ಯೆಹೆಜ್ಕೇಲ 45:1-25

  • ಪವಿತ್ರ ಕಾಣಿಕೆ ಮತ್ತು ಪಟ್ಟಣ (1-6)

  • ಪ್ರಧಾನನ ಪ್ರದೇಶ (7, 8)

  • ಪ್ರಧಾನರು ಪ್ರಾಮಾಣಿಕರಾಗಿ ಇರಬೇಕು (9-12)

  • ಜನ್ರ ಕಾಣಿಕೆ ಮತ್ತು ಪ್ರಧಾನ (13-25)

45  ‘ನೀವು ದೇಶವನ್ನ ಆಸ್ತಿಯಾಗಿ ಹಂಚಿಕೊಡುವಾಗ+ ದೇಶದ ಒಂದು ಭಾಗವನ್ನ ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು.+ ದೇಶದಲ್ಲಿ ಈ ಭಾಗ ಪವಿತ್ರವಾಗಿರುತ್ತೆ. ಅದ್ರ ಉದ್ದ 25,000 ಮೊಳ,* ಅಗಲ 10,000 ಮೊಳ ಇರಬೇಕು.+ ಆ ಇಡೀ ಜಾಗ ಪವಿತ್ರ ಆಗಿರುತ್ತೆ.  ಈ ಭಾಗದೊಳಗೆ ದೇವಾಲಯಕ್ಕಾಗಿ ಚೌಕಾಕಾರವಾದ ಒಂದು ಜಾಗ ಇರಬೇಕು. ಅದರ ಉದ್ದ 500 ಮೊಳ, ಅಗಲ 500 ಮೊಳ ಆಗಿರಬೇಕು.+ ಅದ್ರ ಪ್ರತಿಯೊಂದು ಕಡೆಗಳಲ್ಲಿ 50 ಮೊಳ ಅಗಲ ಹುಲ್ಲುಗಾವಲು ಇರಬೇಕು.+  ಇದ್ರಲ್ಲಿ 25,000 ಮೊಳ ಉದ್ದ ಮತ್ತು 10,000 ಮೊಳ ಅಗಲವಾದ ಜಾಗವನ್ನ ಅಳತೆ ಮಾಡಬೇಕು. ಅದ್ರೊಳಗೆ ಅತಿ ಪವಿತ್ರವಾದ ಆರಾಧನಾ ಸ್ಥಳ ಇರಬೇಕು.  ದೇಶದ ಈ ಭಾಗ ಯೆಹೋವನ ಮುಂದೆ ಬಂದು ಸೇವೆ ಮಾಡೋ ಆರಾಧನಾ ಸ್ಥಳದ ಸೇವಕರಾಗಿರೋ+ ಪುರೋಹಿತರಿಗಾಗಿ ಇರೋ ಒಂದು ಪವಿತ್ರ ಭಾಗವಾಗಿರುತ್ತೆ.+ ಆ ಪುರೋಹಿತರ ಮನೆಗಳು ಮತ್ತು ಆರಾಧನಾ ಸ್ಥಳಕ್ಕಾಗಿ ಒಂದು ಪವಿತ್ರ ಸ್ಥಳ ಇಲ್ಲಿ ಇರುತ್ತೆ.  ದೇವಾಲಯದ ಸೇವಕರಾದ ಲೇವಿಯರಿಗಾಗಿ 25,000 ಮೊಳ ಉದ್ದ, 10,000 ಮೊಳ ಅಗಲ ಇರೋ ಒಂದು ಭಾಗ ಇರುತ್ತೆ+ ಮತ್ತು 20 ಊಟದ ಕೋಣೆಗಳು+ ಅವ್ರ ಆಸ್ತಿಯಾಗಿರುತ್ತೆ.  ನೀವು 25,000 ಮೊಳ ಉದ್ದ (ಪವಿತ್ರ ಕಾಣಿಕೆಯಾಗಿ ಕೊಟ್ಟ ಭಾಗದ ಉದ್ದಕ್ಕೆ ಸಮ) ಮತ್ತು 5,000 ಮೊಳ ಅಗಲ ಇರೋ ಜಾಗವನ್ನ ಪಟ್ಟಣಕ್ಕೆ ಸೇರಿದ ಆಸ್ತಿಯಾಗಿ ಕೊಡಬೇಕು.+ ಇದು ಎಲ್ಲ ಇಸ್ರಾಯೇಲ್ಯರಿಗೆ ಸ್ವಂತವಾಗುತ್ತೆ.  