ಯೆಹೆಜ್ಕೇಲ 46:1-24
46 “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಒಳಗಿನ ಅಂಗಳದಲ್ಲಿ ಪೂರ್ವಕ್ಕೆ ಮುಖಮಾಡಿರೋ ಬಾಗಿಲು+ ಕೆಲಸದ ಆರೂ ದಿನ+ ಮುಚ್ಚೇ ಇರಬೇಕು.+ ಆದ್ರೆ ಸಬ್ಬತ್ ಮತ್ತು ಅಮಾವಾಸ್ಯೆ ದಿನ ಅದನ್ನ ತೆಗೀಬೇಕು.
2 ಆ ದಿನಗಳಲ್ಲಿ ಪ್ರಧಾನನು ದ್ವಾರಮಂಟಪದಿಂದ ಒಳಗೆ ಬರಬೇಕು. ಅವನು ಬಾಗಿಲಿನ ಚೌಕಟ್ಟಿನ ಹತ್ರ ನಿಲ್ಲಬೇಕು.+ ಅವನು ಸರ್ವಾಂಗಹೋಮ ಬಲಿಗಾಗಿ, ಸಮಾಧಾನ ಬಲಿಗಳಿಗಾಗಿ ಕೊಟ್ಟ ಪ್ರಾಣಿಗಳನ್ನ ಪುರೋಹಿತರು ಅರ್ಪಿಸಬೇಕು. ಅವನು ಬಾಗಿಲಿನ ಹೊಸ್ತಿಲಲ್ಲಿ ಅಡ್ಡಬಿದ್ದು, ಆಮೇಲೆ ಹೊರಗೆ ಹೋಗಬೇಕು. ಆದ್ರೆ ಸಂಜೆ ತನಕ ಬಾಗಿಲು ಮುಚ್ಚಬಾರದು.
3 ಸಬ್ಬತ್ ಮತ್ತು ಅಮಾವಾಸ್ಯೆ ದಿನ ಜನ್ರೂ ಬಾಗಿಲಲ್ಲಿ ಯೆಹೋವನ ಮುಂದೆ ಅಡ್ಡಬೀಳಬೇಕು.+
4 ಸಬ್ಬತ್ ದಿನ ಪ್ರಧಾನನು ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಯಾವ ದೋಷಾನೂ ಇಲ್ಲದ ಆರು ಗಂಡು ಕುರಿಮರಿಗಳನ್ನ ಮತ್ತು ಒಂದು ಟಗರನ್ನ ತಂದು ಕೊಡಬೇಕು.+
5 ಟಗರಿನ ಜೊತೆ ಒಂದು ಏಫಾ* ಧಾನ್ಯ ಅರ್ಪಣೆಯನ್ನ ಮತ್ತು ಗಂಡು ಕುರಿಮರಿಗಳ ಜೊತೆ ಅವನ ಕೈಲಾದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಪ್ರತಿ ಒಂದು ಏಫಾ ಧಾನ್ಯ ಅರ್ಪಣೆ ಜೊತೆ ಒಂದು ಹಿನ್* ಎಣ್ಣೆಯನ್ನ ಕೊಡಬೇಕು.+
6 ಅಮಾವಾಸ್ಯೆ ದಿನ ಬಲಿಯಾಗಿ ಒಂದು ಎಳೇ ಹೋರಿ, ಆರು ಗಂಡು ಕುರಿಮರಿಗಳು ಮತ್ತು ಒಂದು ಟಗರನ್ನ ತಂದು ಕೊಡಬೇಕು. ಅವುಗಳಲ್ಲಿ ಯಾವ ದೋಷಾನೂ ಇರಬಾರದು.+
7 ಎಳೇ ಹೋರಿ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ, ಟಗರಿನ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ ಮತ್ತು ಗಂಡು ಕುರಿಮರಿಗಳ ಜೊತೆ ಅವನ ಕೈಲಾದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಪ್ರತಿ ಒಂದು ಏಫಾ ಧಾನ್ಯ ಅರ್ಪಣೆಯ ಜೊತೆ ಒಂದು ಹಿನ್ ಎಣ್ಣೆಯನ್ನ ಕೊಡಬೇಕು.
