ಹೋಶೇಯ 11:1-12

  • ಇಸ್ರಾಯೇಲನು ಹುಡುಗನಾಗಿದ್ದ ಸಮಯದಿಂದನೇ ದೇವರು ಅವನನ್ನ ಪ್ರೀತಿಸಿದನು (1-12)

    • “ನಾನು ನನ್ನ ಮಗನನ್ನ ಈಜಿಪ್ಟಿಂದ ಕರೆದೆ” (1)

11  “ಇಸ್ರಾಯೇಲ ಚಿಕ್ಕ ಹುಡುಗನಾಗಿ ಇದ್ದಾಗ್ಲೇ ನಾನು ಅವನನ್ನ ಪ್ರೀತಿಸಿದೆ,+ನಾನು ನನ್ನ ಮಗನನ್ನ ಈಜಿಪ್ಟಿಂದ ಕರೆದೆ.+   ಅವರು* ಅವನನ್ನ ಕರಿತಾನೇ ಇದ್ರು,ಆದ್ರೆ ಅವನು ಅವ್ರಿಂದ ಇನ್ನೂ ದೂರದೂರ ಹೋಗ್ತಾ ಇದ್ದ.+ ಅವನು ಬಾಳ್‌ ಮೂರ್ತಿಗಳಿಗೆ ಬಲಿ ಕೊಡ್ತಾ ಇದ್ದ,+ಕೆತ್ತಿದ ಮೂರ್ತಿಗಳಿಗೆ ಬಲಿಗಳನ್ನ ಅರ್ಪಿಸ್ತಾ ಇದ್ದ.+   ಆದ್ರೆ ನಾನೇ ಎಫ್ರಾಯೀಮನಿಗೆ ನಡಿಯೋಕೆ ಕಲಿಸಿದ್ದೆ,+ನಾನು ಅವ್ರನ್ನ ನನ್ನ ತೋಳುಗಳಲ್ಲಿ ಎತ್ಕೊಂಡೆ,+ಅವ್ರನ್ನ ವಾಸಿಮಾಡಿದ್ದು ನಾನೇ ಅಂತ ಅವರು ಒಪ್ಕೊಳ್ಳಲಿಲ್ಲ.   ನಾನು ಪ್ರೀತಿ ಮತ್ತು ದಯೆ ಅನ್ನೋ ಹಗ್ಗಗಳಿಂದ* ಅವ್ರನ್ನ ನನ್ನ ಕಡೆ ಎಳೆದೆ,+ನಾನೇ ಅವ್ರ ಕುತ್ತಿಗೆ ಮೇಲಿದ್ದ ನೊಗ ತೆಗೆದೆ,ಪ್ರತಿಯೊಬ್ಬನಿಗೆ ತಿನ್ನೋಕೆ ಪ್ರೀತಿಯಿಂದ ಆಹಾರ ಕೊಟ್ಟೆ.   ಅವರು ಈಜಿಪ್ಟ್‌ ದೇಶಕ್ಕೆ ವಾಪಸ್‌ ಹೋಗಲ್ಲ. ಆದ್ರೆ ಅಶ್ಶೂರ ಅವ್ರ ರಾಜ ಆಗಿರ್ತಾನೆ,+ಯಾಕಂದ್ರೆ ಅವರು ನನ್ನ ಹತ್ರ ವಾಪಸ್‌ ಬರೋಕೆ ಒಪ್ಪಲಿಲ್ಲ.+   ಅವರು ಕೆಟ್ಟ ಕುತಂತ್ರಗಳನ್ನ ಮಾಡ್ತಾರೆ. ಹಾಗಾಗಿ ಅವ್ರ ಪಟ್ಟಣಗಳ ವಿರುದ್ಧ ಕತ್ತಿ ಗಿರಗಿರನೆ ತಿರುಗುತ್ತೆ,+ಅದು ಅವ್ರ ಬಾಗಿಲುಗಳ ಕಂಬಿಗಳನ್ನ ನಾಶಮಾಡಿ ಅವ್ರನ್ನ ಸಾಯಿಸಿಬಿಡುತ್ತೆ.+   ನನ್ನ ಜನ ನನಗೆ ನಂಬಿಕೆ ದ್ರೋಹ ಮಾಡೋಕೆ ದೃಢನಿಶ್ಚಯ ಮಾಡಿದ್ದಾರೆ.+ ಅವರು ಜನ್ರನ್ನ ಮೇಲಕ್ಕೆ* ಕರೆದ್ರೂ ಯಾರೂ ಬರಲಿಲ್ಲ.   ಎಫ್ರಾಯೀಮೇ, ನಾನು ನಿನ್ನನ್ನ ಹೇಗೆ ತಾನೇ ಕೈಬಿಡ್ಲಿ?