ಯೋಹಾನ 17:1-26
17 ಯೇಸು ಇದೆಲ್ಲ ಹೇಳಿದ ಮೇಲೆ ಆಕಾಶ ನೋಡಿ ಹೀಗೆ ಪ್ರಾರ್ಥಿಸಿದನು “ಅಪ್ಪಾ, ಆ ಸಮಯ ಬಂದೇ ಬಿಡ್ತು. ನಿನ್ನ ಮಗ ನಿನಗೆ ಗೌರವ ತರೋ ಹಾಗೆ ಅವನನ್ನ ಉನ್ನತ ಸ್ಥಾನಕ್ಕೆ ಏರಿಸು.+
2 ಅವನಿಗೆ ಎಲ್ರ ಮೇಲೆ ಅಧಿಕಾರ ಕೊಟ್ಟಿದ್ದೀಯ.+ ಯಾಕಂದ್ರೆ ಅವನಿಗೆ ಯಾರನ್ನೆಲ್ಲಾ ಕೊಟ್ಟಿದ್ದೀಯೋ ಅವ್ರಿಗೆಲ್ಲ+ ಅವನು ಶಾಶ್ವತ ಜೀವ+ ಕೊಡೋಕಾಗುತ್ತೆ.
3 ಶಾಶ್ವತ ಜೀವ+ ಸಿಗಬೇಕಾದ್ರೆ ಒಬ್ಬನೇ ಸತ್ಯ ದೇವರಾಗಿರೋ ನಿನ್ನನ್ನ+ ಮತ್ತು ನೀನು ಕಳಿಸ್ಕೊಟ್ಟ ಯೇಸು ಕ್ರಿಸ್ತನನ್ನ+ ತಿಳ್ಕೊಳ್ಳಲೇಬೇಕು.*
4 ನೀನು ಕೊಟ್ಟ ಕೆಲಸವನ್ನ ಮುಗಿಸಿದ್ದೀನಿ.+ ಈ ಭೂಮಿ ಮೇಲೆ ನಿನಗೆ ಗೌರವ ಬರೋ ತರ ನಡ್ಕೊಂಡಿದ್ದೀನಿ.+
5 ಹಾಗಾಗಿ ಅಪ್ಪಾ, ನನಗೆ ನಿನ್ನ ಪಕ್ಕದಲ್ಲಿ ಇರಬೇಕು. ಲೋಕ ಹುಟ್ಟೋದಕ್ಕಿಂತ ಮುಂಚೆ ನಿನ್ನ ಪಕ್ಕದಲ್ಲಿದ್ದಾಗ ನನಗೆ ಯಾವ ಗೌರವ ಸಿಗ್ತಿತ್ತೋ ಆ ಗೌರವ ಮತ್ತೆ ಸಿಗೋ ತರ ಮಾಡು.+
6 ಲೋಕದಲ್ಲಿ ನೀನು ಕೊಟ್ಟ ಶಿಷ್ಯರಿಗೆ ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ.+ ಇವರು ನಿನ್ನವರು, ಇವ್ರನ್ನ ನನಗೆ ಕೊಟ್ಟೆ. ಇವರು ನಿನ್ನ ಮಾತಿನ ಪ್ರಕಾರ ನಡೆದಿದ್ದಾರೆ.
7 ನಾನು ಹೇಳಿದ್ದು, ಮಾಡಿದ್ದು ಎಲ್ಲ ನೀನೇ ನನಗೆ ಹೇಳ್ಕೊಟ್ಟೆ ಅಂತ ಈಗ ಇವರು ಅರ್ಥ ಮಾಡ್ಕೊಂಡಿದ್ದಾರೆ.
8 ಯಾಕಂದ್ರೆ ನೀನು ನನಗೆ ಹೇಳಿದ ಮಾತುಗಳನ್ನ ನಾನು ಇವ್ರಿಗೆ ಹೇಳಿದೆ.+ ಇವರು ಅದನ್ನ ಒಪ್ಪಿಕೊಂಡ್ರು. ನಾನು ನಿನ್ನ ಪ್ರತಿನಿಧಿಯಾಗಿ ಬಂದಿದ್ದೀನಿ ಅನ್ನೋದು ಇವ್ರಿಗೆ ಅರ್ಥ ಆಗಿದೆ.+ ಅಷ್ಟೇ ಅಲ್ಲ ನನ್ನನ್ನ ಕಳಿಸಿದ್ದು ನೀನೇ ಅಂತ ಇವರು ನಂಬಿದ್ದಾರೆ.+
9 ಇವ್ರಿಗೋಸ್ಕರ ಬೇಡ್ಕೊಳ್ತೀನಿ. ಲೋಕಕ್ಕೋಸ್ಕರ ಬೇಡ್ಕೊಳ್ಳಲ್ಲ, ನನಗೆ ಕೊಟ್ಟಿರೋ ಶಿಷ್ಯರಿಗಾಗಿ ಬೇಡ್ಕೊಳ್ತೀನಿ. ಯಾಕಂದ್ರೆ ಇವರು ನಿನ್ನವರು.
10 ನನ್ನದೆಲ್ಲ ನಿನ್ನದು, ನಿನ್ನದೆಲ್ಲ ನನ್ನದು.+ ಇವ್ರಿಂದ ನನಗೆ ಗೌರವ ಸಿಕ್ಕಿದೆ.
11 ಇನ್ನು ಮೇಲೆ ನಾನು ಈ ಲೋಕದಲ್ಲಿ ಇರಲ್ಲ. ನಿನ್ನ ಹತ್ರ ಬರ್ತಾ ಇದ್ದೀನಿ. ಆದ್ರೆ ಇವರು ಈ ಲೋಕದಲ್ಲಿ ಇರ್ತಾರೆ.+ ಪವಿತ್ರನಾದ ಅಪ್ಪಾ, ಇವರನ್ನ ಕಾಪಾಡು.+ ನೀನು ನನಗೆ ಕೊಟ್ಟಿರೋ ಆ ಹೆಸ್ರಿಗೆ ಕಳಂಕ ಬರಬಾರದು. ನಾವಿಬ್ರೂ ಆಪ್ತರಾಗಿರೋ ತರ ಇವರೂ ಆಪ್ತರಾಗಿರಬೇಕು.+
12 ನಾನು ಇವ್ರ ಜೊತೆ ಇದ್ದಾಗ ನೀನು ನನಗೆ ಕೊಟ್ಟಿರೋ ಆ ಹೆಸ್ರು ಹಾಳಾಗಬಾರದು ಅಂತ ಇವ್ರನ್ನ ಜಾಗ್ರತೆಯಿಂದ ನೋಡ್ಕೊಳ್ತಿದ್ದೆ.+ ಪವಿತ್ರ ಗ್ರಂಥದಲ್ಲಿ ಹೇಳಿರೋ ತರ+ ನಾಶ ಆಗಬೇಕಾದ ಆ ಒಬ್ಬನನ್ನ+ ಬಿಟ್ಟು ಬೇರೆ ಯಾರೂ ನಾಶ ಆಗಲಿಲ್ಲ.+ ಅವ್ರನ್ನ ಕಾಪಾಡಿದ್ದೀನಿ.
13 ಆದ್ರೆ ಈಗ ನಿನ್ನ ಹತ್ರ ಬರ್ತಾ ಇದ್ದೀನಿ. ನನ್ನ ತರ ಅವ್ರಿಗೂ ಹೆಚ್ಚು ಸಂತೋಷ ಸಿಗಲಿ ಅಂತ ನಾನಿನ್ನೂ ಲೋಕದಲ್ಲಿ ಇರುವಾಗ್ಲೇ ಈ ಮಾತುಗಳನ್ನೆಲ್ಲ ಅವ್ರಿಗೆ ಹೇಳ್ತಾ ಇದ್ದೀನಿ.+
14 ಇವ್ರಿಗೆ ನಿನ್ನ ಮಾತುಗಳನ್ನೆಲ್ಲ ಹೇಳಿದ್ದೀನಿ. ನಾನು ಹೇಗೆ ಈ ಲೋಕದವರ ತರ ಇಲ್ವೋ ಅದೇ ತರ ಇವ್ರೂ ಈ ಲೋಕದವರ ತರ ಇಲ್ಲ.+ ಅದಕ್ಕೇ ಲೋಕ ಇವ್ರನ್ನ ದ್ವೇಷಿಸ್ತಾ ಇದೆ.
15 ಇವ್ರನ್ನ ಲೋಕದಿಂದ ಕರ್ಕೊಂಡು ಹೋಗು ಅಂತ ಕೇಳ್ಕೊಳ್ತಾ ಇಲ್ಲ. ಇವ್ರನ್ನ ಸೈತಾನನಿಂದ ಕಾಪಾಡು ಅಂತ ಕೇಳ್ಕೊಳ್ತಿದ್ದೀನಿ.+
16 ನಾನು ಹೇಗೆ ಈ ಲೋಕದವರ ತರ ಇಲ್ವೋ+ ಅದೇ ತರ ಇವ್ರೂ ಈ ಲೋಕದವರ ತರ ಇಲ್ಲ.+
17 ನಿನ್ನ ಮಾತುಗಳೇ ಸತ್ಯ.+ ಆ ಸತ್ಯದಿಂದ ಇವ್ರನ್ನ ಪವಿತ್ರ ಮಾಡು.+
18 ನೀನು ನನ್ನನ್ನ ಲೋಕಕ್ಕೆ ಕಳಿಸಿದ ಹಾಗೆ ನಾನೂ ಇವ್ರನ್ನ ಲೋಕಕ್ಕೆ ಕಳಿಸಿದೆ.+
19 ಆ ಸತ್ಯದಿಂದ ಇವರು ಪವಿತ್ರರಾಗಿ ಇರಬೇಕು ಅಂತ ನನ್ನನ್ನೇ ಪವಿತ್ರವಾಗಿ ಇಟ್ಕೊಂಡೆ.
