ಯೋಬ 23:1-17

  • ಯೋಬನ ಉತ್ತರ (1-17)

    • ತನ್ನ ವಾದವನ್ನ ದೇವರ ಮುಂದೆ ಇಡೋ ಆಸೆ (1-7)

    • ಹುಡುಕಿದ್ರೂ ದೇವರು ಸಿಗಲಿಲ್ಲ (8, 9)

    • ದೇವರು ಹೇಳಿದ ದಾರಿ ಬಿಟ್ಟು ನಾನು ಹೋಗಲಿಲ್ಲ (11)

23  ಆಗ ಯೋಬ ಹೀಗೆ ಉತ್ತರ ಕೊಟ್ಟ:   “ನೀವೇನೇ ಹೇಳಿದ್ರೂ ನಾನು ಸುಮ್ಮನಿರಲ್ಲ,ನನ್ನ ವಾದವನ್ನ ಮಂಡಿಸ್ತೀನಿ,+ದುಃಖದ ನಿಟ್ಟುಸಿರು ಬಿಟ್ಟು ಬಿಟ್ಟು ಸಾಕಾಗಿ ಹೋಗಿದೆ.   ದೇವರು ಎಲ್ಲಿ ಸಿಗ್ತಾನೆ ಅಂತ ಗೊತ್ತಾದ್ರೆ ಚೆನ್ನಾಗಿತ್ತು!+ ಆತನು ಇರೋ ಕಡೆ ನಾನೇ ಹೋಗ್ತಿದ್ದೆ.+   ನನ್ನ ಮೊಕದ್ದಮೆಯನ್ನ ಆತನ ಮುಂದೆ ಇಡ್ತಿದ್ದೆ,ನನ್ನ ವಾದ ಮಾಡ್ತಿದ್ದೆ.   ಆತನು ಕೊಡೋ ಉತ್ತರನ ಚೆನ್ನಾಗಿ ಕೇಳಿಸ್ಕೊಳ್ತಿದ್ದೆ,ಆತನು ನನ್ನ ಜೊತೆ ಮಾತಾಡುವಾಗ ಗಮನಕೊಟ್ಟು ಕೇಳ್ತಿದ್ದೆ.   ದೇವರು ತನ್ನ ಮಹಾ ಶಕ್ತಿಯಿಂದ ನನ್ನ ಜೊತೆ ಹೋರಾಡ್ತಾನಾ? ಇಲ್ಲ, ನಾನು ಮಾತಾಡುವಾಗ ಖಂಡಿತ ಕೇಳ್ತಾನೆ.+   ಆತನ ಮುಂದೆ ನೀತಿವಂತ ತನ್ನ ಸಮಸ್ಯೆಯನ್ನ ಇತ್ಯರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಆಗ ನ್ಯಾಯಾಧೀಶ ಕೊನೇ ತೀರ್ಪು ಕೊಟ್ಟು ನನ್ನನ್ನ ನಿರಪರಾಧಿ ಅಂತಾನೆ.   ಆದ್ರೆ ನಾನು ಆತನನ್ನ ಹುಡ್ಕೊಂಡು ಪೂರ್ವಕ್ಕೆ ಹೋದ್ರೆ ಆತನು ಅಲ್ಲಿಲ್ಲ,ಪಶ್ಚಿಮಕ್ಕೆ ಹೋದ್ರೆ ಅಲ್ಲಿನೂ ಇಲ್ಲ.   ಆತನು ಉತ್ತರ ದಿಕ್ಕಲ್ಲಿ ಕೆಲಸ ಮಾಡುವಾಗ ನಂಗೆ ಆತನನ್ನ ನೋಡೋಕೆ ಆಗಲ್ಲ,ದಕ್ಷಿಣಕ್ಕೆ ಹೋದ್ರೂ ಕಾಣಿಸಲ್ಲ. 10  ಆದ್ರೂ ನಾನು ಯಾವ ದಾರೀಲಿ ನಡಿತೀನಿ ಅಂತ ಆತನಿಗೆ ಚೆನ್ನಾಗಿ ಗೊತ್ತು,+ನನ್ನನ್ನ ಪರೀಕ್ಷಿಸಿದ ಮೇಲೆ ನಾನು ಅಪ್ಪಟ ಚಿನ್ನದ ತರ ಆಗ್ತೀನಿ.+ 11  ನಾನು ಆತನ ಹೆಜ್ಜೆ ಮೇಲೆ ಹೆಜ್ಜೆ ಇಡ್ತೀನಿ,ಆತನು ಹೇಳಿದ ದಾರಿಯಲ್ಲೇ ಹೋಗ್ತೀನಿ, ಬೇರೆ ಕಡೆ ತಿರುಗಲ್ಲ.+ 12  ಆತನ ಎಲ್ಲಾ ಆಜ್ಞೆ ಪಾಲಿಸಿದ್ದೀನಿ. ಆತನು ನನ್ನಿಂದ ಕೇಳಿದಕ್ಕಿಂತ ಜಾಸ್ತಿನೇ ಪಾಲಿಸಿದ್ದೀನಿ.+ 13  ಏನನ್ನಾದ್ರೂ ಮಾಡಬೇಕು ಅಂತ ಆತನು ತೀರ್ಮಾನಿಸಿದ ಮೇಲೆ ಯಾರಿಂದ ತಡೆಯೋಕೆ ಆಗುತ್ತೆ?+ ಆತನು ಏನಾದ್ರೂ ಮಾಡಬೇಕು ಅಂತ ಅಂದ್ಕೊಂಡ್ರೆ ಅದನ್ನ ಮಾಡೇ ಮಾಡ್ತಾನೆ.+ 14  ನನ್ನ ವಿಷ್ಯದಲ್ಲಿ ಆತನು ಏನ್‌ ಮಾಡಬೇಕು ಅಂತ ಅಂದ್ಕೊಂಡಿದ್ದಾನೋ ಅದನ್ನ ಪೂರ್ತಿಯಾಗಿ ಮಾಡ್ತಾನೆ,ಈ ರೀತಿ ತುಂಬ ವಿಷ್ಯಗಳನ್ನ ಯೋಚಿಸಿಟ್ಟಿದ್ದಾನೆ. 15  ಹಾಗಾಗಿ ನನಗೆ ತುಂಬ ಚಿಂತೆ ಆಗ್ತಿದೆ,ಆತನ ಬಗ್ಗೆ ಯೋಚ್ನೆ ಮಾಡಿದ್ರೆ ಸಾಕು, ಭಯಭಕ್ತಿ ಇನ್ನೂ ಜಾಸ್ತಿ ಆಗುತ್ತೆ. 16  ದೇವ್ರಿಂದಾಗಿ ನಾನು ಪುಕ್ಕಲ ಆಗಿದ್ದೀನಿ,ಸರ್ವಶಕ್ತ ನನ್ನನ್ನ ಹೆದರಿಸಿಬಿಟ್ಟಿದ್ದಾನೆ. 17  ನನ್ನ ಸುತ್ತ ಬರೀ ಕತ್ತಲೆ ಇದ್ರೂಏನೂ ಕಾಣದಿದ್ರೂನಾನು ಮಾತಾಡದೆ ಸುಮ್ಮನಿರಲ್ಲ.

ಪಾದಟಿಪ್ಪಣಿ