ಲೂಕ 17:1-37

  • ನಂಬಿಕೆ ಕಳ್ಕೊಳ್ಳೋ ತರ ಮಾಡೋದು, ಕ್ಷಮಿಸೋದು, ನಂಬಿಕೆ (1-6)

  • ಕೆಲಸಕ್ಕೆ ಬಾರದ ಆಳು (7-10)

  • ಹತ್ತು ಕುಷ್ಠರೋಗಿಗಳಿಗೆ ವಾಸಿ ಆಯ್ತು (11-19)

  • ದೇವರ ಆಳ್ವಿಕೆ ಹೇಗೆ ಬರುತ್ತೆ (20-37)

    • ದೇವರ ಆಳ್ವಿಕೆ “ನಿಮ್ಮ ಮಧ್ಯದಲ್ಲೇ ಇದೆ” (21)

    • ‘ಲೋಟನ ಹೆಂಡತಿಯನ್ನ ನೆನಪಿಸ್ಕೊಳ್ಳಿ’ (32)

17  ಆಮೇಲೆ ಯೇಸು ಶಿಷ್ಯರಿಗೆ “ಜನ್ರನ್ನ ಪಾಪಕ್ಕೆ ನಡೆಸೋ ವಿಷ್ಯಗಳು ಇದ್ದೇ ಇರುತ್ತೆ. ಆದ್ರೆ ಪಾಪ ಮಾಡಿಸೋ ವ್ಯಕ್ತಿಯ ಗತಿ ಏನು ಹೇಳಲಿ.  ನನ್ನ ಮೇಲೆ ನಂಬಿಕೆ ಇಟ್ಟಿರೋ ಈ ದೀನ ಜನ್ರಲ್ಲಿ* ಒಬ್ಬ+ ನಂಬಿಕೆ ಕಳ್ಕೊಳ್ಳೋ ತರ ಯಾರಾದ್ರೂ ಮಾಡಿದ್ರೆ* ಅವನ ಕುತ್ತಿಗೆಗೆ ದೊಡ್ಡ ಬೀಸೋ ಕಲ್ಲು ಕಟ್ಟಿ ಸಮುದ್ರಕ್ಕೆ ದೊಬ್ಬೋದೇ ಅವನಿಗೆ ಒಳ್ಳೇದು.  ಹುಷಾರಾಗಿರಿ. ನಿಮ್ಮ ಸಹೋದರ ಪಾಪಮಾಡಿದ್ರೆ ಗದರಿಸಿ.+ ಪಶ್ಚಾತ್ತಾಪಪಟ್ರೆ ಕ್ಷಮಿಸಿ.+  ಅವನು ದಿನಕ್ಕೆ ಏಳು ಸಲ ನಿಮಗೆ ಪಾಪಮಾಡಿದ್ರೂ ಏಳು ಸಲ ನಿಮ್ಮ ಹತ್ರ ಬಂದು ‘ತಪ್ಪು ಮಾಡಿಬಿಟ್ಟೆ, ಕ್ಷಮಿಸು’ ಅಂತ ಹೇಳಿದ್ರೆ ಅವನನ್ನ ಕ್ಷಮಿಸಲೇಬೇಕು”+ ಅಂದನು.  ಆಗ ಅಪೊಸ್ತಲರು ಒಡೆಯನಿಗೆ “ನಮಗೆ ಇನ್ನೂ ಹೆಚ್ಚು ನಂಬಿಕೆ ಕೊಡು”+ ಅಂತ ಕೇಳಿದ್ರು.  ಅದಕ್ಕೆ ಒಡೆಯ “ನಿಮಗೆ ಸಾಸಿವೆ ಕಾಳಷ್ಟು ನಂಬಿಕೆ ಇದ್ರೂ ಸಾಕು, ನೀವು ಈ ಉಪ್ಪುನೇರಳೆ* ಮರಕ್ಕೆ ‘ಇಲ್ಲಿಂದ ಬೇರು ಸಮೇತ ಕಿತ್ಕೊಂಡು ಸಮುದ್ರಕ್ಕೆ ಹೋಗು’ ಅಂತ ಹೇಳಿದ್ರೆ ಅದು ನಿಮ್ಮ ಮಾತು ಕೇಳುತ್ತೆ.