ಯೆಹೋಶುವ 17:1-18

  • ಮನಸ್ಸೆಗೆ ಪಶ್ಚಿಮಕ್ಕೆ ಸಿಕ್ಕಿದ ಆಸ್ತಿ (1-13)

  • ಯೋಸೇಫನ ವಂಶಕ್ಕೆ ಸಿಕ್ಕ ಹೆಚ್ಚಿನ ಪ್ರದೇಶ (14-18)

17  ಮನಸ್ಸೆ+ ಯೋಸೇಫನ ಮೊದಲ ಮಗನಾಗಿದ್ರಿಂದ+ ಅವನ ಕುಲದವ್ರಿಗೆ ಚೀಟಿ+ ಬಿತ್ತು. ಮಾಕೀರ+ ಮನಸ್ಸೆಯ ಮೊದಲ ಮಗನಾಗಿದ್ರಿಂದ ಅವನಿಗೆ ಗಿಲ್ಯಾದ್‌ ಮತ್ತು ಬಾಷಾನ್‌ ಅನ್ನೋ ಪ್ರದೇಶಗಳು ಸಿಕ್ಕಿದ್ವು.+ ಅವನೊಬ್ಬ ವೀರ ಸೈನಿಕ, ಗಿಲ್ಯಾದನ ತಂದೆ.  ಮನಸ್ಸೆ ವಂಶದ ಉಳಿದ ಮನೆತನಗಳಿಗೆ ಅಂದ್ರೆ ಅಬೀಯೆಜೆರನ,+ ಹೇಲೆಕನ, ಅಸ್ರೀಯೇಲನ, ಶೆಕೆಮನ, ಹೇಫೆರನ, ಶೆಮೀದಾನ ಮಕ್ಕಳಿಗೆ ಚೀಟಿ ಬಿತ್ತು. ಇವರು ಯೋಸೇಫನ ಮಗ ಮನಸ್ಸೆ ವಂಶಕ್ಕೆ ಸೇರಿದ ಮನೆತನದವರು ಆಗಿದ್ರು.+  ಮನಸ್ಸೆಯ ಮಗ ಮಾಕೀರ, ಮಾಕೀರನ ಮಗ ಗಿಲ್ಯಾದ್‌, ಗಿಲ್ಯಾದನ ಮಗ ಹೇಫೆರ್‌, ಹೇಫೆರನ ಮಗ ಚಲ್ಪಹಾದ.+ ಚಲ್ಪಹಾದನಿಗೆ ಗಂಡು ಮಕ್ಕಳು ಇರಲಿಲ್ಲ, ಹೆಣ್ಣು ಮಕ್ಕಳು ಮಾತ್ರ ಇದ್ರು. ಅವ್ರ ಹೆಸ್ರು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕ ಮತ್ತು ತಿರ್ಚಾ.  ಹಾಗಾಗಿ ಅವರು ಪುರೋಹಿತ ಎಲ್ಲಾಜಾರ,+ ನೂನನ ಮಗ ಯೆಹೋಶುವ ಮತ್ತು ಪ್ರಧಾನರ ಹತ್ರ ಹೋಗಿ “ನಮ್ಮ ಸಹೋದರರ ಜೊತೆ ನಮಗೂ ಆಸ್ತಿ ಕೊಡಬೇಕಂತ ಯೆಹೋವನೇ ಮೋಶೆಗೆ ಆಜ್ಞೆ ಕೊಟ್ಟಿದ್ದನು”+ ಅಂದ್ರು. ಆಗ ಯೆಹೋವನ ಆಜ್ಞೆ ಪ್ರಕಾರ ಅವ್ರ ತಂದೆಯ ಸಹೋದರರ ಜೊತೆ ಅವ್ರಿಗೂ ಆಸ್ತಿ ಕೊಟ್ರು.+  ಯೋರ್ದನಿನ ಆಕಡೆ* ಇರೋ ಗಿಲ್ಯಾದ್‌ ಮತ್ತು ಬಾಷಾನ್‌ ಅಲ್ಲದೆ ಈ ಕಡೆ ಇನ್ನೂ 10 ಪಾಲು ಮನಸ್ಸೆಗೆ ಸಿಕ್ತು.+  ಮನಸ್ಸೆಯ ಗಂಡು ಮಕ್ಕಳಿಗೆ ಸಿಕ್ಕಿದ ತರ ಅವನ ಹೆಣ್ಣು ಮಕ್ಕಳಿಗೂ ಆಸ್ತಿ ಸಿಕ್ತು. ಮನಸ್ಸೆ ವಂಶದಲ್ಲಿ ಉಳಿದವರು ಗಿಲ್ಯಾದ್‌ ಪ್ರದೇಶನ ಪಾಲು ಮಾಡ್ಕೊಂಡ್ರು.  