ಯೆಹೋಶುವ 11:1-23

  • ಉತ್ತರಕ್ಕಿದ್ದ ಪಟ್ಟಣಗಳ ವಶ (1-15)

  • ಯೆಹೋಶುವ ಗೆದ್ದ ಪ್ರದೇಶಗಳ ಸಾರಾಂಶ (16-23)

11  ನಡೆದ ವಿಷ್ಯಗಳು ಹಾಚೋರಿನ ರಾಜ ಯಾಬೀನನ ಕಿವಿಗೆ ಬಿತ್ತು. ತಕ್ಷಣ ಅವನು ಮಾದೋನಿನ ರಾಜ+ ಯೋಬಾಬನಿಗೆ, ಶಿಮ್ರೋನಿನ ರಾಜನಿಗೆ, ಅಕ್ಷಾಫಿನ ರಾಜನಿಗೆ,+  ಉತ್ತರದ ಬೆಟ್ಟ ಪ್ರದೇಶದಲ್ಲಿದ್ದ, ಕಿನ್ನೆರೆತಿನ ದಕ್ಷಿಣದ ಮೈದಾನಗಳಲ್ಲಿದ್ದ,* ಷೆಫೆಲಾದಲ್ಲಿದ್ದ ಮತ್ತು ದೋರಿನ+ ಪಶ್ಚಿಮ ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿದ್ದ ರಾಜರಿಗೆ,  ಪೂರ್ವ ಮತ್ತು ಪಶ್ಚಿಮಕ್ಕಿದ್ದ ಕಾನಾನ್ಯರಿಗೆ,+ ಬೆಟ್ಟ ಪ್ರದೇಶದಲ್ಲಿದ್ದ ಅಮೋರಿಯರಿಗೆ,+ ಹಿತ್ತಿಯರಿಗೆ,+ ಪೆರಿಜೀಯರಿಗೆ, ಯೆಬೂಸಿಯರಿಗೆ ಮತ್ತು ಮಿಚ್ಪಾ ಪ್ರದೇಶದ ಹೆರ್ಮೋನ್‌ ಬೆಟ್ಟದ+ ಕೆಳಗೆ ಇದ್ದ ಹಿವ್ವಿಯರಿಗೆ ಅದ್ರ ಬಗ್ಗೆ ಸಂದೇಶ ಕಳಿಸಿದ.  ಆಗ ಅವ್ರೆಲ್ಲ ತಮ್ಮತಮ್ಮ ಸೈನ್ಯಗಳ ಜೊತೆ ಹೊರಟ್ರು. ಅವ್ರ ಸಂಖ್ಯೆ ಸಮುದ್ರತೀರದ ಮರಳಿನಷ್ಟು ಇತ್ತು. ಅವರು ತಮ್ಮ ಜೊತೆ ಲೆಕ್ಕ ಇಲ್ಲದಷ್ಟು ಕುದುರೆಗಳನ್ನ ರಥಗಳನ್ನ ತಂದ್ರು.  ಈ ರಾಜರೆಲ್ಲ ಒಟ್ಟು ಸೇರಿ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡಬೇಕು ಅಂತ ತೀರ್ಮಾನ ಮಾಡಿ, ಮೇರೋಮ್‌ ಬುಗ್ಗೆ ಹತ್ರ ಪಾಳೆಯ ಹೂಡಿದ್ರು.  ಆಗ ಯೆಹೋವ ಯೆಹೋಶುವನಿಗೆ “ನೀನು ಅವ್ರಿಗೆ ಭಯಪಡಬೇಡ.