ಯೋಬ 19:1-29

  • ಯೋಬನ ಉತ್ತರ (1-29)

    • ‘ಸ್ನೇಹಿತರು’ ಹೇಳಿದ್ದು ಒಪ್ಪಲ್ಲ (1-6)

    • ಎಲ್ರೂ ತನ್ನನ್ನ ದೂರ ಮಾಡಿದ್ದಾರೆ ಅಂತ ಹೇಳ್ತಾನೆ (13-19)

    • “ನನ್ನ ಕಾಪಾಡುವವನು ಒಬ್ಬನು ಇದ್ದಾನೆ” (25)

19  ಅದಕ್ಕೆ ಯೋಬ ಹೀಗೆ ಉತ್ತರ ಕೊಟ್ಟ:   “ನೀವು ಇನ್ನೆಷ್ಟು ಹೊತ್ತು ಹೀಗೆ ನನ್ನ ಪ್ರಾಣ* ತಿಂತೀರಾ?+ ಮಾತುಗಳಿಂದ ಚುಚ್ಚಿ ಚುಚ್ಚಿ ಸಾಯಿಸ್ತೀರ?+   ಯಾವಾಗ್ಲೂ* ನನಗೆ ಬೈತೀರಾ,*ನನಗೆ ಸ್ವಲ್ಪನೂ ದಯೆ ತೋರಿಸ್ತಿಲ್ಲ, ನಿಮಗೆ ನಾಚಿಕೆ ಆಗಲ್ವಾ?+   ನಾನು ತಪ್ಪು ಮಾಡಿದ್ರೆನಾನು ತಾನೇ ಕಷ್ಟಪಡೋದು, ನಿಮಗೇನು ಕಷ್ಟ?   ನನಗಿಂತ ನೀವೇ ಒಳ್ಳೆಯವರು ಅಂತ ಸಾಧಿಸೋಕೆ ಒಂಟಿಕಾಲಲ್ಲಿ ನಿಂತಿದ್ದೀರಾ? ‘ಇವನಿಗೆ ಸರಿಯಾದ ಶಿಕ್ಷೆ ಸಿಕ್ಕಿದೆ’ ಅಂತ ಸಾಬೀತು ಮಾಡೋಕೆ ಪ್ರಯತ್ನಿಸ್ತಾ ಇದ್ದೀರಾ?   ಆದ್ರೆ ಒಂದು ವಿಷ್ಯ ತಿಳ್ಕೊಳ್ಳಿ, ದೇವರೇ ನನಗೆ ಅನ್ಯಾಯ ಮಾಡಿದ್ದಾನೆ,ಆತನು ಬಲೆ ಬೀಸಿ ನನ್ನನ್ನ ಬೇಟೆಯಾಡಿದ್ದಾನೆ.   ‘ಈ ಕಷ್ಟ ಸಹಿಸೋಕೆ ಆಗ್ತಿಲ್ಲ’ ಅಂತ ಕೂಗುತ್ತಾ ಇದ್ದೀನಿ, ಆದ್ರೆ ಯಾರೂ ಕೇಳ್ತಿಲ್ಲ,+ಸಹಾಯಕ್ಕಾಗಿ ಅರಚುತ್ತಾ ಇದ್ದೀನಿ, ನನಗೆ ನ್ಯಾಯ ಸಿಗ್ತಿಲ್ಲ.+   ನಾನು ಮುಂದೆ ಹೋಗದ ಹಾಗೆ ದಾರಿಗೆ ಅಡ್ಡವಾಗಿ ಕಲ್ಲಿನ ಗೋಡೆ ಕಟ್ಟಿದ್ದಾನೆ,ದಾರೀಲಿ ಕತ್ತಲೆ ಕವಿಯೋ ಹಾಗೆ ಮಾಡಿದ್ದಾನೆ.+   ಆತನು ನನ್ನ ಗೌರವ ಕಿತ್ಕೊಂಡಿದ್ದಾನೆ,ಕಿರೀಟದ ಹಾಗಿದ್ದ ನನ್ನ ಮಾನ ಮರ್ಯಾದೆ ತೆಗೆದುಬಿಟ್ಟಿದ್ದಾನೆ. 