ಯೋಬ 38:1-41

  • ಮನುಷ್ಯ ಎಷ್ಟು ಅಲ್ಪ ಅಂತ ಯೆಹೋವ ಕಲಿಸ್ತಾನೆ (1-41)

    • ‘ಭೂಮಿಯನ್ನ ಸೃಷ್ಟಿಸಿದಾಗ ನೀನು ಎಲ್ಲಿದ್ದೆ?’ (4-6)

    • ದೇವಮಕ್ಕಳು ಜೈಕಾರ ಮಾಡಿದ್ರು (7)

    • ನಿಸರ್ಗದ ವಿಸ್ಮಯಗಳ ಬಗ್ಗೆ ಪ್ರಶ್ನೆಗಳು (8-32)

    • “ಆಕಾಶಕಾಯಗಳನ್ನ ನಿಯಂತ್ರಿಸೋ ನಿಯಮಗಳು” (33)

38  ಆಮೇಲೆ ಯೆಹೋವ ಬಿರುಗಾಳಿ ಒಳಗಿಂದ ಯೋಬನಿಗೆ ಹೀಗೆ ಉತ್ತರ ಕೊಟ್ಟನು:+   “ಇವನು ಬುದ್ಧಿ ಇಲ್ಲದೆ ಮಾತಾಡ್ತಾ ಇದ್ದಾನೆ,ನನ್ನ ರೀತಿನೀತಿನ ಪ್ರಶ್ನಿಸೋಕೆ ಇವನ್ಯಾರು?+   ನಿನಗೆ ಪ್ರಶ್ನೆ ಕೇಳ್ತೀನಿ,ಧೈರ್ಯವಾಗಿ ಉತ್ತರ ಕೊಡೋಕೆ ತಯಾರಾಗು!   ನಾನು ಭೂಮಿಗೆ ಅಡಿಪಾಯ ಹಾಕಿದಾಗ ನೀನು ಎಲ್ಲಿದ್ದೆ?+ ಗೊತ್ತಿದ್ರೆ ಹೇಳು.   ಭೂಮಿಯ ಉದ್ದ ಅಗಲ ಎಷ್ಟಿರಬೇಕು ಅಂತ ನಿರ್ಧಾರ ಮಾಡಿದವರು ಯಾರು? ದಾರ ಹಿಡಿದು ಅದನ್ನ ಅಳತೆ ಮಾಡಿದವರು ಯಾರು?   ಭೂಮಿಯ ಆಧಾರ ಕಂಬಗಳು ಯಾವುದ್ರ ಮೇಲಿದೆ? ಅದ್ರ ಮೂಲೆಗಲ್ಲನ್ನ ಇಟ್ಟವರು ಯಾರು?+   ಮುಂಜಾನೆಯ ನಕ್ಷತ್ರಗಳೆಲ್ಲ+ ಸೇರಿ ಖುಷಿಯಿಂದ ಕುಣಿದಾಗ,ದೇವದೂತರೆಲ್ಲ*+ ಜೈಕಾರ ಹಾಕಿದಾಗ ನೀನೆಲ್ಲಿದ್ದೆ?   ಸಾಗರಗರ್ಭದಿಂದ ನೀರು ಸಿಡಿದು ಬಂದಾಗಅದನ್ನ ಅಡ್ಡಗಟ್ಟೋಕೆ ಬಾಗಿಲು ಹಾಕಿದವರು ಯಾರು?+   ನಾನು ಮೋಡಗಳನ್ನ ಸಾಗರಕ್ಕೆ ಬಟ್ಟೆ ತರ ಉಡಿಸಿದಾಗ,ಗಾಢ ಕತ್ತಲೆಯನ್ನ ಅದಕ್ಕೆ ಸುತ್ತಿದಾಗ, 10  ಸಮುದ್ರಕ್ಕೆ ಗಡಿರೇಖೆ ಎಳೆದುಅದರ ಬಾಗಿಲಿಗೆ ಚಿಲಕಾ ಹಾಕಿ,+ 11  ‘ನೀನು ಇಲ್ಲಿ ತನಕ ಬರಬಹುದು, ಇದನ್ನ ದಾಟಿ ಬರಬಾರದು,ನಿನ್ನ ದೊಡ್ಡ ದೊಡ್ಡ ಅಲೆಗಳು ಇಲ್ಲೇ ನಿಲ್ಲಬೇಕು’+ ಅಂತ ಹೇಳಿದಾಗ ನೀನೆಲ್ಲಿದ್ದೆ? 12  ನೀನು ಮುಂಜಾನೆಗೆ ‘ಬೆಳಗಾಗು’ ಅಂತ ಯಾವತ್ತಾದ್ರೂ ಹೇಳಿದ್ದೀಯಾ? ಎಲ್ಲಿ ಹುಟ್ಟಬೇಕು ಅಂತ ಸೂರ್ಯನಿಗೆ ನೀನು ಹೇಳಿದ್ದೀಯಾ?+ 13  ಭೂಮಿಯ ಮೂಲೆಮೂಲೆಗೂ ಹೋಗಿಕೆಟ್ಟವ್ರನ್ನ ಓಡಿಸಿಬಿಡು ಅಂತ ಬೆಳಕಿಗೆ ಹೇಳಿದ್ದೀಯಾ?