+ ನಾಳೆ ಇಷ್ಟೊತ್ತಿಗೆ ನಾನು ಅವ್ರನ್ನೆಲ್ಲ ನಿಮ್ಮ ಕೈಗೆ ಒಪ್ಪಿಸ್ತೀನಿ. ಅವ್ರನ್ನೆಲ್ಲ ಸರ್ವನಾಶ ಮಾಡ್ತೀರ. ನೀವು ಅವ್ರ ಕುದುರೆಗಳ ಹಿಂಗಾಲಿನ ನರಗಳನ್ನ ಕತ್ತರಿಸಬೇಕು,+ ರಥಗಳನ್ನ ಸುಟ್ಟುಹಾಕಬೇಕು” ಅಂದನು.  ಯೆಹೋಶುವ ತನ್ನ ಎಲ್ಲ ವೀರ ಸೈನಿಕರ ಜೊತೆ ಮೇರೋಮಿನ ಬುಗ್ಗೆ ಹತ್ರ ಹೋಗಿ ದಿಢೀರಂತ ಅವ್ರ ಮೇಲೆ ದಾಳಿ ಮಾಡಿದ.  ಯೆಹೋವ ಅವ್ರನ್ನ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದನು.+ ಇಸ್ರಾಯೇಲ್ಯರು ಅವ್ರನ್ನ ಸೋಲಿಸಿದ್ರು, ಅವ್ರನ್ನ ಮಹಾ ಸೀದೋನ್‌+ ಮತ್ತು ಮಿಸ್ರೆಫೋತ್ಮಯಿಮ್‌+ ತನಕ ಮತ್ತು ಪೂರ್ವಕ್ಕಿದ್ದ ಮಿಚ್ಪೆ ಕಣಿವೆ ತನಕ ಅಟ್ಟಿಸ್ಕೊಂಡು ಹೋದ್ರು. ಅವ್ರಲ್ಲಿ ಒಬ್ರನ್ನೂ ಬಿಡಲಿಲ್ಲ, ಎಲ್ರನ್ನೂ ಕೊಂದ್ರು.+  ಯೆಹೋವ ಹೇಳಿದ ಹಾಗೇ ಯೆಹೋಶುವ ಅವರ ಕುದುರೆಗಳ ಹಿಂಗಾಲಿನ ನರಗಳನ್ನ ಕತ್ತರಿಸಿ, ರಥಗಳನ್ನ ಸುಟ್ಟುಹಾಕಿದ.+ 10  ಅಷ್ಟೇ ಅಲ್ಲ ಯೆಹೋಶುವ ಹಾಚೋರಿಗೆ ವಾಪಸ್‌ ಹೋಗಿ ಅದನ್ನ ವಶ ಮಾಡ್ಕೊಂಡು ಅದ್ರ ರಾಜನನ್ನ ಕತ್ತಿಯಿಂದ ಕೊಂದ.+ ಯಾಕಂದ್ರೆ ಈ ಹಿಂದೆ ಹಾಚೋರ್‌ ಎಲ್ಲ ಸಾಮ್ರಾಜ್ಯಗಳಿಗಿಂತ ಬಲಿಷ್ಠವಾದ ಸಾಮ್ರಾಜ್ಯ ಆಗಿತ್ತು. 11  ಅದ್ರಲ್ಲಿರೋ ಎಲ್ರನ್ನ* ಇಸ್ರಾಯೇಲ್ಯರು ಕತ್ತಿಯಿಂದ ಕೊಂದು ಪೂರ್ತಿ ನಾಶಮಾಡಿದ್ರು.+ ಯಾರನ್ನೂ ಉಳಿಸಲಿಲ್ಲ.+ ಯೆಹೋಶುವ ಹಾಚೋರನ್ನ ಸುಟ್ಟುಹಾಕಿದ. 12  ಅವನು ಆ ರಾಜರ ಪಟ್ಟಣಗಳನ್ನೆಲ್ಲ ವಶ ಮಾಡ್ಕೊಂಡು ಅವ್ರನ್ನ ಕತ್ತಿಯಿಂದ ಸೋಲಿಸಿದ.