ಯೆಹೋಶುವ 15:1-63

  • ಯೆಹೂದನಿಗೆ ಸಿಕ್ಕಿದ ಆಸ್ತಿ (1-12)

  • ಕಾಲೇಬನ ಮಗಳಿಗೆ ಆಸ್ತಿ ಸಿಕ್ತು (13-19)

  • ಯೆಹೂದದ ಪಟ್ಟಣಗಳು (20-63)

15  ಯೆಹೂದ ಕುಲದ ಮನೆತನಗಳಿಗೆ ಎದೋಮಿನ+ ಗಡಿ ತನಕ ಇರೋ ಪ್ರದೇಶಗಳನ್ನ, ಚಿನ್‌ ಕಾಡಿನ ಮತ್ತು ನೆಗೆಬಿನ ದಕ್ಷಿಣ ದಿಕ್ಕಿನ ಅಂಚಿನ ತನಕ ಇದ್ದ ಪ್ರದೇಶಗಳನ್ನ ಹಂಚ್ಕೊಟ್ರು.*+  ಅವ್ರ ದಕ್ಷಿಣದ ಗಡಿ ಲವಣ ಸಮುದ್ರದ* ತುತ್ತತುದಿಯಿಂದ+ ಅಂದ್ರೆ ಅದ್ರ ದಕ್ಷಿಣ ಕೊಲ್ಲಿಯಿಂದ ಶುರು ಆಗಿತ್ತು.  ಅದು ದಕ್ಷಿಣದಲ್ಲಿ ಅಕ್ರಬ್ಬೀಮಿಗೆ+ ಹತ್ತಿ ಹೋಗೋ ದಾರಿಯಿಂದ ಚಿನ್‌ ತನಕ ಇತ್ತು. ಆಮೇಲೆ ದಕ್ಷಿಣ ಮಾರ್ಗವಾಗಿ ಕಾದೇಶ್‌-ಬರ್ನೇಯದ+ ತನಕ ಹೋಗಿ, ಹೆಚ್ರೋನನ್ನ ಹಾದು ಅದ್ದಾರಿನ ತನಕ ಹೋಗಿ ಕರ್ಕದ ಕಡೆ ತಿರುಗಿತ್ತು.  ಅಲ್ಲಿಂದ ಅಚ್ಮೋನಿನ+ ತನಕ ಹೋಗಿ ಈಜಿಪ್ಟಿನ ನಾಲೆ*+ ತನಕ ಹೋಗಿ ಸಮುದ್ರ* ತೀರದಲ್ಲಿ ಕೊನೆ ಆಗ್ತಿತ್ತು. ಇದು ಅವ್ರ ದಕ್ಷಿಣದ ಗಡಿ.  ಯೆಹೂದದ ಪೂರ್ವದ ಗಡಿ ಲವಣ ಸಮುದ್ರದಿಂದ* ಯೋರ್ದನಿನ ಅಂಚಿನ ತನಕ ಇತ್ತು. ಉತ್ತರದಲ್ಲಿ ಅದ್ರ ಗಡಿ ಸಮುದ್ರದ ಕೊಲ್ಲಿಯಿಂದ ಶುರು ಆಗ್ತಿತ್ತು. ಅದು ಯೋರ್ದನ್‌ ನದಿ ಸೇರ್ತಿದ್ದ ಸ್ಥಳವಾಗಿತ್ತು.+  ಈ ಗಡಿ ಬೇತ್‌-ಹೊಗ್ಲಾದಿಂದ+ ಉತ್ತರದ ಬೇತ್‌-ಅರಾಬದ+ ತನಕ ಹೋಗಿ ರೂಬೇನನ ಮಗ ಬೋಹನನ+ ಕಲ್ಲಿನ ತನಕ ಇತ್ತು.  ಈ ಗಡಿ ಆಕೋರ್‌ ಕಣಿವೆಯ+ ದೆಬೀರಿನ ತನಕ ಹೋಗಿ ಉತ್ತರಕ್ಕಿದ್ದ ಗಿಲ್ಗಾಲಿಗೆ+ ತಿರುಗಿತ್ತು. ಇದು ನಾಲೆಯ ದಕ್ಷಿಣಕ್ಕಿದ್ದ ಅದುಮೀಮಿಗೆ ಹತ್ತಿ ಹೋಗೋ ದಾರಿಯ ಎದುರಿತ್ತು. ಗಡಿ ಅಲ್ಲಿಂದ ಏನ್‌-ಷೆಮೆಷ್‌+ ಬುಗ್ಗೆ ಮೇಲೆ ಹಾದು ಹೋಗಿ, ಏನ್‌-ರೋಗೆಲಿನಲ್ಲಿ+ ಮುಗಿತಿತ್ತು.  