+ 14  ಮುದ್ರೆ ಒತ್ತಿದಾಗ ಮಣ್ಣು ರೂಪ ಪಡಿಯೋ ತರಬೆಳಗಾದಾಗ ಭೂಮಿ ರೂಪ ಪಡಿಯುತ್ತೆ. ಬಟ್ಟೆಯಿಂದ ಅಲಂಕಾರ ಮಾಡಿದ ಹಾಗೆ ಭೂಮಿ ಸುಂದರವಾಗಿ ಕಾಣುತ್ತೆ. 15  ಮುಂಜಾನೆ ಕೆಟ್ಟವ್ರ ಬೆಳಕನ್ನ ಕಿತ್ಕೊಳ್ಳುತ್ತೆ,ಜನ್ರಿಗೆ ಹಾನಿಮಾಡೋಕೆ ಕೆಟ್ಟವರು ಎತ್ತಿರೋ ಕೈ ಮುರಿದು ಹೋಗುತ್ತೆ. 16  ನೀನು ಸಮುದ್ರ ತಳದ ತನಕ ಹೋಗಿ ಅದ್ರ ಬುಗ್ಗೆಗಳನ್ನ ನೋಡಿದ್ದೀಯಾ? ಸಾಗರದ ಅಡಿಯಲ್ಲಿ ಏನೇನಿದೆ ಅಂತ ನೋಡಿ ಪರೀಕ್ಷೆ ಮಾಡಿದ್ದೀಯಾ?+ 17  ಸಾವಿನ ಬಾಗಿಲು+ ಎಲ್ಲಿದೆ ಅಂತ ನಿನಗೆ ಗೊತ್ತಾಗಿದ್ಯಾ? ಕಡುಗತ್ತಲೆಯ* ಬಾಗಿಲುಗಳನ್ನ ನೀನು ನೋಡಿದ್ದೀಯಾ?+ 18  ಭೂಮಿ ಎಷ್ಟು ವಿಸ್ತಾರವಾಗಿದೆ ಅಂತ ನಿನಗೆ ಗೊತ್ತಾ?+ ಇದೆಲ್ಲ ನಿನಗೆ ಗೊತ್ತಿದ್ರೆ ಹೇಳು. 19  ಬೆಳಕು ವಾಸಮಾಡೋದು ಎಲ್ಲಿ?+ ಕತ್ತಲೆ ವಾಸ ಮಾಡೋ ಜಾಗ ಎಲ್ಲಿ? 20  ಅವು ಇರೋ ಜಾಗಕ್ಕೆ ಕರ್ಕೊಂಡು ಹೋಗೋಕೆ ನಿನಗೆ ಆಗುತ್ತಾ? ಅವುಗಳ ಮನೆಗೆ ಹೋಗೋ ದಾರಿ ನಿನಗೆ ಗೊತ್ತಾ? 21  ನಾನು ಅದನ್ನೆಲ್ಲ ಸೃಷ್ಟಿಮಾಡೋ ಮುಂಚೆನೇ ನೀನು ಹುಟ್ಟಿದ್ಯಾ? ನೀನು ಅದನ್ನೆಲ್ಲ ತಿಳ್ಕೊಳ್ಳೋಷ್ಟು ವರ್ಷಗಳಿಂದ ಜೀವಿಸ್ತಾ ಇದ್ದೀಯಾ? 22  ಹಿಮದ ಭಂಡಾರದ ಒಳಗೆ ಹೋಗಿದ್ದೀಯಾ?+ ಆಲಿಕಲ್ಲಿನ ಗೋಡೌನ್‌ ನೋಡಿದ್ದೀಯಾ?+ 23  ಕಷ್ಟಕಾಲಕ್ಕಾಗಿ, ಯುದ್ಧಕದನಗಳ ದಿನಕ್ಕಾಗಿ ನಾನು ಇಟ್ಟಿರೋ ಆ ಹಿಮ, ಆಲಿಕಲ್ಲುಗಳನ್ನ ನೋಡಿದ್ದೀಯಾ?+ 24  ಬೆಳಕು* ಹೇಗೆ ಎಲ್ಲಾ ಕಡೆ ಚೆಲ್ಲುತ್ತೆ? ಭೂಮಿ ಮೇಲೆ ಬೀಸೋ ಪೂರ್ವದ ಗಾಳಿ ಎಲ್ಲಿ ಹುಟ್ಟುತ್ತೆ?+ 25  ಪ್ರವಾಹಕ್ಕೆ ಕಾಲುವೆ ತೋಡಿದವನು ಯಾರು? ಕಾರ್ಮೋಡಗಳಿಂದ, ಸಿಡಿಲಿಂದ ಕೂಡಿದ ಬಿರುಮಳೆಗೆ ದಾರಿ ಮಾಡಿದವನು ಯಾರು?+ 26  ಯಾರೂ ಇಲ್ಲದ ಪ್ರದೇಶದಲ್ಲಿ ಮಳೆ ಆಗೋ ತರ ಮಾಡಿದವನು ಯಾರು? ಜನ್ರಿಲ್ಲದ ಕಾಡಲ್ಲಿ ಮಳೆ ಸುರಿಸಿದವನು ಯಾರು?+ 27  ಬಂಜರುಭೂಮಿಯ ದಾಹ ತಣಿಸಿದವನು ಯಾರು? ಅಲ್ಲಿ ಹುಲ್ಲು ಬೆಳೆಯೋ ತರ ಮಾಡಿದವನು ಯಾರು?+ 28  ಮಳೆಗೆ ತಂದೆ ಇದ್ದಾನಾ?+ ಇಬ್ಬನಿಯ ತಂದೆ ಯಾರು?