ಯೆಹೋಶುವ 23:1-16

  • ಇಸ್ರಾಯೇಲಿನ ನಾಯಕರಿಗೆ ಯೆಹೋಶುವನ ವಿದಾಯ (1-16)

    • ಯೆಹೋವನ ಎಲ್ಲ ಮಾತು ಚಾಚೂತಪ್ಪದೆ ನೆರವೇರಿತು (14)

23  ಯೆಹೋವ ಇಸ್ರಾಯೇಲ್ಯರನ್ನ ಸುತ್ತಮುತ್ತ ಇದ್ದ ಶತ್ರುಗಳಿಂದ ಕಾಪಾಡಿ ವಿಶ್ರಾಂತಿ ಕೊಟ್ಟನು.+ ಹೀಗೆ ತುಂಬ ದಿನ ಕಳೀತು. ಯೆಹೋಶುವನಿಗೆ ತುಂಬ ವಯಸ್ಸಾಗಿತ್ತು.+  ಆಗ ಯೆಹೋಶುವ ಎಲ್ಲ ಇಸ್ರಾಯೇಲ್ಯರನ್ನ ಹಿರಿಯರನ್ನ ಮುಖ್ಯಸ್ಥರನ್ನ ನ್ಯಾಯಾಧೀಶರನ್ನ ಅಧಿಕಾರಿಗಳನ್ನ+ ಕರೆದು+ ಹೀಗಂದ: “ನನಗೆ ತುಂಬ ವಯಸ್ಸಾಗಿದೆ, ಮುದುಕ ಆಗಿದ್ದೀನಿ.  ನಿಮ್ಮ ದೇವರಾದ ಯೆಹೋವ ನಿಮಗೋಸ್ಕರ ಈ ಎಲ್ಲ ಜನಾಂಗಗಳಿಗೆ ಏನೆಲ್ಲ ಮಾಡಿದನು ಅಂತ ನೀವು ಕಣ್ಣಾರೆ ನೋಡಿದ್ದೀರ. ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಪರವಾಗಿ ಯುದ್ಧ ಮಾಡ್ತಿದ್ದನು.+  ಯೋರ್ದನಿಂದ ಪಶ್ಚಿಮದ ಮಹಾ ಸಮುದ್ರದ* ತನಕ ಇರೋ ಜನ್ರನ್ನ ಓಡಿಸಿಬಿಟ್ಟು+ ಆ ಪ್ರದೇಶಗಳನ್ನ ಚೀಟಿ ಹಾಕಿ+ ಕೊಟ್ಟಿದ್ದೀನಿ.* ಉಳಿದ ಪ್ರದೇಶಗಳಲ್ಲಿ ಬೇರೆ ಜನ್ರು ಇದ್ರೂ ಅವೂ ನಿಮಗೆ ಸೇರಿದೆ.+  ಆ ಜನ್ರನ್ನ ನಿಮ್ಮ ದೇವರಾದ ಯೆಹೋವನೇ ನಿಮ್ಮ ಮುಂದಿಂದ ಓಡಿಸಿಬಿಟ್ಟನು.*+ ನಿಮ್ಮ ದೇವರಾದ ಯೆಹೋವ ಮಾತು ಕೊಟ್ಟ ಹಾಗೇ ನೀವು ಅವ್ರ ಪ್ರದೇಶಗಳನ್ನ ವಶ ಮಾಡ್ಕೊಂಡಿದ್ದೀರ.+  ಮೋಶೆಯ ನಿಯಮ ಪುಸ್ತಕದಲ್ಲಿ+ ಬರೆದಿರೋ ಎಲ್ಲವನ್ನ ಪಾಲಿಸೋಕೆ, ಅದೇ ತರ ನಡಿಯೋಕೆ ಈಗ ನಿಮಗೆ ತುಂಬ ಧೈರ್ಯ ಬೇಕು. ಅದ್ರಲ್ಲಿರೋ ಒಂದು ನಿಯಮವನ್ನೂ ಮೀರಬಾರದು.+  ಯಾವುದೇ ಕಾರಣಕ್ಕೂ ನಿಮ್ಮ ಮಧ್ಯ ಇರೋ ಈ ಜನಾಂಗಗಳ ಜೊತೆ ಸೇರಬಾರದು.+ ಅವ್ರ ದೇವರುಗಳನ್ನ ಆರಾಧಿಸಬಾರದು, ಅಡ್ಡ ಬೀಳಬಾರದು.+ ಅವುಗಳ ಹೆಸ್ರನ್ನೂ ಎತ್ತಬಾರದು,+ ಅವುಗಳ ಹೆಸ್ರಲ್ಲಿ ಆಣೆ ಮಾಡಬಾರದು.  ನೀವು ಇಲ್ಲಿ ತನಕ ಇದ್ದ ಹಾಗೇ ಇನ್ನು ಮುಂದಕ್ಕೂ ನಿಮ್ಮ ದೇವರಾದ ಯೆಹೋವನಿಗೆ ನಿಷ್ಠೆಯಿಂದ ಇರಬೇಕು.+  ಬಲಿಷ್ಠ ಜನಾಂಗಗಳನ್ನೇ ಯೆಹೋವ ನಿಮ್ಮ ಮುಂದಿಂದ ಓಡಿಸಿಬಿಡ್ತಾನೆ.+ ಯಾಕಂದ್ರೆ ಇಲ್ಲಿ ತನಕ ಒಬ್ಬನಿಗೂ ನಿಮ್ಮ ಮುಂದೆ ನಿಲ್ಲೋಕೆ ಆಗಲಿಲ್ಲ.+ 10  ಸಾವಿರ ಜನ್ರನ್ನ ಓಡಿಸ್ಕೊಂಡು ಹೋಗೋಕೆ ನಿಮ್ಮಲ್ಲಿ ಒಬ್ಬನೇ ಸಾಕು.