ಯೋಬ 29:1-25

  • ಮುಂಚೆಯಿದ್ದ ಸುಖಸಂತೋಷದ ಬಗ್ಗೆ ನೆನಪು (1-25)

    • ಪಟ್ಟಣದ ಬಾಗಿಲ ಹತ್ರ ಸಿಗ್ತಿದ್ದ ಗೌರವ (7-10)

    • ಬೇರೆಯವರಿಗೆ ನ್ಯಾಯ ದೊರಕಿಸಿದ್ದು (11-17)

    • ಅವನ ಸಲಹೆಗಳನ್ನ ಜನ್ರು ಕೇಳ್ತಿದ್ರು (21-23)

29  ಯೋಬ ಮತ್ತೆ ಹೀಗಂದ,   “ನನ್ನ ಜೀವನ ಮೊದಲಿದ್ದ ಹಾಗೆ ಇರ್ತಿದ್ರೆ ಎಷ್ಟೋ ಚೆನ್ನಾಗಿತ್ತು,ದೇವರು ನನ್ನನ್ನ ಕಾದು ಕಾಪಾಡ್ತಿದ್ದ ಆ ಸಮಯ ಮತ್ತೆ ಬಂದ್ರೆ ಒಳ್ಳೇದಿತ್ತು.   ಆ ಸಮಯದಲ್ಲಿ ಆತನ ದೀಪದ ಬೆಳಕು ನನ್ನ ತಲೆ ಮೇಲೆ ಬೀಳ್ತಿತ್ತು,ಆತನ ಬೆಳಕು ಇದ್ದದ್ರಿಂದ ಕತ್ತಲೆಯಲ್ಲೂ ನಡಿಯೋಕೆ ಆಗ್ತಿತ್ತು,+   ಯೌವನದ ದಿನಗಳು ಹೇಗಿತ್ತು ಗೊತ್ತಾ! ದೇವರ ಜೊತೆ ನನಗಿದ್ದ ಸ್ನೇಹದಿಂದ ನನ್ನ ಮನೇಲಿ ಶಾಂತಿ, ಸಂತೋಷ ಇತ್ತು.+   ಆಗ ಸರ್ವಶಕ್ತ ನನ್ನ ಜೊತೆ ಇದ್ದನು,ನನ್ನ ಮಕ್ಕಳು* ನನ್ನ ಸುತ್ತಮುತ್ತ ಇದ್ರು.   ನಾನು ಬೆಣ್ಣೆ ಮೇಲೆನೇ ಹೆಜ್ಜೆ ಇಡ್ತಿದ್ದೆ,ನನಗಾಗಿ ಬಂಡೆಗಳು ಎಣ್ಣೆಯ ನದಿಯನ್ನೇ ಹರಿಸ್ತಿತ್ತು.+   ನಾನು ಪಟ್ಟಣದ ಬಾಗಿಲ+ ಹತ್ರ ಹೋಗಿಮುಖ್ಯಸ್ಥಳದಲ್ಲಿ*+ ಕೂತ್ಕೊಳ್ತಿದ್ದೆ.   ನನ್ನನ್ನ ನೋಡಿದ ತಕ್ಷಣ ಯುವಕರು ಪಕ್ಕಕ್ಕೆ ಸರಿತಿದ್ರು,ವಯಸ್ಸಾದವರು ಕೂಡ ಎದ್ದು ನಿಲ್ತಿದ್ರು.+   ನನ್ನ ಮುಂದೆ ಅಧಿಕಾರಿಗಳು ಮಾತಾಡ್ತಿರಲಿಲ್ಲ,ಅವರು ತಮ್ಮ ಬಾಯಿ ಮೇಲೆ ಕೈ ಇಟ್ಕೊಳ್ತಿದ್ರು. 10  ಗಣ್ಯ ವ್ಯಕ್ತಿಗಳು ಬಾಯಿ ಮುಚ್ಚುತ್ತಿದ್ರು,ಅವ್ರ ಬಾಯಿಂದ ಒಂದು ಶಬ್ದ ಕೂಡ ಬರ್ತಾ ಇರ್ಲಿಲ್ಲ. 11  ನನ್ನ ಮಾತುಗಳನ್ನ ಕೇಳಿಸ್ಕೊಂಡು ಜನ ನನ್ನನ್ನ ಹೊಗಳ್ತಿದ್ರು,ನೋಡಿದವರು ನನ್ನ ಬಗ್ಗೆ ಮೆಚ್ಚಿ ಮಾತಾಡ್ತಿದ್ರು. 12  ಯಾಕಂದ್ರೆ ಸಹಾಯ ಕೇಳಿದ ಬಡವ್ರನ್ನ ನಾನು ಕಾಪಾಡ್ತಿದ್ದೆ,+ಅನಾಥ ಮಕ್ಕಳಿಗೆ, ಅಮಾಯಕರಿಗೆ ಆಸರೆಯಾಗಿ ನಿಲ್ತಿದ್ದೆ.+ 13  ಬದುಕೋ ದಾರಿ ತೋರಿಸಿದ್ದಕ್ಕೆ ಅವರು ನನ್ನನ್ನ ಆಶೀರ್ವದಿಸ್ತಾ ಇದ್ರು,+ವಿಧವೆಯರು ನಾನು ಕೊಡೋ ಸಹಾಯದಿಂದ ಸಂತೋಷವಾಗಿ ಇದ್ರು.