ಯೋಬ 17:1-16

  • ಯೋಬನ ಮಾತು ಮುಂದುವರಿಯುತ್ತೆ (1-16)

    • “ಗೇಲಿ ಮಾಡುವವರು ನನ್ನ ಸುತ್ತ ಇದ್ದಾರೆ” (2)

    • ‘ಜನ್ರು ನನ್ನನ್ನ ನೋಡಿ ನಗೋ ಹಾಗೆ ದೇವರು ಮಾಡಿದ್ದಾನೆ’ (6)

    • ಸಮಾಧಿನೇ ನನ್ನ ಮನೆ (13)

17  ನನಗೆ ಒಂಚೂರೂ ಬಲ ಇಲ್ಲ, ನನ್ನ ಜೀವನ ಮುಗಿದು ಹೋಗ್ತಾ ಇದೆ,ಸಮಾಧಿ ನನಗಾಗಿ ಕಾಯ್ತಿದೆ.+   ಗೇಲಿ ಮಾಡುವವರು ನನ್ನ ಸುತ್ತ ಇದ್ದಾರೆ,+ಅವ್ರ ಕೆಟ್ಟ ನಡತೆ ನೋಡಿ ನೋಡಿ ಸಾಕಾಗಿದೆ.   ದೇವರೇ, ದಯವಿಟ್ಟು ನನ್ನ ಜಾಮೀನನ್ನ ಸ್ವೀಕರಿಸಿ, ಅದನ್ನ ನಿನ್ನ ಹತ್ರಾನೇ ಇಟ್ಕೊ. ನಿನ್ನನ್ನ ಬಿಟ್ರೆ ನನ್ನ ಪರವಹಿಸಿ ನನಗೆ ಜಾಮೀನು ಕೊಡೋಕೆ ಬೇರೆ ಯಾರೂ ಇಲ್ಲ.+   ಅವ್ರಿಗೆ ಬುದ್ಧಿ ಬರದ ಹಾಗೆ ನೀನು ಅವ್ರ ಹೃದಯವನ್ನ ಮುಚ್ಚಿಬಿಟ್ಟಿದ್ದೀಯ,+ಅದಕ್ಕೇ ಅವ್ರಿಗೆ ಗೌರವ ಸಿಗೋ ತರ ನೀನು ಮಾಡಲ್ಲ.   ಇಂಥವನು ತನ್ನ ಆಸ್ತಿಯನ್ನ ಸ್ನೇಹಿತರಿಗೆ ಹಂಚ್ತಾನೆ,ಆದ್ರೆ ಅವನ ಮಕ್ಕಳೇ ಹಸಿವೆಯಿಂದ ಕಂಗಾಲಾಗಿ ಹೋಗ್ತಾರೆ.   ಜನ್ರು ನನ್ನನ್ನ ನೋಡಿ ನಗೋ ಹಾಗೆ* ದೇವರು ಮಾಡಿದ್ದಾನೆ,+ಅವರು ನನ್ನ ಮುಖಕ್ಕೆ ಉಗುಳ್ತಾರೆ.+   ಕಷ್ಟಗಳಿಂದ ನನ್ನ ಕಣ್ಣುಗಳು ಮಬ್ಬಾಗಿವೆ,+ನನ್ನೆಲ್ಲ ಅಂಗಗಳು ಬಡಕಲಾಗಿವೆ.   ಇದನ್ನ ನೋಡಿ ನೀತಿವಂತ ಜನ್ರು ಆಶ್ಚರ್ಯ ಪಡ್ತಾರೆ,ದೇವರ ಮೇಲೆ ನಂಬಿಕೆ ಇಲ್ಲದವನನ್ನ* ನೋಡಿ ಒಳ್ಳೇ ಜನ್ರಿಗೆ* ಕೋಪ ಬಂದಿದೆ.   ಆದ್ರೆ ನೀತಿವಂತ ನೀತಿಯ ದಾರಿಯಲ್ಲಿ ನಡಿತಾ ಇದ್ದಾನೆ,+ತಪ್ಪು ಮಾಡದವ್ರಿಗೆ ಬಲ ಜಾಸ್ತಿ ಆಗಿದೆ.+ 10  ನೀವೆಲ್ಲ ನಿಮ್ಮ ವಾದವನ್ನ ಮತ್ತೆ ಶುರು ಮಾಡಿ,ಯಾಕಂದ್ರೆ ಇಲ್ಲಿ ತನಕ ನಿಮ್ಮಲ್ಲಿ ಒಬ್ರೂ ಬುದ್ಧಿವಂತರ ಹಾಗೇ ಮಾತಾಡಲಿಲ್ಲ.+ 11  ನಾನಿನ್ನು ಹೆಚ್ಚು ದಿನ ಬದುಕಲ್ಲ,+ನನ್ನ ಕನಸುಗಳು, ಆಸೆಗಳು ನುಚ್ಚುನೂರಾಗಿವೆ.+ 12  ನನ್ನ ಸ್ನೇಹಿತರು ರಾತ್ರಿನ ಹಗಲು ಅಂತಾರೆ‘ಬೆಳಗಾಗುತ್ತಿದೆ’ ಅಂತಾರೆ, ಆದ್ರೆ ನನಗೆ ಕತ್ತಲೆ ಬಿಟ್ರೆ ಬೇರೇನೂ ಕಾಣ್ತಿಲ್ಲ. 13  ನಾನು ಹೀಗೆ ಕಾಯ್ತಾ ಕಾಯ್ತಾ ಸಮಾಧಿನೇ* ನನ್ನ ಮನೆ ಆಗುತ್ತೆ,+ಆ ಕತ್ತಲೆಯಲ್ಲಿ ನಾನು ಹಾಸಿಗೆ ಹಾಸಿಕೊಳ್ಳಬೇಕಾಗುತ್ತೆ.+ 14  ಆಗ ನಾನು ಸಮಾಧಿಯನ್ನ+ ‘ನೀನೇ ನನ್ನ ಅಪ್ಪ!’ ಅಂತ ಹೇಳ್ತೀನಿ. ಹುಳವನ್ನ ‘ಅಮ್ಮ, ತಂಗಿ’ ಅಂತ ಕರಿತೀನಿ. 15  ನನಗೆ ಇನ್ನೇನು ನಿರೀಕ್ಷೆ ಇದೆ?+ ನನಗೆ ನಿರೀಕ್ಷೆಯಿದೆ ಅಂತ ಯಾರಿಗಾದ್ರೂ ಅನಿಸ್ತಾ? 16  ನನ್ನ ನಿರೀಕ್ಷೆ ಮಣ್ಣಾಗುತ್ತೆ,ಅದ್ರ ಜೊತೆ ನಾನೂ ಮಣ್ಣಾಗಿ ಹೋಗ್ತೀನಿ.”+

ಪಾದಟಿಪ್ಪಣಿ

ಅಕ್ಷ. “ಗಾದೆಮಾತಾಗಿ; ಉದಾಹರಣೆಯಾಗಿ ಬಳಸೋ ಹಾಗೇ.”
ಅಥವಾ “ಧರ್ಮಭ್ರಷ್ಟನನ್ನ.”
ಅಥವಾ “ನಿರ್ದೋಷಿಗಳಿಗೆ.”