ಮನಸ್ಸೆಗೆ ಸೇರಿದ ಪ್ರದೇಶಗಳ ಗಡಿ ಅಶೇರಿಂದ ಶೆಕೆಮಿನ+ ಮುಂದೆ ಇದ್ದ ಮಿಕ್ಮೆತಾತಿನ+ ತನಕ ಹೋಗಿ ಅಲ್ಲಿಂದ ದಕ್ಷಿಣಕ್ಕೆ* ಎನ್‌-ತಪ್ಪೂಹದ ಜನ್ರ ಪ್ರದೇಶದ ತನಕ ಹರಡಿತ್ತು.  ತಪ್ಪೂಹದ+ ಪ್ರದೇಶಗಳು ಮನಸ್ಸೆಗೆ ಸಿಕ್ಕಿದ್ವು. ಆದ್ರೆ ಮನಸ್ಸೆಯ ಗಡಿಯಲ್ಲಿದ್ದ ತಪ್ಪೂಹ ನಗರ ಎಫ್ರಾಯೀಮ್‌ ವಂಶಕ್ಕೆ ಹೋಯ್ತು.  ಆಮೇಲೆ ಆ ಗಡಿ ಕಾನಾ ನಾಲೆಯಿಂದ ದಕ್ಷಿಣದ ಕಡೆಗೆ ಇಳಿತು. ಮನಸ್ಸೆಗೆ ಸೇರಿದ ಪಟ್ಟಣಗಳ ಮಧ್ಯ ಎಫ್ರಾಯೀಮಿಗೆ ಸೇರಿದ ಪಟ್ಟಣಗಳೂ ಇದ್ವು.+ ಮನಸ್ಸೆಯ ಗಡಿ ನಾಲೆಯ ಉತ್ತರಕ್ಕೆ ಸಾಗಿ ಸಮುದ್ರ ತೀರದಲ್ಲಿ ಮುಗಿತಿತ್ತು.+ 10  ದಕ್ಷಿಣದ ಕಡೆಗಿರೋ ಪ್ರದೇಶ ಎಫ್ರಾಯೀಮಿಗೆ ಸೇರಿದೆ. ಉತ್ತರದ ಕಡೆಗಿರೋ ಪ್ರದೇಶ ಮನಸ್ಸೆಗೆ ಸೇರಿದೆ. ಸಮುದ್ರ ಮನಸ್ಸೆಯ ಗಡಿಯಾಗಿತ್ತು.+ ಅವ್ರ* ಉತ್ತರದ ಗಡಿ ಅಶೇರ್‌ ಕುಲದ ಪ್ರದೇಶದ ತನಕ ಪೂರ್ವದ ಗಡಿ ಇಸ್ಸಾಕಾರ್‌ ಕುಲದ ಪ್ರದೇಶದ ತನಕ ಇತ್ತು. 11  ಇಸ್ಸಾಕಾರ್‌ ಮತ್ತು ಅಶೇರ್‌ ಕುಲದ ಪ್ರದೇಶಗಳಲ್ಲಿ ಮನಸ್ಸೆಗೆ ಬೇತ್‌-ಷೆಯಾನ್‌, ಇಬ್ಲೆಯಾಮ್‌,+ ದೋರ್‌,+ ಎಂದೋರ್‌,+ ತಾನಕ್‌+ ಮತ್ತು ಮೆಗಿದ್ದೋ ಪಟ್ಟಣಗಳನ್ನ ಮತ್ತು ಅವುಗಳಿಗೆ ಸೇರಿದ* ಜನ್ರನ್ನ ಊರುಗಳನ್ನ ಕೊಟ್ರು. ಮೂರು ಬೆಟ್ಟ ಪ್ರಾಂತ್ಯಗಳನ್ನೂ ಕೊಟ್ರು. 12  ಆದ್ರೆ ಕಾನಾನ್ಯರು ಈ ಪಟ್ಟಣಗಳಲ್ಲಿ ವಾಸವಾಗಿದ್ರಿಂದ ಮನಸ್ಸೆ ವಂಶಕ್ಕೆ ಅವುಗಳನ್ನ ವಶ ಮಾಡ್ಕೊಳ್ಳೋಕೆ ಆಗಲಿಲ್ಲ.+ 13  ಆದ್ರೆ ಇಸ್ರಾಯೇಲ್ಯರು ಬಲಿಷ್ಠರಾದಾಗ ಕಾನಾನ್ಯರನ್ನ ಗುಲಾಮರಾಗಿ ಮಾಡ್ಕೊಂಡ್ರು.+ ಆದ್ರೆ ಎಲ್ರನ್ನ ಅಲ್ಲಿಂದ ಓಡಿಸಿಬಿಡಲಿಲ್ಲ.