ಪವಿತ್ರ ಕಾಣಿಕೆ ಮತ್ತು ಪಟ್ಟಣಕ್ಕಾಗಿ ಆರಿಸಿದ ಜಾಗದ ಎರಡು ಕಡೆಗಳಲ್ಲಿ ಪ್ರಧಾನನ ಪ್ರದೇಶವಿರುತ್ತೆ. ಆ ಪ್ರದೇಶ ಪವಿತ್ರ ಕಾಣಿಕೆ ಮತ್ತು ಪಟ್ಟಣಕ್ಕೆ ಸೇರಿದ ಆಸ್ತಿಯ ಪಕ್ಕದಲ್ಲಿ ಅಂದ್ರೆ ಅವುಗಳ ಪೂರ್ವಕ್ಕೂ ಪಶ್ಚಿಮಕ್ಕೂ ಇರುತ್ತೆ. ಪಶ್ಚಿಮದಿಂದ ಪೂರ್ವದ ತನಕ ಆ ಪ್ರದೇಶದ ಉದ್ದ ಅದ್ರ ಪಕ್ಕದಲ್ಲಿರೋ ಕುಲಗಳ ಪ್ರದೇಶದ ಉದ್ದದಷ್ಟೇ ಇರುತ್ತೆ.+  ಅದು ಇಸ್ರಾಯೇಲಿನಲ್ಲಿ ಪ್ರಧಾನನ ಆಸ್ತಿಯಾಗುತ್ತೆ. ಇನ್ಮುಂದೆ ನನ್ನ ಪ್ರಧಾನರು ನನ್ನ ಜನ್ರಿಗೆ ಕಷ್ಟ ಕೊಡಲ್ಲ.+ ಅವರು ಉಳಿದ ಪ್ರದೇಶವನ್ನ ಇಸ್ರಾಯೇಲ್ಯರಿಗೆ ಹಂಚ್ಕೊಡ್ತಾರೆ. ಪ್ರತಿಯೊಂದು ಕುಲಕ್ಕೂ ಒಂದೊಂದು ಭಾಗ ಸಿಗುತ್ತೆ.’+  ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಇಸ್ರಾಯೇಲ್ಯರ ಪ್ರಧಾನರೇ, ನಿಮ್ಮದು ಅತಿಯಾಯ್ತು.’ ‘ಸಾಕು ನಿಲ್ಲಿಸಿ ನಿಮ್ಮ ಹಿಂಸಾಚಾರ. ದಬ್ಬಾಳಿಕೆ ಮಾಡೋದನ್ನ ಬಿಟ್ಟು, ನ್ಯಾಯನೀತಿಯಿಂದ ನಡೀರಿ.+ ನನ್ನ ಜನ್ರ ಆಸ್ತಿ ಕಿತ್ಕೊಳ್ಳೋದನ್ನ ನಿಲ್ಲಿಸಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 10  ‘ನೀವು ಸರಿಯಾದ ತಕ್ಕಡಿಯನ್ನ, ಸರಿಯಾದ ಏಫಾ* ಅಳತೆಯನ್ನ ಮತ್ತು ಬತ್‌* ಅಳತೆಯನ್ನ ಬಳಸಬೇಕು.+ 11  ಏಫಾ ಮತ್ತು ಬತ್‌ ಅಳತೆಗೆ ನಿಗದಿತವಾದ ಅಳತೆ ಇರಬೇಕು. ಒಂದು ಬತ್‌ ಅಳತೆ ಅಂದ್ರೆ ಹೋಮೆರಿನ* ಹತ್ತನೇ ಒಂದು ಭಾಗ ಆಗಿರಬೇಕು. ಅಲ್ಲದೆ, ಒಂದು ಏಫಾ ಅಳತೆ ಅಂದ್ರೆ ಒಂದು ಹೋಮೆರಿನ ಹತ್ತನೇ ಒಂದು ಭಾಗ ಆಗಿರಬೇಕು. ಹೋಮೆರ್‌ ಅಳತೆ ಎಲ್ಲ ಅಳತೆಗಳ ಮಾಪಕವಾಗಿರಬೇಕು. 12  ನೀವು ಬಳಸೋ ಒಂದು ಶೆಕೆಲ್‌*+ 20 ಗೇರಾ* ಆಗಿರಬೇಕು. 20 ಶೆಕೆಲ್‌ ಮತ್ತು 25 ಶೆಕೆಲ್‌ ಮತ್ತು 15 ಶೆಕೆಲ್‌ ಇವಿಷ್ಟೂ ಒಟ್ಟಿಗೆ ಒಂದು ಮಾನೆ* ಆಗುತ್ತೆ.’ 