8 ಪ್ರಧಾನನು ದ್ವಾರಮಂಟಪದಿಂದ ಬರಬೇಕು, ಅಲ್ಲಿಂದಾನೇ ಹೊರಗೆ ಹೋಗಬೇಕು.+
9 ದೇಶದ ಜನ ಹಬ್ಬಗಳ ಸಮಯದಲ್ಲಿ ಯೆಹೋವನನ್ನ ಆರಾಧಿಸೋಕೆ ಆತನ ಮುಂದೆ ಬರುವಾಗ+ ಉತ್ತರ ಬಾಗಿಲಿಂದ ಒಳಗೆ ಬರುವವರು+ ದಕ್ಷಿಣ ಬಾಗಿಲಿಂದ ಹೊರಗೆ ಹೋಗಬೇಕು.+ ದಕ್ಷಿಣ ಬಾಗಿಲಿಂದ ಒಳಗೆ ಬರೋರು ಉತ್ತರ ಬಾಗಿಲಿಂದ ಹೊರಗೆ ಹೋಗಬೇಕು. ಬಂದ ಬಾಗಿಲಿಂದಾನೇ ಯಾರೂ ವಾಪಸ್ ಹೊಗಬಾರದು. ಅವರು ಯಾವ ಬಾಗಿಲಿಂದ ಒಳಗೆ ಬರ್ತಾರೋ ಅದರ ಎದುರಿಗಿರೋ ಬಾಗಿಲಿಂದಾನೇ ಹೊರಗೆ ಹೋಗಬೇಕು.
10 ಜನ ಒಳಗೆ ಬರುವಾಗ ಪ್ರಧಾನನೂ ಒಳಗೆ ಬರಬೇಕು, ಅವರು ಹೊರಗೆ ಹೋಗುವಾಗ ಅವನೂ ಹೊರಗೆ ಹೋಗಬೇಕು.
11 ಹಬ್ಬಗಳ ದಿನಗಳಲ್ಲಿ ಮತ್ತು ಹಬ್ಬಗಳ ಕಾಲದಲ್ಲಿ ಎಳೇ ಹೋರಿಯ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ, ಟಗರಿನ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ ಮತ್ತು ಗಂಡು ಕುರಿಮರಿಗಳ ಜೊತೆ ಅವನ ಕೈಲಾದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಪ್ರತಿ ಒಂದು ಏಫಾ ಧಾನ್ಯ ಅರ್ಪಣೆಯ ಜೊತೆ ಒಂದು ಹಿನ್ ಎಣ್ಣೆಯನ್ನ ಕೊಡಬೇಕು.+
12 ಪ್ರಧಾನನು ಸರ್ವಾಂಗಹೋಮ ಬಲಿಯನ್ನ+ ಅಥವಾ ಸಮಾಧಾನ ಬಲಿಗಳನ್ನ ಸ್ವಇಷ್ಟದ ಕಾಣಿಕೆಯಾಗಿ ಯೆಹೋವನಿಗೆ ಕೊಡೋಕೆ ಬರೋದಾದ್ರೆ ಪೂರ್ವಕ್ಕೆ ಮುಖಮಾಡಿರೋ ಬಾಗಿಲನ್ನ ಅವನಿಗಾಗಿ ತೆಗಿಬೇಕು. ಅವನು ಸಬ್ಬತ್ ದಿನದಲ್ಲಿ ಕೊಡೋ ತರಾನೇ ಸರ್ವಾಂಗಹೋಮ ಬಲಿಗಾಗಿ ಮತ್ತು ಸಮಾಧಾನ ಬಲಿಗಳಿಗಾಗಿ ಬೇಕಾಗಿರೋದನ್ನ ಕೊಡಬೇಕು.+ ಅವನು ಹೊರಗೆ ಹೋದ ಮೇಲೆ ಬಾಗಿಲನ್ನ ಮುಚ್ಚಬೇಕು.+
13 ಪ್ರತಿ ದಿನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಒಂದು ವರ್ಷದೊಳಗಿನ ಗಂಡು ಕುರಿಮರಿಯನ್ನ ಕೊಡಬೇಕು.+ ಅದರಲ್ಲಿ ಯಾವ ದೋಷಾನೂ ಇರಬಾರದು. ಪ್ರತಿದಿನ ಬೆಳಿಗ್ಗೆ ಅದನ್ನ ಕೊಡಬೇಕು.