+  ನಿಮಗೆ ಒಬ್ಬ ಆಳು ಇದ್ದಾನೆ ಅಂತ ನೆನಸಿ. ಅವನು ಹೊಲದಲ್ಲಿ ಕೆಲಸಮಾಡಿ ಅಥವಾ ಕುರಿ ಮೇಯಿಸಿ ಮನೆಗೆ ಬಂದಾಗ ನೀವು ‘ಬೇಗ ಬಂದು ಊಟಕ್ಕೆ ಕೂತ್ಕೊ’ ಅಂತ ಹೇಳ್ತೀರಾ?  ಇಲ್ಲ. ಅವನಿಗೆ ‘ನಾನು ಊಟ ಮಾಡಬೇಕು, ಏನಾದ್ರೂ ಅಡುಗೆ ಮಾಡು. ನಾನು ಊಟಮಾಡೋ ತನಕ ಪಕ್ಕದಲ್ಲಿ ನಿಂತು ಸೇವೆಮಾಡು. ಆಮೇಲೆ ನೀನು ಊಟಮಾಡು’ ಅಂತ ಹೇಳಲ್ವಾ?  ಕೊಟ್ಟ ಕೆಲಸ ಮಾಡಿದ್ರಿಂದ ಯಜಮಾನ ಆ ಆಳಿಗೆ ಧನ್ಯವಾದ ಹೇಳ್ತಾನಾ? ಇಲ್ಲ ತಾನೇ. 10  ಅದೇ ತರ ನೀವು ಸಹ ನಿಮಗೆ ಕೊಟ್ಟಿರೋ ಎಲ್ಲ ಕೆಲಸಗಳನ್ನ ಮಾಡಿ ಮುಗಿಸಿದ ಮೇಲೆ ‘ನಾವು ಕೆಲಸಕ್ಕೆ ಬಾರದ ಆಳುಗಳು. ನಾವು ಮಾಡಬೇಕಾಗಿದ್ದ ಕೆಲಸವನ್ನೇ ಮಾಡಿದ್ವಿ’ ಅಂತೇಳಿ” ಅಂದನು.+ 11  ಯೇಸು ಸಮಾರ್ಯ ಮತ್ತು ಗಲಿಲಾಯ ಪ್ರದೇಶ ಹಾದು ಯೆರೂಸಲೇಮಿಗೆ ಹೋಗ್ತಿದ್ದ. 12  ಒಂದು ಹಳ್ಳಿಗೆ ಬಂದಾಗ ಹತ್ತು ಮಂದಿ ಕುಷ್ಠರೋಗಿಗಳು ಬಂದು ದೂರದಲ್ಲೇ ನಿಂತ್ಕೊಂಡ್ರು.+ 13  ಅವರು “ಯೇಸು, ನಮ್ಮ ಗುರು, ನಮಗೆ ಕರುಣೆ ತೋರಿಸು” ಅಂತ ಜೋರಾಗಿ ಕೇಳ್ಕೊಂಡ್ರು. 14  ಆತನು ಅವ್ರನ್ನ ನೋಡಿ “ಹೋಗಿ ಪುರೋಹಿತರಿಗೆ ನಿಮ್ಮನ್ನ ತೋರಿಸ್ಕೊಳ್ಳಿ”+ ಅಂದನು. ಹೋಗೋ ದಾರಿಯಲ್ಲೇ ಅವ್ರಿಗೆ ವಾಸಿ ಆಯ್ತು.+ 15  ಅವ್ರಲ್ಲಿ ಒಬ್ಬ ಕುಷ್ಠ ವಾಸಿ ಆಗಿದ್ದನ್ನ ನೋಡಿ ಗಟ್ಟಿಯಾಗಿ ದೇವರನ್ನ ಹೊಗಳ್ತಾ ವಾಪಸ್‌ ಬಂದು 16  ಯೇಸು ಮುಂದೆ ಮಂಡಿಯೂರಿ ಧನ್ಯವಾದ ಹೇಳಿದ. ಅವನೊಬ್ಬ ಸಮಾರ್ಯದವನು.+ 17  ಆಗ ಯೇಸು “ಹತ್ತೂ ಜನ್ರ ಕುಷ್ಠ ವಾಸಿ ಆಯ್ತು ತಾನೇ? ಉಳಿದವರು ಎಲ್ಲಿ? 