13  ‘ನೀವು ಕೊಡಬೇಕಾದ ಕಾಣಿಕೆ ಏನಂದ್ರೆ, ಪ್ರತಿ ಹೋಮೆರ್‌ ಅಳತೆಯ ಗೋದಿಯಿಂದ ಒಂದು ಏಫಾ ಅಳತೆಯ ಆರನೇ ಒಂದು ಭಾಗವನ್ನ ಕೊಡಬೇಕು. ಪ್ರತಿ ಹೋಮೆರ್‌ ಅಳತೆಯ ಬಾರ್ಲಿಯಿಂದ* ಒಂದು ಏಫಾ ಅಳತೆಯ ಆರನೇ ಒಂದು ಭಾಗವನ್ನ ಕೊಡಬೇಕು. 14  ನೀವು ಎಣ್ಣೆಯನ್ನ ಬತ್‌ ಅಳತೆಯಲ್ಲಿ ಅಳೆದು ಕೊಡಬೇಕು. ಒಂದು ಬತ್‌ ಅಂದ್ರೆ ಒಂದು ಕೋರ್‌* ಅಳತೆಯ ಹತ್ತನೇ ಒಂದು ಭಾಗ. ಒಂದು ಹೋಮೆರ್‌ ಅಂದ್ರೆ ಹತ್ತು ಬತ್‌. ಹತ್ತು ಬತ್‌ ಒಂದು ಹೋಮೆರಿಗೆ ಸಮ. 15  ಇಸ್ರಾಯೇಲ್ಯರು 200 ಕುರಿಗಳಿಗೆ ಒಂದು ಕುರಿಯಂತೆ ತಮ್ಮ ಮಂದೆಯಿಂದ ಕುರಿಗಳನ್ನ ಕೊಡಬೇಕು. ಇವೆಲ್ಲವನ್ನ ಧಾನ್ಯ ಅರ್ಪಣೆ,+ ಸರ್ವಾಂಗಹೋಮ ಬಲಿ+ ಮತ್ತು ಸಮಾಧಾನ ಬಲಿಯಾಗಿ+ ಕೊಡಬೇಕು. ಇದ್ರಿಂದ ಜನ್ರಿಗೋಸ್ಕರ ಪ್ರಾಯಶ್ಚಿತ್ತ ಮಾಡಲಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 16  ‘ದೇಶದ ಎಲ್ಲ ಜನ್ರು ಈ ಕಾಣಿಕೆಯನ್ನ ತಂದು ಇಸ್ರಾಯೇಲಿನ ಪ್ರಧಾನನಿಗೆ ಕೊಡಬೇಕು.+ 17  ಹಬ್ಬ, ಅಮಾವಾಸ್ಯೆ, ಸಬ್ಬತ್‌+ ಮತ್ತು ಇಸ್ರಾಯೇಲ್ಯರಿಗೆ ಆಚರಿಸೋಕೆ ಹೇಳಿದ ಎಲ್ಲ ಹಬ್ಬಗಳ+ ಸಮಯದಲ್ಲಿ ಸರ್ವಾಂಗಹೋಮ ಬಲಿಗಳು,+ ಧಾನ್ಯ ಅರ್ಪಣೆ+ ಮತ್ತು ಪಾನ ಅರ್ಪಣೆಗಳಿಗೆ ಬೇಕಾಗಿದ್ದನ್ನ ಪ್ರಧಾನ ಕೊಡ್ತಾನೆ.+ ಇಸ್ರಾಯೇಲ್ಯರ ಸಲುವಾಗಿ ಪ್ರಾಯಶ್ಚಿತ್ತ ಮಾಡೋಕೆ ಪಾಪಪರಿಹಾರಕ ಬಲಿ, ಧಾನ್ಯ ಅರ್ಪಣೆ, ಸರ್ವಾಂಗಹೋಮ ಬಲಿ ಮತ್ತು ಸಮಾಧಾನ ಬಲಿಗಳಿಗೆ ಬೇಕಾಗಿದ್ದನ್ನ ಕೊಡೋದು ಅವನ ಜವಾಬ್ದಾರಿ.’ 18  ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀನು ಮೊದಲ್ನೇ ತಿಂಗಳಿನ ಮೊದಲ್ನೇ ದಿನ ಯಾವ ದೋಷನೂ ಇರದ ಒಂದು ಎಳೇ ಹೋರಿಯನ್ನ ತಗೊಬೇಕು ಮತ್ತು ಆರಾಧನಾ ಸ್ಥಳವನ್ನ ಪರಿಶುದ್ಧ ಮಾಡಬೇಕು.+ 19  ಪಾಪಪರಿಹಾರಕ ಬಲಿಯಾಗಿ ಅರ್ಪಿಸಿದ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನ ಪುರೋಹಿತ ತಗೊಂಡು ಆಲಯದ ಬಾಗಿಲ ಚೌಕಟ್ಟಿಗೆ,+ ಯಜ್ಞವೇದಿಯ ಸುತ್ತ ಇರೋ ಅಂಚಿನ ನಾಲ್ಕು ಮೂಲೆಗಳಿಗೆ, ಒಳಗಿನ ಅಂಗಳದ ಬಾಗಿಲ ಚೌಕಟ್ಟಿಗೆ ಹಚ್ಚಬೇಕು. 