ಯೆಹೋಶುವ 21:1-45

  • ಲೇವಿಯರಿಗೆ ಸಿಕ್ಕಿದ ಪಟ್ಟಣಗಳು (1-42)

    • ಆರೋನನ ವಂಶದವರಿಗೆ (9-19)

    • ಉಳಿದ ಕೆಹಾತ್ಯರಿಗೆ (20-26)

    • ಗೇರ್ಷೋನ್ಯರಿಗೆ (27-33)

    • ಮೆರಾರೀಯರಿಗೆ (34-40)

  • ಯೆಹೋವನ ಮಾತು ನೆರವೇರಿತು (43-45)

21  ಪುರೋಹಿತ ಎಲ್ಲಾಜಾರನ,+ ನೂನನ ಮಗ ಯೆಹೋಶುವನ ಮತ್ತು ಇಸ್ರಾಯೇಲ್‌ ಕುಲಗಳ ಮುಖ್ಯಸ್ಥರ ಹತ್ರ ಲೇವಿಯರ ಮುಖ್ಯಸ್ಥರು ಮಾತಾಡೋಕೆ ಬಂದ್ರು.  ಈ ಮಾತುಕತೆ ಕಾನಾನ್‌ ದೇಶದ ಶೀಲೋನಲ್ಲಿ+ ನಡೀತು. ಲೇವಿಯರ ಮುಖ್ಯಸ್ಥರು ಅವರಿಗೆ “ಯೆಹೋವ ಮೋಶೆ ಮೂಲಕ ನಮಗೆ ವಾಸಿಸೋಕೆ ಪಟ್ಟಣಗಳನ್ನ ನಮ್ಮ ಪ್ರಾಣಿಗಳಿಗೆ ಮೇಯೋಕೆ ಹುಲ್ಲುಗಾವಲನ್ನ ಕೊಡಬೇಕು ಅಂತ ಆಜ್ಞೆ ಕೊಟ್ಟಿದ್ದನು”+ ಅಂದ್ರು.  ಆಗ ಇಸ್ರಾಯೇಲ್ಯರು ಯೆಹೋವನ ಆಜ್ಞೆ ಪ್ರಕಾರ ಲೇವಿ ಕುಲಕ್ಕೆ ತಮ್ಮ ಸ್ವಂತ ಆಸ್ತಿಯಿಂದ ಪಟ್ಟಣಗಳನ್ನ+ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು.+  ಕೆಹಾತ್ಯರ+ ಮನೆತನಗಳಿಗೆ ಮೊದಲನೇ ಚೀಟಿ ಬಿತ್ತು. ಆಗ ಪುರೋಹಿತ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ+ ಕುಲದಿಂದ, ಸಿಮೆಯೋನ್‌+ ಕುಲದಿಂದ ಮತ್ತು ಬೆನ್ಯಾಮೀನ್‌ ಕುಲದಿಂದ+ 13 ಪಟ್ಟಣಗಳನ್ನ ಚೀಟಿಹಾಕಿ ಕೊಟ್ರು.*  ಉಳಿದ ಕೆಹಾತ್ಯರಿಗೆ ಎಫ್ರಾಯೀಮ್‌ ಕುಲ,+ ದಾನ್‌ ಕುಲ ಮತ್ತು ಮನಸ್ಸೆಯ ಅರ್ಧ ಕುಲದ+ ಮನೆತನಗಳಿಂದ 10 ಪಟ್ಟಣ ಹಂಚ್ಕೊಟ್ರು.  ಗೇರ್ಷೋನ್ಯರಿಗೆ+ ಇಸ್ಸಾಕಾರ್‌ ಕುಲ, ಅಶೇರ್‌ ಕುಲ, ನಫ್ತಾಲಿ ಕುಲ ಮತ್ತು ಬಾಷಾನಲ್ಲಿರೋ ಮನಸ್ಸೆಯ ಅರ್ಧ ಕುಲದ ಮನೆತನಗಳಿಂದ 13 ಪಟ್ಟಣ ಕೊಟ್ರು.+  ಮೆರಾರೀಯರಿಗೆ+ ಅವ್ರ ಮನೆತನಗಳ ಪ್ರಕಾರ ರೂಬೇನ್‌ ಕುಲ, ಗಾದ್‌ ಕುಲ ಮತ್ತು ಜೆಬುಲೂನ್‌ ಕುಲದಿಂದ 12 ಪಟ್ಟಣ ಸಿಕ್ತು.+  ಯೆಹೋವ ಮೋಶೆ ಮೂಲಕ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ಚೀಟಿಹಾಕಿ ಈ ಪಟ್ಟಣಗಳನ್ನ ಮತ್ತು ಅದ್ರ ಹುಲ್ಲುಗಾವಲನ್ನ ಲೇವಿಯರಿಗೆ ಕೊಟ್ರು.