*+ 14  ಯೋಸೇಫನ ವಂಶದವರು ಯೆಹೋಶುವನ ಹತ್ರ ಬಂದು “ನಾವು ತುಂಬ ಜನ ಇದ್ದೀವಿ. ಯಾಕಂದ್ರೆ ಯೆಹೋವ ನಮ್ಮನ್ನ ಇಲ್ಲಿ ತನಕ ಆಶೀರ್ವದಿಸಿದ್ದಾನೆ.+ ಆದ್ರೂ ನೀನು ನಮಗೆ* ಒಂದೇ ಚೀಟಿ ಹಾಕಿ ಒಂದೇ ಪಾಲು ಕೊಟ್ಟೆ, ಯಾಕೆ?” ಅಂತ ಕೇಳಿದ್ರು.+ 15  ಅದಕ್ಕೆ ಯೆಹೋಶುವ “ನೀವು ತುಂಬ ಜನ ಇರೋದಾದ್ರೆ, ಎಫ್ರಾಯೀಮ್ಯರ ಬೆಟ್ಟ ಪ್ರದೇಶ+ ನಿಮಗೆ ಸಾಲ್ತಾ ಇಲ್ಲಾಂದ್ರೆ ಪೆರಿಜೀಯರ,+ ರೆಫಾಯರ+ ಕಾಡಿಗೆ ಹೋಗಿ ಮರಗಳನ್ನ ಕಡಿದು ಅಲ್ಲಿ ಜಾಗ ಮಾಡ್ಕೊಳ್ಳಿ” ಅಂದ. 16  ಆಗ ಯೋಸೇಫನ ವಂಶದವರು “ನಮಗೆ ಬೆಟ್ಟ ಪ್ರದೇಶ ಸಾಕಾಗಲ್ಲ. ಬೇತ್‌-ಷೆಯಾನಿಗೆ,+ ಅದಕ್ಕೆ ಸೇರಿದ* ಊರುಗಳಿಗೆ ಮತ್ತು ಇಜ್ರೇಲ್‌ ಕಣಿವೆಗೆ+ ಹೋಗಿ ಇರಬೇಕಂದ್ರೆ ಅಲ್ಲಿ ಕಾನಾನ್ಯರಿದ್ದಾರೆ. ಅವ್ರ ಹತ್ರ ಕಬ್ಬಿಣದ ಕುಡುಗೋಲಿನ ಚಕ್ರಗಳಿರೋ ಯುದ್ಧ ರಥಗಳಿವೆ”*+ ಅಂದ್ರು. 17  ಆಗ ಯೆಹೋಶುವ ಯೋಸೇಫನ ಮನೆತನದ ಎಫ್ರಾಯೀಮ್‌ ಮತ್ತು ಮನಸ್ಸೆ ಜನ್ರಿಗೆ ಹೀಗಂದ: “ನೀವು ತುಂಬ ಜನ ಇದ್ದೀರ, ನೀವು ತುಂಬ ಶಕ್ತಿಶಾಲಿಗಳು. ನಿಮಗೆ ಒಂದೇ ಪಾಲು ಮಾತ್ರ ಅಲ್ಲ,+ 18  ಬೆಟ್ಟ ಪ್ರದೇಶನೂ ಸಿಗುತ್ತೆ.+ ಅದು ಕಾಡಾಗಿದ್ರೂ ನೀವು ಅದನ್ನ ಕಡಿದು ಅಲ್ಲಿ ಮನೆ ಕಟ್ಕೊಳ್ತೀರ, ಅದೇ ನಿಮ್ಮ ಗಡಿ ಆಗುತ್ತೆ. ಕಾನಾನ್ಯರು ಶಕ್ತಿಶಾಲಿಗಳಾಗಿದ್ರೂ ಅವ್ರ ಹತ್ರ ಕಬ್ಬಿಣದ ಕುಡುಗೋಲಿನ ಚಕ್ರಗಳಿರೋ ಯುದ್ಧ ರಥಗಳಿದ್ರೂ* ನೀವು ಅವ್ರನ್ನ ಓಡಿಸಿಬಿಡ್ತೀರ.”+

ಪಾದಟಿಪ್ಪಣಿ

ಅದು, ಪೂರ್ವದ ಕಡೆ.
ಅಕ್ಷ. “ಬಲಗಡೆಗೆ.”
ಅದು, ಮನಸ್ಸೆಯ ಕುಲ
ಅಥವಾ “ಸುತ್ತಮುತ್ತ ಇರೋ.”
ಅಥವಾ “ಹೊರಗೆ ಹಾಕಲಿಲ್ಲ.”
ಅಕ್ಷ. “ನನಗೆ.”
ಅಥವಾ “ಸುತ್ತಮುತ್ತ ಇರೋ.”
ಅಕ್ಷ. “ಕಬ್ಬಿಣದ ರಥಗಳು.”
ಅಕ್ಷ. “ಕಬ್ಬಿಣದ ರಥಗಳು.”