20  ಆ ತಿಂಗಳ ಏಳನೇ ದಿನಾನೂ ನೀನು ಇದೇ ತರ ಮಾಡಬೇಕು. ಯಾಕಂದ್ರೆ ಯಾರಾದ್ರೂ ಆಕಸ್ಮಿಕವಾಗಿ ಅಥವಾ ಗೊತ್ತಿಲ್ಲದೆ ಪಾಪ ಮಾಡಿರಬಹುದು.+ ನೀನು ಆಲಯಕ್ಕಾಗಿ ಪ್ರಾಯಶ್ಚಿತ್ತವನ್ನೂ ಮಾಡಬೇಕು.+ 21  ಮೊದಲ್ನೇ ತಿಂಗಳಿನ 14ನೇ ದಿನ ನೀವು ಪಸ್ಕ ಹಬ್ಬ ಆಚರಿಸಬೇಕು.+ ಏಳು ದಿನ ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ 22  ಆ ದಿನ ಪ್ರಧಾನ ತನಗೋಸ್ಕರ ಮತ್ತು ದೇಶದ ಎಲ್ಲ ಜನ್ರಿಗೋಸ್ಕರ ಪಾಪಪರಿಹಾರಕ ಬಲಿಯಾಗಿ ಒಂದು ಎಳೇ ಹೋರಿಯನ್ನ ಕೊಡಬೇಕು.+ 23  ಅವನು ಹಬ್ಬದ ಏಳೂ ದಿನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ದಿನಕ್ಕೆ ಒಂದ್ರಂತೆ ಏಳು ಎಳೇ ಹೋರಿಗಳನ್ನ ಮತ್ತು ಏಳು ಟಗರುಗಳನ್ನ ಕೊಡಬೇಕು.+ ಅವುಗಳಲ್ಲಿ ಯಾವ ದೋಷನೂ ಇರಬಾರದು. ಪಾಪಪರಿಹಾರಕ ಬಲಿಗಾಗಿ ಪ್ರತಿದಿನ ಒಂದೊಂದು ಹೋತವನ್ನೂ ಕೊಡಬೇಕು. 24  ಪ್ರತಿಯೊಂದು ಎಳೇ ಹೋರಿಯ ಜೊತೆ ಒಂದು ಏಫಾ ಅಳತೆಯ ಧಾನ್ಯ ಅರ್ಪಣೆಯನ್ನ ಮತ್ತು ಒಂದು ಹಿನ್‌* ಅಳತೆಯ ಎಣ್ಣೆಯನ್ನೂ ಅವನು ಕೊಡಬೇಕು. ಪ್ರತಿಯೊಂದು ಟಗರಿನ ಜೊತೆ ಒಂದು ಏಫಾ ಅಳತೆಯ ಧಾನ್ಯ ಅರ್ಪಣೆಯನ್ನ ಮತ್ತು ಒಂದು ಹಿನ್‌ ಅಳತೆಯ ಎಣ್ಣೆಯನ್ನ ಅವನು ಕೊಡಬೇಕು. 25  ಏಳನೇ ತಿಂಗಳಿನ 15ನೇ ದಿನದಿಂದ ಶುರುಮಾಡಿ ಹಬ್ಬದ ಏಳು ದಿನ+ ಅವನು ಇದೇ ತರ ಪಾಪಪರಿಹಾರಕ ಬಲಿ, ಸರ್ವಾಂಗಹೋಮ ಬಲಿ ಮತ್ತು ಧಾನ್ಯ ಅರ್ಪಣೆಗೆ ಬೇಕಾಗಿದ್ದನ್ನ ಹಾಗೂ ಎಣ್ಣೆಯನ್ನ ಕೊಡಬೇಕು.’”

ಪಾದಟಿಪ್ಪಣಿ

ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಅಥವಾ “ಮೈನಾ.” ಪರಿಶಿಷ್ಟ ಬಿ14 ನೋಡಿ.
ಅಥವಾ “ಜವೆಗೋದಿಯಿಂದ.”