ಆ ಗಡಿ ಹಿನ್ನೋಮ್‌* ಕಣಿವೆ+ ತನಕ ಹೋಗಿ, ದಕ್ಷಿಣಕ್ಕಿದ್ದ ಯೆಬೂಸಿಯರ+ ಇಳಿಜಾರು ಪ್ರದೇಶ ಅಂದ್ರೆ ಯೆರೂಸಲೇಮಿನ+ ತನಕ ಇತ್ತು. ಆಮೇಲೆ ಆ ಗಡಿ ಅಲ್ಲಿಂದ ಹಿನ್ನೋಮ್‌ ಕಣಿವೆಯ ಪಶ್ಚಿಮಕ್ಕಿದ್ದ ಬೆಟ್ಟದ ತುದಿ ತನಕ ವ್ಯಾಪಿಸಿತ್ತು. ಅದು ಉತ್ತರದ ಕಡೆ ಇದ್ದ ರೆಫಾಯರ ಕಣಿವೆಯ ತುತ್ತತುದಿಯಲ್ಲಿತ್ತು.  ಆಮೇಲೆ ಅದು ಅಲ್ಲಿಂದ ನೆಫ್ತೋಹದ+ ಬುಗ್ಗೆ ತನಕ ಹೋಗಿ ಎಫ್ರೋನ್‌ ಬೆಟ್ಟದ ಪಟ್ಟಣಗಳ ತನಕ ಇತ್ತು. ಅಲ್ಲಿಂದ ಬಾಳಾ ಅಂದ್ರೆ ಕಿರ್ಯತ್‌-ಯಾರೀಮಿನ+ ತನಕ ಹರಡಿತ್ತು. 10  ಈ ಗಡಿ ಬಾಳಾದಿಂದ ಪಶ್ಚಿಮದ ಕಡೆ ಇರೋ ಸೇಯೀರ್‌ ಬೆಟ್ಟದ ತನಕ ಮತ್ತು ಉತ್ತರಕ್ಕಿರೋ ಯಾರೀಮ್‌ ಬೆಟ್ಟದ ಇಳಿಜಾರಿಗೆ ಅಂದ್ರೆ ಕೆಸಾಲೋನಿನ ತನಕ ಹರಡಿತ್ತು. ಅಲ್ಲಿಂದ ಬೇತ್‌-ಷೆಮೆಷ್‌+ ಕಡೆ ಇಳಿದು ತಿಮ್ನಾ+ ತನಕ ಹಬ್ಬಿತ್ತು. 11  ಆಮೇಲೆ ಈ ಗಡಿ ಉತ್ತರಕ್ಕಿರೋ ಎಕ್ರೋನಿನ+ ಇಳಿಜಾರಿನ ತನಕ ಹೋಗಿ ಶಿಕ್ಕೆರೋನಿಂದ ಬಾಳಾ ಬೆಟ್ಟ ಹಾದು ಯಬ್ನೆಯೇಲಿನ ತನಕ ಹರಡಿ ಸಮುದ್ರ ತೀರದಲ್ಲಿ ಕೊನೆ ಆಗ್ತಿತ್ತು. 12  ಪಶ್ಚಿಮದ ಗಡಿ ಮಹಾ ಸಮುದ್ರಕ್ಕೆ*+ ಮತ್ತು ಅದರ ತೀರಕ್ಕೆ ಇತ್ತು. ಇದು ಯೆಹೂದ ವಂಶದವ್ರಿಗೆ ಅವ್ರ ಮನೆತನಗಳ ಪ್ರಕಾರ ಸಿಕ್ಕಿದ ಪ್ರದೇಶಗಳ ಸುತ್ತ ಇರೋ ಗಡಿ ಆಗಿತ್ತು. 13  ಆಮೇಲೆ ಯೆಹೋವನ ಅಪ್ಪಣೆ ಪ್ರಕಾರ ಯೆಹೋಶುವ ಯೆಫುನ್ನೆಯ ಮಗ ಕಾಲೇಬನಿಗೆ+ ಯೆಹೂದ ವಂಶದವ್ರ ಮಧ್ಯ ಒಂದು ಭಾಗ ಕೊಟ್ಟ. ಅದು ಕಿರ್ಯತ್‌-ಅರ್ಬ (ಅರ್ಬ ಅನಾಕನ ತಂದೆ) ಅಂದ್ರೆ ಹೆಬ್ರೋನ್‌+ ಆಗಿತ್ತು. 14  ಹಾಗಾಗಿ ಕಾಲೇಬ ಅನಾಕನ+ ಪುತ್ರರಾಗಿರೋ ಶೇಷೈ, ಅಹೀಮನ್‌, ತಲ್ಮೈ+ ಅನ್ನೋ ಈ ಮೂವರು ಅನಾಕ್ಯರನ್ನ ಅಲ್ಲಿಂದ ಓಡಿಸಿಬಿಟ್ಟ. 15  ಅವನು ಅಲ್ಲಿಂದ ಹೊರಟು ದೆಬೀರಿನ+ ಜನ್ರ ವಿರುದ್ಧ ಯುದ್ಧ ಮಾಡಿದ. (ದೆಬೀರಿಗೆ ಮುಂಚೆ ಕಿರ್ಯತ್‌-ಸೇಫೆರ್‌ ಅನ್ನೋ ಹೆಸ್ರಿತ್ತು.) 