ಯೆಹೋಶುವ 16:1-10
16 ಚೀಟಿ ಹಾಕಿದಾಗ*+ ಯೋಸೇಫನ+ ವಂಶದವ್ರಿಗೆ ಸಿಕ್ಕಿದ ಪ್ರದೇಶಗಳ ಗಡಿ ಯೆರಿಕೋದ ಯೋರ್ದನಿಂದ ಹಿಡಿದು ಪೂರ್ವಕ್ಕಿದ್ದ ನದಿಗಳ ತನಕ ಇತ್ತು. ಈ ಗಡಿ ಯೆರಿಕೋ ಕಾಡು ದಾಟಿ ಬೆತೆಲಿನ ಬೆಟ್ಟ ಪ್ರದೇಶದ ತನಕ ಹರಡಿತ್ತು.+
2 ಲೂಜಿಗೆ ಹತ್ರ ಇದ್ದ ಬೆತೆಲಿಗೆ ಹೋಗಿ ಅಲ್ಲಿಂದ ಅರ್ಕೀಯರ ಗಡಿಯಾಗಿದ್ದ ಅಟಾರೋತಿನ ತನಕ ಇತ್ತು.
3 ಅಲ್ಲಿಂದ ಅದು ಪಶ್ಚಿಮದ ಕಡೆಗಿದ್ದ ಯಫ್ಲೇಟ್ಯರ ಗಡಿ ತನಕ ಸಾಗಿ ಕೆಳಗಿನ ಬೇತ್‌ಹೋರೋನಿನ+ ಮೇಲಿಂದ ಗೆಜೆರಿಗೆ+ ಹೋಗಿ ಸಮುದ್ರ ತೀರದಲ್ಲಿ ಕೊನೆ ಆಗ್ತಿತ್ತು.
4 ಹೀಗೆ ಯೋಸೇಫನ ವಂಶದವರಾದ+ ಮನಸ್ಸೆ ಮತ್ತು ಎಫ್ರಾಯೀಮ್ ತಮ್ಮ ಪ್ರದೇಶಗಳನ್ನ ಪಡ್ಕೊಂಡ್ರು.+
5 ಎಫ್ರಾಯೀಮ್ ವಂಶದವ್ರಿಗೆ ಅವ್ರ ಮನೆತನಗಳ ಪ್ರಕಾರ ಆಸ್ತಿಯಾಗಿ ಸಿಕ್ಕಿದ ಪ್ರದೇಶಗಳ ಗಡಿ ಪೂರ್ವಕ್ಕೆ ಅಟಾರೋತ್-ಅದ್ದಾರಿಂದ+ ಮೇಲಿನ ಬೇತ್-ಹೋರೋನಿನ+ ತನಕ ಇತ್ತು.
6 ಆಮೇಲೆ ಆ ಗಡಿ ಸಮುದ್ರದ ತನಕ ಹಬ್ಬಿತ್ತು. ಉತ್ತರದ ಕಡೆಗೆ ಮಿಕ್ಮೆತಾತದ+ ತನಕ ಸಾಗಿ ಅಲ್ಲಿಂದ ಪೂರ್ವಕ್ಕೆ ತಿರುಗಿ ತಾನತ್-ಶೀಲೋ ದಾಟಿ ಪೂರ್ವದ ಯಾನೋಹದ ತನಕ ಹಬ್ಬಿತ್ತು.
7 ಯಾನೋಹದಿಂದ ಕೆಳಗೆ ಇಳಿದು ಅಟಾರೋತ್ ಮತ್ತು ನಾರ ಅನ್ನೋ ಊರುಗಳನ್ನ ದಾಟಿ ಯೆರಿಕೋಗೆ+ ಹೋಗಿ ಯೋರ್ದನಿನ ತನಕ ಇತ್ತು.
8 ಈ ಗಡಿ ತಪ್ಪೂಹದಿಂದ+ ಮುಂದುವರಿದು ಪಶ್ಚಿಮದ ಕಡೆಗಿರೋ ಕಾನಾ ನಾಲೆಯ ತನಕ ಹೋಗಿ ಸಮುದ್ರ ತೀರದಲ್ಲಿ ಕೊನೆ ಆಗ್ತಿತ್ತು.+ ಇದು ಎಫ್ರಾಯೀಮ್ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಸಿಕ್ಕಿದ ಆಸ್ತಿ.
9 ಮನಸ್ಸೆಗೆ ಆಸ್ತಿಯಾಗಿ ಸಿಕ್ಕಿದ್ದ ಪಟ್ಟಣಗಳ ಮತ್ತು ಅವುಗಳಿಗೆ ಸೇರಿದ ಹಳ್ಳಿಗಳ ನಡುವೆ ಎಫ್ರಾಯೀಮ್ ವಂಶದವ್ರಿಗೂ ಸ್ವಲ್ಪ ಪಟ್ಟಣಗಳು ಸಿಕ್ಕಿದ್ವು.+
10 ಗೆಜೆರಿನಲ್ಲಿ ಇದ್ದ ಕಾನಾನ್ಯರನ್ನ ಎಫ್ರಾಯೀಮ್ಯರು ಓಡಿಸಲಿಲ್ಲ.+ ಹಾಗಾಗಿ ಕಾನಾನ್ಯರು ಇವತ್ತಿಗೂ ಅವರ ಕೈಕೆಳಗೆ ಗುಲಾಮರಾಗಿ ಕೆಲಸ ಮಾಡ್ತಿದ್ದಾರೆ.+
ಪಾದಟಿಪ್ಪಣಿ
^ ಅಥವಾ “ಪಾಲು ಮಾಡಿದಾಗ.”