+ ಇಸ್ರಾಯೇಲೇ, ನಿನ್ನನ್ನ ಹೇಗೆ ತಾನೇ ಶತ್ರುಗಳ ಕೈಗೊಪ್ಪಿಸ್ಲಿ? ಅದ್ಮಾ ಪಟ್ಟಣಕ್ಕೆ ತಂದ ಗತಿಯನ್ನ ನಿನಗೆ ಹೇಗೆ ತಾನೇ ತರಲಿ? ಚೆಬೋಯೀಮ್‌ ಪಟ್ಟಣವನ್ನ ನಾಶಮಾಡಿದ ಹಾಗೆ ನಿನ್ನನ್ನ ಹೇಗೆ ತಾನೇ ನಾಶಮಾಡ್ಲಿ?+ ನನ್ನ ಮನಸ್ಸು ಬದಲಾಗಿದೆ,ಅಷ್ಟೇ ಅಲ್ಲ ನಿನ್ನ ವಿಷ್ಯದಲ್ಲಿ ನನ್ನ ಕರುಳು ಮರುಗಿದೆ.+   ನನ್ನ ಕೋಪಾಗ್ನಿಯನ್ನ ನಿನ್ನ ಮೇಲೆ ಸುರಿಯಲ್ಲ. ಎಫ್ರಾಯೀಮನ್ನ ಮತ್ತೊಮ್ಮೆ ನಾಶಮಾಡಲ್ಲ,+ಯಾಕಂದ್ರೆ ನಾನು ದೇವರು, ಮನುಷ್ಯನಲ್ಲ,ನಾನು ನಿಮ್ಮ ಮಧ್ಯ ವಾಸಿಸೋ ಪವಿತ್ರ ದೇವರು,ನಾನು ಕ್ರೋಧದಿಂದ ನಿಮ್ಮ ವಿರುದ್ಧ ಬರಲ್ಲ. 10  ಅವರು ಯೆಹೋವನ ಹಿಂದೆ ನಡಿತಾರೆ, ಆತನು ಸಿಂಹದ ತರ ಗರ್ಜಿಸ್ತಾನೆ,+ಆತನು ಗರ್ಜಿಸಿದಾಗ ಆತನ ಮಕ್ಕಳೆಲ್ಲ ನಡುಗ್ತಾ ಪಶ್ಚಿಮದಿಂದ ಬರ್ತಾರೆ.+ 11  ಅವರು ಈಜಿಪ್ಟಿಂದ ಬರುವಾಗ ಹಕ್ಕಿ ತರ ನಡುಗ್ತಾರೆ,ಅಶ್ಶೂರ್‌ ದೇಶದಿಂದ ಬರುವಾಗ ಪಾರಿವಾಳದ ಹಾಗೆ ಗಡಗಡ ನಡುಗ್ತಾರೆ,+ಅವರು ಅವ್ರ ಮನೆಗಳಲ್ಲೇ ಇರೋ ಹಾಗೆ ಮಾಡ್ತೀನಿ,”ಅಂತ ಯೆಹೋವ ಹೇಳ್ತಾನೆ.+ 12  “ಎಫ್ರಾಯೀಮ್‌ ನನ್ನ ಹತ್ರ ಹೇಳೋದೆಲ್ಲ ಬರೀ ಸುಳ್ಳೇ,ಇಸ್ರಾಯೇಲ್‌ ಮಾಡೋದೆಲ್ಲ ಬರೀ ಮೋಸನೇ.+ ಆದ್ರೆ ಯೆಹೂದ ಇನ್ನೂ ದೇವರ ಜೊತೆ ನಡಿತಿದ್ದಾನೆ,*ಅವನು ಅತಿ ಪವಿತ್ರನಾದ ದೇವರಿಗೆ ನಂಬಿಗಸ್ತ ಆಗಿದ್ದಾನೆ.”+

ಪಾದಟಿಪ್ಪಣಿ

ಅಂದ್ರೆ, ಇಸ್ರಾಯೇಲಿಗೆ ಬೋಧಿಸೋಕೆ ದೇವರು ಕಳಿಸಿದ ಪ್ರವಾದಿಗಳು ಮತ್ತು ಬೇರೆಯವರು.
ಅಪ್ಪ ಅಥವಾ ಅಮ್ಮ ಹಗ್ಗಗಳನ್ನ ಬಳಸಿ ಮಗುಗೆ ನಡಿಯೋಕೆ ಕಲಿಸೋದನ್ನ ಸೂಚಿಸಬಹುದು.
ಅಂದ್ರೆ, ಉನ್ನತ ರೀತಿಯ ಆರಾಧನೆ.
ಅಥವಾ “ತಿರುಗಾಡ್ತಿದ್ದಾನೆ.”