16  ಆಮೇಲೆ ಕಾಲೇಬ “ಕಿರ್ಯತ್‌-ಸೇಫೆರನ್ನ ದಾಳಿ ಮಾಡಿ ಅದನ್ನ ವಶ ಮಾಡ್ಕೊಳ್ಳೋನಿಗೆ ನಾನು ನನ್ನ ಮಗಳು ಅಕ್ಷಾಳನ್ನ ಮದುವೆ ಮಾಡ್ಕೊಡ್ತೀನಿ” ಅಂದ. 17  ಕಾಲೇಬನ ಸಹೋದರ ಕೆನಜನ+ ಮಗ ಒತ್ನೀಯೇಲ+ ಅದನ್ನ ವಶ ಮಾಡ್ಕೊಂಡ. ಆಗ ಕಾಲೇಬ ಅಕ್ಷಾಳನ್ನ+ ಒತ್ನೀಯೇಲನಿಗೆ ಮದುವೆ ಮಾಡ್ಕೊಟ್ಟ. 18  ಅವಳು ತನ್ನ ಗಂಡನ ಮನೆಗೆ ಹೋಗುವಾಗ ತಂದೆ ಹತ್ರ ಹೊಲ ಕೇಳು ಅಂತ ಗಂಡನನ್ನ ಒತ್ತಾಯಿಸಿದಳು. ಆಮೇಲೆ ತನ್ನ ಕತ್ತೆ ಮೇಲಿಂದ ಕೆಳಗೆ ಇಳಿದಳು.* ಆಗ ಕಾಲೇಬ ಅವಳ ಹತ್ರ “ಏನು ಬೇಕು?” ಅಂದ.+ 19  ಅದಕ್ಕೆ ಅವಳು “ದಯವಿಟ್ಟು ನನ್ನನ್ನ ಆಶೀರ್ವದಿಸು. ನೀನು ನನಗೆ ದಕ್ಷಿಣಕ್ಕಿರೋ* ಹೊಲದ ಒಂದು ಭಾಗ ಕೊಟ್ಟಿರೋ ತರ, ಗುಲ್ಲೊತ್‌-ಮಯಿಮ್‌* ಸಹ ಕೊಡು” ಅಂದಳು. ಆಗ ಅವನು ಅವಳಿಗೆ ಮೇಲಿನ ಮತ್ತು ಕೆಳಗಿನ ಗುಲ್ಲೊತನ್ನ ಕೊಟ್ಟ. 20  ಇದು ಯೆಹೂದ ಕುಲಕ್ಕೆ ಮನೆತನಗಳ ಪ್ರಕಾರ ಸಿಕ್ಕಿದ ಆಸ್ತಿಯಾಗಿತ್ತು. 21  ಯೆಹೂದ ಕುಲಕ್ಕೆ ದಕ್ಷಿಣದ ತುತ್ತತುದಿಗೆ ಮತ್ತು ಎದೋಮಿನ ಗಡಿ+ ಕಡೆ ಸಿಕ್ಕಿದ ಪಟ್ಟಣಗಳು ಯಾವುದಂದ್ರೆ: ಕಬ್ಜಯೇಲ್‌, ಏದೆರ್‌, ಯಾಗೂರ್‌, 22  ಕೀನಾ, ದೀಮೋನಾ, ಅದಾದಾ, 23  ಕೆದೆಷ್‌, ಹಾಚೋರ್‌, ಇತ್ನಾನ್‌, 24  ಜೀಫ್‌, ಟೆಲೆಮ್‌, ಬೆಯಾಲೋತ್‌, 25  ಹಾಚೋರ್‌-ಹದತ್ತಾ, ಕಿರ್ಯೋತ್‌-ಹೆಚ್ರೋನ್‌ ಅನ್ನೋ ಹಾಚೋರ್‌, 26  ಅಮಾಮ್‌, ಶೆಮ, ಮೋಲಾದಾ,+ 27  ಹಚರ್‌-ಗದ್ದಾ, ಹೆಷ್ಮೋನ್‌, ಬೇತ್‌-ಪೆಲೆಟ್‌,+ 28  ಹಚರ್‌-ಷೂವಾಲ್‌, ಬೇರ್ಷೆಬ,+ ಬಿಜ್ಯೋತ್ಯಾ, 29  ಬಾಳಾ, ಇಯ್ಯೀಮ್‌, ಎಚೆಮ್‌, 30  ಎಲ್ಟೋಲದ್‌, ಕೆಸೀಲ್‌, ಹೊರ್ಮಾ,+ 31  ಚಿಕ್ಲಗ್‌,+ ಮದ್ಮನ್ನಾ, ಸನ್ಸನ್ನಾ, 32  ಲೆಬಾವೋತ್‌, ಶಿಲ್ಹೀಮ್‌, ಅಯಿನ್‌, ರಿಮ್ಮೋನ್‌.