ಯೋನ 3:1-10

  • ಯೋನ ದೇವರು ಹೇಳಿದ ಹಾಗೆ ನಿನೆವೆಗೆ ಹೋಗ್ತಾನೆ (1-4)

  • ಯೋನನ ಸಂದೇಶ ಕೇಳಿ ನಿನೆವೆಯ ಜನ ಪಶ್ಚಾತ್ತಾಪಪಡ್ತಾರೆ (5-9)

  • ನಿನೆವೆಯನ್ನ ನಾಶ ಮಾಡಲ್ಲ ಅಂತ ದೇವರು ತೀರ್ಮಾನಿಸ್ತಾನೆ (10)

3  ಯೆಹೋವ ಎರಡ್ನೇ ಸಲ ಯೋನನಿಗೆ+  “ನೀನು ದೊಡ್ಡ ಪಟ್ಟಣವಾದ ನಿನೆವೆಗೆ+ ಹೋಗು, ನಾನು ಹೇಳೋ ಸಂದೇಶವನ್ನ ಜನ್ರಿಗೆ ಸಾರು” ಅಂದನು.  ಯೋನ ಯೆಹೋವನ ಮಾತಿಗೆ ಬೆಲೆಕೊಟ್ಟು ನಿನೆವೆಗೆ+ ಹೋದ.+ ನಿನೆವೆ ಎಷ್ಟು ದೊಡ್ಡ ಪಟ್ಟಣ ಆಗಿತ್ತಂದ್ರೆ ನಡ್ಕೊಂಡು ಆ ಪಟ್ಟಣದಲ್ಲೆಲ್ಲ ನೋಡೋಕೆ ಮೂರು ದಿನ ಹಿಡಿತಿತ್ತು.  ಯೋನ ಪಟ್ಟಣದೊಳಗೆ ಹೋದ. ಅವನು ಒಂದು ದಿನ ಪೂರ್ತಿ ನಡಿತಾ “ಇನ್ನು ಕೇವಲ 40 ದಿನಗಳಲ್ಲಿ ನಿನೆವೆ ನಾಶ ಆಗುತ್ತೆ” ಅಂತ ಸಾರಿದ.  ಆಗ ನಿನೆವೆ ಜನ ದೇವರ ಮೇಲೆ ನಂಬಿಕೆ ಇಟ್ರು.+ ಅಷ್ಟೇ ಅಲ್ಲ ಉಪವಾಸ ಮಾಡ್ತಾ ಶ್ರೀಮಂತರು, ಬಡವರು, ದೊಡ್ಡವರು, ಚಿಕ್ಕವರು ಎಲ್ರೂ ಗೋಣಿ ಬಟ್ಟೆ ಹಾಕೊಂಡ್ರು.  ಯೋನ ಸಾರಿದ ಸಂದೇಶ ನಿನೆವೆಯ ರಾಜನಿಗೆ ಮುಟ್ತು. ಆಗ ಅವನು ಸಿಂಹಾಸನದಿಂದ ಎದ್ದು ರಾಜವಸ್ತ್ರಗಳನ್ನ ತೆಗೆದಿಟ್ಟು ಗೋಣಿ ಬಟ್ಟೆ ಹಾಕಿ ಬೂದಿಯಲ್ಲಿ ಕೂತ.  ಅಷ್ಟೇ ಅಲ್ಲ ಅವನು ನಿನೆವೆ ಪಟ್ಟಣದಲ್ಲೆಲ್ಲಾ,“ರಾಜನೂ ಅವನ ಅಧಿಕಾರಿಗಳೂ ಆಜ್ಞೆ ಕೊಡೋದು ಏನಂದ್ರೆ, ಮನುಷ್ಯನಾಗಲಿ ಪ್ರಾಣಿಯಾಗಲಿ ದನಕುರಿಗಳಾಗಲಿ ಏನೂ ತಿನ್ನಬಾರದು, ಒಂದು ತೊಟ್ಟು ನೀರೂ ಕುಡಿಬಾರದು.  ಎಲ್ಲ ಜನ ಗೋಣಿ ಬಟ್ಟೆ ಹಾಕೊಳ್ಳಬೇಕು, ಪ್ರಾಣಿಗಳಿಗೂ ಗೋಣಿ ಹೊದಿಸಬೇಕು. ಎಲ್ರೂ ದೇವರಿಗೆ ಬಿಡದೆ ಪ್ರಾರ್ಥಿಸಬೇಕು. ತಮ್ಮ ಕೆಟ್ಟ ನಡತೆಯನ್ನೂ ಹಿಂಸಾಚಾರವನ್ನೂ ಬಿಟ್ಟುಬಿಡಬೇಕು.  ಆಗ ಸತ್ಯ ದೇವರು ತನ್ನ ತೀರ್ಮಾನ ಬದಲಾಯಿಸಿ* ನಮ್ಮ ಮೇಲೆ ತನ್ನ ಕೋಪಾಗ್ನಿಯನ್ನ ಸುರಿಸದೇ ಇರಬಹುದು. ಆಗ ನಾವು ಬದುಕಿ ಉಳಿಬಹುದು” ಅಂದ. 10  ನಿನೆವೆಯ ಜನ ಮಾಡಿದ್ದನ್ನ ಮತ್ತು ಅವರು ತಮ್ಮ ಕೆಟ್ಟ ನಡತೆ ಬಿಟ್ಟುಬಿಟ್ಟಿದ್ದನ್ನ+ ಸತ್ಯ ದೇವರು ನೋಡಿದಾಗ ಆತನು ತನ್ನ ತೀರ್ಮಾನ ಬದಲಾಯಿಸಿದನು, ಅವ್ರ ಮೇಲೆ ತರ್ತಿನಿ ಅಂತ ಹೇಳಿದ ಕಷ್ಟವನ್ನ ತರಲಿಲ್ಲ.+

ಪಾದಟಿಪ್ಪಣಿ

ಅಥವಾ “ಮನಮರುಗಿ.”