10  ನಾನು ಕಣ್ಮರೆಯಾಗಿ ಹೋಗಬೇಕು ಅಂತ ನಾಲ್ಕೂ ಕಡೆಯಿಂದ ನಾಶ ಮಾಡ್ತಿದ್ದಾನೆ,ನನ್ನ ನಿರೀಕ್ಷೆಯನ್ನ ಬೇರುಸಮೇತ ಕಿತ್ತು ಹಾಕ್ತಾ ಇದ್ದಾನೆ. 11  ಆತನಿಗೆ ನನ್ನ ಮೇಲೆ ಕೋಪ ಉರಿತಿದೆ,ಆತನು ನನ್ನನ್ನ ಶತ್ರು ತರ ನೋಡ್ತಾ ಇದ್ದಾನೆ.+ 12  ಆತನ ಸೈನ್ಯಗಳು ಒಟ್ಟಿಗೆ ಬಂದು ನನಗೆ ಮುತ್ತಿಗೆ ಹಾಕ್ತಾ ಇವೆ,ನನ್ನ ಡೇರೆ ಸುತ್ತಾ ಪಾಳೆಯ ಹೂಡಿವೆ. 13  ನನ್ನ ಸ್ವಂತ ಅಣ್ಣತಮ್ಮಂದಿರನ್ನ ನನ್ನಿಂದ ದೂರ ಮಾಡಿದ್ದಾನೆ,ಪರಿಚಯಸ್ಥರು ನನ್ನ ಹತ್ರ ಬರ್ತಿಲ್ಲ.+ 14  ಆಪ್ತ ಸ್ನೇಹಿತರು* ನನ್ನನ್ನ ಬಿಟ್ಟುಹೋಗಿದ್ದಾರೆ,ನನಗೆ ತುಂಬ ಗೊತ್ತಿರೋರು ಕೂಡ ನನ್ನ ಗುರುತು ಹಿಡಿತಿಲ್ಲ.+ 15  ನನ್ನ ಮನೆಯ ಅತಿಥಿಗಳು,+ ದಾಸಿಯರು ನನ್ನನ್ನ ಹೊರಗಿನವನ ತರ ನೋಡ್ತಾರೆ,ಅವ್ರ ಕಣ್ಣಿಗೆ ನಾನು ವಿದೇಶಿ. 16  ನನ್ನ ಸೇವಕನನ್ನ ಕರೆದ್ರೂ ಕಿವಿಗೆ ಹಾಕೊಳ್ತಿಲ್ಲ,ದಯೆ ತೋರಿಸು ಅಂತ ಬಾಯಿಬಿಟ್ಟು ಬೇಡ್ಕೊಂಡ್ರೂ ಉತ್ತರ ಕೊಡ್ತಿಲ್ಲ. 17  ನನ್ನ ಉಸಿರು ನನ್ನ ಹೆಂಡತಿಗೆ ಅಸಹ್ಯವಾಗಿದೆ,+ನನ್ನ ಕೆಟ್ಟ ವಾಸನೆಯಿಂದ ಒಡಹುಟ್ಟಿದ ಸಹೋದರರು ದೂರ ಓಡ್ತಾರೆ. 18  ಚಿಕ್ಕ ಮಕ್ಕಳು ಕೂಡ ನನ್ನ ಹತ್ರ ಬರ್ತಿಲ್ಲ,ನಾನು ಎದ್ದು ನಿಂತ್ರೆ ಸಾಕು ಗೇಲಿ ಮಾಡ್ತಾರೆ. 19  ಪ್ರಾಣ ಸ್ನೇಹಿತರೆಲ್ಲ ನನ್ನನ್ನ ನೋಡಿ ಅಸಹ್ಯಪಡ್ತಾರೆ,+ನಾನು ತುಂಬ ಪ್ರೀತಿಸಿದವರೇ ತಿರುಗಿ ಬಿದ್ದಿದ್ದಾರೆ.+ 20  ನನ್ನ ದೇಹದಲ್ಲಿ ಮೂಳೆ, ಚರ್ಮ ಮಾತ್ರ ಇದೆ,+ಜೀವ ಒಂದು ಬಿಟ್ರೆ ನನ್ನ ಹತ್ರ ಬೇರೇನೂ ಉಳಿದಿಲ್ಲ. 21  ಸ್ನೇಹಿತರೇ, ನನಗೆ ಕರುಣೆ ತೋರಿಸಿ, ದಯವಿಟ್ಟು ಕರುಣೆ ತೋರಿಸಿ,ಯಾಕಂದ್ರೆ ದೇವರು ನನ್ನನ್ನ ಹೊಡೆದಿದ್ದಾನೆ.