+  ಯೆಹೂದ ಕುಲ ಮತ್ತು ಸಿಮೆಯೋನ್‌ ಕುಲದಿಂದ ಕೊಟ್ಟ ಪಟ್ಟಣಗಳ ಹೆಸ್ರು ಹೀಗಿದೆ.+ 10  ಈ ಪಟ್ಟಣಗಳನ್ನ ಲೇವಿ ಕುಲಕ್ಕೆ ಅದ್ರ ಕೆಹಾತ್ಯರ ಮನೆತನಗಳಲ್ಲಿ ಹುಟ್ಟಿದ ಆರೋನನ ಮಕ್ಕಳಿಗೆ ಕೊಟ್ರು. ಯಾಕಂದ್ರೆ ಅವ್ರಿಗೆ ಮೊದಲನೇ ಚೀಟಿ ಬಿದ್ದಿತ್ತು. 11  ಯೆಹೂದದ ಬೆಟ್ಟ ಪ್ರದೇಶದಲ್ಲಿದ್ದ ಕಿರ್ಯತ್‌-ಅರ್ಬ+ (ಅರ್ಬ ಅನಾಕನ ತಂದೆ) ಅಂದ್ರೆ ಹೆಬ್ರೋನ್‌+ ಮತ್ತು ಅದ್ರ ಸುತ್ತ ಇದ್ದ ಹುಲ್ಲುಗಾವಲನ್ನ ಕೆಹಾತ್ಯರಿಗೆ ಕೊಟ್ರು. 12  ಆದ್ರೆ ಪಟ್ಟಣದಲ್ಲಿದ್ದ ಹೊಲನ ಮತ್ತು ಅದ್ರ ಹಳ್ಳಿಗಳನ್ನ ಯೆಫುನ್ನೆಯ ಮಗ ಕಾಲೇಬನಿಗೆ ಆಸ್ತಿಯಾಗಿ ಕೊಟ್ರು.+ 13  ಹೆಬ್ರೋನ್‌+ ಮತ್ತು ಅದ್ರ ಹುಲ್ಲುಗಾವಲನ್ನ ಪುರೋಹಿತ ಆರೋನನ ಮಕ್ಕಳಿಗೆ ಕೊಟ್ರು. ಇದು ಕೊಲೆಯ ಆರೋಪ ಇದ್ದವ್ರಿಗೆ ಆಶ್ರಯನಗರ ಆಗಿತ್ತು.+ ಜೊತೆಗೆ ಲಿಬ್ನ,+ 14  ಯತ್ತೀರ್‌,+ ಎಷ್ಟೆಮೋವ,+ 15  ಹೋಲೋನ್‌,+ ದೆಬೀರ್‌,+ 16  ಅಯಿನ್‌,+ ಯುಟ್ಟಾ,+ ಬೇತ್‌-ಷೆಮೆಷ್‌ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ಎರಡು ಕುಲಗಳಿಂದ ಒಂಬತ್ತು ಪಟ್ಟಣ ಕೊಟ್ರು. 17  ಬೆನ್ಯಾಮೀನ್‌ ಕುಲದಿಂದ ಗಿಬ್ಯೋನ್‌,+ ಗೆಬ,+ 18  ಅನಾತೋತ್‌,+ ಅಲ್ಮೋನ್‌ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ನಾಲ್ಕು ಪಟ್ಟಣ ಕೊಟ್ರು. 19  ಪುರೋಹಿತರಾಗಿದ್ದ ಆರೋನನ ವಂಶದವ್ರಿಗೆ ಒಟ್ಟು 13 ಪಟ್ಟಣ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು.+ 20  ಲೇವಿಯರಲ್ಲಿ ಉಳಿದ ಕೆಹಾತ್ಯರ ಮನೆತನಗಳಿಗೆ ಎಫ್ರಾಯೀಮ್‌ ಕುಲಕ್ಕೆ ಅದ್ರ ಪಟ್ಟಣಗಳನ್ನ ಚೀಟಿಹಾಕಿ ಕೊಟ್ರು. 21  ಅವ್ರಿಗೆ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿದ್ದ ಶೆಕೆಮನ್ನ+ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು. ಇದು ಕೊಲೆಯ ಆರೋಪ ಇದ್ದವ್ರಿಗೆ ಆಶ್ರಯನಗರ ಆಗಿತ್ತು.