14 ಅಷ್ಟೇ ಅಲ್ಲ, ಪ್ರತಿದಿನ ಬೆಳಿಗ್ಗೆ ಒಂದು ಏಫಾದ ಆರನೇ ಒಂದು ಭಾಗದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಅದ್ರ ಜೊತೆ ನುಣ್ಣಗಿನ ಹಿಟ್ಟಿನ ಮೇಲೆ ಚಿಮಿಕಿಸೋಕೆ ಒಂದು ಹಿನ್ ಅಳತೆಯ ಮೂರನೇ ಒಂದು ಭಾಗದಷ್ಟು ಎಣ್ಣೆ ಕೊಡಬೇಕು. ಹೀಗೆ ಯೆಹೋವನಿಗೆ ಧಾನ್ಯ ಅರ್ಪಣೆಯನ್ನ ಕ್ರಮವಾಗಿ ಕೊಡಬೇಕು. ಇದು ಶಾಶ್ವತ ನಿಯಮ.
15 ಹೀಗೆ ಅವರು ಪ್ರತಿದಿನ ಬೆಳಿಗ್ಗೆ ತಪ್ಪದೆ ಸರ್ವಾಂಗಹೋಮ ಬಲಿಯಾಗಿ ಒಂದು ಗಂಡು ಕುರಿಮರಿಯನ್ನ, ಧಾನ್ಯ ಅರ್ಪಣೆಯನ್ನ, ಎಣ್ಣೆಯನ್ನ ಕೊಡಬೇಕು.’
16 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಪ್ರಧಾನನು ತನ್ನ ಗಂಡು ಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಆಸ್ತಿಯಾಗಿ ಜಮೀನನ್ನ ಕಾಣಿಕೆಯಾಗಿ ಕೊಡೋದಾದ್ರೆ ಅದು ಅವನ ಗಂಡು ಮಕ್ಕಳ ಸೊತ್ತಾಗುತ್ತೆ. ಅದು ಅವ್ರ ಪಿತ್ರಾರ್ಜಿತ ಸೊತ್ತು.
17 ಆದ್ರೆ ಅವನು ತನ್ನ ಸೇವಕನಿಗೆ ತನ್ನ ಆಸ್ತಿಯಿಂದ ಜಮೀನನ್ನ ಉಡುಗೊರೆಯಾಗಿ ಕೊಡೋದಾದ್ರೆ ಅದು ಬಿಡುಗಡೆಯ ವರ್ಷದ ತನಕ ಆ ಸೇವಕನದ್ದಾಗಿರುತ್ತೆ.+ ಆಮೇಲೆ ಅದು ಮತ್ತೆ ಪ್ರಧಾನನಿಗೆ ಸೇರುತ್ತೆ. ಪ್ರಧಾನನ ಗಂಡು ಮಕ್ಕಳಿಗೆ ಸಿಕ್ಕಿದ ಆಸ್ತಿ ಮಾತ್ರ ಶಾಶ್ವತಕ್ಕೂ ಅವ್ರದ್ದಾಗಿರುತ್ತೆ.
18 ಪ್ರಧಾನನು ಜನ್ರನ್ನ ಅವ್ರ ಜಮೀನಿಂದ ಬಲವಂತವಾಗಿ ಓಡಿಸಿ ಅವ್ರ ಆಸ್ತಿಯನ್ನ ಕಿತ್ಕೊಬಾರದು. ಅವನು ತನ್ನ ಸ್ವಂತ ಸೊತ್ತಿಂದಾನೇ ತನ್ನ ಗಂಡು ಮಕ್ಕಳಿಗೆ ಆಸ್ತಿಯನ್ನ ಕೊಡಬೇಕು. ಹೀಗೆ ಮಾಡೋದಾದ್ರೆ ನನ್ನ ಜನ್ರನ್ನ ಅವ್ರ ಆಸ್ತಿಯಿಂದ ಯಾರೂ ಓಡಿಸಲ್ಲ.’”
