆ ಕೋಣೆಗಳಲ್ಲೇ.+ ಆ ಜಾಗ ಪವಿತ್ರ ಆಗಿರೋದ್ರಿಂದ ಅಲ್ಲಿ ಅವರು ಅತಿ ಪವಿತ್ರವಾದ ಅರ್ಪಣೆಗಳನ್ನ ಇಡ್ತಾರೆ. ಧಾನ್ಯ ಅರ್ಪಣೆ, ಪಾಪಪರಿಹಾರಕ ಬಲಿ ಮತ್ತು ದೋಷಪರಿಹಾರಕ ಬಲಿಯಾಗಿ ಏನನ್ನ ಕೊಡ್ತಿದ್ರೋ ಅದನ್ನೂ ಅಲ್ಲಿ ಇಡ್ತಾರೆ.+ 14  ಪುರೋಹಿತರು ಪವಿತ್ರ ಸ್ಥಳದ ಒಳಗಿಂದ ಹೊರಗಿನ ಅಂಗಳಕ್ಕೆ ಹೋಗಬೇಕಾದ್ರೆ ಅವರು ಸೇವೆ ಮಾಡುವಾಗ ಹಾಕೊಂಡಿದ್ದ ಬಟ್ಟೆಗಳನ್ನ ಬದಲಾಯಿಸಬೇಕು.+ ಯಾಕಂದ್ರೆ ಆ ಬಟ್ಟೆಗಳು ಪವಿತ್ರವಾಗಿವೆ. ಆ ಬಟ್ಟೆಗಳನ್ನ ಬದಲಾಯಿಸದೆ ಅವರು ಹೊರಗಿನ ಅಂಗಳಕ್ಕೆ ಹೋಗಬಾರದು. ಜನ ಪ್ರವೇಶಕ್ಕೆ ಅನುಮತಿ ಇರೋ ಜಾಗಗಳಿಗೆ ಹೋಗೋಕೆ ಮುಂಚೆ ಪುರೋಹಿತರು ಬೇರೆ ಬಟ್ಟೆ ಹಾಕೊಬೇಕು” ಅಂದ. 15  ದೇವಾಲಯದ ಒಳಗಿನ ಸ್ಥಳವನ್ನ ಅವನು ಅಳತೆ ಮಾಡಿ ಮುಗಿಸಿದ ಮೇಲೆ ಪೂರ್ವಕ್ಕೆ ಮುಖಮಾಡಿರೋ ಬಾಗಿಲ+ ಮೂಲಕ ನನ್ನನ್ನ ಹೊರಗೆ ಕರ್ಕೊಂಡು ಬಂದ. ಆಮೇಲೆ ಇಡೀ ಜಾಗವನ್ನ ಅಳತೆ ಮಾಡಿದ. 16  ಅವನು ಅಳತೆ ಕೋಲಿಂದ* ಪೂರ್ವ ಭಾಗವನ್ನ ಅಳೆದ. ಒಂದು ಕಡೆಯಿಂದ ಇನ್ನೊಂದು ಕಡೆ ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು. 17  ಅವನು ಅಳತೆ ಕೋಲಿಂದ ಉತ್ತರ ಭಾಗವನ್ನ ಅಳೆದ. ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು. 18  ಅವನು ಅಳತೆ ಕೋಲಿಂದ ದಕ್ಷಿಣ ಭಾಗವನ್ನ ಅಳೆದ. ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು. 19  ಆಮೇಲೆ ಅವನು ಪಶ್ಚಿಮ ಭಾಗಕ್ಕೆ ಹೋಗಿ ಆ ಭಾಗವನ್ನ ಅಳತೆ ಮಾಡಿದ. ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು. 20  ಅವನು ಅದ್ರ ನಾಲ್ಕು ಭಾಗಗಳನ್ನೂ ಅಳೆದ. ಅದ್ರ ಸುತ್ತ ಒಂದು ಗೋಡೆ ಇತ್ತು.+ ಅದ್ರ ಉದ್ದ ಮತ್ತು ಅಗಲ 500 ಅಳತೆ ಕೋಲಿನಷ್ಟಿತ್ತು.+ ಪವಿತ್ರವಾದ ಸ್ಥಳವನ್ನ ಮತ್ತು ಸಾಮಾನ್ಯ ಬಳಕೆಗಾಗಿದ್ದ ಸ್ಥಳವನ್ನ ಬೇರೆಬೇರೆ ಮಾಡೋಕೆ ಈ ಗೋಡೆ ಇತ್ತು.+

ಪಾದಟಿಪ್ಪಣಿ

ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಗ್ರೀಕ್‌ ಸೆಪ್ಟೂಅಜಂಟ್‌ ಪ್ರಕಾರ “100 ಮೊಳ ಉದ್ದ.” ಪ್ರಾಚೀನ ಹೀಬ್ರು ಪ್ರತಿಗಳಲ್ಲಿ “ಒಂದು ಮೊಳ ದಾರಿ” ಅಂತ ಇದೆ. ಪರಿಶಿಷ್ಟ ಬಿ14 ನೋಡಿ.