+ ಜೊತೆಗೆ ಗೆಜೆರ್‌,+ 22  ಕಿಬ್‌ಚೈಮ್‌, ಬೇತ್‌-ಹೋರೋನ್‌,+ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ನಾಲ್ಕು ಪಟ್ಟಣ ಕೊಟ್ರು. 23  ದಾನ್‌ ಕುಲದಿಂದ ಎಲ್ತೆಕೇ, ಗಿಬ್ಬೆತೋನ್‌, 24  ಅಯ್ಯಾಲೋನ್‌,+ ಗತ್‌-ರಿಮ್ಮೋನ್‌ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ನಾಲ್ಕು ಪಟ್ಟಣ ಕೊಟ್ರು. 25  ಮನಸ್ಸೆಯ ಅರ್ಧ ಕುಲದಿಂದ ತಾನಕ್‌,+ ಗತ್‌-ರಿಮ್ಮೋನ್‌ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ಎರಡು ಪಟ್ಟಣ ಕೊಟ್ರು. 26  ಉಳಿದ ಕೆಹಾತ್ಯರ ಮನೆತನಗಳಿಗೆ ಒಟ್ಟು 10 ಪಟ್ಟಣಗಳು ಮತ್ತು ಅದ್ರ ಹುಲ್ಲುಗಾವಲು ಸಿಕ್ಕಿದ್ವು. 27  ಲೇವಿಯರಾದ ಗೇರ್ಷೋನ್ಯರ+ ಮನೆತನಗಳಿಗೆ ಮನಸ್ಸೆಯ ಅರ್ಧ ಕುಲದಿಂದ ಬಾಷಾನಿನ ಗೋಲಾನನ್ನ+ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು. ಇದು ಕೊಲೆ ಆರೋಪ ಇದ್ದವ್ರಿಗೆ ಆಶ್ರಯನಗರ ಆಗಿತ್ತು. ಜೊತೆಗೆ ಬೆಯೆಷ್ಟೆರಾ ಮತ್ತು ಅದ್ರ ಹುಲ್ಲುಗಾವಲು. ಹೀಗೆ ಎರಡು ಪಟ್ಟಣ ಕೊಟ್ರು. 28  ಇಸ್ಸಾಕಾರ್‌ ಕುಲದಿಂದ+ ಕಿಷ್ಯೋನ್‌, ದಾಬೆರತ್‌,+ 29  ಯರ್ಮೂತ್‌, ಏಂಗನ್ನೀಮ್‌ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ನಾಲ್ಕು ಪಟ್ಟಣ ಕೊಟ್ರು. 30  ಅಶೇರ್‌ ಕುಲದಿಂದ+ ಮಿಷಾಲ್‌, ಅಬ್ದೋನ್‌, 31  ಹೆಲ್ಕತ್‌,+ ರೆಹೋಬ್‌+ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ನಾಲ್ಕು ಪಟ್ಟಣ ಕೊಟ್ರು. 32  ನಫ್ತಾಲಿ ಕುಲದಿಂದ ಗಲಿಲಾಯದ ಕೆದೆಷನ್ನ+ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು. ಇದು ಕೊಲೆ ಆರೋಪ ಇದ್ದವ್ರಿಗೆ ಆಶ್ರಯನಗರ ಆಗಿತ್ತು.+ ಜೊತೆಗೆ ಹಮ್ಮೋತ್‌-ದೋರ್‌, ಕರ್ತಾನ್‌ ಮತ್ತು ಅವುಗಳ ಹುಲ್ಲುಗಾವಲನ್ನ ಹೀಗೆ ಮೂರು ಪಟ್ಟಣ ಕೊಟ್ರು. 33  ಗೇರ್ಷೋನ್ಯರ ಮನೆತಗಳ ಪ್ರಕಾರ ಅವ್ರಿಗೆ ಒಟ್ಟು 13 ಪಟ್ಟಣಗಳು ಮತ್ತು ಅದ್ರ ಹುಲ್ಲುಗಾವಲು ಸಿಕ್ಕಿದ್ವು. 