19 ಆಮೇಲೆ ಅವನು ನನ್ನನ್ನ ಉತ್ತರಕ್ಕೆ ಮುಖಮಾಡಿದ್ದ+ ಬಾಗಿಲಿನ ಪಕ್ಕದಲ್ಲಿದ್ದ ಒಂದು ಬಾಗಿಲಿಂದ ಒಳಗೆ ಕರ್ಕೊಂಡು ಹೋದ.+ ಆ ಬಾಗಿಲಿಂದ ಪುರೋಹಿತರ ಪವಿತ್ರ ಊಟದ ಕೋಣೆಗಳಿಗೆ ಹೋಗೋಕೆ ಆಗ್ತಿತ್ತು. ಆ ಕೋಣೆಗಳ ಹಿಂಬದಿಯಲ್ಲಿ ಪಶ್ಚಿಮದ ಕಡೆಗೆ ನಾನು ಒಂದು ಜಾಗ ನೋಡ್ದೆ.
20 ಅವನು “ಪುರೋಹಿತರು ದೋಷಪರಿಹಾರಕ ಬಲಿ, ಪಾಪಪರಿಹಾರಕ ಬಲಿಯ ಮಾಂಸವನ್ನ ಇಲ್ಲೇ ಬೇಯಿಸಬೇಕು ಮತ್ತು ಧಾನ್ಯ ಅರ್ಪಣೆಯನ್ನ ಇಲ್ಲೇ ಸುಡಬೇಕು.+ ಇದ್ರಿಂದಾಗಿ ಏನನ್ನೂ ಅವರು ಹೊರಗಿನ ಅಂಗಳಕ್ಕೆ ತಗೊಂಡು ಹೋಗೋದೂ ಇಲ್ಲ, ಜನ್ರಿಗೆ ಪವಿತ್ರತೆಯನ್ನ ದಾಟಿಸೋದೂ ಇಲ್ಲ”+ ಅಂದ.
21 ಅವನು ನನ್ನನ್ನ ಹೊರಗಿನ ಅಂಗಳಕ್ಕೆ ಕರ್ಕೊಂಡು ಬಂದು ಅದರ ನಾಲ್ಕೂ ಮೂಲೆಗಳ ಹತ್ರ ನಡಿಸಿದ. ಹೊರಗಿನ ಅಂಗಳದ ನಾಲ್ಕು ಮೂಲೆಗಳ ಹತ್ರಾನೂ ಒಂದೊಂದು ಅಂಗಳ ಇರೋದನ್ನ ನಾನು ನೋಡ್ದೆ.
22 ಹೊರಗಿನ ಅಂಗಳದ ನಾಲ್ಕು ಮೂಲೆಗಳಲ್ಲಿದ್ದ ಚಿಕ್ಕ ಚಿಕ್ಕ ಅಂಗಳಗಳು 40 ಮೊಳ* ಉದ್ದ, 30 ಮೊಳ ಅಗಲ ಇದ್ವು. ನಾಲ್ಕು ಅಂಗಳಗಳ ಅಳತೆ ಒಂದೇ ಆಗಿತ್ತು.
23 ಆ ನಾಲ್ಕು ಅಂಗಳಗಳ ಒಳಗೆ ಸುತ್ತ ಅಂಚುಗಳಿದ್ವು. ಅದ್ರ ಕೆಳಗೆ ಅರ್ಪಣೆಗಳ ಮಾಂಸವನ್ನ ಬೇಯಿಸೋಕೆ ಜಾಗ ಇತ್ತು.
24 ಆಮೇಲೆ ಅವನು ನನಗೆ “ಜನ ಕೊಟ್ಟ ಬಲಿಯ ಮಾಂಸವನ್ನ ಆಲಯದಲ್ಲಿ ಸೇವೆ ಮಾಡುವವರು ಬೇಯಿಸೋದು ಇಲ್ಲೇ”+ ಅಂದ.