ಪುಸ್ತಕ 3:1-21

  • ಯೆಹೋವ ಎಲ್ಲ ಜನಾಂಗಗಳಿಗೆ ತೀರ್ಪು ಕೊಡ್ತಾನೆ (1-17)

    • ಯೆಹೋಷಾಫಾಟನ ಕಣಿವೆ (2, 12)

    • ತೀರ್ಪಿನ ಕಣಿವೆ (14)

    • ಯೆಹೋವ ಇಸ್ರಾಯೇಲ್ಯರ ಕೋಟೆ (16)

  • ಯೆಹೋವ ತನ್ನ ಜನ್ರನ್ನ ಆಶೀರ್ವದಿಸ್ತಾನೆ (18-21)

3  “ನೋಡಿ! ನಾನು ಯೆಹೂದದ ಮತ್ತು ಯೆರೂಸಲೇಮಿನ ಜನ್ರನ್ನ ಸೆರೆವಾಸದಿಂದವಾಪಸ್‌ ಕರ್ಕೊಂಡು ಬರೋ ಆ ದಿನಗಳಲ್ಲಿ ಮತ್ತು ಆ ಸಮಯದಲ್ಲಿ,+   ಎಲ್ಲ ಜನಾಂಗಗಳನ್ನ ಕೂಡ ಒಟ್ಟುಸೇರಿಸ್ತೀನಿ. ಅವ್ರನ್ನ ಯೆಹೋಷಾಫಾಟನ* ಕಣಿವೆಗೆ ಕರ್ಕೊಂಡು ಬರ್ತಿನಿ. ಅಲ್ಲಿ ನಾನು ನನ್ನ ಜನ್ರಿಗೋಸ್ಕರ, ನನ್ನ ಆಸ್ತಿಯಾಗಿರೋ ಇಸ್ರಾಯೇಲ್ಯರಿಗೋಸ್ಕರಆ ಜನಾಂಗಗಳಿಗೆ ತೀರ್ಪು ಕೊಡ್ತೀನಿ.+ ಯಾಕಂದ್ರೆ ಅವರು ನನ್ನ ಜನ್ರನ್ನ ಜನಾಂಗಗಳ ಮಧ್ಯ ಚದರಿಸಿಬಿಟ್ರು,ನನ್ನ ದೇಶವನ್ನ ತಮ್ಮತಮ್ಮಲ್ಲಿ ಭಾಗ ಮಾಡ್ಕೊಂಡ್ರು.+   ಅವರು ಚೀಟು ಹಾಕಿ ನನ್ನ ಜನ್ರನ್ನ ತಮ್ಮತಮ್ಮೊಳಗೆ ಹಂಚ್ಕೊಂಡ್ರು,+ವೇಶ್ಯೆಯರ ಹತ್ರ ಹೋಗೋಕೆ ಹುಡುಗರನ್ನ ಮಾರ್ತಿದ್ರು,ದ್ರಾಕ್ಷಾಮದ್ಯ ಖರೀದಿಸೋಕಂತ ಹುಡುಗಿಯರನ್ನ ಮಾರ್ತಿದ್ರು.   ತೂರ್‌ ಮತ್ತು ಸೀದೋನೇ, ಫಿಲಿಷ್ಟಿಯದ ಎಲ್ಲ ಪ್ರದೇಶಗಳೇ,ನಿಮಗೆಷ್ಟು ಧೈರ್ಯ? ನೀವು ನನಗೇ ಹೀಗೆ ಮಾಡಿದ್ದೀರಲ್ಲ? ನೀವೇನು ನನಗೆ ಸೇಡು ತೀರಿಸ್ತಿದ್ದೀರಾ? ನೀವು ನನಗೆ ಸೇಡು ತೀರಿಸ್ತಾ ಇದ್ರೆ ಅದನ್ನ ನಿಮ್ಮ ತಲೆ ಮೇಲೆನೇ ಬರೋ ತರ ಮಾಡ್ತೀನಿ. ಅದು ತಕ್ಷಣ, ಬೇಗ ಬರೋ ತರ ಮಾಡ್ತೀನಿ.+   ಯಾಕಂದ್ರೆ ನೀವು ನನ್ನ ಚಿನ್ನಬೆಳ್ಳಿ ತಗೊಂಡು+ ಹೋಗಿದ್ದೀರ,ಅತ್ಯುತ್ತಮವಾದ ನನ್ನ ಅಮೂಲ್ಯ ವಸ್ತುಗಳನ್ನ ನಿಮ್ಮ ದೇವಾಲಯಗಳಿಗೆ ತಗೊಂಡು ಹೋಗಿದ್ದೀರ.   