34  ಉಳಿದ ಲೇವಿಯರಾದ ಮೆರಾರೀಯ+ ಮನೆತನಗಳಿಗೆ ಜೆಬುಲೂನ್‌+ ಕುಲದಿಂದ ಯೊಕ್ನೆಯಾಮ್‌,+ ಕರ್ತಾ, 35  ದಿಮ್ನಾ, ನಹಲಾಲ್‌+ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ನಾಲ್ಕು ಪಟ್ಟಣ ಕೊಟ್ರು. 36  ರೂಬೇನ್‌ ಕುಲದಿಂದ ಬೆಚೆರ್‌,+ ಯಹಜ,+ 37  ಕೆದೇಮೋತ್‌, ಮೇಫಾಯತ್‌ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ನಾಲ್ಕು ಪಟ್ಟಣ ಕೊಟ್ರು. 38  ಗಾದ್‌ ಕುಲದಿಂದ+ ಗಿಲ್ಯಾದಿನ ರಾಮೋತನ್ನ+ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು. ಇದು ಕೊಲೆ ಆರೋಪ ಇದ್ದವ್ರಿಗೆ ಆಶ್ರಯನಗರ ಆಗಿತ್ತು. ಜೊತೆಗೆ ಮಹನಯಿಮ್‌,+ 39  ಹೆಷ್ಬೋನ್‌,+ ಯಜ್ಜೇರ್‌+ ಮತ್ತು ಅವುಗಳ ಹುಲ್ಲುಗಾವಲು. ಹೀಗೆ ಒಟ್ಟು ನಾಲ್ಕು ಪಟ್ಟಣ ಕೊಟ್ರು. 40  ಲೇವಿಯರಲ್ಲಿ ಉಳಿದ ಮೆರಾರೀಯರಿಗೆ ಅವ್ರ ಮನೆತನಗಳ ಪ್ರಕಾರ ಒಟ್ಟು 12 ಪಟ್ಟಣ ಸಿಕ್ಕಿದ್ವು. 41  ಇಸ್ರಾಯೇಲ್ಯರ ಪ್ರದೇಶಗಳ ಮಧ್ಯ ಲೇವಿಯರಿಗೆ ಒಟ್ಟು 48 ಪಟ್ಟಣಗಳು ಮತ್ತು ಅವುಗಳ ಹುಲ್ಲುಗಾವಲು ಸಿಕ್ಕಿದ್ವು.+ 42  ಈ ಎಲ್ಲ ಪಟ್ಟಣಗಳ ಸುತ್ತ ಪ್ರಾಣಿಗಳಿಗೆ ಮೇಯೋಕೆ ಹುಲ್ಲುಗಾವಲು ಇತ್ತು. 43  ಹೀಗೆ ಯೆಹೋವ ಇಸ್ರಾಯೇಲ್ಯರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿದ್ದ ಇಡೀ ದೇಶನ ಇಸ್ರಾಯೇಲ್ಯರಿಗೆ ಕೊಟ್ಟನು.+ ಅವರು ಅದನ್ನ ಪಡ್ಕೊಂಡು ಅದ್ರಲ್ಲಿ ನೆಲೆಸಿದ್ರು.+ 44  ಅಷ್ಟೇ ಅಲ್ಲ, ಯೆಹೋವ ಅವ್ರ ಪೂರ್ವಜರಿಗೆ ಮಾತು ಕೊಟ್ಟ+ ಹಾಗೇ ಅವ್ರಿಗೆ ಸಂಪೂರ್ಣ ಸಮಾಧಾನ ಕೊಟ್ಟನು. ಅವ್ರ ಶತ್ರುಗಳಲ್ಲಿ ಒಬ್ಬನಿಗೂ ಅವ್ರ ವಿರುದ್ಧ ನಿಲ್ಲಕ್ಕಾಗಲಿಲ್ಲ.+ ಯೆಹೋವ ಅವ್ರ ಎಲ್ಲ ಶತ್ರುಗಳನ್ನ ಅವ್ರ ಕೈಗೆ ಒಪ್ಪಿಸಿದನು.+ 45  ಯೆಹೋವ ಇಸ್ರಾಯೇಲ್ಯರಿಗೆ ಕೊಟ್ಟ ಎಲ್ಲ ಮಾತು ನಿಜ ಆಯ್ತು, ಆತನ ಒಂದು ಮಾತೂ ತಪ್ಪಲಿಲ್ಲ. ಎಲ್ಲ ನಿಜ ಆಯ್ತು.+

ಪಾದಟಿಪ್ಪಣಿ

ಅಥವಾ “ಹಂಚ್ಕೊಟ್ರು.”