+ ಯೆಹೋವನ ಸೇವಕ ಮೋಶೆ ಆಜ್ಞೆ ಕೊಟ್ಟ ಹಾಗೇ ಅವ್ರನ್ನೆಲ್ಲ ಪೂರ್ತಿ ನಾಶಮಾಡಿದ.+ 13  ಯೆಹೋಶುವ ಸುಟ್ಟುಹಾಕಿದ ಒಂದೇ ಒಂದು ಪಟ್ಟಣ ಹಾಚೋರ್‌ ಆಗಿತ್ತು. ಹಾಚೋರನ್ನ ಬಿಟ್ಟು ದಿಬ್ಬದ ಮೇಲಿದ್ದ ಬೇರೆ ಯಾವುದೇ ಪಟ್ಟಣಗಳನ್ನ ಇಸ್ರಾಯೇಲ್ಯರು ಸುಟ್ಟುಹಾಕಿಲ್ಲ. 14  ಈ ಪಟ್ಟಣಗಳಲ್ಲಿ ಕೊಳ್ಳೆ ಹೊಡೆದ ವಸ್ತುಗಳನ್ನ ಪ್ರಾಣಿಗಳನ್ನ ಇಸ್ರಾಯೇಲ್ಯರು ತಮಗೋಸ್ಕರ ತಗೊಂಡ್ರು.+ ಆದ್ರೆ ಅವರು ಒಬ್ಬ ಮನುಷ್ಯನನ್ನೂ ಬಿಡಲಿಲ್ಲ. ಪೂರ್ತಿ ನಾಶವಾಗೋ ತನಕ ಕತ್ತಿಯಿಂದ ಎಲ್ರನ್ನ ಕೊಲ್ತಾ ಹೋದ್ರು.+ ಹೀಗೆ ಎಲ್ರನ್ನೂ ಕೊಂದು ಹಾಕಿದ್ರು.+ 15  ಯೆಹೋವ ತನ್ನ ಸೇವಕನಾದ ಮೋಶೆಗೆ ಆಜ್ಞೆ ಕೊಟ್ಟಿದ್ದನ್ನೇ, ಮೋಶೆ ಯೆಹೋಶುವನಿಗೆ ಆಜ್ಞೆ ಕೊಟ್ಟ.+ ಯೆಹೋಶುವ ಅದನ್ನೇ ಮಾಡಿದ. ಯೆಹೋವ ಮೋಶೆಗೆ ಹೇಳಿದ ವಿಷ್ಯಗಳಲ್ಲಿ ಒಂದನ್ನೂ ಬಿಡದೆ ಎಲ್ಲವನ್ನ ಯೆಹೋಶುವ ಪಾಲಿಸಿದ.+ 16  ಯೆಹೋಶುವ ಬೆಟ್ಟ ಪ್ರದೇಶ, ಇಡೀ ನೆಗೆಬ್‌,+ ಗೋಷೆನಿನ ಎಲ್ಲ ಪ್ರದೇಶ, ಷೆಫೆಲಾ,+ ಅರಾಬಾ+ ಮತ್ತು ಇಸ್ರಾಯೇಲಿನ ಬೆಟ್ಟ ಪ್ರದೇಶ ಮತ್ತು ಅದ್ರ ತಗ್ಗು ಪ್ರದೇಶ 17  ಅಂದ್ರೆ ಸೇಯೀರಿಗೆ ಹೋಗೋ ದಾರಿಯಲ್ಲಿದ್ದ ಹಾಲಾಕ್‌ ಬೆಟ್ಟದಿಂದ ಹೆರ್ಮೋನ್‌ ಬೆಟ್ಟದ+ ಕೆಳಗಿರೋ ಲೆಬನೋನ್‌ ಕಣಿವೆಯಲ್ಲಿರೋ ಬಾಲ್ಗಾದಿನ+ ತನಕ ಇದ್ದ ಎಲ್ಲ ಪ್ರದೇಶಗಳನ್ನ ಸ್ವಾಧೀನ ಮಾಡ್ಕೊಂಡ. ಅವುಗಳ ರಾಜರನ್ನ ಸೋಲಿಸಿ ಕೊಂದ. 18  ಯೆಹೋಶುವ ಈ ರಾಜರ ವಿರುದ್ಧ ತುಂಬ ಕಾಲದ ತನಕ ಯುದ್ಧ ಮಾಡಿದ. 19  ಗಿಬ್ಯೋನ್‌+ ಜನ್ರಾದ ಹಿವ್ವಿಯರನ್ನ ಬಿಟ್ಟು ಬೇರೆ ಯಾವ ಪಟ್ಟಣದವರೂ ಇಸ್ರಾಯೇಲ್ಯರ ಜೊತೆ ಶಾಂತಿ ಸಂಧಾನ ಮಾಡ್ಕೊಳ್ಳಲಿಲ್ಲ. ಬೇರೆಲ್ಲ ಪಟ್ಟಣಗಳ ವಿರುದ್ಧ ಯುದ್ಧ ಮಾಡಿ ಅವುಗಳನ್ನ ಇಸ್ರಾಯೇಲ್ಯರು ವಶ ಮಾಡ್ಕೊಂಡ್ರು.+ 20  ಆ ಪಟ್ಟಣಗಳವರ ಹೃದಯ ಕಲ್ಲಾಗೋ ತರ ಯೆಹೋವನೇ ಬಿಟ್ಟುಬಿಟ್ಟನು.+ ಹಾಗಾಗಿ ಅವ್ರೆಲ್ಲ ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡಿದ್ರು. ದೇವರು ಅವ್ರಿಗೆ ಸ್ವಲ್ಪನೂ ದಯೆ ತೋರಿಸದೆ ಅವ್ರನ್ನ ಸರ್ವನಾಶ ಮಾಡಿದ.+ ಯೆಹೋವ ಮೋಶೆಗೆ ಹೇಳಿದ ಹಾಗೇ ಅವ್ರನ್ನೆಲ್ಲ ನಾಶ ಮಾಡಬೇಕಾಯ್ತು.+ 21  ಆ ಸಮಯದಲ್ಲಿ ಯೆಹೋಶುವ ಅನಾಕ್ಯರನ್ನ+ ಹೆಬ್ರೋನ್‌, ದೆಬೀರ್‌, ಅನಾಬ್‌ ಬೆಟ್ಟ ಪ್ರದೇಶದಿಂದ, ಯೆಹೂದದ ಮತ್ತು ಇಸ್ರಾಯೇಲಿನ ಎಲ್ಲ ಬೆಟ್ಟ ಪ್ರದೇಶಗಳಿಂದ ಅಳಿಸಿಹಾಕಿದ. ಯೆಹೋಶುವ ಅವ್ರನ್ನ ಅವ್ರ ಪಟ್ಟಣಗಳನ್ನೆಲ್ಲ ಪೂರ್ತಿ ನಾಶಮಾಡಿದ.+ 22  ಇದಾದ ಮೇಲೆ ಇಸ್ರಾಯೇಲ್ಯರ ಪ್ರಾಂತ್ಯದಲ್ಲಿ ಒಬ್ಬ ಅನಾಕ್ಯನೂ ಉಳಿಲಿಲ್ಲ. ಗಾಜಾ,+ ಗತ್‌,+ ಅಷ್ಡೋದ್‌+ ಪ್ರದೇಶದಲ್ಲಿ ಕೆಲವರು ಮಾತ್ರ ಉಳಿದ್ರು.+ 23  ಯೆಹೋವ ಮೋಶೆಗೆ ಮಾತು ಕೊಟ್ಟ ಹಾಗೇ ಯೆಹೋಶುವ ಇಡೀ ದೇಶವನ್ನ ತನ್ನ ವಶ ಮಾಡ್ಕೊಂಡ.+ ಅವನು ಇಸ್ರಾಯೇಲ್ಯರಿಗೆ ಅವ್ರವ್ರ ಕುಲದ ಪ್ರಕಾರ ಆಸ್ತಿಯನ್ನ ಪಾಲುಮಾಡಿ ಕೊಟ್ಟ.+ ಕೊನೆಗೆ ಯುದ್ಧ ಮುಗಿದು ದೇಶದಲ್ಲಿ ಶಾಂತಿ ಇತ್ತು.+

ಪಾದಟಿಪ್ಪಣಿ

ಅಥವಾ “ಅರಾಬಾದಲ್ಲಿದ್ದ.”
ಪದವಿವರಣೆಯಲ್ಲಿ “ಪ್ರಾಣ” ನೋಡಿ.