+ 29  ಯಾರ ಹೊಟ್ಟೆಯಿಂದ ಮಂಜುಗಡ್ಡೆ ಹುಟ್ತು? ಆಕಾಶದ ತಣ್ಣಗಿರೋ ಮಂಜನ್ನ ಹುಟ್ಟಿಸಿದ್ದು ಯಾರು?+ 30  ನೀರನ್ನ ಕಲ್ಲಿಂದ ಮುಚ್ಚಿರೋ ತರಆಳವಾದ ಸಾಗರದ ಮೇಲೆ ನೀರು ಗಟ್ಟಿಯಾಗೋ ತರ ಮಾಡಿದ್ದು ಯಾರು?+ 31  ಕೈಮಾ ನಕ್ಷತ್ರಪುಂಜವನ್ನ* ಹಗ್ಗಗಳಿಂದ ಕಟ್ಟೋಕೆ ನಿಂಗಾಗುತ್ತಾ? ಕೀಸಿಲ್‌ ನಕ್ಷತ್ರಪುಂಜಕ್ಕೆ* ಕಟ್ಟಿರೋ ಹಗ್ಗಗಳನ್ನ ಬಿಚ್ಚೋಕೆ ನಿಂಗಾಗುತ್ತಾ?+ 32  ಒಂದು ನಕ್ಷತ್ರಪುಂಜವನ್ನ* ಅದ್ರ ಕಾಲಕ್ಕೆ ಸರಿಯಾಗಿ ನಡಿಸೋಕೆ ನಿಂಗಾಗುತ್ತಾ? ಆ್ಯಷ್‌ ನಕ್ಷತ್ರಪುಂಜಕ್ಕೆ,* ಅದ್ರ ಮಕ್ಕಳಿಗೆ ದಾರಿ ತೋರಿಸೋಕೆ ನಿನಗೆ ಸಾಧ್ಯನಾ? 33  ಆಕಾಶಕಾಯಗಳನ್ನ ನಿಯಂತ್ರಣದಲ್ಲಿ ಇಡೋ ನಿಯಮಗಳು ನಿಂಗೊತ್ತಾ?+ ಅವುಗಳ* ನಿಯಮಗಳನ್ನ ಭೂಮಿಯಲ್ಲಿ ಜಾರಿಗೆ ತರೋಕೆ ನಿಂಗಾಗುತ್ತಾ? 34  ‘ನನ್ನ ಮೇಲೆ ಜೋರಾಗಿ ಮಳೆ ಸುರಿ’ ಅಂತಮೋಡಗಳಿಗೆ ಕೂಗಿ ಹೇಳೋಕೆ ನಿನ್ನಿಂದ ಆಗುತ್ತಾ?+ 35  ‘ಹೋಗಿ ನಿನ್ನ ಕೆಲಸ ಮಾಡು’ ಅಂತ ಸಿಡಿಲಿಗೆ ನೀನು ಆಜ್ಞೆ ಕೊಡಕ್ಕಾಗುತ್ತಾ? ಅದು ವಾಪಸ್‌ ಬಂದು ‘ನಾನು ಬಂದಿದ್ದೀನಿ’ ಅಂತ ನಿನಗೆ ಹೇಳುತ್ತಾ? 36  ಮೋಡಗಳಿಗೆ* ವಿವೇಕ ಕೊಟ್ಟಿದ್ದು ಯಾರು?+ ಆಕಾಶದಲ್ಲಿ ನಡಿಯೋ ಆಶ್ಚರ್ಯ ಘಟನೆಗಳಿಗೆ* ತಿಳುವಳಿಕೆ ಕೊಟ್ಟವರು ಯಾರು?+ 37  ಮೋಡಗಳನ್ನ ಲೆಕ್ಕ ಮಾಡೋಷ್ಟು ಜಾಣತನ ಯಾರಿಗಿದೆ? ಆಕಾಶದ ಜಾಡಿಗಳನ್ನ ಬಗ್ಗಿಸಿ ನೀರು ಹೊಯ್ಯೋಕೆ ಯಾರಿಂದ ಆಗುತ್ತೆ?+ 38  ಧೂಳೆಲ್ಲ ಸೇರಿ ಕೆಸರು ಆಗೋ ತರ ಮಾಡುವವನು ಯಾರು? ಮಣ್ಣಿನ ಉಂಡೆಗಳು ಅಂಟ್ಕೊಳ್ಳೋ ತರ ಮಾಡುವವನು ಯಾರು? 39  ಸಿಂಹಕ್ಕೆ ಬೇಟೆಯಾಡಿ ಆಹಾರ ಕೊಡೋಕೆ ನಿನ್ನಿಂದ ಆಗುತ್ತಾ? ಎಳೇ ಸಿಂಹಗಳ ಹಸಿವು ತಣಿಸೋಕೆ ನಿನ್ನಿಂದ ಆಗುತ್ತಾ?+ 40  ಅವು ಬೇಟೆಯನ್ನ ಹಿಡಿಯೋಕೆ ಗುಹೆ ಸೇರ್ಕೊಂಡು,ಹೊಂಚುಹಾಕಿ ಕಾಯ್ತಾ ಇರುವಾಗ ಅದಕ್ಕೆ ಆಹಾರ ಕೊಡೋಕೆ ನಿನ್ನಿಂದ ಆಗುತ್ತಾ? 41  ಕಾಗೆ ಮರಿಗಳು ಹೊಟ್ಟೆಗಿಲ್ಲದೆ ಆಹಾರ ಹುಡುಕ್ತಾಸಹಾಯಕ್ಕಾಗಿ ದೇವ್ರನ್ನ ಕೂಗಿಕೊಳ್ಳುವಾಗಯಾರು ಊಟ ಕೊಡ್ತಾರೆ?+