+ 22  ದೇವರ ಹಾಗೆ ನೀವು ಕೂಡ ನಂಗೆ ಯಾಕೆ ಹಿಂಸೆ ಕೊಡ್ತೀರ?+ ಯಾಕೆ ನನ್ನ ಮೇಲೆ ದಾಳಿ ಮಾಡ್ತಾನೇ ಇದ್ದೀರ?+ 23  ನಾನು ಹೇಳೋ ಮಾತುಗಳನ್ನ ಬರೆದಿಟ್ರೆ,ಪುಸ್ತಕದಲ್ಲಿ ಬರೆದಿಟ್ರೆ ಎಷ್ಟೋ ಚೆನ್ನಾಗಿತ್ತು! 24  ನನ್ನ ಮಾತುಗಳನ್ನ ಬಂಡೆ ಮೇಲೆ ಕಬ್ಬಿಣದ ಲೇಖನಿಯಿಂದ* ಕೆತ್ತಿ,ಅದ್ರಲ್ಲಿ ಸೀಸ ತುಂಬಿಸಿ ಹಾಳಾಗದ ಹಾಗೆ ಮಾಡಿದ್ರೆ ಚೆನ್ನಾಗಿತ್ತು! 25  ನನ್ನನ್ನ ಕಾಪಾಡುವವನು*+ ಒಬ್ಬನಿದ್ದಾನೆ ಅಂತ ನಂಗೆ ಚೆನ್ನಾಗಿ ಗೊತ್ತು,ಅವನು ಭವಿಷ್ಯದಲ್ಲಿ ಬರ್ತಾನೆ, ಭೂಮಿ ಮೇಲೆ ನಿಂತ್ಕೊಳ್ತಾನೆ. 26  ಈ ರೀತಿ ನನ್ನ ಚರ್ಮವೆಲ್ಲ ಹಾಳಾಗಿ ಹೋದ್ರೂನಾನು ಬದುಕಿರುವಾಗ್ಲೇ ದೇವರನ್ನ ನೋಡ್ತೀನಿ, 27  ನಾನೇ ಆತನನ್ನ ನೋಡ್ತೀನಿ,ಬೇರೆಯವ್ರ ಮೂಲಕ ಅಲ್ಲ, ನಾನೇ ಕಣ್ಣಾರೆ ನೋಡ್ತೀನಿ.+ ಆದ್ರೂ ಚಿಂತೆಯಲ್ಲಿ ಮುಳುಗಿ ಹೋಗಿದ್ದೀನಿ. 28  ‘ಅವನಿಗೆ ನಾವೇನು ಹಿಂಸೆ ಕೊಡ್ತಾ ಇದ್ದೀವಿ?’ ಅಂತ ಹೇಳ್ತಾ ಇದ್ದೀರಲ್ಲಾ.+ ತಪ್ಪೆಲ್ಲ ನಂದೇ ಅನ್ನೋ ತರ ಮಾತಾಡ್ತಾ ಇದ್ದೀರಲ್ಲಾ. 29  ನಿಮಗೆ ಭಯನೇ ಇಲ್ವಾ? ದೇವರ ಕತ್ತಿಗೆ ಭಯಪಡಿ,+ತಪ್ಪು ಮಾಡುವವರಿಗೆ ಅದು ಶಿಕ್ಷೆ ಕೊಡದೆ ಬಿಡಲ್ಲ,ನ್ಯಾಯಾಧೀಶನೊಬ್ಬ ಇದ್ದಾನೆ ಅಂತ ಮರಿಬೇಡಿ!”+

ಪಾದಟಿಪ್ಪಣಿ

ಅಕ್ಷ. “ಹತ್ತು ಸಾರಿ.”
ಅಥವಾ “ಅವಮಾನ ಮಾಡ್ತೀರಾ.”
ಅಥವಾ “ನನ್ನ ಸಂಬಂಧಿಕರು.”
ಅಥವಾ “ನನ್ನನ್ನ ಬಿಡಿಸೋ ಹಕ್ಕಿರುವವನು.”