ಯೆಹೋಶುವ 12:1-24
12 ಇಸ್ರಾಯೇಲ್ಯರು ಯೋರ್ದನಿನ ಪೂರ್ವಕ್ಕಿರೋ ಅರ್ನೋನ್ ಕಣಿವೆಯಿಂದ+ ಹೆರ್ಮೋನ್ ಬೆಟ್ಟದ+ ತನಕ ಇರೋ ಪ್ರದೇಶಗಳನ್ನ ಮತ್ತು ಪೂರ್ವಕ್ಕಿರೋ ಇಡೀ ಅರಾಬಾ ಪ್ರದೇಶವನ್ನ ವಶ ಮಾಡ್ಕೊಂಡ್ರು.+ ಈ ಪ್ರದೇಶಗಳ ರಾಜರು ಯಾರಂದ್ರೆ,
2 ಹೆಷ್ಬೋನಿನಲ್ಲಿ ವಾಸವಿದ್ದ ಅಮೋರಿಯರ ರಾಜ ಸೀಹೋನ.+ ಇವನು ಅರ್ನೋನ್ ಕಣಿವೆಯ+ ಅಂಚಿನಲ್ಲಿರೋ ಅರೋಯೇರ್‌ನಿಂದ+ ಆಳ್ತಿದ್ದ. ಅವನ ಪ್ರದೇಶ ಕಣಿವೆಯ ಮಧ್ಯಭಾಗದಿಂದ ಗಿಲ್ಯಾದಿನ ಅರ್ಧ ಭಾಗದ ತನಕ ಅಂದ್ರೆ ಅಮ್ಮೋನಿಯರ ಗಡಿಯಾಗಿದ್ದ ಯಬ್ಬೋಕ್ ಕಣಿವೆ ತನಕ ಹರಡಿತ್ತು.
3 ಅಷ್ಟೇ ಅಲ್ಲ ಅವನು ಪೂರ್ವಕ್ಕಿದ್ದ ಅರಾಬಾವನ್ನೂ ಆಳ್ತಿದ್ದ. ಅದು ಕಿನ್ನೆರೆತ್ ಸಮುದ್ರದಿಂದ*+ ಲವಣ ಸಮುದ್ರವಾದ* ಅರಾಬಾದ ತನಕ ಪೂರ್ವಕ್ಕೆ ಬೇತ್-ಯೆಷಿಮೋತಿನ ತನಕ ದಕ್ಷಿಣಕ್ಕೆ ಪಿಸ್ಗಾದ ಇಳಿಜಾರು ಪ್ರದೇಶದ ತನಕ ಹರಡಿತ್ತು.+
4 ಇಸ್ರಾಯೇಲ್ಯರು ವಶ ಮಾಡ್ಕೊಂಡ ಮತ್ತೊಬ್ಬ ರಾಜ ಯಾರಂದ್ರೆ ಬಾಷಾನಿನ ಓಗ.+ ರೆಫಾಯರ ಕೊನೆಯವ್ರಲ್ಲಿ ಒಬ್ಬನಾಗಿದ್ದ+ ಇವನು ಅಷ್ಟರೋತಿನಲ್ಲಿ ಎದ್ರೈನಲ್ಲಿ ವಾಸಿಸ್ತಿದ್ದ.
5 ಇವನು ಹೆರ್ಮೋನ್ ಬೆಟ್ಟವನ್ನ, ಸಲ್ಕಾವನ್ನ, ಗೆಷೂರ್ಯರ ಮತ್ತು ಮಾಕಾತ್ಯರ+ ಗಡಿ ತನಕ ಹರಡಿದ್ದ ಇಡೀ ಬಾಷಾನನ್ನ,+ ಹೆಷ್ಬೋನಿನ ರಾಜ ಸೀಹೋನನ+ ಗಡಿ ತನಕ ಹರಡಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯವನ್ನ ಆಳ್ತಿದ್ದ.