18  ಬೇರೆ ಜನಾಂಗಕ್ಕೆ ಸೇರಿದ ಇವನು ಮಾತ್ರ ದೇವರನ್ನ ಮಹಿಮೆಪಡಿಸೋಕೆ ವಾಪಸ್‌ ಬಂದ. ಬೇರೆಯವರು ಯಾಕೆ ಬರ್ಲಿಲ್ಲ?” ಅಂದನು. 19  ಆಮೇಲೆ “ಎದ್ದು ಮನೆಗೆ ಹೋಗು. ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ”+ ಅಂದನು. 20  ಆಗ ಫರಿಸಾಯರು ದೇವರ ಆಳ್ವಿಕೆ ಯಾವಾಗ ಬರುತ್ತೆ+ ಅಂತ ಆತನನ್ನ ಕೇಳಿದ್ರು. ಅದಕ್ಕೆ ಯೇಸು “ದೇವರ ಆಳ್ವಿಕೆ ಎಲ್ರಿಗೂ ಕಾಣಿಸೋ ತರ ಬರಲ್ಲ. 21  ಜನ, ‘ನೋಡು ಇಲ್ಲಿದೆ!’ ‘ಅಲ್ಲಿದೆ’ ಅಂತಾನೂ ಹೇಳಲ್ಲ. ಯಾಕಂದ್ರೆ ನೋಡಿ! ದೇವರ ಆಳ್ವಿಕೆ ನಿಮ್ಮ ಮಧ್ಯದಲ್ಲೇ ಇದೆ”+ ಅಂದನು. 22  ಆಮೇಲೆ ಶಿಷ್ಯರಿಗೆ “ಮನುಷ್ಯಕುಮಾರ ನಮ್ಮ ಜೊತೆ ಇರಬೇಕಿತ್ತು ಅಂತ ಆಸೆಪಡೋ ಕಾಲ ಬರುತ್ತೆ. ಆದ್ರೆ ಅದು ಸಾಧ್ಯ ಇಲ್ಲ. 23  ಜನ ನಿಮಗೆ ‘ಕ್ರಿಸ್ತ ಅಲ್ಲಿದ್ದಾನೆ’ ‘ಕ್ರಿಸ್ತ ಇಲ್ಲಿದ್ದಾನೆ’ ಅಂತ ಹೇಳ್ತಾರೆ. ನೀವು ಹೊರಗೆ ಹೋಗಬೇಡಿ, ಅವರ ಮಾತು ನಂಬಬೇಡಿ.+ 24  ಪೂರ್ವದಿಂದ ಪಶ್ಚಿಮದ ತನಕ ಮಿಂಚೋ ಮಿಂಚಿನ ತರ ಮನುಷ್ಯಕುಮಾರ+ ತಾನು ಬರೋ ಕಾಲದಲ್ಲೂ ಇರ್ತಾನೆ.+ 25  ಆದ್ರೆ ಮೊದಲು ಆತನು ತುಂಬ ಕಷ್ಟಪಡಬೇಕು. ಈ ಪೀಳಿಗೆಯ ಜನ್ರ ಕೈಯಲ್ಲಿ ಆತನು ಸಾಯಬೇಕು.+ 26  ನೋಹನ ದಿನಗಳು ಹೇಗಿದ್ದವೋ+ ಅದೇ ತರ ಮನುಷ್ಯಕುಮಾರ ಬರೋ ಕಾಲ ಇರುತ್ತೆ.+ 27  ಪ್ರಳಯಕ್ಕೆ ಮುಂಚೆ ಜನ ತಿಂತಾ ಕುಡಿತಾ ಮದುವೆ ಮಾಡ್ಕೊಳ್ತಾ ಮದುವೆ ಮಾಡಿಕೊಡ್ತಾ ಇದ್ರು. ನೋಹ ಹಡಗೊಳಗೆ+ ಹೋಗೋ ತನಕ ಜನ ಅದನ್ನೇ ಮಾಡ್ತಿದ್ರು.