ಪಾದಟಿಪ್ಪಣಿ

ಅಕ್ಷ “ದೇವರ ಮಕ್ಕಳು.”
ಅಥವಾ “ಸಾವಿನ ನೆರಳಿನ.”
ಬಹುಶಃ, “ಮಿಂಚು.”
ಬಹುಶಃ ವೃಷಭ ನಕ್ಷತ್ರಪುಂಜದ ಕೃತ್ತಿಕಾ ನಕ್ಷತ್ರಗಳು.
ಬಹುಶಃ ಮೃಗಶಿರ ನಕ್ಷತ್ರಪುಂಜ.
ಅಕ್ಷ. “ಮಜ್ಜರೋತ್‌.” 2ಅರ 23:5ರಲ್ಲಿ ಇದಕ್ಕೆ ಸಂಬಂಧಪಟ್ಟ ಪದ ಬಹುವಚನದಲ್ಲಿದೆ. ಅದು ರಾಶಿಚಕ್ರದ ನಕ್ಷತ್ರಪುಂಜಗಳನ್ನ ಸೂಚಿಸುತ್ತೆ.
ಬಹುಶಃ ಮಹಾಭಲ್ಲೂಕ ನಕ್ಷತ್ರಪುಂಜ (ಸಪ್ತರ್ಷಿ ಮಂಡಲ)
ಬಹುಶಃ, “ಆತನ.”
ಬಹುಶಃ, “ಮನುಷ್ಯ.”
ಬಹುಶಃ, “ಮನಸ್ಸಿಗೆ.”