+ ಒಟ್ಟು 29 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 33  ಷೆಫೆಲಾದಲ್ಲಿದ್ದ+ ಪಟ್ಟಣಗಳು ಯಾವುದಂದ್ರೆ: ಎಷ್ಟಾವೋಲ್‌, ಚೊರ್ಗ,+ ಅಶ್ನಾ, 34  ಜಾನೋಹ, ಏಂಗನ್ನೀಮ್‌, ತಪ್ಪೂಹ, ಏನಾಮ್‌, 35  ಯರ್ಮೂತ್‌, ಅದುಲ್ಲಾಮ್‌,+ ಸೋಕೋ, ಅಜೇಕ,+ 36  ಶಾರಯಿಮ್‌,+ ಅದೀತಯಿಮ್‌, ಗೆದೇರಾ, ಗೆದೆರೋತಯಿಮ್‌.* ಹೀಗೆ 14 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 37  ಚೆನಾನ್‌, ಹದಾಷಾ, ಮಿಗ್ದಲ್‌-ಗಾದ್‌, 38  ದಿಲಾನ್‌, ಮಿಚ್ಪೆ, ಯೊಕ್ತೆಯೇಲ್‌, 39  ಲಾಕೀಷ್‌,+ ಬೊಚ್ಕತ್‌, ಎಗ್ಲೋನ್‌, 40  ಕಬ್ಬೋನ್‌, ಲಹ್ಮಾಸ್‌, ಕಿತ್ಲೀಷ್‌, 41  ಗೆದೇರೋತ್‌, ಬೇತ್‌-ದಾಗೋನ್‌, ನಯಮಾ, ಮಕ್ಕೇದ.+ ಹೀಗೆ 16 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 42  ಲಿಬ್ನ,+ ಏತೆರ್‌, ಆಷಾನ್‌,+ 43  ಇಪ್ತಾಹ, ಅಶ್ನಾ, ನೆಚೀಬ್‌, 44  ಕೆಯೀಲಾ, ಅಕ್ಜೀಬ್‌, ಮಾರೇಷ. ಹೀಗೆ ಒಂಬತ್ತು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 45  ಎಕ್ರೋನ್‌, ಅದಕ್ಕೆ ಸೇರಿದ* ಊರುಗಳು ಮತ್ತು ಹಳ್ಳಿಗಳು. 46  ಎಕ್ರೋನಿನ ಪಶ್ಚಿಮದಿಂದ ಅಷ್ಡೋದಿನ ಪಕ್ಕದಲ್ಲಿರೋ ಸ್ಥಳಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 47  ಅಷ್ಡೋದ್‌,+ ಗಾಜಾ+ ಮತ್ತು ಅವುಗಳಿಗೆ ಸೇರಿದ* ಊರುಗಳು, ಹಳ್ಳಿಗಳು. ಇವು ಈಜಿಪ್ಟಿನ ನಾಲೆ ತನಕ, ಮಹಾ ಸಮುದ್ರ* ಮತ್ತು ಅದ್ರ ತೀರದ ತನಕ ಹಬ್ಬಿತ್ತು.+ 48  ಬೆಟ್ಟ ಪ್ರದೇಶದಲ್ಲಿರೋ ಪಟ್ಟಣಗಳು ಯಾವುದಂದ್ರೆ: ಶಾಮೀರ್‌, ಯತ್ತೀರ್‌,+ ಸೋಕೋ, 49  ದನ್ನಾ, ದೆಬೀರ್‌ ಅನ್ನೋ ಕಿರ್ಯತ್‌-ಸನ್ನಾ, 50  ಅನಾಬ್‌, ಎಷ್ಟೆಮೋ,+ ಆನೀಮ್‌, 51  ಗೋಷೆನ್‌,+ ಹೋಲೋನ್‌, ಗೀಲೋ.