ಯೆಹೂದ ಮತ್ತು ಯೆರೂಸಲೇಮಿನ ಜನ್ರನ್ನ ಅವ್ರ ಪ್ರದೇಶದಿಂದ ದೂರ ಮಾಡೋಕೆನೀವು ಅವ್ರನ್ನ ಗ್ರೀಕರಿಗೆ ಮಾರಿದ್ದೀರ.+   ನೀವು ಮಾರಿದ ಆ ಸ್ಥಳದಿಂದ ಅವರು ಎದ್ದು ವಾಪಸ್‌ ಬರೋ ತರ ಮಾಡ್ತೀನಿ,+ನೀವು ಮಾಡಿದ ಕೇಡನ್ನ ನಿಮ್ಮ ತಲೆಗೇ ಕಟ್ತೀನಿ.   ನಾನು ನಿಮ್ಮ ಮಕ್ಕಳನ್ನ ಯೆಹೂದದ ಜನ್ರಿಗೆ ಮಾರಿಬಿಡ್ತೀನಿ,+ಅವರು ಆ ಮಕ್ಕಳನ್ನ ದೂರದಲ್ಲಿರೋ ಶೆಬದ ಜನ್ರಿಗೆ ಮಾರಿಬಿಡ್ತಾರೆ,ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.   ಜನಾಂಗಗಳಿಗೆ ಹೀಗೆ ಹೇಳಿ:+ ‘ಯುದ್ಧಕ್ಕೆ ಸಿದ್ಧರಾಗಿ! ಶೂರರನ್ನ ಹುರಿದುಂಬಿಸಿ! ಸೈನಿಕರೆಲ್ಲ ಸೇರಿ ಮುನ್ನುಗ್ಗಲಿ!+ 10  ನಿಮ್ಮ ನೇಗಿಲ ಗುಳಗಳನ್ನ ಬಡಿದು ಕತ್ತಿ ಮಾಡ್ಕೊಳ್ಳಿ,ಕುಡುಗೋಲುಗಳನ್ನ ಬಡಿದು ಈಟಿ ಮಾಡ್ಕೊಳ್ಳಿ. ಬಲಹೀನ “ನಾನು ಬಲಶಾಲಿ” ಅನ್ನಲಿ. 11  ಸುತ್ತಲಿನ ಜನಾಂಗಗಳೇ, ಒಟ್ಟುಸೇರಿ ಬಂದು ಸಹಾಯಮಾಡಿ!’”+ ಯೆಹೋವನೇ, ನಿನ್ನ ವೀರ ಸೈನಿಕರನ್ನ ಕೆಳಗೆ ಬರಮಾಡಿ, ಆ ಸ್ಥಳಕ್ಕೆ ಕರ್ಕೊಂಡು ಬಾ. 12  “ಜನಾಂಗಗಳು ಎದ್ದು ಯೆಹೋಷಾಫಾಟನ ಕಣಿವೆಗೆ ಬರಲಿ,ಯಾಕಂದ್ರೆ ಅಲ್ಲಿ ನಾನು ಕೂತು ಸುತ್ತಲಿನ ಎಲ್ಲ ಜನಾಂಗಗಳಿಗೆ ತೀರ್ಪು ಕೊಡ್ತೀನಿ.+ 13  ಬೆಳೆ ಕೊಯ್ಲಿಗೆ ಸಿದ್ಧವಾಗಿದೆ, ಕುಡುಗೋಲಿಂದ ಅದನ್ನ ಕೊಯ್ಯಿರಿ. ದ್ರಾಕ್ಷಾತೊಟ್ಟಿ ದ್ರಾಕ್ಷಿಗಳಿಂದ ತುಂಬಿದೆ, ಕೆಳಗೆ ಬಂದು ತುಳಿರಿ.+ ದ್ರಾಕ್ಷಾರಸದ ಪೀಪಾಯಿಗಳು ತುಂಬಿತುಳುಕ್ತಿವೆ, ಯಾಕಂದ್ರೆ ಅವ್ರ ಕೆಟ್ಟತನ ವಿಪರೀತ ಆಗಿದೆ. 14  ತೀರ್ಪಿನ ಕಣಿವೆಯಲ್ಲಿ ಜನಸಾಗರ, ಜನಸಾಗರನೇ ಸೇರಿಬಂದಿದೆ,ಯಾಕಂದ್ರೆ ತೀರ್ಪಿನ ಕಣಿವೆಯಲ್ಲಿ ಯೆಹೋವ ತೀರ್ಪು ಕೊಡೋ ದಿನ ಹತ್ರ ಆಗಿದೆ.