6 ಯೆಹೋವನ ಸೇವಕ ಮೋಶೆ ಮತ್ತು ಇಸ್ರಾಯೇಲ್ಯರು ಈ ಇಬ್ರು ರಾಜರನ್ನ ಸೋಲಿಸಿದ್ರು.+ ಇವ್ರ ಪ್ರದೇಶಗಳನ್ನ ಯೆಹೋವನ ಸೇವಕ ಮೋಶೆ ರೂಬೇನ್ಯರಿಗೆ, ಗಾದ್ಯರಿಗೆ, ಮನಸ್ಸೆಯ ಅರ್ಧ ಕುಲದವರಿಗೆ ಆಸ್ತಿಯಾಗಿ ಕೊಟ್ಟ.+
7 ಯೋರ್ದನಿನ ಪಶ್ಚಿಮಕ್ಕಿದ್ದ ಅಂದ್ರೆ ಲೆಬನೋನ್+ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ,+ ಸೇಯೀರಿಗೆ ಹೋಗೋ ದಾರಿಯಲ್ಲಿದ್ದ+ ಹಾಲಾಕ್ ಬೆಟ್ಟದ+ ತನಕ ಇರೋ ಪ್ರದೇಶಗಳ ರಾಜರನ್ನ ಯೆಹೋಶುವ ಮತ್ತು ಇಸ್ರಾಯೇಲ್ಯರು ಸೋಲಿಸಿ ವಶ ಮಾಡ್ಕೊಂಡ್ರು. ಆಮೇಲೆ ಈ ಪ್ರದೇಶಗಳನ್ನ ಯೆಹೋಶುವ ಇಸ್ರಾಯೇಲ್ಯರ ಕುಲಗಳಿಗೆ ಆಸ್ತಿಯಾಗಿ ಹಂಚಿಕೊಟ್ಟ.+
8 ಅದ್ರಲ್ಲಿ ಬೆಟ್ಟ ಪ್ರದೇಶಗಳು, ಷೆಫೆಲಾ, ಅರಾಬಾ, ಇಳಿಜಾರು ಪ್ರದೇಶಗಳು, ಕಾಡುಗಳು, ನೆಗೆಬ್+ ಇತ್ತು. ಅವು ಹಿತ್ತಿಯರ, ಅಮೋರಿಯರ,+ ಕಾನಾನ್ಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ+ ಪ್ರದೇಶ ಆಗಿತ್ತು. ಈ ಪ್ರದೇಶಗಳ ರಾಜರು ಯಾರಂದ್ರೆ,
9 ಯೆರಿಕೋವಿನ ರಾಜ,+ ಬೆತೆಲಿನ ಪಕ್ಕದಲ್ಲಿದ್ದ ಆಯಿಯ ರಾಜ,+
10 ಯೆರೂಸಲೇಮಿನ ರಾಜ, ಹೆಬ್ರೋನಿನ ರಾಜ,+
11 ಯರ್ಮೂತಿನ ರಾಜ, ಲಾಕೀಷಿನ ರಾಜ,
12 ಎಗ್ಲೋನಿನ ರಾಜ, ಗೆಜೆರಿನ ರಾಜ,+
13 ದೆಬೀರಿನ+ ರಾಜ, ಗೆದೆರಿನ ರಾಜ,
14 ಹೊರ್ಮಾದ ರಾಜ, ಅರಾದಿನ ರಾಜ,
15 ಲಿಬ್ನದ+ ರಾಜ, ಅದುಲ್ಲಾಮಿನ ರಾಜ,
16 ಮಕ್ಕೇದದ ರಾಜ,+ ಬೆತೆಲಿನ+ ರಾಜ,
17 ತಪ್ಪೂಹದ ರಾಜ, ಹೇಫೆರಿನ ರಾಜ,
18 ಅಫೇಕಿನ ರಾಜ, ಲಷ್ಷಾರೋನಿನ ರಾಜ,
19 ಮಾದೋನಿನ ರಾಜ, ಹಾಚೋರಿನ ರಾಜ,+
20 ಶಿಮ್ರೋನ್-ಮೆರೋನಿನ ರಾಜ, ಅಕ್ಷಾಫಿನ ರಾಜ,
21 ತಾನಕಿನ ರಾಜ, ಮೆಗಿದ್ದೋವಿನ ರಾಜ,
22 ಕೆದೆಷಿನ ರಾಜ, ಕರ್ಮೆಲಲ್ಲಿದ್ದ ಯೊಕ್ನೆಯಾಮಿನ+ ರಾಜ,
23 ದೋರಿನ ಇಳಿಜಾರು ಪ್ರದೇಶದಲ್ಲಿದ್ದ ದೋರಿನ ರಾಜ,+ ಗಿಲ್ಗಾಲಲ್ಲಿದ್ದ ಗೋಯಿಮಿನ ರಾಜ ಮತ್ತು
24 ತಿರ್ಚದ ರಾಜ, ಒಟ್ಟು 31 ರಾಜರು.