+ 28  ಲೋಟನ+ ದಿನಗಳು ಹೇಗಿತ್ತೋ ಅದೇ ತರ ಇರುತ್ತೆ. ಆಗಲೂ ಜನ ತಿಂತಾ ಕುಡಿತಾ ಮಾರುತ್ತಾ ಕೊಳ್ಳುತ್ತಾ ನೆಡುತ್ತಾ ಮನೆ ಕಟ್ತಾ ಇದ್ರು. 29  ಆದ್ರೆ ಲೋಟ ಸೊದೋಮಿಂದ ಹೊರಗೆ ಬಂದ ದಿನ ಆಕಾಶದಿಂದ ಬೆಂಕಿ, ಗಂಧಕ ಬಿದ್ದು ಅವ್ರೆಲ್ಲ ನಾಶ ಆದ್ರು.+ 30  ಮನುಷ್ಯಕುಮಾರ ಜನ್ರಿಗೆ ನ್ಯಾಯ ತೀರಿಸೋ ಸಮಯದಲ್ಲೂ+ ಹೀಗೇ ಆಗುತ್ತೆ. 31  ಆ ದಿನದಲ್ಲಿ ಮನೆ ಮೇಲೆ ಇರೋನು ಮನೆ ಒಳಗಿರೋ ವಸ್ತುಗಳನ್ನ ತಗೊಳ್ಳೋಕೆ ಕೆಳಗೆ ಇಳಿಬಾರದು. ಅದೇ ತರ ಹೊಲದಲ್ಲಿ ಇರೋನು ಬಟ್ಟೆ ತಗೊಳ್ಳೋಕೆ ಮನೆಗೆ ವಾಪಸ್‌ ಹೋಗಬಾರದು. 32  ಲೋಟನ ಹೆಂಡತಿಯನ್ನ+ ನೆನಪಿಸ್ಕೊಳ್ಳಿ. 33  ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡೋನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ 34  ಆ ರಾತ್ರಿ ಇಬ್ರು ಒಂದೇ ಹಾಸಿಗೆಯಲ್ಲಿ ಮಲಗಿರ್ತಾರೆ. ದೇವರು ಒಬ್ಬನನ್ನ ಆರಿಸ್ಕೊಳ್ತಾನೆ, ಇನ್ನೊಬ್ಬನನ್ನ ಬಿಟ್ಟುಬಿಡ್ತಾನೆ.+ 35  ಇಬ್ರು ಸ್ತ್ರೀಯರು ಒಂದೇ ಕಲ್ಲಿನಲ್ಲಿ ಧಾನ್ಯ ಬೀಸ್ತಾ ಇರ್ತಾರೆ. ದೇವರು ಒಬ್ಬಳನ್ನ ಆರಿಸ್ಕೊಳ್ತಾನೆ, ಇನ್ನೊಬ್ಬಳನ್ನ ಬಿಟ್ಟುಬಿಡ್ತಾನೆ” ಅಂದನು. 36  *—— 37  ಅದಕ್ಕೆ ಶಿಷ್ಯರು “ಸ್ವಾಮಿ, ಇದು ಎಲ್ಲಿ ಆಗುತ್ತೆ?” ಅಂತ ಕೇಳಿದಾಗ ಆತನು “ಹೆಣ ಎಲ್ಲಿರುತ್ತೋ ಹದ್ದುಗಳು ಅಲ್ಲೇ ಮುಗಿಬೀಳ್ತವೆ”+ ಅಂದನು.

ಪಾದಟಿಪ್ಪಣಿ

ಅಕ್ಷ. “ಎಡವಿಸಿದ್ರೆ.”
ಅಥವಾ, “ಈ ಚಿಕ್ಕವರಲ್ಲಿ.”
ಅಥವಾ “ಹಿಪ್ಪುನೇರಳೆ.”