+ 15  ಸೂರ್ಯ ಚಂದ್ರ ಕಪ್ಪಾಗುತ್ತೆ,ನಕ್ಷತ್ರಗಳು ಹೊಳಪು ಕಳ್ಕೊಳ್ಳುತ್ತೆ. 16  ಯೆಹೋವ ಚೀಯೋನಿಂದ ಸಿಂಹದ ತರ ಗರ್ಜಿಸ್ತಾನೆ,ಯೆರೂಸಲೇಮಿಂದ ಆರ್ಭಟಿಸ್ತಾನೆ. ಆಕಾಶ ಭೂಮಿ ನಡುಗುತ್ತೆ,ಆದ್ರೆ ಯೆಹೋವ ತನ್ನ ಜನ್ರಿಗೆ ಆಶ್ರಯವಾಗಿ ಇರ್ತಾನೆ,+ಇಸ್ರಾಯೇಲ್‌ ಜನ್ರಿಗೆ ಕೋಟೆ ಆಗಿರ್ತಾನೆ. 17  ನಾನು ನಿಮ್ಮ ದೇವರಾದ ಯೆಹೋವ ಅಂತನಾನು ನನ್ನ ಪವಿತ್ರ ಬೆಟ್ಟವಾದ ಚೀಯೋನಲ್ಲಿ ವಾಸಿಸ್ತಾ ಇರುವವನು ಅಂತ ನೀವು ತಿಳ್ಕೊಬೇಕಾಗುತ್ತೆ.+ ಯೆರೂಸಲೇಮ್‌ ಒಂದು ಪವಿತ್ರ ಸ್ಥಳವಾಗುತ್ತೆ,+ಅಪರಿಚಿತರು* ಇನ್ನು ಯಾವತ್ತೂ ಅಲ್ಲಿಂದ ಹಾದುಹೋಗಲ್ಲ.+ 18  ಆ ದಿನದಲ್ಲಿ ಬೆಟ್ಟಗಳಿಂದ ಸಿಹಿ ದ್ರಾಕ್ಷಾಮದ್ಯ ತೊಟ್ಟಿಕ್ಕುತ್ತೆ,+ಬೆಟ್ಟಗಳಲ್ಲಿ ಹಾಲು ಹರಿಯುತ್ತೆ,ಯೆಹೂದದ ಎಲ್ಲ ತೊರೆಗಳಲ್ಲೂ ನೀರು ಹರಿಯುತ್ತೆ. ಯೆಹೋವನ ಆಲಯದಿಂದ ಒಂದು ಬುಗ್ಗೆ ಹರಿದು ಬರುತ್ತೆ,+ಅದು ಅಕೇಶಿಯ ಮರಗಳಿರೋ ಕಣಿವೆಗೆ ನೀರು ಕೊಡುತ್ತೆ. 19  ಆದ್ರೆ ಈಜಿಪ್ಟ್‌* ಜನ ಇಲ್ಲದೆ ಖಾಲಿ ಹೊಡಿಯುತ್ತೆ,+ಎದೋಮ್‌ ನಿರ್ಜನ ಕಾಡು ಆಗುತ್ತೆ,+ಯಾಕಂದ್ರೆ ಅವು ಯೆಹೂದದ ಜನ್ರನ್ನ ಹಿಂಸಿಸಿವೆ,+ಯೆಹೂದದಲ್ಲಿ ನಿರಪರಾಧಿಗಳ ರಕ್ತ ಸುರಿಸಿವೆ.+ 20  ಆದ್ರೆ ಯೆಹೂದ ಸದಾ ಜನ್ರಿಂದ ತುಂಬಿರುತ್ತೆ,ಯೆರೂಸಲೇಮ್‌ ತಲೆಮಾರು ತಲೆಮಾರುಗಳ ತನಕ ಜನ್ರಿಂದ ತುಂಬಿರುತ್ತೆ.+ 21  ಕೊಲೆಯ ದೋಷವಿದ್ದ ಅವ್ರನ್ನ ನಾನು ಕ್ಷಮಿಸ್ತೀನಿ,+ಯೆಹೋವ ಚೀಯೋನಲ್ಲಿ ವಾಸಿಸ್ತಾನೆ.”+

ಪಾದಟಿಪ್ಪಣಿ

ಅರ್ಥ, ಯೆಹೋವ ನ್ಯಾಯಾಧೀಶ.
ಅಥವಾ “ವಿದೇಶಿಯರು.”
ಅಥವಾ “ಐಗುಪ್ತ.”