+ 14  ನೀತಿಯನ್ನ ನಾನು ಬಟ್ಟೆ ತರ ಹಾಕೊಳ್ತಿದ್ದೆ,ನ್ಯಾಯವನ್ನ ಉದ್ದ ಅಂಗಿ ತರ, ಪೇಟ ತರ ಹಾಕೊಳ್ತಿದ್ದೆ. 15  ಕುರುಡನಿಗೆ ಕಣ್ಣಾಗಿದ್ದೆ,ಕುಂಟನಿಗೆ ಕಾಲಾಗಿದ್ದೆ. 16  ಬಡವ್ರಿಗೆ ತಂದೆ ತರ ಇದ್ದೆ,+ಅಪರಿಚಿತರ ಮೊಕದ್ದಮೆಯನ್ನ ವಿಚಾರಿಸಿ ನ್ಯಾಯ ಕೊಡಿಸ್ತಿದ್ದೆ.+ 17  ಕ್ರೂರ ಪ್ರಾಣಿ ತರ ಇದ್ದ ಕೆಟ್ಟವ್ರ ಅಟ್ಟಹಾಸ ನಿಲ್ಲಿಸಿ,+ಬಲಿಪಶು ಆದವ್ರನ್ನ ಕಾಪಾಡ್ತಿದ್ದೆ.* 18  ‘ಮರಳಿನ ಕಣಗಳಷ್ಟು ದಿನ ನಾನು ಬದುಕ್ತೀನಿ,ನನ್ನ ಮನೆಯಲ್ಲೇ ಜೀವಬಿಡ್ತೀನಿ’+ ಅಂದ್ಕೊಂಡಿದ್ದೆ. 19  ‘ನೀರಿರೋ ಜಾಗದ ತನಕ ಬೇರು ಬಿಟ್ಟಿರೋ,ರಾತ್ರಿಯೆಲ್ಲಾ ರೆಂಬೆಕೊಂಬೆಗಳ ಮೇಲೆ ಇಬ್ಬನಿ ಬಿದ್ದಿರೋಮರದ ಹಾಗೆ ನಾನು ಇರ್ತಿನಿ. 20  ನನ್ನ ಗೌರವ ಯಾವತ್ತೂ ಕಮ್ಮಿ ಆಗಲ್ಲ,ಬಿಲ್ಲಿಂದ ಒಂದಾದ್ಮೇಲೆ ಒಂದು ಬಾಣ ಬಿಡ್ತಾ ಇರೋಕೆ ಕೈಯಲ್ಲಿ ಬಲ ಇರುತ್ತೆ’ ಅಂದ್ಕೊಂಡಿದ್ದೆ. 21  ನನ್ನ ಮಾತುಗಳನ್ನ ಕೇಳೋಕೆ ಜನ ಕಾಯ್ತಾ ಇದ್ರು,ನನ್ನ ಸಲಹೆಗಾಗಿ ಕಾದು ನಿಲ್ತಿದ್ರು.+ 22  ನಾನು ಸಲಹೆ ಕೊಟ್ಟ ಮೇಲೆ ಯಾರೂ ತುಟಿಕ್‌ಪಿಟಿಕ್‌ ಅನ್ನುತ್ತಿರಲಿಲ್ಲ. ನನ್ನ ಒಂದೊಂದು ಮಾತನ್ನೂ ಖುಷಿಯಿಂದ ಕೇಳ್ತಿದ್ರು. 23  ಮಳೆಗೆ ಕಾಯೋ ತರ ನನಗಾಗಿ ಕಾಯ್ತಿದ್ರು,ವಸಂತಕಾಲದ ಮಳೆ ನೀರನ್ನ ಕುಡಿಯೋ ತರ ನನ್ನ ಮಾತನ್ನ ಬಾಯಿ ತೆರೆದು ಕುಡಿತಿದ್ರು.+ 24  ಅವ್ರನ್ನ ನೋಡಿ ನಾನು ಮುಗುಳ್ನಗೆ ಬೀರಿದ್ರೆ ಕಣ್ಣುಬಾಯಿ ಬಿಟ್ಟು ನೋಡ್ತಿದ್ರು,ನನ್ನ ನಗುಮುಖ ನೋಡಿದಾಗ ಅವ್ರಲ್ಲಿ ಭರವಸೆ ಮೂಡ್ತಿತ್ತು.* 25  ನಾನು ಅವ್ರಿಗೆ ನಾಯಕನಾಗಿ ದಾರಿ ತೋರಿಸ್ತಿದ್ದೆ,ಸೈನ್ಯಗಳ ಮಧ್ಯ ಇರೋ ರಾಜನ ತರ ಅವ್ರ ಮಧ್ಯ ಜೀವಿಸಿದೆ,+ನೊಂದ ಜನ್ರನ್ನ ಸಮಾಧಾನ ಮಾಡ್ತಿದ್ದೆ.+

ಪಾದಟಿಪ್ಪಣಿ

ಅಥವಾ “ಸೇವಕರು.”
ಅಕ್ಷ. “ದುಷ್ಟನ ದವಡೆ ಮುರಿದು ಅವನ ಹಲ್ಲುಗಳಿಂದ ಬೇಟೆಯನ್ನ ಕಿತ್ತು ತರ್ತಿದ್ದೆ.”
ಬಹುಶಃ, “ಅವರು ನನ್ನ ಮುಖವನ್ನ ಬಾಡಿಸ್ತಾ ಇರಲಿಲ್ಲ.”