20 ನಾನು ಇವ್ರಿಗೋಸ್ಕರ ಮಾತ್ರ ಅಲ್ಲ, ಇವ್ರ ಮಾತುಗಳನ್ನ ಕೇಳಿ ನನ್ನಲ್ಲಿ ನಂಬಿಕೆ ಇಡುವವ್ರಿಗೋಸ್ಕರ ಬೇಡಿಕೊಳ್ತೀನಿ.
21 ಇವರು ಐಕ್ಯರಾಗಿ ಇರಬೇಕು.+ ಅಪ್ಪಾ, ನೀನು ನನ್ನ ಜೊತೆ, ನಾನು ನಿನ್ನ ಜೊತೆ ಆಪ್ತನಾಗಿ ಇರೋ ಹಾಗೆ+ ಇವ್ರೂ ನಮ್ಮ ಜೊತೆ ಆಪ್ತರಾಗಿ ಇರಬೇಕಂತ ಬೇಡ್ಕೊಳ್ತೀನಿ. ಆಗ ನೀನೇ ನನ್ನನ್ನ ಕಳಿಸಿದ್ದೀಯ ಅಂತ ಲೋಕ ನಂಬುತ್ತೆ.
22 ನೀನು ನನಗೆ ಗೌರವ ಕೊಟ್ಟ ಹಾಗೆ ನಾನೂ ಅವ್ರಿಗೆ ಗೌರವ ಕೊಟ್ಟಿದ್ದೀನಿ. ಯಾಕಂದ್ರೆ ನಮ್ಮಿಬ್ರಲ್ಲೂ ಒಗ್ಗಟ್ಟು ಇರೋ ಹಾಗೆ ಅವ್ರಲ್ಲೂ ಒಗ್ಗಟ್ಟು ಇರಬೇಕು.+
23 ಅವ್ರಲ್ಲಿ ಒಡಕು ಅನ್ನೋದೇ ಬರಬಾರದು ಅಂತ ಅವ್ರ ಜೊತೆ ಆಪ್ತನಾಗಿದ್ದೆ. ನೀನೂ ನನ್ನ ಜೊತೆ ಆಪ್ತನಾಗಿದ್ದೆ. ಹೀಗೆ ನೀನೇ ನನ್ನನ್ನ ಕಳಿಸಿದ್ದೀಯ, ನೀನು ನನ್ನನ್ನ ಪ್ರೀತಿಸೋ ತರ ಅವ್ರನ್ನೂ ಪ್ರೀತಿಸ್ತೀಯ ಅಂತ ಇಡೀ ಲೋಕಕ್ಕೆ ಗೊತ್ತಾಗುತ್ತೆ.
24 ಅಪ್ಪಾ, ನೀನು ನನಗೆ ಕೊಟ್ಟಿರೋ ಇವರು ಸಹ ನನ್ನ ಜೊತೆ ನಾನಿರೋ ಜಾಗದಲ್ಲೇ ಇರಬೇಕಂತ ಬೇಡ್ಕೊಳ್ತೀನಿ.+ ಆಗ ನೀನು ನನಗೆ ಕೊಟ್ಟಿರೋ ಉನ್ನತ ಸ್ಥಾನವನ್ನ ಇವರು ನೋಡೋಕಾಗುತ್ತೆ. ಯಾಕಂದ್ರೆ ಲೋಕ ಹುಟ್ಟೋ ಮುಂಚೆನೇ ನನ್ನನ್ನ ಪ್ರೀತಿಸಿದ್ದೀಯ.+
25 ಅಪ್ಪಾ, ನೀನು ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತೀಯ. ಈ ಲೋಕಕ್ಕೆ ನೀನು ಗೊತ್ತಿಲ್ಲಾಂದ್ರೂ+ ನನಗೆ ನೀನು ಯಾರಂತ ಗೊತ್ತು.+ ನೀನು ನನ್ನನ್ನ ಕಳಿಸಿದ್ದೀಯ ಅಂತ ಇವ್ರಿಗೂ ಗೊತ್ತು.
26 ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ.+ ಯಾಕಂದ್ರೆ ನೀನು ನನ್ನನ್ನ ಪ್ರೀತಿಸಿದ ಹಾಗೆ ಇವ್ರೂ ಒಬ್ಬರನ್ನೊಬ್ರು ಪ್ರೀತಿಸಬೇಕು ಮತ್ತು ನಾನು ಇವ್ರ ಜೊತೆ ಆಪ್ತನಾಗಿ ಇರಬೇಕು.”+
ಪಾದಟಿಪ್ಪಣಿ
^ ಅಕ್ಷ. “ಸರಿಯಾದ ಜ್ಞಾನ ಪಡ್ಕೊಬೇಕು.”