+ ಯಾಕಂದ್ರೆ ನಿಮಗೆ ಮಾತು ಕೊಟ್ಟ+ ಹಾಗೇ ನಿಮ್ಮ ದೇವರಾದ ಯೆಹೋವ ನಿಮ್ಮ ಪರವಾಗಿ ಯುದ್ಧ ಮಾಡ್ತಿದ್ದಾನೆ.+ 11  ಹಾಗಾಗಿ ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸ್ತಾ+ ಯಾವಾಗ್ಲೂ ನಿಮ್ಮ ವಿಷ್ಯದಲ್ಲಿ ಜಾಗ್ರತೆಯಿಂದ ಇರಿ.+ 12  ನೀವು ಆತನಿಗೆ ಬೆನ್ನುಹಾಕಿ ನಿಮ್ಮ ಮಧ್ಯ ಇರೋ ಬೇರೆ ಜನಾಂಗಗಳ+ ಜೊತೆ ಸೇರಿ ಅವ್ರ ಜೊತೆ ಮದುವೆ ಸಂಬಂಧ ಬೆಳೆಸಿದ್ರೆ,+ ಅವ್ರ ಸಹವಾಸ ಮಾಡಿದ್ರೆ, 13  ನಿಮ್ಮ ದೇವರಾದ ಯೆಹೋವ ಈ ಜನಾಂಗಗಳನ್ನ ನಿಮ್ಮ ಮುಂದಿಂದ ಓಡಿಸಲ್ಲ*+ ಅನ್ನೋದನ್ನ ಮನಸ್ಸಲ್ಲಿಡಿ. ನಿಮ್ಮ ದೇವರಾದ ಯೆಹೋವ ಕೊಟ್ಟಿರೋ ಈ ಒಳ್ಳೇ ದೇಶದಿಂದ ನಾಶ ಆಗೋ ತನಕ ಅವರು ನಿಮಗೆ ಉರ್ಲಾಗಿ, ಬಲೆಯಾಗಿ, ನಿಮ್ಮ ಪಕ್ಕೆಗೆ ಹೊಡಿಯೋ ಚಾಟಿಯಾಗಿ,+ ನಿಮ್ಮ ಕಣ್ಣಿಗೆ ಚುಚ್ಚೋ ಮುಳ್ಳಾಗಿ ಇರ್ತಾರೆ. 14  ನೋಡಿ, ನಾನು ಇನ್ನು ಹೆಚ್ಚು ಕಾಲ ಬದುಕಿರಲ್ಲ.* ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಮಾತಲ್ಲಿ ಒಂದೂ ಸುಳ್ಳಾಗಲಿಲ್ಲ ಅಂತ ನೀವು ನಿಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ ಚೆನ್ನಾಗಿ ತಿಳ್ಕೊಂಡಿದ್ದೀರ. ಅದೆಲ್ಲ ನಿಮಗೋಸ್ಕರನೇ ನಿಜ ಆದ್ವು. ಅದ್ರಲ್ಲಿ ಒಂದೂ ತಪ್ಪಲಿಲ್ಲ.+ 15  ಆದ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಮಾತುಗಳೆಲ್ಲ ನಿಮ್ಮ ವಿಷ್ಯದಲ್ಲಿ ಹೇಗೆ ನಿಜ ಆದ್ವೋ+ ಅದೇ ತರ ಈ ಮುಂಚೆ ಹೇಳಿದ ಕಷ್ಟಗಳನ್ನೂ ಯೆಹೋವ ನಿಮ್ಮ ಮೇಲೆ ಬರೋ ತರ ಮಾಡಕ್ಕಾಗುತ್ತೆ. ಅಷ್ಟೇ ಅಲ್ಲ ನಿಮ್ಮ ದೇವರಾದ ಯೆಹೋವ ಕೊಟ್ಟಿರೋ ಈ ಒಳ್ಳೇ ದೇಶದಿಂದ ನಿಮ್ಮನ್ನ ಅಳಿಸಿಹಾಕ್ತಾನೆ.+ 16  ನೀವು ಪಾಲಿಸಬೇಕಂತ ನಿಮ್ಮ ದೇವರಾದ ಯೆಹೋವ ಹೇಳಿದ ಒಪ್ಪಂದವನ್ನ ನೀವು ಮುರಿದ್ರೆ, ಬೇರೆ ದೇವರುಗಳನ್ನ ಆರಾಧಿಸಿದ್ರೆ, ಅಡ್ಡಬಿದ್ರೆ ಯೆಹೋವನಿಗೆ ಕೋಪ ಬರಿಸ್ತೀರ.+ ಆತನು ನಿಮಗೆ ಕೊಟ್ಟಿರೋ ಈ ಒಳ್ಳೇ ದೇಶದಿಂದ ಒಂದೇ ಕ್ಷಣದಲ್ಲಿ ನಾಶವಾಗಿ ಹೋಗ್ತೀರ.”+

ಪಾದಟಿಪ್ಪಣಿ

ಅದು, ಮೆಡಿಟರೇನಿಯನ್‌ ಸಮುದ್ರ.
ಅಥವಾ “ಹಂಚ್ಕೊಟ್ಟಿದ್ದೀನಿ.”
ಅಥವಾ “ಹೊರಗೆ ಹಾಕಿದನು.”
ಅಥವಾ “ಹೊರಗೆ ಹಾಕಲ್ಲ.”
ಅಕ್ಷ. “ಎಲ್ರೂ ಹೋಗೋ ದಾರೀಲಿ ನಾನೂ ಈಗ ಹೋಗಬೇಕು.”