ಯೋಬ 18:1-21

  • ಬಿಲ್ದದನ ಎರಡನೇ ಸಲದ ಮಾತುಗಳು (1-21)

    • ಪಾಪಿಗಳಿಗೆ ಸಿಗೋ ಫಲ (5-20)

    • ದೇವರನ್ನ ಯೋಬ ತಿಳ್ಕೊಂಡಿಲ್ಲ ಅಂದ (21)

18  ಆಗ ಶೂಹ್ಯನಾದ ಬಿಲ್ದದ+ ಹೀಗಂದ:   “ಸಾಕಪ್ಪಾ ನಿನ್ನ ಭಾಷಣ! ಮೊದ್ಲು ಚೆನ್ನಾಗಿ ಯೋಚ್ನೆ ಮಾಡು, ಆಮೇಲೆ ಮಾತಾಡೋಣ.   ನಾವೇನು ಪ್ರಾಣಿಗಳಾ?+ ಮೂರ್ಖರಾ?   ಕೋಪದಿಂದ ನಿನ್ನನ್ನೇ ತುಂಡುತುಂಡು ಮಾಡ್ಕೊಂಡ್ರೆನೀನಿಲ್ಲ ಅಂತ ಭೂಮಿ ಖಾಲಿಯಾಗಿ ಇರುತ್ತಾ? ಬಂಡೆ ತನ್ನ ಜಾಗ ಬಿಟ್ಟು ಬೇರೆ ಕಡೆ ಹೋಗುತ್ತಾ?   ಕೆಟ್ಟವನ ದೀಪ ಖಂಡಿತ ಆರಿಹೋಗುತ್ತೆ,ಅವನ ಬೆಂಕಿ ಉರಿಯಲ್ಲ.+   ಅವನ ಡೇರೆಯಲ್ಲಿ ಬೆಳಕು ಇಲ್ಲದೆ ಕತ್ತಲೆ ಕವಿಯುತ್ತೆ,ಅವನ ಮನೆ ದೀಪ ಆರಿಹೋಗುತ್ತೆ.   ಬೇಗ ಬೇಗ ನಡಿತಾ ಇದ್ದವನು ನಿಧಾನವಾಗಿ ನಡಿತಾನೆ,ಅವನ ಸಲಹೆ ಅವನನ್ನೇ ಕೆಳಗೆ ಬೀಳಿಸುತ್ತೆ.+   ಅವನ ಕಾಲುಗಳೇ ಅವನನ್ನ ಬಲೆ ಕಡೆಗೆ ಕರ್ಕೊಂಡು ಹೋಗುತ್ತೆ,ಬಲೆ ಮೇಲೆ ನಡಿತಾನೆ.   ಉರ್ಲು ಅವನ ಹಿಮ್ಮಡಿ ಹಿಡಿಯುತ್ತೆ,ಅದು ಅವನನ್ನ ಸಿಕ್ಕಿಸಿ ಹಾಕುತ್ತೆ.+ 10  ಅವನನ್ನ ಬೀಳಿಸೋಕೆ ನೆಲದ ಮೇಲೆ ಕಾಣದ ಹಾಗೆ ಹಗ್ಗ ಇಟ್ಟಿರ್ತಾರೆ,ಅವನು ನಡಿಯೋ ದಾರೀಲಿ ಉರ್ಲು ಇಟ್ಟಿರ್ತಾರೆ. 11  ನಾಲ್ಕೂ ದಿಕ್ಕಿಂದ ಅವನಿಗೆ ಭಯ ಕಾಡುತ್ತೆ,+ಅದು ಅವನ ಬೆನ್ನುಬಿಡದೆ ಅಟ್ಟಿಸ್ಕೊಂಡು ಹೋಗುತ್ತೆ. 12  ಅವನ ಬಲ ಕಮ್ಮಿ ಆಗ್ತಾ ಹೋಗುತ್ತೆ,ಕಷ್ಟದಿಂದ+ ತತ್ತರಿಸಿ ಓಲಾಡ್ತಾ* ನಡಿತಾನೆ. 13  ದೊಡ್ಡ ರೋಗ ಬಂದು ಅವನ ಚರ್ಮ ಕೊಳೆತು ಹೋಗುತ್ತೆ,ಅವನ ಎಲ್ಲಾ ಅಂಗಗಳನ್ನ ತಿಂದುಹಾಕುತ್ತೆ. 14  ಅವನು ಸುರಕ್ಷಿತವಾಗಿದ್ದ ಡೇರೆಯಿಂದ ಅವನನ್ನ ಎಳ್ಕೊಂಡು ಹೋಗಿ+ ಭಯಂಕರ ರಾಜನ* ಹತ್ರ ಬಿಟ್ಟುಬಿಡ್ತಾರೆ. 15  ಅಪರಿಚಿತರು ಅವನ ಡೇರೆಯಲ್ಲಿ ವಾಸ ಮಾಡ್ತಾರೆ,ಅವನ ಮನೆಗೆ ಬೆಂಕಿ ಇಡ್ತಾರೆ.+ 16  ಅವನ ಬೇರುಗಳು ಒಣಗಿಹೋಗುತ್ತೆ,ರೆಂಬೆಕೊಂಬೆಗಳು ಬಾಡಿಹೋಗುತ್ತೆ. 17  ಭೂಮಿ ಮೇಲೆ ಯಾರಿಗೂ ಅವನ ನೆನಪು ಇರಲ್ಲ,ಬೀದಿಯಲ್ಲಿ ಯಾರಿಗೂ ಅವನ ಹೆಸ್ರು ಗೊತ್ತಿರಲ್ಲ. 18  ಬೆಳಕಿಂದ ಕತ್ತಲೆಗೆ ಅವನನ್ನ ನೂಕ್ತಾರೆ,ಈ ಲೋಕದಿಂದಾನೇ ಅವನನ್ನ ಅಟ್ಟಿಸಿಬಿಡ್ತಾರೆ. 19  ಅವನಿಗೆ ಮಕ್ಕಳು ಇರಲ್ಲ, ವಂಶನೂ ಇರಲ್ಲ,ಅವನಿದ್ದ ಜಾಗದಲ್ಲಿ ಅವನಿಗೆ ವಂಶೋದ್ಧಾರಕ ಇರಲ್ಲ. 20  ಅವನ ಕಷ್ಟದ ದಿನ ಬಂದಾಗ ಪಶ್ಚಿಮದ ಜನ್ರು ಭಯಪಡ್ತಾರೆ,ಪೂರ್ವದ ಜನ್ರಿಗೆ ಭಯದಿಂದ ಕೈಕಾಲು ಓಡಲ್ಲ. 21  ಕೆಟ್ಟದು ಮಾಡುವವರಿಗೆ ಇದೇ ಗತಿ ಬರುತ್ತೆ,ದೇವರನ್ನ ತಿಳ್ಕೊಳ್ಳದೆ ಇರೋ ಜನ್ರಿಗೂ ಇದೇ ಗತಿ ಆಗುತ್ತೆ.”

ಪಾದಟಿಪ್ಪಣಿ

ಅಥವಾ “ಕುಂಟುತ್ತಾ.”
ಅಥವಾ “ಭಯಾನಕ ಸಾವಿನ.”