+ ಹೀಗೆ 11 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 52  ಅರಬ್‌, ದೂಮ, ಎಷಾನ್‌, 53  ಯಾನೂಮ್‌, ಬೇತ್‌-ತಪ್ಪೂಹ, ಅಫೇಕಾ, 54  ಹುಮ್ಟಾ, ಹೆಬ್ರೋನ್‌+ ಎಂಬ ಕಿರ್ಯತ್‌-ಅರ್ಬ, ಚೀಯೋರ್‌. ಹೀಗೆ ಒಂಬತ್ತು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 55  ಮಾವೋನ್‌,+ ಕರ್ಮೆಲ್‌, ಜೀಫ್‌,+ ಯುಟ್ಟಾ, 56  ಇಜ್ರೇಲ್‌, ಯೊಗ್ದೆಯಾಮ್‌, ಜಾನೋಹ, 57  ಕಯಿನ್‌, ಗಿಬೆಯಾ, ತಿಮ್ನಾ.+ ಹೀಗೆ ಹತ್ತು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 58  ಹಲ್ಹೂಲ್‌, ಬೇತ್‌-ಚೂರ್‌, ಗೆದೋರ್‌, 59  ಮಾರಾತ್‌, ಬೇತನೋತ್‌, ಎಲ್ಟೆಕೋನ್‌. ಹೀಗೆ ಆರು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 60  ಕಿರ್ಯತ್‌-ಯಾರೀಮ್‌+ ಅನ್ನೋ ಕಿರ್ಯತ್‌-ಬಾಳ್‌, ರಬ್ಬಾ. ಹೀಗೆ ಎರಡು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 61  ಕಾಡಲ್ಲಿರೋ ಪಟ್ಟಣಗಳು ಯಾವುದಂದ್ರೆ: ಬೇತ್‌-ಅರಾಬ,+ ಮಿದ್ದೀನ್‌, ಸೆಕಾಕಾ, 62  ನಿಬ್ಷಾನ್‌, ಉಪ್ಪಿನ ಪಟ್ಟಣ, ಏಂಗೆದಿ.+ ಹೀಗೆ ಆರು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 63  ಯೆರೂಸಲೇಮಲ್ಲಿ ವಾಸವಾಗಿದ್ದ ಯೆಬೂಸಿಯರನ್ನ+ ಯೆಹೂದದ ಗಂಡಸ್ರಿಗೆ ಓಡಿಸಕ್ಕಾಗಲಿಲ್ಲ.+ ಹಾಗಾಗಿ ಯೆಬೂಸಿಯರು ಇವತ್ತಿಗೂ ಯೆರೂಸಲೇಮಲ್ಲಿ ಯೆಹೂದದ ಜನ್ರ ಜೊತೆ ವಾಸ ಮಾಡ್ತಿದ್ದಾರೆ.

ಪಾದಟಿಪ್ಪಣಿ

ಅಥವಾ “ಚೀಟು ಹಾಕಿ ಕೊಟ್ರು.”
ಅದು, ಮೃತ ಸಮುದ್ರ.
ಅದು, ಮೆಡಿಟರೇನಿಯನ್‌ ಸಮುದ್ರ.
ಅದು, ಮೃತ ಸಮುದ್ರ.
ಅಕ್ಷ. “ಹಿನ್ನೋಮನ ಮಗನ.”
ಅದು, ಮೆಡಿಟರೇನಿಯನ್‌ ಸಮುದ್ರ.
ಬಹುಶಃ, “ಕತ್ತೆ ಮೇಲೆ ಕೂತು ಚಪ್ಪಾಳೆ ಹೊಡೆದಳು.”
ಅಥವಾ “ನೆಗೆಬಿನಲ್ಲಿರೋ.”
ಅರ್ಥ “ನೀರಿನ ಬುಗ್ಗೆಗಳು.”
ಬಹುಶಃ, “ಗೆದೇರಾ ಮತ್ತು ಕುರಿಯ ದೊಡ್ಡಿಗಳು.”
ಅಥವಾ “ಸುತ್ತಮುತ್ತ ಇರೋ.”
ಅಥವಾ “ಸುತ್ತಮುತ್ತ ಇರೋ.”
ಅದು, ಮೆಡಿಟರೇನಿಯನ್‌ ಸಮುದ್ರ.