ಯೋನ 2:1-10

  • ಮೀನಿನ ಹೊಟ್ಟೆಯೊಳಗಿಂದ ಯೋನನ ಪ್ರಾರ್ಥನೆ (1-9)

  • ಮೀನು ಯೋನನನ್ನ ತೀರದಲ್ಲಿ ಕಕ್ಕಿಬಿಟ್ಟಿತು (10)

2  ಆಮೇಲೆ ಯೋನ ಮೀನಿನ ಹೊಟ್ಟೆ ಒಳಗಿಂದ ತನ್ನ ದೇವರಾದ ಯೆಹೋವನಿಗೆ ಪ್ರಾರ್ಥನೆ ಮಾಡ್ತಾ+  ಹೀಗಂದ“ನಾನು ಸಂಕಷ್ಟದಲ್ಲಿದ್ದಾಗ ಯೆಹೋವನಿಗೆ ಪ್ರಾರ್ಥನೆ ಮಾಡ್ದೆ, ಆತನು ನನಗೆ ಉತ್ರ ಕೊಟ್ಟನು.+ ಸಮಾಧಿಯ* ತಳದಿಂದ ಸಹಾಯಕ್ಕಾಗಿ ಕೂಗಿದೆ,+ನೀನು ನನ್ನ ಕೂಗು ಕೇಳಿದೆ.   ನೀನು ನನ್ನನ್ನ ಆಳಕ್ಕೆ, ವಿಶಾಲ ಸಮುದ್ರದ ತಳಕ್ಕೆ ಬಿಸಾಡಿದಾಗಪ್ರವಾಹಗಳು ನನ್ನನ್ನ ಸುತ್ಕೊಂಡ್ವು.+ ನನ್ನ ಮೇಲೆ ದೊಡ್ಡದೊಡ್ಡ ಅಲೆಗಳೂ ತೆರೆಗಳೂ ಹೊಯ್ದಾಡ್ತಿದ್ವು.+   ನಾನಾಗ ‘ನೀನು ನನ್ನನ್ನ ನಿನ್ನ ದೃಷ್ಟಿಗೆ ಮರೆಯಾಗುವಷ್ಟು ದೂರ ಕಳಿಸಿದ್ಯಲ್ಲಾ,ಇನ್ಮುಂದೆ ನಾನು ನಿನ್ನ ಪವಿತ್ರ ಆಲಯ ನೋಡೋಕೆ ಆಗಲ್ವಲ್ಲಾ’ ಅಂದೆ.   ನೀರು ನನ್ನನ್ನ ಸುತ್ಕೊಂಡು ನನ್ನ ಉಸಿರೇ ನಿಂತುಹೋಗೋ ತರ ಇತ್ತು,+ಮಹಾ ಸಾಗರ ನನ್ನನ್ನ ಮುಚ್ಕೊಂಡಿತು. ಸಮುದ್ರದ ಕಳೆಗಳು ತಲೆಗೆ ಸುತ್ಕೊಂಡಿದ್ವು.   ಬೆಟ್ಟಗಳ ಬುಡದ ತನಕ ನಾನು ಮುಳುಗಿಹೋದೆ. ಭೂಮಿಯ ಬಾಗಿಲು ನನ್ನನ್ನ ಶಾಶ್ವತವಾಗಿ ಮುಚ್ಚಿಬಿಡಲಿತ್ತು. ಆದ್ರೆ ನನ್ನ ದೇವರಾದ ಯೆಹೋವನೇ, ನೀನು ನನ್ನನ್ನ ಸಮಾಧಿಯ ತಳದಿಂದ ಜೀವಂತವಾಗಿ ಮೇಲೆತ್ತಿದೆ.+   ನನ್ನ ಉಸಿರು ನಿಂತುಹೋಗ್ತಿರುವಾಗ ನಾನು ಯೆಹೋವನನ್ನೇ ನೆನಪಿಸ್ಕೊಂಡೆ.+ ಆಗ ನನ್ನ ಪ್ರಾರ್ಥನೆ ನಿನಗೆ, ನಿನ್ನ ಪವಿತ್ರಾಲಯಕ್ಕೆ ಮುಟ್ಟಿತು.+   ವ್ಯರ್ಥವಾದ ಮೂರ್ತಿಗಳನ್ನ ಪೂಜಿಸುವವರು ಶಾಶ್ವತ ಪ್ರೀತಿ ತೋರಿಸೋ ನಿನ್ನನ್ನ* ಬಿಟ್ಟುಬಿಟ್ಟಿದ್ದಾರೆ.   ಆದ್ರೂ ನಾನು ಧನ್ಯವಾದ ಸಲ್ಲಿಸ್ತಾ ನಿನಗೆ ಬಲಿ ಅರ್ಪಿಸ್ತೀನಿ. ನನ್ನ ಹರಕೆ ತೀರಿಸ್ತೀನಿ.+ ರಕ್ಷಣೆ ಯೆಹೋವನಿಂದಾನೇ.”+ 10  ಆಮೇಲೆ ಯೆಹೋವ ಆ ಮೀನಿಗೆ ಆಜ್ಞೆ ಕೊಟ್ಟಾಗ ಅದು ಯೋನನನ್ನ ತೀರದಲ್ಲಿ ಕಕ್ಕಿಬಿಡ್ತು.

ಪಾದಟಿಪ್ಪಣಿ

ಬಹುಶಃ, “ತಮ್ಮ ನಿಷ್ಠೆಯನ್ನ.”